ವಿಷಯಕ್ಕೆ ಹೋಗಿ

ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದು ಹೇಗೆ ?


ಮೊದಲನೆಯದಾಗಿ ಅದು ಬುದ್ಧಿ ಕಲಿಯುವ ದೇಶವೇ ಅಲ್ಲ. ಹಾಗಂತ ತೀರ್ಮಾನಿಸಬಹುದಾದರೂ ಅದಕ್ಕೊಂದು ಬುದ್ಧಿ ಕಲಿಸದೇ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ. ಆದರೆ ಸಮಸ್ಯೆ ಇರುವುದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದಾದರೂ ಹೇಗೆ ? ಹಿಂದೆ ಇಲಿಗಳೆಲ್ಲಾ ಸೇರಿಕೊಂಡು ಬೆಕ್ಕಿಗೆ ಗಂಟೆ ಕಟ್ಟಿದ್ದವಂತೆ. ಆದರೆ ಈಗ ಭಾರತದಂತ ಬೆಕ್ಕೇ ಪಾಕಿಯಂತಹ ಇಲಿಗೆ ಗಂಟೆ ಕಟ್ಟುವುದು ಹೇಗಪ್ಪಾ ಎಂದು ಯೋಚಿಸುವಂತಾಗಿದೆ. ಇದು ದುರಂತ.

ಅದೊಂತರ ಮಡಿಲೊಳಗಿನ ಗೊಣಗಲು ಮುಳ್ಳಿನ ಪೊದೆಯಂತೆ, ನಾವು ಅಲ್ಲಾಡಿದರೂ ಚುಚ್ಚುತ್ತೆ, ಅದೇ ಅಲ್ಲಡಿದರೂ ಚುಚ್ಚುತ್ತೆ. ಪಕ್ಕದ ಮನೆಯಲ್ಲೆ ಹುಚ್ಚು ಮುಂಡೇಮಕ್ಕಳಿದ್ದರೆ ಎಷ್ಟು ತೊಂದರೆಯೋ ಅಷ್ಟೇ ತೊಂದರೆ ಈ ಪಾಕಿಸ್ತಾನದಿಂದ. ಸಧ್ಯಕ್ಕೆ ಕಾಶ್ಮೀರ ಭಯೋತ್ಪಾದನೆ ಕಡಿಮೆ ಆಗಿದೆ. ಅಲ್ಲಿ ವಿರೋಧದ ನಡುವೆಯೂ ಮಿಲಿಟರಿ ಬಿಗಿಗೊಂಡದ್ದು ಒಂದು ಕಾರಣವಾದರೆ ಅಫ್ಘನಿಸ್ತಾನದ ಭಯೋತ್ಪಾದಕರನ್ನು ಅಮೆರಿಕ ಬಗ್ಗು ಬಡಿದದ್ದೂ ಕಾರಣವಿರಬಹುದು. ಆದರೂ ಗಡಿಯಲ್ಲಿನ ತಂಟೆ ಇನ್ನೂ ನಿಂತಿಲ್ಲ. 

ಪಾಕಿಸ್ತಾನವು ಭಾರತದೊಂದಿಗೆ ಕಾಲು ಕೆರೆದು ಜಗಳ ತೆಗೆಯುವುದಕ್ಕೆ ಹಲವಾರು ಕಾರಣವಿದೆ. ತನಗೆ ಒಳಗೊಳಗೆ ತುರಿಕೆಯಾದಾಗೆಲ್ಲ ಅದನ್ನು ತುರಿಸಿಕೊಳ್ಳುವುದನ್ನು ಯಾರೂ ನೋಡಬಾರದು ಎಂಬ ಕಾರಣಕ್ಕೆ ಅದು ಇತ್ಲಾಗೆ ಒಂದು ಕಲ್ಲು ಎಸೆದು ಪ್ರಪಂಚದ ದಿಕ್ಕು ತಪ್ಪಿಸುವ ಯತ್ನವನ್ನು ಮಾಡುತ್ತಲೇ ಬರುತ್ತಿದೆ. ಅದು ಅದರ ಕರ್ಮ, ಆದರೆ ಅದರಿಂದ ತೊಂದರೆಗೆ ಒಳಗಾಗುತ್ತಿರುವುದು ಮಾತ್ರ ನಾವೆ. ಹಾಗಂತೆ ಎಷ್ಟು ಅಂತ ಸಹಿಸುವುದು ? ಎಲ್ಲಾ ತಾಳ್ಮೆಗಳಿಗೂ ಒಂದು ಕೊನೆಯಿದ್ದೇ ಇರುತ್ತದೆ. ಭಾರತದ ತಾಳ್ಮೆಗೆ ಕೊನೆ ಇದೆಯೋ ಇಲ್ಲವೋ ಗೊತ್ತಿಲ್ಲ.  

ಏಕಾಏಕಿ ಅದರ ಮೇಲೆ ಯುದ್ಧ ಸಾರಿ ಅದನ್ನು ಹೊಸಕಿ ಹಾಕಿಬಿಡಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಒಂದು ರೀತಿ ಯೋಚಿಸಿದರೆ ಅದು ಸರಿ ಅನ್ನಿಸಲೂ ಬಹುದು. ಆದರೆ ಒಂದೇ ಸಲಕ್ಕೆ ಹೊಸಕಿ ಹಾಕಿ ಬಿಡಲು ಸಾಧ್ಯವೇ ? ಕಂಡಿತಾ ಇಲ್ಲ. ಪಾಕಿಸ್ತಾನಿಯರು ತಿನ್ನಲಿಕ್ಕೆ ಕೂಳಿಗೆ ಗತಿ ಇಲ್ಲವೆಂದರೂ ಬೇಕಾದಷ್ಟು ಆಯುಧ, ಆಣುಬಾಂಬ್‌ಗಳನ್ನು ತಯಾರಿಸಿಟ್ಟು ಕೊಂಡಿದ್ದಾರೆ. ಅದು ಭಾರತ ದಾಳಿ ಮಾಡಿ ಬಿಡುತ್ತದೆ ಅನ್ನುವ ಭಯಕ್ಕಲ್ಲ, ತಾವೇ ಯಾವಾಗಲಾದರೂ ಸಮಯ ಸಿಕ್ಕರೆ ಭಾರತದ ಮೇಲೆ ದಾಳಿ ಮಾಡಲಿಕ್ಕೆ. ಇಂತಹ ಕ್ಷುದ್ರ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಭಾರತ ಗೆಲ್ಲುವುದು ಕಷ್ಟವೆಂದೇನಲ್ಲ, ಆದರೆ ಅದರಿಂದ ಪಾಕಿಸ್ತಾನ ನಿರ್ವಂಶವಾಗಿಯೇ ಹೋಗಬಹುದು... ಆದರೆ ಭಾರತವೂ ಅಂಗಾಂಗಗಳನ್ನು ಊನವಾಗಿಸಿಕೊಳ್ಳಬೇಕಾಗುತ್ತದೆ. ಮತ್ತೊಂದು ಅಪಾಯ ಚೀನಾದ್ದು. ಇತ್ತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿರುವಂತೆಯೇ ಚೀನಾ ಅದರ ಬೆಂಬಲಕ್ಕೆ ನಿಲ್ಲುತ್ತದೆ. ಭಾರತದ ಗೆಳೆಯ ರಷ್ಯಾ ಮೊದಲಿನಷ್ಟು ಸಧೃಡವಾಗಿಲ್ಲ, ಅಮೆರಿಕವನ್ನು ನೆಚ್ಚಿಕೊಳ್ಳುವಂತಿಲ್ಲ. ಆಗ ಭಾರತ ಏಕಾಂಗಿಯಾಗಬೇಕಾದೀತು. ನಾವು ಎಷ್ಟೇ ಮಿಲಿಟರಿ ಸಾಮರ್ಥ್ಯ ಹೊಂದಿದ್ದರೂ ಚೀನಾವನ್ನು ಬಗ್ಗು ಬಡಿಯು ಸಾಮರ್ಥ್ಯ ನಮಗಿಲ್ಲ. ಇದು ಪಾಕಿಸ್ತಾನದ ಮೇಲೆ ಭಾರತವು ದಂಡೇಳದಂತೆ ತಡೆದಿರುವ ಅನೇಕ ಕಾರಣಗಳಲ್ಲಿ ಒಂದು. ನಮ್ಮ ಒಂದು ಕಣ್ಣು ಹೋದರೆ ಹೋಗಲಿ, ಪಾಕಿಸ್ತಾನದ ಎರಡೂ ಕಣ್ಣು ತೆಗೆಯೋಣ ಎಂದು ಹೊರಡುವುದು ಮೂರ್ಖತನವಾದೀತು.

ಹಾಗಾದರೆ ಭಂಡ ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದಾದರೂ ಹೇಗೆ ? ಇದನ್ನು ಮುಳ್ಳನ್ನು ಮುಳ್ಳಿನಿಂದಲೇ ತೆಗೆವ ದಾರಿಯಲ್ಲೇ ಮಾಡಬಹುದು. ಈಗಾಗಲೇ ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರು ಕ್ರಿಯಾಶೀಲರಾಗಿದ್ದು ಪಾಕಿಸ್ತಾನಕ್ಕೆ ತಲೆನೋವಾಗಿದ್ದಾರೆ.  ಭಾರತ ಅನುಸರಿಸ ಬೇಕಾಗಿರುವುದು "ಶತ್ರುವಿನ ಶತ್ರು ಮಿತ್ರ" ಎಂಬ ನಾಣ್ನುಡಿಯನ್ನು. ಅಂದರೆ ಬಲೂಚಿಸ್ತಾನದ ಭಯೋತ್ಪಾದಕರಿಗೆ ಯಥೇಚ್ಚವಾಗಿ ಧನ ಸಹಾಯ ಮಾಡುವ ಮೂಲಕ ಪಾಕಿಸ್ತಾನಕ್ಕೆ ತೊಂದರೆ ಕೊಡುವುದಷ್ಟೇ ಈಗಿರುವ ಮಾರ್ಗ. ಈಗಾಗಲೇ ಭಾರತವು ಅಂತಹ ಕಾರ್ಯವನ್ನು ಮಾಡುತ್ತಿರಬಹುದು. ಏಕೆಂದರೆ ಭಾರತದಲ್ಲಿ ಪಾಕಿಸ್ತಾನ ಪ್ರೇರಿತ ದಾಳಿಗಳು ನಡೆದ ನಂತರವೆಲ್ಲಾ ಬಲುಚಿಸ್ತಾನದಲ್ಲಿ ಅಲ್ಲಿನ ಭಯೋತ್ಪಾದಕರಿಂದ ಪಾಕಿಸ್ತಾನದ ಮೇಲೆಯೇ ದಾಳಿಗಳಾಗಿವೆ. 
ಭೂಮಿಗೆ ಅಪ್ಪಳಿಸಲು ಬರುವ ಕ್ಷುದ್ರ ಗ್ರಹವೊಂದನ್ನು ತಡೆಯಲು ವಿಜ್ಞಾನಿಗಳು ಇಲ್ಲಿಂದ ರಾಕೇಟ್ ಕಳಿಸಿ ಢಿಕ್ಕಿ ಹೊಡೆಸಿ ಅದರ ದಿಕ್ಕು ತಪ್ಪಿಸುವಂತೆಯೆ ಪಾಕಿಸ್ತಾನದ ಕ್ಷುದ್ರ ಶಕ್ತಿಯನ್ನು ದಿಕ್ಕು ತಪ್ಪಿಸಬೇಕಾಗಿದೆ. ಅದನ್ನು ಭಾರತ ಸರ್ಕಾರವು ಯಶಸ್ವಿಯಾಗಿ ನಡೆಸಲಿ ಎಂದು ಆಶಿಸೋಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…