ವಿಷಯಕ್ಕೆ ಹೋಗಿ

ಅಲ್ಲಾ ಕೊಟ್ಟರೂ ಮುಲ್ಲಾ ಬಿಡ !


ತಮಿಳುನಾಡಿನ ಕುತಂತ್ರಿಗಳು ಕಮಲಹಾಸನರ "ವಿಶ್ವರೂಪಂ" ಚಿತ್ರಕ್ಕೂ ಕೊಕ್ಕೆ ಹಾಕಿ ಕೇಕೆ ಹಾಕಿದ್ದಾರೆ. ಅದು ಭಯೋತ್ಪಾದನೆಯ ವಿಷಯವನ್ನು ಒಳಗೊಂಡಿದೆ ಅನ್ನುವುದು ಕುಮಾರಿ (?!) ಜಯಲಲಿತ ಸರ್ಕಾರ ನೀಡಿರುವ ಕಾರಣವಾದರೂ ಅದರ ಹಿಂದಿನ ನಿಗೂಢ ವಿಷಯಗಳು ಬೇರೆಯೇ ಇವೆ. 

ಭಯೋತ್ಪಾದನೆಯ ವಿಷಯವಿರುವುದಕ್ಕೂ ಮುಸ್ಲಿಮರಿಗೂ ಏನು ಸಂಬಂಧ ? ದೇಶದಲ್ಲಿ ಅಷ್ಟೇ ಅಲ್ಲದೇ ಪ್ರಪಂಚದಲ್ಲೆಲ್ಲಾ ಭಯೋತ್ಪಾದನೆ ಹರಡಿರುವುದು ಸುಳ್ಳೇ ? ತಮಿಳು ಭಯೋತ್ಪಾದನೆ ಈ ಕುಮರಿಯನ್ನೇ ಉಡಾಯಿಸುವಷ್ಟು ಬೆಳೆದಿದ್ದರಿಂದಲೇ ಅಲ್ಲವೇ ಈಕೆ ಝಡ್ + ಕಾವಲು ಹಾಕಿಸಿಕೊಂಡಿದ್ದು? 

ವಿಶ್ವರೂಪಂ ಚಿತ್ರವು ತಯಾರಾಗುತ್ತಲೇ ಕಮಲ್ ಒಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದರು. ಅದು ಹಂಚಿಕೆ ವಿವಾದ. ಏರ್‌ಟೆಲ್ ನವರಿಗೆ ಚಿತ್ರದ ಸ್ಯಾಟಲೈಟ್ ಬಿತ್ತರಣೆ ಹಕ್ಕನ್ನು ಮಾರಿಕೊಂಡಿದ್ದು ತಮಿಳುನಾಡಿನ ಚಿತ್ರ ವಿತರಕರ ಕಣ್ಣು ಕೆಂಪಾಗಿಸಿತ್ತು. ಆದರೆ ಅವರಿಗೆ ಕಮಲ್ ಬಗ್ಗಿರಲಿಲ್ಲ. ಆದನ್ನೇ ನೆಪವಾಗಿಟ್ಟುಕೊಂಡ ವಿತರಕ ಮಹಾಷಯರು ಈಗ ಜಯಾ ಮೂಲಕ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಪೋಲಕಲ್ಪಿತ ವದಂತಿಯನ್ನು ಹರಿಯ ಬಿಟ್ಟು ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ. ಮುಸ್ಲಿಂ ಮತಗಳ ಬೇಟೆಯ ಚಿಕ್ಕ ಅವಕಾಶವನ್ನೂ ಕಳೆದುಕೊಳ್ಳಲಿಚ್ಚಿಸದ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಇಂತಹ ಸುವರ್ಣಾವಕಾಶ ಸಿಕ್ಕರೆ ಕೇಳಬೇಕೆ?  ಈಗ ನಡೆದಿರುವುದೂ ಅದೇನೆ. ಇಲ್ಲವೆಂದರೆ ಸೆನ್ಸಾರ‍್ ಮಂಡಳಿ ಒಪ್ಪಿಗೆ ನೀಡಿರುವ ಚಿತ್ರಕ್ಕೆ ಸರ್ಕಾರ ತಡೆ ಹಾಕುವುದಂದರೇನು? ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ತೀರ್ಮಾನ ಏನಾಗುವುದೆಂದು ಕಾದು ನೋಡಬೇಕಾಗಿದೆ. ಆದರೂ ಕಮಲ್‌ರಂತಹ ಶ್ರೇಷ್ಟ ನಟರಿಗೂ ಈ ರೀತಿ ತೊಂದರೆ ಕೊಡುವುದು ಅಕ್ಷಮ್ಯ.

ಮುಸ್ಲಿಮರೇ ದೇವರನ್ನು ಅವನಷ್ಟಕ್ಕೆ ಬಿಡಿ..

ಕನ್ನಡದಲ್ಲೊಂದು ಗಾದೆ ಮಾತಿದೆ, "ದೇವರು ಕೊಟ್ಟರೂ ಪೂಜಾರಿ ಕೊಡ" ಅಂತ, ಅದನ್ನು ಇಸ್ಲಾಮಿನ ಮುಲ್ಲಾಗಳಿಗೆ ಅನ್ವಯಿಸಿದರೆ "ಅಲ್ಲಾಹ್ ಕೊಟ್ಟರೂ ಮುಲ್ಲಾ ಬಿಡ !" ಎಂದು ಹೇಳಬಹುದು. ಹಿಂದುಗಳಲ್ಲಿ ಇರುವಂತೆಯೇ ಪುರೋಹಿತಶಾಯಿ ವರ್ಗ ಈ ಮುಲ್ಲಾಗಳದ್ದು. ಮಾತೆತ್ತಿದರೆ ಇವರು ಪತ್ವಾ ಹೊರಡಿಸುತ್ತಾರೆ, ತಲೆ ಕಡಿಯಲು ಹೇಳುತ್ತಾರೆ. ವಿಮರ್ಶೆಯನ್ನು ಎದುರಿಸುವ ತಾಕತ್ತು ಇವರಿಗೆ ಇಲ್ಲ. ಇಸ್ಲಾಮಿನ ಬಗ್ಗೆಯೋ ಅಥವಾ ಆ ಧರ್ಮದ ಪ್ರಮುಖರ ಬಗ್ಗೆಯೋ ಚಿಕ್ಕ ಟೀಕೆ ವ್ಯಕ್ತವಾದರೂ ಸಾಕು, ಇವರು ಫತ್ವಾ ಪುಸ್ತಕವನ್ನು ಎದುರಿಗಿಟ್ಟುಕೊಂಡು ಕುಳಿತುಬಿಡುತ್ತಾರೆ. 

ನಾನು ಖುರಾನ್‌ನ ಕನ್ನಡ ಅವತರಣಿಕೆಯನ್ನು ಓದಿದ್ದೇನೆ. ಅದರಲ್ಲಿ ಎಲ್ಲಿಯೂ ಈ ಮುಲ್ಲಾಗಳು ಹೇಳುವ ಷರಿಯತ್ ಕಾನೂನಿನ ಉಲ್ಲೇಖವಿಲ್ಲ. ಖುರಾನ್‌ನಲ್ಲಿ ಸ್ಪಷ್ಟಪಡಿಸಿರುವುದೇನೆಂದರೆ "ಮನುಷ್ಯ ಮಾಡುವ ತಪ್ಪಿಗೆ ಶಿಕ್ಷೆ ಕಡ್ಡಾಯ, ಆದರೆ ಅದನ್ನು ದೇವರೇ ತೀರ್ಮಾನಿಸಿ ಶಿಕ್ಷೆ ವಿಧಿಸುತ್ತಾನೆ. ಆ ಶಿಕ್ಷೆ ಜಾರಿಯಾಗುವುದು ಮನುಷ್ಯನ ಈ ಜೀವನ ಮುಗಿದ ನಂತರ. ಹಾಗಾಗಿ ಭೂಮಿಯ ಮೇಲೆ ಮಾಡುವ ತಪ್ಪಿಗೆ ಸರ್ಕಾರ ಯಾವುದೇ ಶಿಕ್ಷೆ ಕೊಟ್ಟರೂ ಅದು ಅವನು ಮಾಡಿರುವ ಅಪರಾಧಕ್ಕೆ ದಂಡನೆಯಾಗುವುದಿಲ್ಲ. ಅವನು ಮಾಡಿರುವ ಅಪರಾಧಕ್ಕೆ ನಿಜವಾದ ಶಿಕ್ಷೆ ನೀಡುವವನು ದೇವರು ಮಾತ್ರ" ಎಂದಿರುವುದನ್ನು ಓದಿದ್ದೇನೆ. ಹಾಗಿದ್ದ ಮೇಲೆ ಈ ಮುಲ್ಲಾಗಳ ಪ್ರತ್ಯೇಕ ಶಿಕ್ಷೆ ಅನ್ನುವುದು ಅರ್ಥವಿಲ್ಲದ್ದಾಗುತ್ತದೆ.

ನಿಜ, ಸಮಾಜವು ಹದ್ದುಬಸ್ತಿನಲ್ಲಿರಬೇಕಾದರೆ ಇಲ್ಲಿನ ಅಪರಾಧಕ್ಕೆ ಶಿಕ್ಷೆಯ ವ್ಯವಸ್ಥೆ ಇರಲೇ ಬೇಕು, ಆದರೆ ಅದು ಆಯಾ ದೇಶಗಳ ಕಾನೂನು ವ್ಯವಸ್ಥೆಯಲ್ಲೇ ಇರುವಾಗ ಈ ಮುಲ್ಲಾಗಳ ಮತ್ತೊಂದು ಕಾನೂನು ಯಾಕೆ ? ಒಟ್ಟಿನಲ್ಲಿ ಈ ಮುಲ್ಲಾಗಳು ಅಮಾಯಕ ಮುಸ್ಲಿಮರ ಮನಸ್ಸನ್ನು ಕೆಡಿಸಿ ದಾರಿ ತಪ್ಪಿಸುತ್ತಿದ್ದಾರೆ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಒಂದೇ ದೇಶದೊಳಗೆ ವಿಷ ಬೀಜ ಬಿತ್ತುವ ಇಂತಹ ಕದೀಮರನ್ನು ಮೊದಲು ಆಯಾ ಧರ್ಮದವರೇ ಒದ್ದೋಡಿಸಬೇಕು.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…