ವಿಷಯಕ್ಕೆ ಹೋಗಿ

ಓವೈಸಿ ಎಂಬಂತಹ ಅತೃಪ್ತ ಆತ್ಮಗಳ ಬಗ್ಗೆ...


"ಹದಿನೈದು ನಿಮಿಷ ಪೊಲೀಸರು ಸುಮ್ಮನಾಗಲಿ, ನಮ್ಮ ಹದಿನೈದು ಕೋಟಿ ಮುಸ್ಲಿಮರು ಹೇಗೆ ನೂರು ಕೋಟಿ ಹಿಂದುಗಳನ್ನು ಹೊಸಕಿ ಹಾಕುತ್ತಾರೆ ಎಂದು ನೋಡುತ್ತೀರಿ" ಎಂದು ಪರಮ ಅಪದ್ಧಕಾರಿಯಾಗಿ ಹಾಗೂ ಅಷ್ಟೇ ಆತಂಕಕಾರಿಯಾಗಿ ಹೇಳಿದವನು ಯಾರೋ ಭಯೋತ್ಪಾದಕರ ನಾಯಕನೋ ಅತವಾ ತಲೆ ಕೆಟ್ಟ ಮುಲ್ಲಾನೋ ಅಲ್ಲ. ಈತನೊಬ್ಬ ಜನ ನಾಯಕ ಹಾಗೂ ಈ ದೇಶದ ಸಂವಿಧಾನದ ಮೂಲಕ ಆರಿಸಿ ಬಂದಂತಹ ಶಾಸಕ ಕೂಡಾ. ಇಂತಹವನ ಬಾಯಿಂದ ಇಂತಹ ಆಣಿಮುತ್ತುಗಳು ಉದುರಿದ್ದು ಕಂಡು ಒಂದಿಷ್ಟು ಅಪ್ರಬುದ್ಧ ಮುಸ್ಲಿಂ ಜೀವಗಳು ಕೈ ತಟ್ಟಿ ಖುಷಿ ಪಟ್ಟಿರಲಿಕ್ಕೂ ಸಾಕು, ಹಾಗೆಯೇ ಹಿಂದುಗಳೋಳಗೆ ಸಾವಿರ ತೂತುಗಳಿದ್ದರೂ ಹಿಂದುಸ್ಥಾನ ಕಟ್ಟುತ್ತೇವೆಂದು ಬೊಗಳೆ ಬಿಡುತ್ತಾ ಕೆಳವರ್ಗದವರನ್ನು ಎಂಜಲೆಲೆ ಮೇಲೆ ಉರುಳಿಸಿ ಕುಷಿ ಪಡುವ ಹಲವು ಹಿಂದೂ ಮಹಾನುಭಾವರು "ಹೋ..." ಎಂದು ಹೋರಾಟಕ್ಕೆ ಅಣಿಯಾಗಿರಬಹುದು.

ಓವೈಸಿಯಂತಹವರನ್ನು ಕೇವಲ ಧರ್ಮಾಂಧರು ಅನ್ನಲು ಸಾಧ್ಯವಿಲ್ಲ. ಎಕೆಂದರೆ ಎಷ್ಟೇ ಧರ್ಮಾಂಧನಾಗಿದ್ದರೂ ಸಹ ಕನಿಷ್ಟ ಜ್ಞಾನವಿರುವ ಎಂತಹವನಿಗಾದರೂ ತಿಳಿದಿರುವ ವಿಷಯ ಸಾವಿರಾರು ವರ್ಷಗಳಿಂದ ಸಾಧ್ಯವಾಗದಿರುವ ಹಿಂದುಗಳ ನಿರ್ನಾಮ ಹದಿನೈದು ನಿಮಿಷಗಳಲ್ಲಿ ಸಾಧ್ಯವಿಲ್ಲ ಎಂಬುದು. ವಾಸ್ತವವಾಗಿ ಹದಿನೈದು ನಿಮಿಷವಲ್ಲ, ಹದಿನೈದು ವರ್ಷ ಪೊಲೀಸರಿಲ್ಲದಿದ್ದರೂ ಸಹ ಓವೈಸಿಯಂತಹ ಮತಿಗೇಡಿಗಳ ಬಯಕೆ ನೆರವೇರದು. ಇಂತಹವರಿಂದ ಹೆಚ್ಚೆಂದರೆ ದೊಡ್ಡದೊಂದು ರಕ್ತಪಾತವನ್ನು ನಡೆಸಲು ಸಾಧ್ಯವಾಗಬಹುದಷ್ಟೇ. ಅಲ್ಲ, ಹದಿನೈದು ಕೋಟಿ ಮುಸ್ಲಿಮರು ಮೇಲೆರಗುವಾಗ ನೂರು ಕೋಟಿ ಹಿಂದುಗಳು ಕೈ ಕಟ್ಟಿ ಕುಳಿತಿರುತ್ತಾರೆಯೇ ? ಇವರ ಜೊತೆ ಪಾಕಿಸ್ತಾನದ ಇನ್ನಷ್ಟು ಕೋಟಿ ಜನ ಮುಸ್ಲಿಮರು ಸೇರಿ ಬಂದರು ಇವರ ಬಯಕೆ ನೆರವೇರದು. ಇಷ್ಟಕ್ಕೂ ಇವನು ಹೇಳಿದ ಅಂತ ಹಿಂದುಗಳ ಮೇಲೆರಗಲು ಇರುವ ಎಲ್ಲಾ ಮುಸ್ಲಿಮರೂ ಇವನಂತೆಯೇ ಧರ್ಮಾಂಧರೆ ? ಹಾಗೆನಾದರೂ ಆಗಿದ್ದರೆ ಹದಿನೈದು ನಿಮಿಷವಲ್ಲ, ಹದಿನೈದು ಗಂಟೆಗಳವರೆಗೇ ಪೊಲೀಸರನ್ನ ನಿಷ್ಕ್ರಿಯಗೊಳಿಸಿ ನೋಡೇ ಬಿಡೋಣ!

ಬಹುಶಃ ಅಂತಹುದೊಂದು ಸಂದರ್ಭ ಬಂದರೆ ಓವೈಸಿಯಂತಹ ಹೇತ್ಲಾಂಡಿಯನ್ನು ಸ್ವತಃ ಮುಸ್ಲಿಮರೇ ಟಾರ್ಚು ಹಾಕಿ ಹುಡುಕಬೇಕಾದೀತು. ಏಕೆಂದರೆ ಇಂತಹವರಿಗೆ ಮುನ್ನುಗ್ಗಿ ಹೋರಾಡುವ ಸ್ಥೈರ್ಯ ಕಂಡಿತಾ ಇರುವುದಿಲ್ಲ. ಕೇವಲ ಹೇಳಿಕೆ ಕೊಟ್ಟು ಒಂದಿಷ್ಟು ಮುಸ್ಲಿಮರನ್ನು ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಜೀವನ ಸಾಗಿಸುವುದು ಇವರ ಗುರಿ. ಅಕಸ್ಮಾತ್ ಇವರು ಅಂತಹುದೊಂದು ಹೋರಾಟಕ್ಕೆ ಹೊರಟರೂ ಸಹ ಇವರಿಗೆ ಸಮಸ್ತ ಮುಸ್ಲಿಮರ ಬೆಂಬಲವೂ ದಕ್ಕುವುದಿಲ್ಲ. ಮುಸ್ಲಿಮರಿಗೂ ಹೊಟ್ಟೆಪಾಡು, ಜೀವನ, ಕುಟುಂಬ ಎಲ್ಲಾ ಇದೆ. ಎಲ್ಲೋ ಕೆಲವು ಪಟ್ಟೆಗಳು ಇಂತಹವನ ಹಿಂಬಾಲಕರಾಗಿ ನಡೆದಾಡಬಹುದು. 

ಆದರೂ ಇಂತಹ ಸುದ್ದಿ ಶಿಖಂಡಿಗಳನ್ನು ಹಾಗೆಯೇ ಬಿಡಬಾರದು. ಎರಡು ಧರ್ಮಗಳ ಜನರೊಳಗೆ ಅಂತಃಕಲಹ ಉಂಟು ಮಾಡುವ ಕೃತ್ಯಗಳನ್ನೂ ಸಹ ದೇಶದ್ರೋಹವೆಂದೇ ಪರಿಗಣಿಸಿ ಕಠಿಣ ಶಿಕ್ಷೆಯನ್ನು ಈತನಿಗೆ ನೀಡಬೇಕು. ಮೊದಲಿಗೆ ಈತನ ಶಾಸಕತ್ವವನ್ನು ಹಿಂಪಡೆದು ಜೈಲಿಗೆ ತಳ್ಳಬೇಕಾದುದು ಮೊದಲಿನ ಕೆಲಸವಾಗಿದೆ. ಇವರೆಲ್ಲಾ ದೇಶದ ಸುಭದ್ರತೆಗೆ ಸದಾ ಧಕ್ಕೆ ತರುವ ಕ್ರಿಮಿಗಳು. ಇವರನ್ನು ಹೊಸಕಿ ಹಾಕೆದೇ ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ. ರಕ್ತದೊಳಗಿನ ಕ್ಯಾನ್ಸರ‍್ ರೋಗಾಣುವಿನಂತೆ ನಮ್ಮೊಳಗೇ ಇದ್ದು ಒಂದಲ್ಲಾ ಒಂದು ದಿನ ತಮ್ಮದೇ ಒಂದು ಪಡೆ ಕಟ್ಟಿಕೊಂಡು ದೊಡ್ಡ ಗಾಯ ಮಾಡಲು ತಯಾರಾಗಬಹುದು. ಹಾಗಾಗಿ ಇವನಿಗೆ ಕೂಡಲೆ ಶಿಕ್ಷೆಯಾಗಲಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…