ವಿಷಯಕ್ಕೆ ಹೋಗಿ

ಹಾದಿ ತಪ್ಪಿದ ಹೋರಾಟ !


ಕೊನೆಗೂ ನಮ್ಮ ಕಣ್ಣೆದುರೇ ನಡೆದ ಒಂದು ಭೃಹತ್ ಚಳವಳಿ ನೋಡ ನೋಡುತ್ತಲೇ ಮಣ್ಣು ಪಾಲಾಗಿದೆ. ಗಾಂಧಿಯನ್ನು ನಾವ್ಯಾರೂ ನೋಡಿಲ್ಲ. ಆದರೆ ಅವರ ಅಪರಾವತಾರದಂತೆ ಬಂದ ಅಣ್ಣ ನಮ್ಮೆಲ್ಲರ ಕಣ್ಮಣಿಯಾದುದು ನಿಜ. ಹತ್ತಾರು ವರ್ಷಗಳ ಅಣ್ಣ ಹೋರಾಟ ಒಂದು ಅಂತಿಮ ಘಟ್ಟಕ್ಕೆ ಬಂದುದು ಜನಲೋಕಪಾಲ ಹೋರಾಟದಿಂದ. ಇದರಿಮದಾಗಿ ಅವರು ದೇಶಾಧ್ಯಂತ ಪ್ರಖ್ಯಾತರಾದರು. ಹಾಗೆಯೇ ಜನರ ಒಲವನ್ನೂ ಗಳಿಸಿ ಹೋರಾಟವು ಅತ್ಯಂತ ಯಶಸ್ವಿಯಾಗುವಂತೆ ಮಾಡಿದರು. ಆದರೆ ಅದಕ್ಕೆ ಬಾಗಿದಂತೆ ನಾಟಕವಾಡಿದ ಕಳ್ಳ ಕಾಂಗ್ರೆಸಿಗರು ಪೊಳ್ಳು ಲೋಕಪಾಲವನ್ನೇ ಲೋಕಸಭೆಯಲ್ಲಿ ಮಂಡನೆ ಮಾಡಿತು. ತಾನೇನೋ ಸಂಪನ್ನ ಎಂದು ಬೊಗಳೆ ಬಿಡುವ ಬಿಜೆಪಿ ಸಹ ಅಣ್ಣಾ ಬೆಂಬಲಕ್ಕೆ ನಿಲ್ಲಲಿಲ್ಲ. ಅದರೊಳಗೇ ಹತ್ತಾರು ಹುಳುಕು. ಆದರೂ ಅಣ್ಣಾ ಹೋರಾಟ ಒಂದು ಕ್ರಾಂತಿ ಗೀತೆಯಾಗಿ ಮುಂದುವರಿಯುತ್ತಲೇ ಇತ್ತು. ಅಣ್ಣಾಗೆ ಜೊತೆಯಾಗಿ ನಮ್ಮ ಸಂತೋಷ್ ಹೆಗಡೆ, ಕೇಜ್ರೀವಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್ ಮತ್ತವರ ಮಗ - ಹೀಗೆ ಒಂದು ಪ್ರಾಮಾನಿಕರ ಪಡೆಯೇ ಇತ್ತು. ಆದರೆ ಅದೆಲ್ಲವೂ ಕೇವಲ ಒಂದು ವರ್ಷದ ಅವಧಿಯಲ್ಲಿ ಗಾಳಿಯಲ್ಲಿ ಕರಗಿದ ಕರ್ಪೂರದಂತೆ ನಿಧಾನವಾಗಿ ಮರೆಯಾಗುತ್ತಿದೆ.

ಒಂದು ಸಮಯ ಸರ್ಕಾರವನ್ನೇ ನಡುಗಿಸಿದ ಈ ಹೋರಾಟ ನೋಡ ನೋಡುತ್ತಲೇ ಧರಾಶಾಯಿಯಾದುದು ಈ ದೇಶದ ದುರಂತ. ಆದರೆ ಇದು ಅಣ್ಣಾ ಮತ್ತವರ ಸಂಗಡಿಗರು ಮಾಡಿದ ಸ್ವಯಂಕೃತಪರಾಧವಲ್ಲದೇ ಬೇರೇನೂ ಅಲ್ಲ. ಬರೀ ಭ್ರಷ್ಟರಿಂದಲೇ ತುಂಬಿರುವ ಇಂದಿನ ರಾಜಕಾರಣದಲ್ಲಿ ಒಂದು ಬಲಿಷ್ಟ ಜನಲೋಕಪಾಲ ಬರುವುದು ದೂರದ ಮಾತೇ ಆಗಿತ್ತು. ಅದನ್ನು ಶತಾಯ ಗತಾಯ ತಡೆಯಲೇ ಬೇಕೆಂದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಲೂ ಟೊಂಕ ಕಟ್ಟಿ ನಿಂತಿದ್ದವು. ಇಂತಹ ಸಮಯದಲ್ಲಿ ಅಣ್ಣಾ ತಂಡ ತನ್ನ ಧ್ಯೇಯವನ್ನು ಕೇವಲ ಜನಲೋಕಪಾಲದತ್ತ ಮಾತ್ರ ಕೇಂದ್ರೀಕರಿಸಿ ಉಳಿದ ಎಲ್ಲವನ್ನೂ ಕಣ್ಣೆತ್ತಿಯೂ ನೋಡದೇ ಇದ್ದಿದ್ದರೆ ಹೋರಾಟದ ತೀವ್ರತೆ ಉಳಿಯುತ್ತಿತ್ತೇನೋ. 

ಆದರೆ ಇವರು ಮಾಡಿದ್ದಾದರೂ ಏನು ? ಕೇಂದ್ರ ಮಂತ್ರಿಗಳ ವಿರುದ್ಧ ಆರೋಪ ಮಾಡತೊಡಗಿದರು. ಪ್ರಧಾನ ಮಂತ್ರಿಯ ವಿರುದ್ಧವೇ ತೊಡೆ ತಟ್ಟಿದರು. ಆದರೆ ಅಪ್ಪಿ ತಪ್ಪಿಯೂ ಕರ್ನಾಟಕದ ದರೋಡೆಗಾರ ಯಡ್ಡಿಯ ಬಗ್ಗೆ ಚಕಾರವೆತ್ತಲಿಲ್ಲ. ಬಿಜೆಪಿಯ ಭ್ರಷ್ಟರ ಬಗ್ಗೆ ಮಾತಾಡಲಿಲ್ಲ. ಯಾರ ಬಗ್ಗೆಯೂ ಅವರು ಮಾತಾಡಲೇ ಬಾರದಿತ್ತು. ಸರ್ಕಾರದ ವಿರುದ್ಧ ಸವಾಲು ಎಸೆದರು. ಇದೆಲ್ಲಾ ನೋಡಿದ ಯಾವ ಭ್ರಷ್ಟ ಇವರನ್ನು ಬೆಳೆಯಲು, ಉಳಿಯಲು ಬಿಟ್ಟಾನು ?

ಜನಶಕ್ತಿಯಾಗಿ ನಿಲ್ಲಬೇಕಾಗಿದ್ದವರು ರಾಜಕೀಯ ಶಕ್ತಿಯಾಗಿ ಬದಲಾಗಲು ಯೋಚಿಸಿದ್ದೇ ಇವರು ಮಾಡಿದ ಮಹಾಪರಾಧ. ಇವರೇನಾದರೂ ಈ ರೀತಿ ರಾಜಕಾರಣಕ್ಕೆ ಇಳಿಯುತ್ತೇವೆ ಎಂದು ಕಳೆದ ವರ್ಷವೇ ಘೋಷಿಸಿದ್ದರೆ ಆಗಲೇ ಜನರ ಬೆಂಬಲ ಶೂನ್ಯಕ್ಕಿಳಿಯುತ್ತಿತ್ತು. ಈ ಬಾರಿಯೂ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂಬ ಘೋಷಣೆಯನ್ನು ಏಕಾಏಕೀ ಘೋಷಿಸಿದರು. ಇವರು ರಾಜಕಾರಣಿಗಳಿಗೆ ಶಾಕ್ ನೀಡಲು ಹೋದರು. ಆದರೆ ನಿಜವಾಗಿಯೂ ಶಾಕ್ ಪಡೆದುದು ಅಣ್ಣಾ ಅಭಿಮಾನಿಗಳೇ! ಇವರ ರಾಜಕೀಯದ ವಿಷಯ ಕೇಳಿ ರಾಜಕಾರಣಿಗಳೇಲ್ಲಾ ಶಾಕ್ ಆಗುವ ಬದಲು ಖುಷಿಯಾಗಿ ಹೋಗಿದ್ದಾರೆ. 

ಅಣ್ಣಾ ಯಾಕೆ ಇಂತಹ ಯಡವಟ್ಟು ಮಾಡಿದರು ಎಂಬುದು ಅರ್ಥವಾಗದ ವಿಷಯ. ಬಹುಶಃ ಕೇಜ್ರಿವಾಲ್, ಕಿರಣ್‌ಬೇಡಿ ಮುಂತಾದವರ ಆತುರದ ನಿರ್ಧಾರ ಇದಕ್ಕೆ ಕಾರಣವಾಗಿದ್ದಿರಬಹುದು. ಈ ವಿಷಯದಲ್ಲಿ ಸಮಚಿತ್ತದಿಂದ ನಡೆದುಕೊಂಡ ಸಂತೋಷ್ ಹೆಗಡೆಯವರನ್ನು ಮೆಚ್ಚಲೇ ಬೇಕು. ಬಹುಶಃ ಕೇಜ್ರಿವಾಲ್ ಅವರ ರಾಜಕೀಯ ನಡೆಯ ವಾಸನೆ ಹಿಡಿದೇ ಹೆಗಡೆ ತುಂಬಾ ದಿನದಿಂದಲೂ ಅವರಿಂದ ದೂರವೇ ಇದ್ದರೇನೋ ಅನ್ನಿಸುತ್ತಿದೆ. ಅಣ್ಣಾ ಕಡೇ ಪಕ್ಷ ತಮ್ಮ ನಂತರದ ಹಿರಿಯರಾದ ಹೆಗಡೆಯವರಲ್ಲಿ ಈ ವಿಷಯದ ಬಗ್ಗೆ ಕೂಲಂಕುಶ ಚರ್ಚೆ ಮಾಡಬೇಕಾಗಿತ್ತು. ಜನರ ಅಭಿಪ್ರಾಯವನ್ನು ತಿಳಿಯಬೇಕಾಗಿತ್ತು. ತಮ್ಮ ಸುತ್ತ ಕಟ್ಟಿರುವ ಕೋಟೆಯನ್ನು ಕಿತ್ತೆಸೆದು ಹೊರ ಬಂದು ಜನರ ಜೊತೆ ಬೆರೆತಿದ್ದರೆ ಹೋರಾಟ ಉಳಿಯುತ್ತಿತ್ತು. 

ಕೊನೆಗೂ ಒಂದು ಹೋರಾಟವನ್ನು ನೋಡುವ ಭಾಗ್ಯ ಮಾತ್ರ ನಮ್ಮದಾಯ್ತು... ಅದರ ಪ್ರತಿಫಲ ಕಾನುವ ಭಾಗ್ಯ ಇಲ್ಲವಾಗಿತ್ತು!
1 ಕಾಮೆಂಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…