ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾನ್ ಪತ್ರಕರ್ತ ವಿಶ್ವೇಶ್ವರ ಭಟ್ಟರು ಬಡವರಿಗೆ ಬತ್ತಿ ಇಟ್ಟ ಕತೆ!

ಇವರು ಇವತ್ತೊಂದು ಕತೆ ಹೇಳಿದ್ದಾರೆ... ಅದು ಸೋಮಾರಿ ಮಿಡತೆ ಹಾಗೂ ಶ್ರಮಜೀವಿ ಇರುವೆ ಕತೆ.  ಇರುವೆ ಕಷ್ಟ ಪಟ್ಟು ಮುಂದಾಲೋಚನೆಯಿಂದ ದುಡಿದು ಆಹಾರ ಸಂಗ್ರಹಿಸಿ ಇಡುತ್ತೆ, ಆದರೆ ಮಿಡತೆ ಸೋಮಾರಿಯಾಗಿ ಆಡಿಕೊಂಡಿರುತ್ತೆ. ಆದರೆ ಮುಂದೆ ಮಿಡತೆ ಹಸಿವಿನಿಂದ ಬಳಲುವಾಗ ಇರುವೆ ಸಹಾಯ ಮಾಡಲಿಲ್ಲ ಎಂದು ಹಲವರು ಹೋರಾಟ ನಡೆಸುತ್ತಾರೆ... ಇತ್ಯಾದಿ ಇತ್ಯಾದಿಯಾಗಿದೆ ಇವರು ಹೇಳಿದ ಕತೆ. ಇದನ್ನೂ ಇವರು ಈ ಹಿಂದೆಯೂ ಒಮ್ಮೆ ಬರೆದಿದ್ದರು, ಈಗ ಕತೆಗೆ ಸ್ವಲ್ಪ ಸುಣ್ಣ-ಬಣ್ಣ ಬಂದಿದೆ.  ಆದರೆ ಇದನ್ನು ಓದುತ್ತಾ ಹೋದಂತೆ ಮಿಡತೆ ಹಾಗೂ ಇರುವೆಯನ್ನು ಯಾರು ಯಾರಿಗೆ ಹೋಲಿಸಿದ್ದಾರೆ ಎಂದು ತಿಳಿದಾಗ ಮೈ ಉರಿಯುತ್ತದೆ. ಕಾರಣ ಇವರ ಪ್ರಕಾರ "ಮುಂದಾಲೋಚನೆಯಿಂದ" ಕೂಡಿಸಿ ಇಟ್ಟುಕೊಂಡಿರುವ ಇರುವೆಗಳೆಂದರೆ ಇಂದಿನ ಶ್ರೀಮಂತರು, ಹಾಗೂ ಬಡತನದಲ್ಲಿ ಹೊಟ್ಟೆಗಿಲ್ಲದೇ ಒದ್ದಾಡುತ್ತಿರುವ ಬಡವರೆಲ್ಲಾ ಸೋಮಾರಿ ಮಿಡತೆಗಳ ತರದವರು... ನಾಚಿಕೆಯಾಗಬೇಕು ಇವರಿಗೆ. ವಿಶ್ವೇಶ್ವರ ಭಟ್ಟರು ಈ ಕೆಲವು ಉದಾಹರಣೆಗಳಿಗೆ ಯಾವ ರೀತಿ ಹೋಲಿಕೆ ಮಾಡುತ್ತಾರೆ ? ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರು ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅಂದರೆ ಹೆಗ್ಗಡೆವರು ಪಾಪ ಗೊತ್ತಿಲ್ಲದೇ ಸೋಮಾರಿ ಮಿಡತೆಗಳಿಗೆ ಸಹಾಯ ಮಾಡುತ್ತಿದ್ದಾರಾ ? ಅಜೀಂ ಪ್ರೇಮ್‌ಜೀ ತಾವು ಗಳಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ದೀನ ದಲಿತರ ಉದ್ದಾರಕ್ಕಾಗಿ ಸಮರ್ಪಿಸಿದ್ದಾರೆ... ಹಾಗ