ವಿಷಯಕ್ಕೆ ಹೋಗಿ

ವಿವೇಕಾನಂದರನ್ನು ದೇಶದ್ರೋಹಿ ದಾವುದ್‌ಗೆ ಹೋಲಿಸುವ ಹರಕತ್ತು ಏನಿತ್ತು ?

ಬಿಜೆಪಿ ಪುಂಡರು ತಮ್ಮ ಉಡಾಳ ತನವನ್ನು ಮೇಲಿಂದ ಮೇಲೆ ಪ್ರದರ್ಶನ ಮಾಡುತ್ತಲೇ ಬರುತ್ತಿದ್ದಾರೆ. ಅದು ಕರ್ನಾಟಕದ ಶಿಖಾಮಣಿಗಳಿಗೆ ಮಾತ್ರ ಸೀಮಿತವಾಗಿದೆ ಅಂದುಕೊಳ್ಳುತ್ತಿರುವಾಗಲೇ ದೆಹಲಿ ಮುಖಂಡರೂ ಸಹ ತಾವೇನೂ ಕಡಿಮೆ ಇಲ್ಲ ಎಂದು ನಮ್ಮ ರಾಜ್ಯದ ಬಿಜೆಪಿಗರಿಗೆ ಸೆಡ್ಡು ಹೊಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಗಡ್ಕರಿಗೆ ಸಮಯ ಸರಿ ಇಲ್ಲವೋ ಅಥವಾ ಅವರ ಕೈ ಬಾಯಿ ಶುದ್ಧವಿಲ್ಲವೋ ತಿಳಿಯದು. ಒಟ್ಟಿನಲ್ಲಿ ಮಾಡಿದ ಮಹಪರಾಧವೆಲ್ಲಾ ಒಂದೆಡೆಯಿಂದ ಒಂದೊಂದಾಗಿ ಹೊರ ಬರುತ್ತಿದ್ದರೆ ಇನ್ನೊಂದೆಡೆ ಆಡಬಾರದ್ದನ್ನು ಆಡಿ ಛೀ, ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ.


ಅವರು ಹೇಳಿದ್ದಾದರೂ ಏನು ?
"ದಾವುದ್‌ ಇಬ್ರಾಹಿಂ (ದೇಶದ್ರೋಹಿ) ಹಾಗೂ ಸ್ವಾಮಿ ವಿವೇಕಾನಂದರ (ದೇಶಭಕ್ತ) ಐಕ್ಯೂ (ಬೌದ್ಧಿಕ ಮಟ್ಟ) ಒಂದೇ ಮಟ್ಟದ್ದು.... ಇದನ್ನು ಇಬ್ಬರೂ ಬೇರೆ ಬೇರೆ ರೀತಿ ಬಳಸಿಕೊಂಡರು". [ವೀಡಿಯೋ ಇಲ್ಲಿದೆ : http://ibnlive.in.com/news/dawood-ibrahims-iq-level-almost-same-as-swami-vivekanandas-nitin-gadkari/303938-37-64.html ]
ಅದಾಗಲೇ ಕೆಲವು ದೇಶಭಕ್ತಿಯ ಲೇಬಲ್ ಹಚ್ಚಿಕೊಂಡಿರುವ ಕುಹಕಿಗಳು ಗಡ್ಕರಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ತಿಪ್ಪೆ ಸಾರಿಸಲು ಶುರು ಮಾಡಿದ್ದಾರೆ. "ಅವರು ಹೋಲಿಕೆ ಮಾಡಿದ್ದು ವೈರುದ್ಧತೆಯ ಬಗ್ಗೆ ಅಷ್ಟೇ" ಎಂದು ಹೇಳುವ ಮೂಲಕ ವಿಷಯವನ್ನು "ಇಷ್ಟೇ" ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಆದರೆ ವಿಷಯ ಕಂಡಿತಾ ಇಷ್ಟೇ ಆಗಿಲ್ಲ..

ಇಂತಹ ನಾಚಿಕೆಗೆಟ್ಟ ಸಮರ್ಥಕರಿಗೆ ನನ್ನ ಪ್ರಶ್ನೆ...
ಇಷ್ಟಕ್ಕೂ ದಾವುದ್‌ನಂತಹ ದೇಶದ್ರೋಹಿಯನ್ನು ವಿವೇಕಾನಂದರಿಗೆ ಹೋಲಿಕೆ ಮಾಡುವ ಅಗತ್ಯವಾದರೂ ಇತ್ತೆ ? ವಿವೇಕಾನಂದರೆಲ್ಲಿ, ದಾವುದ್ ಎಲ್ಲಿ ? ಅವರಿಬ್ಬರ ಐಕ್ಯೂ ಒಂದೇ ಸಮ ಅನ್ನಲು ಈ ಗಡ್ಕರಿಗೆ ಇರುವ ಆಧಾರವಾದರೂ ಏನು ? ವಿವೇಕಾನಂದರ ಭಾಷಣ, ಮಾತು, ಕೃತಿಗಳ ಮೂಲಕ ಅವರ ಐಕ್ಯೂ ಯಾವ ಮಟ್ಟದ್ದು ಎಂಬ ಅರಿವು ನಮಗಾಗುತ್ತದೆ. ಅವರ ಜೀವನ ಚರಿತ್ರೆ ಓದಿದರೆ ಅವರೆಂತಹ ಬುದ್ಧಿವಂತ ಹಾಗೂ ಧೈರ್ಯಶಾಲಿಯಾಗಿದ್ದರು ಎಂದೂ ತಿಳಿದು ಬರುತ್ತದೆ. ವಿವೇಕಾನಂದರ ಕೃತಿಗಳು ನಮ್ಮೆದುರೇ ಇರುವುದರಿಂದ ಅವರ ವಿದ್ವತ್ ಏನೆಂಬುದನ್ನು ಅರಿಯಬಹುದು. ಹೇಗೆ ವಿಶ್ವೇಶ್ವರಯ್ಯನವರನ್ನು ಸರಿಗಟ್ಟುವ ಇಂಜಿನಿಯರ‍್ ಇನ್ನೊಬ್ಬರಿಲ್ಲವೋ ಹಾಗೆಯೇ ವಿವೇಕಾನಂದರನ್ನು ಸರಿ ಗಟ್ಟುವ ಭೌದ್ಧಿಕ ಜ್ಞಾನಿಯೂ ಇಲ್ಲವೆನ್ನಬಹುದು. ಆದರೆ ಮುಂಬೈನಲ್ಲಿ ಬಾಂಬ್‌ ಸ್ಫೋಟಿಸಿ ಹೆದರಿ ಹೇತ್ಲಾಂಡಿಯಂತೆ ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ದಾವೂದ್ ಎಂಬ ದೇಶದ್ರೋಹಿಯ ಐಕ್ಯೂ ಈ ಗಡ್ಕರಿಗೆ ಮನದಟ್ಟಾದುದಾದರೂ ಹೇಗೆ ? ವಿದ್ವಂಸಕ ಕೃತ್ಯ ನಡೆಸುವುದು ಭೌದ್ಧಿಕ ಮಟ್ಟವನ್ನು ಸೂಚಿಸುತ್ತದೆಯೇ ? ದಾವೂದ್ ಹಾಗೆ ಭೌದ್ದಿಕ ಮಟ್ಟ ಹೊಂದಿದ್ದರೆ ಇಂತಹ ಹೀನ ಕೆಲಸಕ್ಕೆ ಇಳಿಯುತ್ತಿದ್ದನೇ ? ಅವನು ಅಷ್ಟೊಂದು (ವಿವೇಕಾನಂದರ ಮಟ್ಟಕ್ಕೆ ) ಐಕ್ಯೂ ಹೊಂದಿದ್ದಾನೆ ಎಂದು ಗಡ್ಕರಿಗೆ ತಿಳಿದುದಾದರೂ ಹೇಗೆ ? ಇವರೇನು ಅವನೊಡನೆ ಸಂಪರ್ಕ ಹೊಂದಿದ್ದಾರಾ ? 

ಹೀಗೆ ವಿದ್ವಂಸಕ ಕೃತ್ಯ ಎಸಗಿದವರ ಐಕ್ಯೂ ಬಹಳ ಹೆಚ್ಚಾಗಿರುತ್ತದೆ ಎನ್ನುವುದಾದರೆ ದಾವೂದ್‌ಗಿಂತಲೂ ನೆಗೆದು ಬಿದ್ದ ಲಾಡೆನ್ ಐಕ್ಯೂ ಇನ್ನೂ ಹೆಚ್ಚಿದ್ದಿತು ಅನ್ನಿಸುತ್ತದೆ. ಅವನನ್ನು ಯಾರಿಗೆ ಹೋಲಿಕೆ ಮಾಡುತ್ತಾರೆ ಗಡ್ಕರಿ ? ಬಹುಶಃ "ಲಾಡೆನ್ ಐಕ್ಯೂ ನಮ್ಮ ವಿವೇಕಾನಂದರಿಗಿಂತಲೂ ಹೆಚ್ಚಿಗೆ ಇತ್ತು" ಎನ್ನುತ್ತಾರೇನೋ?

"ಬುದ್ದಿವಂತಿಕೆಯನ್ನು ಸರಿಯಾದ ರೀತಿ ಬಳಸಿದರೆ ಯಾರು ಬೇಕಾದರೂ ವಿವೇಕಾನಂದ ಆಗಬಹುದು" ಎಂದು ತಿಪ್ಪೆ ಸಾರಿಸುತ್ತಿರುವ ಈ ಕಂತ್ರಿ ಇವನ್ಯಾಕೆ ಇನ್ನೂ ವಿವೇಕಾನಂದ ಆಗಿಲ್ಲ ಅನ್ನುವ ಅರಿವಿಲ್ಲವೇ ? ಯಾರು ಬೇಕಾದರೂ ವಿವೇಕಾನಂದ, ಗಾಂಧಿ, ವಿಶ್ವೇಶ್ವರಯ್ಯರಾಗುವ ಹಾಗಿದ್ದಿದ್ದರೆ ಅವರಿಗೆಲ್ಲ ಬೆಲೆಯೇ ಇರುತ್ತಿರಲಿಲ್ಲ. ಅದು ಸಾಧ್ಯವಿಲ್ಲದ್ದರಿಂದಲೇ ಅಂತಹ ಮಹಾನುಭಾವರಿಗೆ ಎಲ್ಲಾ ವರ್ಗ/ಧರ್ಮದವರಿಂದಲು ಬೆಲೆ ಗೌರವ ಸಿಗುತ್ತಿರುವುದು. ಚೆಡ್ಡಿ ಹಾಕಿ ದೇಶಭಕ್ತನ ಪೋಸು ಕೊಟ್ಟು ಇವರು ಮಾಡಿರುವ ಹಲ್ಕಾ ಕೆಲಸಗಳು ಈಗಾಗಲೇ ದೇಶಕ್ಕೆ ಗೊತ್ತಾಗಿವೆ. ಆದರೂ ಇಂತಹವರ ಬೆಂಬಲಕ್ಕೆ ಕೆಲವು ನಾಲಾಯಕ್ ನರಿಗಳು ನಿಲ್ಲುತ್ತವೆ. ಇದರಿಂದಲೇ ತಿಳಿಯುತ್ತೆ ಇವರ ದೇಶಭಕ್ತಿಯ ಹಿಂದಿನ ಅಸಲಿ ಬಣ್ಣ ಯಾವುದು ಎಂದು. 

ಕೆಲವು ವರ್ಷದ ಹಿಂದೆ ಅದ್ವಾನಿಯವರು ಜಿನ್ನಾ ಬಗ್ಗೆ ಒಂದೇ ಒಂದು ಗೌರವದ ಮಾತಾಡಿದ್ದನ್ನೇ ದೊಡ್ಡ ಹುಯಿಲೆಬ್ಬಿಸಿದ ಈ ಕಂತ್ರಿ ದೇಶಭಕ್ತರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವ ವರೆಗೂ ಬಿಡಲಿಲ್ಲ. ಆದರೆ ನಿನ್ನೆ ಗಡ್ಕರಿ ವಿವೇಕಾನಂದರನ್ನೇ ದಾವೂದ್ ಭೌದ್ಧಿಕ ಮಟ್ಟಕ್ಕೆ ಇಳಿಸಿದರೂ ಇವರೆಲ್ಲಾ ತಣ್ಣಗಿರುವುದಷ್ಟೇ ಅಲ್ಲ... ಸಮರ್ಥನೆಯನ್ನೂ ಮಾಡಿಕೊಳ್ಳುವುದು ನೋಡಿದರೆ ಹೇಸಿಗೆಯಾಗುತ್ತದೆ. ಇಂತಹ ವೈರುಧ್ಯಗಳಾದರೂ ಏಕೆ ? ಇವರಿಗೆಲ್ಲಾ ಹಂಚಲು ಅದ್ವಾನಿ ಬಳಿ ಕಳ್ಳ ಹಣ ಇರಲಿಲ್ಲ... ಗಡ್ಕರಿ ಹತ್ತಿರ ಬಹಳಾ ಇದೆ ! ಅಷ್ಟೇ ವ್ಯತ್ಯಾಸ.

ಇನ್ನೂ ಯಾರಾದರೂ ಗಡ್ಕರಿಯನ್ನು ಸಮರ್ಥನೆ ಮಾಡುವವರಿದ್ದರೆ ಅವರಿಗೆ ಒಂದೇ ಪ್ರಶ್ನೆ ... "ಗಡ್ಕರಿ ಹೇಳಿದ್ದನ್ನೇ ಯಾವನಾದರೂ ಸಾಬಿ ಅಕಸ್ಮಾತ್ ಹೇಳಿದ್ದರೆ ನೀವು ಹೀಗೆಯೇ ಸಮರ್ಥನೆ ಮಾಡುತ್ತಿದ್ದಿರಾ ? ಇಷ್ಟೊತ್ತಿಗೆ ಇಡೀ ಮುಸ್ಲಿಂ ಸಮುದಾಯದ ಮೇಲೆಯೇ ಯುದ್ಧ ಸಾರಿರುತ್ತಿರಲಿಲ್ಲವೇ?"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…