ವಿಷಯಕ್ಕೆ ಹೋಗಿ

ಸಹೋದರಿ ನಿರ್ಭಯ ದಾಮಿನಿಗೆ ಶ್ರದ್ಧಾಂಜಲಿ


ಕೊನೆಗೂ ಆಹುಡುಗಿ ಬದುಕಲೇ ಇಲ್ಲ, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯ ದಾಮಿನಿ ಕೊನೆಗೂ ಸಾವನ್ನಪ್ಪಿದ್ದಾಳೆ. ಆದರೆ ಆಕೆಯನ್ನು ಬರ್ಭರವಾಗಿ ಅತ್ಯಾಚಾರವೆಸಗಿ ವಿಕೃತ ಆನಂದ ಪಟ್ಟ ಕದೀಮರು ಜೈಲಲ್ಲಿ ಆರಾಮಾಗಿದ್ದಾರೆ. ಇನ್ನು ನ್ಯಾಯಾಲಯದ ವಿಚಾರಣೆ ಅದೆಷ್ಟು ದಿನ ಎಳೆದಾಡುತ್ತೋ ? ಎಷ್ಟು ಜನರಿಗೆ ಘನ ನ್ಯಾಯಾಲಯ ಜಾಮೀನು ಕೊಟ್ಟು ಕಳಿಸುತ್ತೋ ? ಶಿಕ್ಷೆಯಾದರೂ ಅದೆಷ್ಟು ವರ್ಷ ಜೈಲಲ್ಲಿದ್ದಾರು ? ಈಗ ಭಾರತದ ಜೈಲಲ್ಲಿರುವುದು ಶಿಕ್ಷೆ ಅಂತ ಯಾರು ಹೇಳುತ್ತಾರೆ ? ಹೆಚ್ಚೆಂದರೆ ಜೀವಾವಧಿ ಶಿಕ್ಷೆಯಾಗಬಹುದು. ಎಂಟತ್ತು ವರ್ಷ ಜೈಲಲ್ಲಿದ್ದು ಹೊರ ಬಂದರೆ ಮುಗಿಯಿತು. ಮತ್ತೆ ಆರಾಮಾಗಿ ಜೀವನ ಕಳೆಯಬಹುದು. ಸತ್ತವಳು ಹೋದಳು ಅಷ್ಟೇ ಎಂದು ನಾವೂ ಸುಮ್ಮನಾಗುತ್ತೇವೆ.

ಇದು ಮೊದಲಲ್ಲ, ಎಲ್ಲಾ ಕೆಟ್ಟ ಘಟನೆಗಳಂತೆಯೇ ಇದು ಕೊನೆಯಾಗುವುದೂ ಇಲ್ಲ. ಮತ್ತೆ ಮತ್ತೆ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಲೇ ಇರುತ್ತವೆ. ನಾವು ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿ ನೋಡಿ ಸುಮ್ಮನಗುತ್ತೇವೆ. ಬಿಡು, ನಮ್ಮೆನೆ ಹುಡುಗಿ ಅಲ್ಲವಲ್ಲ ಅಂದುಕೊಳ್ಳುವವರೆ ಹೆಚ್ಚು. ಆದರೆ ಇದೇ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದರೆ ? ಅಪರಾಧಿಗಳನ್ನು ಇಷ್ಟರಲ್ಲೇ ಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಿರುತ್ತಿದ್ದರು... ಆದರೆ ಇದು ಭಾರತ... ನಾವು ಎಲ್ಲವನ್ನೂ ಸಹಿಸಿಕೊಳ್ಳುವಂತಹವರು. ನಮ್ಮಲ್ಲಿ ಶಿಕ್ಷೆ ಆಗುವುದಾದರೂ ಹೇಗೆ ? ನಮ್ಮ ರಾಜಕಾರಣಿಗಳೇ ಹಲವರು ಅತ್ಯಾಚಾರವೆಸಗಿ ಅಧಿಕಾರದಲ್ಲಿರುವಾಗ ?

ಅತ್ಯಾಚಾರಗಳು ಭಾರತದಲ್ಲಿ ಸರಾಸರಿ ನಿಮಿಷಕ್ಕೊಂದರಂತೆ ನಡೆಯುತ್ತವೆ ಎನ್ನುತ್ತಾರೆ. ಹಳ್ಳಿಗಳಲ್ಲಿ ನಡೆಯುವ ಇಂತಹ ಸಾವಿರಾರು ಘಟನೆಗಲು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಕರ್ನಾಟಕದಲ್ಲೇ ಅತ್ಯಂತ ಹೀನಾಯ ಎನ್ನುವಂತಹ ಘಟನೆಗಳು ನಡೆದಿವೆ. ಉಹುಂ, ಯಾರಿಗೂ ಶಿಕ್ಷೆಯಿಲ್ಲ (ನಾನು ಮೊದಲೇ ಹೇಳಿದಂತೆ ಜೈಲುವಾಸ ಶಿಕ್ಷೆಯಾಗಿ ಉಳಿದಿಲ್ಲ!). ಇಂತಹ ದುರುಳರಿಗೆ ಕಠಿಣ ಶಿಕ್ಷೆ ದೊರೆಯುವುದೆ ಅಪರೂಪ. ಹಾಗೆ ಅಪರೂಪದಲ್ಲಿ ಅಪರೂಪವಾಗಿ ನ್ಯಾಯಾಲಯ ಯಾರಿಗಾದರೂ ಕಠಿಣ ಶಿಕ್ಷೆಯಾಗಿ ನೇಣಿಗೇರಿಸುವಂತೆ ಹೆಳಿದರೂ ನಮ್ಮ ಸರ್ಕಾರಕ್ಕೆ ಅದು ಸಾಧ್ಯವಾಗುವುದಿಲ್ಲ. ಉಮೇಶ್‌ ರೆಡ್ಡಿ ಎಂಬ ಕಾಮುಕನಿಗೆ ನೇಣುಗಂಬ ಶಿಕ್ಷೆ ವಿಧಿಸಿ ಬಹಳ ವರ್ಷಗಳಾದವು. ಅವನು ಬಳ್ಳಾರಿ ಜೈಲಿನಲ್ಲಿ ಹಾಯಾಗಿದ್ದಾನೆ. ಅಂತಹ ಎಷ್ಟೊ ಅತ್ಯಾಚಾರಿಗಳು ಏಳೆಂಟು ವರ್ಷಗಳ ತಮ್ಮ ಸೆರೆವಾಸವನ್ನು ಮುಗಿಸಿ ಸಮಾಜದಲ್ಲಿ ನೆಮ್ಮದಿಯಿಂದ ಓಡಾಡಿಕೊಂಡಿದ್ದಾರೆ. ಆದರೆ ಅತ್ಯಾಚಾರಕ್ಕೊಳಗಾದ ಹೆಣ್ಣು ಮಾತ್ರ ಒಂದೋ ಆಗಲೇ ಸತ್ತಿರುತ್ತಾಳೆ, ಅಥವಾ ಪದೇ ಪದೇ ಜನರ ಕಣ್ಣಿಂದಾಗಿ ಸಾಯುತ್ತಿರುತ್ತಾಳೆ. ಅತ್ಯಾಚಾರಗಳು ಹೆಚ್ಚುತ್ತಲೇ ಇರುತ್ತವೆ. 

ಈ ಬಾರಿಯಂತೂ ರಾಜಕೀಯ ಕಾರಣಕ್ಕಾಗಿಯಾದರೂ ಹೋರಾಟ ಜೋರಾಗಿದೆ. ಈ ಬರಿಯಾದರೂ ಕೇಂದ್ರ ಸರ್ಕಾರ ಕಾನೂನಿನಲ್ಲಿ ಮಾಪಾಡು ತಂದು ಅತ್ಯಾಚಾರಿಗಳಿಗಾದರೂ ತಕ್ಷಣದ ಗಲ್ಲು ಶಿಕ್ಷೆ ವಿಧಿಸುವಂತೆ ಏರ್ಪಾಡು ಮಾಡಲಿ ಎಂಬುದೆ ಎಲ್ಲರ ಕೋರಿಕೆ. ಇದರಿಂದಾದರೂ ಅತ್ಯಾಚಾರಗಳಂತಹ ಹೀನ ಕಾರ್ಯಗಳು ಕಡಿಮೆಯಾಗಬಹುದು.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…