ವಿಷಯಕ್ಕೆ ಹೋಗಿ

ತಾಳ ತಪ್ಪಿದ ಮೋಹನ ಭಾಗವತಿಗೆ !

"ಭಾರತಕ್ಕಿಂತಲೂ ಇಂಡಿಯಾದಲ್ಲೇ ಅತ್ಯಾಚಾರಗಳು ಹೆಚ್ಚು" ಎನ್ನುವ ಮೂಲಕ ನಿರಾಧಾರ ಸುಳ್ಳೊಂದನ್ನು ತೇಲಿ ಬಿಟ್ಟು ಪರಿಹಾಸ್ಯಕ್ಕೀಡಾಗಿದ್ದಾರೆ RSS ಮುಖಂಡ ಮೋಹನ್ ಭಾಗವತ್. ಜನರಿಗೆ ಸುಳ್ಳನ್ನು ಸತ್ಯವೆಂದು ನಂಬಿಸುವ ಕಲೆ ಇವರಿಗೆಲ್ಲಾ ಚೆನ್ನಾಗಿ ಕರಗತವಾಗಿದೆ. ಆದರೂ ಈ ಬಾರಿ ಯಾಕೋ ಎಡವಿದ್ದಾರೆ. ಕಾರಣ ಜನರು ಮೊದಲಿನಷ್ಟು ದಡ್ಡರಾಗಿ ಉಳಿದಿಲ್ಲ ಅನ್ನುವುದು ಬಹುಶಃ ಇವರಿಗೆ ಅರ್ಥವಾಗಿಲ್ಲದಿರಬಹುದು. 
ಭಾರತ ಮತ್ತು ಇಂಡಿಯಾ ಎಂದು ದೇಶವನ್ನು ಎರಡು ಭಾಗ ಮಾಡುವುದೇ ಒಂದು ಅಪದ್ಧ. ಇವರ ಪ್ರಕಾರ ಅವೆರಡಕ್ಕೂ ಅದೇನು ವ್ಯತ್ಯಾಸವಿದೆಯೋ ಗೊತ್ತಿಲ್ಲ. ಬಹುಶಃ ಆಧುನಿಕತೆಯ ಭಾರತ "ಇಂಡಿಯ"ವಾಗಿಯೂ, ಇನ್ನೂ ಹಿಂದುಳಿದಿರುವ (ಗ್ರಾಮೀಣ) ಇಂಡಿಯವು ಭಾರತವಾಗಿಯೂ ಇವರಿಗೆ ಕಂಡಿರಬಹುದು. ಹೇಗೆ ನೋಡಿದರೂ ಅಪ್ಪ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಂಡು ಜನ ಸಾಯಲಿ ಎಂಬುದಷ್ಟೇ ಇದರ ತಾತ್ಪರ್ಯವಾದೀತು. ಏಕೆಂದರೆ ಜನರುಅಭಿವೃದ್ದಿಗೆ ಆಧುನಿಕತೆ ಬೇಕೇ ಬೇಕು. ಅತ್ಯಂತ ಮಿತಿ ಮೀರಿರುವ ಭಾರತದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಆಧುನಿಕತೆ ಇಲ್ಲದ ಭಾರತ ಇವರು ಹೇಳುವ ಭಾರತವಾಗಿಯೂ ಉಳಿಯದೇ ಭಿಕ್ಷುಕರ ನಾಡಾದೀತು. ಅಥವಾ ಮತ್ತೊಮ್ಮೆ ಪರಕೀಯರ ಸೊತ್ತಾಗಬಹುದು (ಈಗ ರಾಜಕಾರಣಿಗಳ ಸೊತ್ತಾಗಿರುವುದು ವಿಪರ್ಯಾಸ). 

ಗ್ರಾಮೀಣತನವೇ ಇವರು ಹೇಳುವ ಭಾರತ ಎಂದಾದರೆ ಭಾಗವತರು ಇಡೀ ಇಂಡಿಯಾದ ಜನರ ಕಿವಿ ಮೇಲೆ ದೊಡ್ಡ ದಾಸವಾಳದ ಹೂವನ್ನೇ ಇಡಲು ಪ್ರಯತ್ನ ಪಟ್ಟಿದ್ದಾರೆನ್ನಬಹುದು. ಅಥವಾ ಅಂಕಿ-ಸಂಖಿಗಳ ಜ್ಞಾನವಿಲ್ಲದೇ ಹೇಳಿಕೆಯೊಂದನ್ನು ತೇಲಿ ಬಿಟ್ಟಿದ್ದಾರೆ. ಏಕೆಂದರೆ ಅತ್ಯಾಚಾರಗಳ ಪರಿಮಾಣವನ್ನು ಅವಲೋಕಿಸಿದರೆ ಭಾಗವತರು ಹೇಳುವ ನಗರಗಳೆಂಬ ಇಂಡಿಯಾಕ್ಕಿಂತಲೂ ಗ್ರಾಮೀಣ ಭಾರತದಲ್ಲೇ ಅತ್ಯಾಚಾರಗಳು ಹೆಚ್ಚು... ಎಲ್ಲರಿಗೂ ತಿಳಿದಿರುವಂತೆ ಗ್ರಾಮಾಂತರ ಪ್ರದೇಶದಲ್ಲಿ ಆಗುವ ಅದೆಷ್ಟೋ ಅತ್ಯಾಚಾರ ಪ್ರಕರಣಗಳು ಕಂಡಿತಾ ಪೊಲೀಸ್‌ ಠಾಣೆ ವರೆಗೆ ಬರುವುದೇ ಇಲ್ಲ. ಭಯದಿಂದಲೋ ಅಥವಾ ಹಳ್ಳಿ ಮುಖಂಡರ ಪಂಚಾಯ್ತಿ ದೆಸೆಯಿಂದಲೋ ಅಲ್ಲೇ ಮುಚ್ಚಿ ಹೋಗುವ ಪ್ರಕರಣಗಳೇ ಹೆಚ್ಚು. ಹಗಿರುವಾಗಲೂ ಸಹ ಪೊಲೀಸ್‌ ಠಾಣೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯನ್ನು ತೆಗೆದುಕೊಂಡರೆ ಒಟ್ಟು ಅತ್ಯಾಚಾರಗಳಲ್ಲಿ ಶೇ ೭೫ ರಷ್ಟು ಗ್ರಾಮಾಂತರ ಪ್ರದೇಶದಲ್ಲೇ ನಡೆಯುತ್ತಿವೆಯಂತೆ ! ಅಲ್ಲಿಗೆ ಭಾಗವತರ ಭಾರತ ಖಲ್ಲಾಸ್ ! ಭಾಗವತರೀಗ ಹಾಡಲು ಹೊಸ ಪದ್ಯ ಹುಡುಕಬೇಕಷ್ಟೇ!

ಇದೇ ಭಾಗವತರ ಮತ್ತೊಂದು ಆಲಾಪ ಏನೆಂದರೆ "ಹೆಂಗಸರು ಮನೆಯಲ್ಲಿ ಅಡುಗೆ ಮಾಡಿಕೊಂಡು ಇದ್ದರೆ ಒಳ್ಳೆಯದು, ಅವರು ಹೊರಗೆ ಬರಬಾರದು, ಅವರು ಹೊರಗೆ ಬರುವುದರಿಮದಲೇ ಈ ರೀತಿ ಅತ್ಯಾಚಾರಗಲು ನಡೆಯುತ್ತಿರುವುದು". ಆದರೆ ಮನೆಯಲ್ಲೇ ಇದ್ದಂತಹ ಅನೇಕ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿರುವುದು ಅವಿವೇಕಿ ಭಾಗವತರ ಗಮನಕ್ಕೆ ಬಂದಿಲ್ಲವೇ ? ನೂರಾರು ವರ್ಷಗಳಿಂದಲೂ ಮಹಿಳೆಯನ್ನು ತುಳಿದ ದುಷ್ಟ ಮನುಷ್ಯರು ಇಂದಿಗೂ ಭಾಗವತರ ರೂಪದಲ್ಲಿ ಇರುವುದು ಖೇದಕರ. ಇವರೆಲ್ಲ ಒಂದು ಬಗೆಯ ಹಿಂದೂ ಮುಲ್ಲಗಳು. ಇವರಿಗೆ ಮಹಿಳೆಯರ ಉನ್ನತಿ ಬೇಕಾಗಿಲ್ಲ, ಕೆಳ ವರ್ಗದವರ ಉನ್ನತಿ ಬೇಕಾಗಿಲ್ಲ.

ಹಿಂದುಗಳ ಉದ್ದಾರಕರು ಎಂದು ಬೀಗುವ ಇಂತಹ ಮುಖಂಡರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ, ಏಕೆಂದರೆ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಅತ್ಯಾಚಾರಿಗಳು ಶೇ ೯೯ % ಹಿಂದುಗಳೇ ಆಗಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇತರೆ ಧರ್ಮದವರು ಇದ್ದಾರೆ. ದೇಶದ ಜನ ಸಂಖ್ಯೆಗೆ ಹೋಲಿಸಿದರೆ ಇತರೆ ಧರ್ಮದ ಜನ ಸುಮಾರು ೨೦% ಇದ್ದಾರೆ. ಹಾಗೆ ನೋಡಿದರೆ ಅತ್ಯಾಚಾರಿಗಳಲ್ಲೂ ಹಿಂದುಗಳು ೮೦% ಶೇ ಮಾತ್ರ ಇರಬೇಕಾಗಿತ್ತಲ್ಲವೇ ? ಉಹುಂ, ಇಂತಹ ಅಂಕಿ ಸಂಕಿಗಳ ಗೊಡವೆ ಅವರಿಗೆ ಬೇಡ. ಅದೇ ಮಂಗಳೂರಿನ ಹುಡುಗಿಯೊಬ್ಬಳು ಸಾಬಿಯೊಬ್ಬನೊಂದಿಗೆ ಓಡಿ ಹೋದರೆ ಅದು ಇವರಿಗೆ "ಲವ್ ಜಿಹಾದ್" ಆಗಿ ಕಾಣಿಸುತ್ತದೆ. ತಮ್ಮ ಧರ್ಮದವರಿಂದಲೇ ಅತ್ಯಾಚಾರಕ್ಕೊಳಗಾಗಿ ಮಾನ ಮರ್ಯಾದೆ ಕಳೆದುಕೊಂಡು ಸತ್ತರೆ ಪರ್ವಾಗಿಲ್ಲ, ಅನ್ಯ ಧರ್ಮದವರನ್ನು ಪ್ರೀತಿ  ಮಾತ್ರ ಮಾಡಬಾರದು. ದೆಹಲಿಯಲ್ಲಿ ನಡೆದ ಅತ್ಯಾಚಾರಕ್ಕೆ ಎದ್ದು ಬಿದ್ದೂ ಹೋರಾಡುವ ಇವರು ಕರ್ನಾಟಕದ ಅತ್ಯಾಚಾರಗಳಿಗೆ ತುಟಿ ಪಿಟಕ್ ಅನ್ನುವುದಿಲ್ಲ. ಕಾರಣ ಇಲ್ಲ ತಮ್ಮದೇ ಬಿಜೆಪಿ ಸರ್ಕಾರವಿದೆ! 

ಕುಕ್ಕೆಯ ಹೀನ ಎಂಜಲೆಲೆ ಮೇಲಿನ ಉರುಳಾಟವನ್ನು ಇದೇ ಭಾಗವತರು ಒಂದು ಚಿಟಿಕೆ ಹೊಡೆಯುವ ಮೂಲಕ ನಿಲ್ಲಿಸಬಹುದು, ಉಹುಂ, ಬೇಡ, ಉರುಳುವವರು ಅದ್ಯಾರೋ ಕೀಳು ಜನಾಂಗದವರು! ಯಾರೇ ಉರುಳಾಡಲಿ, ಕೆಟ್ಟ ಹೆಸರು ಹಿಂದು ಧರ್ಮಕ್ಕೆ ಅನ್ನುವ ಜ್ಞಾನ ಇವರಿಗೆ ಇಲ್ಲದಿಲ್ಲ.... ಎಲ್ಲರೂ ಸಮಾನರಾದರೆ ತಮ್ಮ ತಮ್ಮ ಜಾತಿಗೆ ಎಲ್ಲಿಯ ನೆಲೆ ಎಂಬ ಭಯ ಮೇಲ್ವರ್ಗಕ್ಕೆ?!

ಈ ನಡುವೆ ಕಳ್ಳ ಕಂಗ್ರೆಸ್‌ನವರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ವಿಷಯದಲ್ಲಿ ಮತ್ತೆ ಉಲ್ಟಾ ಹೊಡೆದಿದ್ದಾರೆ. ಮೊನ್ನೆಯವರೆಗೂ ಅತ್ಯಾಚಾರಿಗಳಿಗೆ "ನಿರ್ವೀರ್ಯತೆ" ಯ ಶಿಕ್ಷೆ ಕೊಡೋಣ ಅನ್ನುತ್ತಿದ್ದವರು ನಿನ್ನೆ "ಅಷ್ಟೆಲ್ಲಾ ಯಾಕೆ? ಕಠಿಣ ಸಜೆ ಸಾಕು" ಅನ್ನತೊಡಗಿದ್ದಾರೆ. ಬಹುಶಃ ಕಾಂಗ್ರೆಸ್‌ನೊಳಗೆ ಇರುವ ಅನೇಕ ಅತ್ಯಾಚಾರಿಗಳು ನಿರ್ವೀರ್ಯರಾಗುವುದು ಇಷ್ಟವಿಲ್ಲವೇನೊ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…