ವಿಷಯಕ್ಕೆ ಹೋಗಿ

ಭಾರತದಲ್ಲೂ ಆಗಲಿ ಸೇನಾ ದಂಗೆ !


ಹೌದು ಕಡ್ಡಾಯವಾಗಿ ಭಾರತವೊಮ್ಮೆ ಈ ಹಾಳು ರಾಜಕಾರಣಿಗಳಿಂದ ಮುಕ್ತಿ ಪಡೆಯಲೇ ಬೇಕಾಗಿದೆ. ಈ ಭ್ರಷ್ಟ ಕಾಂಗ್ರೆಸ್, ಬಿಜೆಪಿ, ಜೆಡಿಎಸ್... ಯಾರೂ ಶುದ್ಧರಂತಿರಲಿ, ಯೋಗ್ಯರೇ ಅಲ್ಲ. ಇವರ ಕೈಗೆ ದೇಶ ಸಿಕ್ಕಿ ನಲುಗಿ ಹೋಗುತ್ತಿದೆ. ನಮ್ಮ ಸೇನಾಧಿಕಾರಿಗಳು ಅತಿ ಬೇಗನೆ ಮನಸ್ಸು ಮಾಡಲೇ ಬೇಕು. ಸೇನಾ ದಂಗೆಯ ಮೂಲಕ ಭಾರತವನ್ನು ವಶಪಡಿಸಿಕೊಂಡು ಕನಿಷ್ಟ ಹತ್ತು ವರ್ಷವಾದರೂ ಅವರು ಮುನ್ನಡೆಸಬೇಕು.

ಇಲ್ಲವೆಂದರೆವೆಂದರೆ ನಮ್ಮ ದೇಶ ಅಧೋಗತಿಯಾಗುವುದು ಸತ್ಯ. ಈ ದೇಶಕ್ಕೆ ಈ ರಾಜಕಾರಣಿಗಳಿಂದ ಭವಿಷ್ಯ ಇಲ್ಲ. ಇವರ ಮೇಲಾಟ, ಅಧಿಕಾರ ಲಾಲಸೆ, ಲಂಚಗುಳಿತನ, ಭ್ರಷ್ಟಾಚಾರ ಎಲ್ಲವನ್ನೂ ಭಾರತ ಮಾತೆ ಸಹಿಸಲಾರಳು. ಹೀಗೇ ಬಿಟ್ಟರೆ ನಮ್ಮ ಸೈನಿಕರಿಗೂ ಇವರು ಸರಿಯಾದ ಶಸ್ತ್ರಾಸ್ತ್ರ ನೀಡದೇ ಅದರಲ್ಲೂ ಹಗರಣ ಮಾಡಿ ಕೊನೆಗೆ ಚೀನಾ ಅತವಾ ಪಾಕಿಸ್ತಾನ ದಂಡೆತ್ತಿ ಬಂದಾಗ ವಿನಾಕಾರಣ ನಮ್ಮ ಸೇನೆಯನ್ನೇ ಬಲಿ ಕೊಡಬೇಕಾಗುತ್ತದೆ. 

ನಿಜ, ಸೇನಾ ಕಾರ್ಯಾಚರಣೆ ನಡೆದು ದೇಶವು ಸೇನೆಯ ತೆಕ್ಕೆಗೆ ಹೋದರೆ ಎಲ್ಲರಿಗೂ ತಾತ್ಕಾಲಿಕವಾಗಿ ಸಮಸ್ಯೆ, ಕಷ್ಟ ಎದುರಾಗಬಹುದು. ಆದರೆ ರಾಜಕಾರಣಿಗಳಿಗಿಂತಲೂ ಸೈನಿಕರು ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು. ( ಉದಾ : ಪಾಕಿಸ್ತಾನದಲ್ಲಿ ಫರವೇಜ್ ಮುಷರಫ್ ಆಡಳಿತದಲ್ಲಿ ಆ ದೇಶ ಸಾಕಷ್ಟು ಅಬಿವೃದ್ದಿಯನ್ನೇ ಹೊಂದಿತು. ಉಳಿದ ಪ್ರಧಾನಿಗಳಂತೆ ತನ್ನ ದೇಶಕ್ಕೇ ಹಾಳಂತೂ ಮಾಡಲಿಲ್ಲ ) ನಮ್ಮ ಸೇನಾಧಿಕಾರಿಗಳಲ್ಲಿ ಅದಕ್ಕಿಂತಲು ಪ್ರಾಮಾಣಿಕತನ, ವ್ಯವಹಾರ ಚಾತುರ್ಯವಿದೆ. ದೇಶವನ್ನು ಇದಕ್ಕಿಂತಲೂ ಹಾಳು ಮಾಡಲು ಸಾಧ್ಯವಿಲ್ಲ. 

ಭಾರತೀಯ ಸೇನೆಯ ಮೂರೂ ದಂಡನಾಯಕರು ಈ ಬಗ್ಗೆ ಸಮಾಲೋಚನೆ ನಡೆಸಲಿ. ಆದಷ್ಟು ಬೇಗನೆ ಭಾರತವನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಳ್ಳಲಿ. ಭ್ರಷ್ಟ ರಾಜಕಾರಣಿಗಳನ್ನೆ ನೇಣಿಗೇರಿಸಲಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…