ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾರ್ಗಿಲ್ ಕಥೆ : ಸೈನಿಕನೆಂದರೆ

"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು  ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್‌ಗಳೂ ಅವರ ಗನ್‌ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು. ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?" ``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ. ``ಇದು ನಮಗೆ ಎಷ್ಟನೇ ಮುಖಾಮುಖಿ? ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು" ``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು. ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು. *  *  *  ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜ

ಮೂಢನಂಬಿಕೆ ಬಿತ್ತುವ ಮಾಧ್ಯಗಳು !

ಯಾವ ಟಿವಿ ವಾಹಿನಿ ನೋಡಿದರೂ ಅಲ್ಲೊಬ್ಬ ನಕಲಿ ಜ್ಯೋತಿಷಿ ಕುಳಿತು ಏನೇನೋ ಪುರಾನ ಹೇಳುತ್ತಿರುತ್ತಾನೆ. ಭಾನುವಾರವಂತೂ ಒಂದೊಂದು ವಾಹಿನಿಯಲ್ಲಿ ಒಬ್ಬೊಬ್ಬರು ತಪ್ಪದೇ ಹಾಜರಾಗುತ್ತಾರೆ. ಒಬ್ಬೊಬ್ಬರದೂ ಒಂದೊಂದು ಆಕಾರ, ವಿಚಾರ. ಒಬ್ಬ ದಢೂತಿಯಾದರೆ ಇನ್ನೊಬ್ಬ ಬಡಕಲು. ಆದರೆ ಇವರೆಲ್ಲರ ಅಜೆಂಡಾ ಮಾತ್ರ ಹಣ ಸಂಪಾದಿಸುವುದು. ಇವರ ಭೇಟಿಗೂ ತಿಂಗಳುಗಟ್ಟಲೇ ಕಾಯಬೇಕಂತೆ... ಅಪಾಯಿಂಟ್‌ ತೆಗೆದುಕೊಂಡು !  ಒಬ್ಬ ಜ್ಯೋತಿಷಿ ಒಂದು ರಾಶಿಯವರಿಗೆ ಈ ವಾರ ಒಳ್ಳೆಯದಾಗುತ್ತೆ ಅಂದರೆ ಇನ್ನೊಬ್ಬ ಅದೇ ರಾಶಿಯವರಿಗೆ "ಈ ವಾರ ಸರಿ ಇಲ್ಲ, ಹುಶಾರಾಗಿರಿ, ಪ್ರಾಣವೇ ಹೋದರೂ ಹೋಗಬಹುದು!" ಎಂದು ಭಯ ಹುಟ್ಟಿಸುತ್ತಾನೆ. ಈ ಜ್ಯೋತಿಷಿಗಳೆಲ್ಲಾ ನಿಜ ಹೇಳುವುದಾದರೆ ಎಲ್ಲರೂ ಒಂದೇ ರೀತಿ ಹೇಳಬೇಕಲ್ಲ ಎಂಬ ಕನಿಷ್ಟ ಜ್ಞಾನ ಜನರಲ್ಲೂ ಇಲ್ಲ. ಮೊದಲನೆಯದಾಗಿ ಜನರು ಯಾವುದಾದರೊಂದು ವಾಹಿನಿಯ ಒಬ್ಬ ಜ್ಯೋತಿಷಿಯನ್ನು ನಂಬಿದರೆ ಮುಗಿಯಿತು. ಅವನು ಹೇಳಿದ್ದು ವೇದವಾಕ್ಯ. ಬೇರೆ ವಾಹಿನಿಯವ ಹೇಳೋದೆಲ್ಲಾ ಬೊಗಳೆ. ಸ್ವಲ್ಪ ದಿನದಲ್ಲಿ ಈತನ ಅಸಲಿಯತ್ತೂ ತಿಳಿಯಿತೆಂದರೆ ಮತ್ತೊಂದು ವಾಹಿನಿಯ ಮತ್ತೊಬ್ಬ ಸುಳ್ಳುಬಾಕನ ಮಾತಿಗೆ ಕಿವಿಯೊಡ್ಡಿ ಕುಳಿತುಬಿಡುತ್ತಾರೆ. ಹೀಗಾಗಿ ಈ ವಾಹಿನಿಗಳಿಗೂ, ಸುಳ್ಳು ವಾಜ್ಮಯಿಗಳಿಗೂ ಒಳ್ಳೆಯ ಬೇಡಿಕೆ.  ಇಲ್ಲ ಸಲ್ಲದ ಕಂತೆ ಪುರಾಣ ಹೇಳಿ ನೆಮ್ಮದಿಯಾಗಿದ್ದವರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಇವರು ಹೇಳುವ ಯಾವ ಭವಿಷ್ಯಕ್ಕೆ ಏನು ಪುರಾವೆ ಒದಗಿ

ದೇವರ ಹೆಸರಲ್ಲಿ ಮೆರೆಯುತ್ತಿರುವವರಿಗೆ ದುಗುಡ ತಂದಿಟ್ಟ ’ದೇವಕಣ’!

ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ' ದೇವಕಣ ' ಪದ ಕಾಲಾನುಕಾಲದಿಂದ 'ದೇವರ' ಹೆಸರಲ್ಲೇ ಮೋಸ, ವಂಚನೆ, ಭಯೋತ್ಪಾಧನೆಗಳೆಲ್ಲವನ್ನೂ ಮಾಡುತ್ತಾ ಬಂದವರಿಗೆಲ್ಲಾ ದುಗುಡ ತಂದಿಟ್ಟಿದೆ. ದೇವರು ಎಂಬ ನಂಬಿಕೆ ಎಷ್ಟೆಲ್ಲಾ ಒಳ್ಳೆಯದನ್ನು ಮಾಡಿದೆಯೋ ಅಷ್ಟೇ ಅನಾಹುತಗಳನ್ನು ಮಾಡಿರುವುದೂ ಸತ್ಯ. ವೈಕ್ತಿಕವಾಗಿ ವ್ಯಕ್ತಿಯೊಬ್ಬ ದೇವರ ಅಸ್ಥಿತ್ವವನ್ನು ನಂಬುವುದರಿಂದ ಸಮಾಜಕ್ಕೆ ಯಾವ ಅಪಾಯವೂ ಇಲ್ಲ. ಅಪಾಯವಿರುವುದು ಆ ನಂಬಿಕೆ ಸಾಮೂಹಿಕವಾಗಿ ಪ್ರಕಟಗೊಳ್ಳುವಾಗ. ಇದರಿಂದಾಗಿಯೇ ದೇವರ ಹೆಸರಲ್ಲೇ ಧರ್ಮಗಳೂ ಹುಟ್ಟಿಕೊಂಡಿರುವುದು. ಇದರ ಅಪಾಯವನ್ನು ಕಂಡೇ ಕುವೆಂಪುರವರು "ಜಗತ್ತಿನ ಎಲ್ಲರಿಗೂ ಧರ್ಮ ಬೇಕು, ಆದರೆ ಅದು ವೈಯಕ್ತಿಕವಾಗಿರಬೇಕು. ಅಂದರೆ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಧರ್ಮಗಳಿರಬೇಕು. ಯಾವಾಗ ಜನ ಧರ್ಮದ ಹೆಸರಲ್ಲಿ ಗುಂಪು ಕಟ್ಟುತ್ತಾರೋ ಆಗ ಅನಾಹುತವಾಗುತ್ತದೆ" ಎಂದಿದ್ದರು. ಅದೇ ರೀತಿ ಸ್ವಾಮಿ ವಿವೇಕಾನಂದರು "ಧರ್ಮ ಪುಸ್ತಕಗಳಲ್ಲಾಗಲೀ, ದೇವಸ್ಥಾನಗಳಲ್ಲಾಗಲೀ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಈ ಕೋಮು ಗಲಭೆ, ಧಾರ್ಮಿಕ ಭೇದ ಭಾವನೆಗಳೆಲ್ಲ ಹೊರಟು ಹೋಗುವವು. ಧರ್ಮವೆಂದರೆ ಪ್ರತ್ಯಕ್ಷಾನುಭವ. ದೇವರ ಮತ್ತು ಆತ್ಮನ ಪ್ರತ್ಯಕ್ಷ ದರ್ಶನವನ್ನು ಪಡೆದವನು ಮಾತ್ರ ಧರ್ಮವನ್ನು ಹೊಂದಿರುವನು." ಎಂದು ಎಚ್ಚರಿಸಿದ್ದರು. ಸರಿಯಾಗಿ ವಿವೇಚಿಸಿದರೆ ದೇವರಿಗೂ ಧರ್ಮಕ್ಕೂ ಸಂಬ

ವಿಶ್ವ ಪಾರಂಪರಿಕ ಪಟ್ಟಿಗೂ ಬಿಜೆಪಿ ಕೊಕ್ಕೆ !

ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.  ಎಲ್ಲರಿಗೂ ತಿಳಿದಿರುವಂತೆ ವಿಶ್ವ ಪರಂಪರಿಕ ಪಟ್ಟಿಗೆ (ಯುನೆಸ್ಕೋ ನಿರ್ಧಾರ) ಸೇರಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಹಂಪಿಯನ್ನು ಈ ಪಟ್ಟಿಗೆ ಸೇರಿಸಲು ಸಹ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹರ ಸಾಹಸ ಮಾಡಿದ್ದವು. ಆದರೆ ಈ ಬಾರಿ  ಅಪಾರ ವನ್ಯ ಸಂಪತ್ತು ಮತ್ತು ಜೀವರಾಶಿ ಹೊಂದಿರುವ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ್ದಾಗ್ಯೂ ಸಹ ರಾಜ್ಯದ ಮಂತ್ರಿಗಳು (ಮುಖ್ಯಮಂತ್ರಿ ಸದಾನಂದಗೌಡ ಸೇರಿ) ಇದನ್ನು ವಿರೋಧಿಸಿರುವುದು ದುರ್ದೈವದ ವಿಚಾರ. ಇವರು ನೀಡುತ್ತಿರುವ ಕಾರಣ ವಿಚಿತ್ರವಾಗಿದೆ. "ಅಲ್ಲಿ ಅಭಿವೃದ್ಧಿ ಮಾಡಲು ತೊಂದರೆ ಆಗುತ್ತೆ" ಇದಕ್ಕೆ ಏನು ಹೇಳುತ್ತೀರಿ.  ಇವರ ಸರ್ಕಾರದ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷದಿಂದಲು ನೋಡುತ್ತಲೇ ಇದ್ದೇವೆ. ಬೆಂಗಳೂರಿನಂತಾ ನಗರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಡಾಂಬರು ಹಾಕಿದರೆ ಹಳ್ಳಿಗಳ ಕಡೆ ನಾಲ್ಕು ವರ್ಷಕ್ಕೆ ಒಮ್ಮೆಯೂ ರಸ್ತೆ ಸುಧಾರಣೆ ನಡೆಯುವುದಿಲ್ಲ. ಕೆಲವು ಫುಟ್‌ಪಾತ್‌ಗಳು ಫಳಫಳ ಹೊಳೆದರೆ ಕೆಲವು ಬಾಯಿ ತೆರೆದುಕ

ಕನ್ನಡದ WRONG TURN - ದಂಡುಪಾಳ್ಯ

ದಂಡುಪಾಳ್ಯದಲ್ಲಿ ನಟಿಸಿರುವ ಕರಿಸುಬ್ಬು ಅವರು ನನಗೆ ಪರಿಚಯವಿದ್ದುದರಿಂದ ಈ ಚಿತ್ರವನ್ನು ನೋಡಿದೆ. ನಾನು ನೋಡಿದ ಅತ್ಯಂತ ಕ್ರೂರ ದೃಶ್ಯಗಳ ಚಿತ್ರ ಇಂಗ್ಲೀಷ್‌ನ "ರಾಂಗ್ ಟರ್ನ್‌". ಅದರ ನಂತರದ ಸ್ಥಾನ ಮೊನ್ನೆ ಬಿಡುಗಡೆಯಾದ "ದಂಡುಪಾಳ್ಯ"ಕ್ಕೆ ಸಲ್ಲುತ್ತದೆ. ಆದರೆ ಮೊದಲಿನದು (ಬಹುಶಃ) ಕಾಲ್ಪನಿಕ ಕಥೆಯಾದರೆ ಎರಡನೆಯದು ಸತ್ಯಕಥೆ. ಹಾಗಾಗಿಯೇ ಇದು ಹೆಚ್ಚು ಮನವನ್ನು ಕಲಕುತ್ತದೆ, ಕುಲುಕುತ್ತದೆ. "ಇಂತಹ ಸಮಾಜ ಘಾತುಕರ ಚಿತ್ರಗಳು ಬೇಕಾ?" ಎಂದು ಕೇಳುವವರಿಗೆ ಚಿತ್ರದ ಮೂಲಕವೇ ನಿರ್ದೇಶಕ ಶ್ರೀನಿವಾಸ ರಾಜು ಉತ್ತರ ಹೇಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಬಂದ ನೂರಾರು ರೌಡಿಯಿಸಂ ಚಿತ್ರಗಳಲ್ಲಿ ಓಂ, ಕರಿಯ, ಜೋಗಿ ಮುಂತಾದ ಬೆರಳೆಣಿಕೆಯ ಚಿತ್ರಗಳನ್ನುಳಿದು ಯಾವುದರಲ್ಲಿಯೂ ಒಂದು ಸಂದೇಶವಿಲ್ಲ. ಅಂತಹ ಚಿತ್ರಗಳ ಸಾಲಿಗೆ ಸೇರದಂತೆ ಕರಾರುವಾಕ್ ಆಗಿ ನೋಡಿಕೊಂಡಿದ್ದಾರೆ ಶ್ರೀನಿವಾಸರಾಜು.  ಚಿತ್ರದಲ್ಲಿ ಕೊಲೆ ಮತ್ತು ಅತ್ಯಾಚಾರದ ಸಾಲು ಸಾಲು ದೃಶ್ಯಗಳಿವೆ. ಆದರೆ ಯಾವುದನ್ನೂ ವಿನಾಕಾರಣ ತುರುಕಿಲ್ಲ. ಅಸಹ್ಯಗೊಲಿಸಿಲ್ಲ. ಬದಲಿಗೆ ಪ್ರತಿ ಕೊಲೆ, ಅತ್ಯಾಚಾರದ ದೃಶ್ಯವನ್ನು ನೋಡುವಾಗಲೂ ಸಹ ಅದು ನಿಜವಾಗಿ ನಡೆದ ಒಂದು ಹೇಯ, ಕ್ರೂರ ಕೃತ್ಯ ಎಂದು ಮನಸ್ಸಿಗೆ ನಾಟುವಂತೆ ನಮ್ಮನ್ನು ತಿವಿಯುವಲ್ಲಿ ನಿರ್ದೇಶಕರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ವೆಂಕಟ್‌ಪ್ರಸಾದ್ ಸಹ ಕೈ ಜೋ