ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಹಿತಿಗಳಿಗೂ ರಾಜಕೀಯ ಯೋ(ರೋ)ಗ!

ಏನೂ ಮಾಡಲು ಕೆಲಸವಿಲ್ಲದ ಬಡಗಿ ಮತ್ತೇನೋ ಮಾಡಿದ್ದನಂತೆ, ಹಾಗೇ ಆಗಿದೆ ನಮ್ಮ ಹಿರಿಯ ಸಾಹಿತಿ 'ಚಂಪಾ' ಎಂದು ನಾಮಾಂಕಿತಗೊಂಡಿರುವ ಶ್ರೀ ಚಂದ್ರಶೇಖರ ಪಾಟೀಲರ ಕಥೆ. ಬೆಕ್ಕಿಗೇಕೆ ಕಬ್ಬಿಣದ ಕೆಲಸ ಅನ್ನುವಂತೆ ಇವರಿಗೆ ಯಾಕೆ ಬೇಕಿತ್ತೋ ರಾಜಕೀಯ ಕೆಲಸ? ಸಾಹಿತ್ಯದಲ್ಲೇ ಆಗಬೇಕಾದ ನೂರಾರು ಕೆಲಸಗಳು ಇವೆ. ಕನ್ನಡದ ಕೆಲಸಗಳು ಮಾಡಿದಷ್ಟೂ ತೀರದು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಚಂಪಾ ಏಕಾಏಕಿ ಯಡಿಯೂರಪ್ಪನವರ ಕೆಜೆಪಿಗೆ ಲಾಂಗ್ ಜಂಪ್ ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಕುಚೋದ್ಯವಾಗಿಯೇ ಕಾಣಿಸುತ್ತಿದೆ. ಏಕೆಂದರೆ ಯಡಿಯೂರಪ್ಪ ಹಾಗೂ ಚಂಪಾ ಮೊದಲಿನಿಂದಲೂ ಜಿಗ್ರಿ ದೋಸ್ತ್‍ಗಳೇನಲ್ಲ. ಈ ಹಿಂದೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡವರು. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಬರುವ ಮುಂಚೆಯೆ ಕಾರ್ಯಕ್ರಮ ಪ್ರಾರಂಭಿಸಿದರು ಎಂದು ಚಂಪಾ ಮೇಲೆ ಯಡ್ಡಿ ಎಗರಾಡಿದರೆ ಅದಕ್ಕೆ ಎದಿರೇಟಾಗಿ ಚಂಪಾ ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ಯಡ್ಡಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದ್ದರು. ಇದಕ್ಕೆ ಮತ್ತೆ ಎದಿರೇಟು ನೀಡಿದ ಯಡ್ಡಿ ಚಂಪಾಗೆ ದಕ್ಕಿದ್ದ 'ಪಂಪ' ಪ್ರಶಸ್ತಿಗೆ ವರ್ಷಗಟ್ಟಲೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಏಟು ಎದಿರೇಟು ಕೊಟ್ಟುಕೊಳ್ಳುತ್ತಾ ವಿರೋಧಿಗಳಾಗಿದ್ದ ಚಂಪಾಗೆ ಈಗ ಯಡ್ಡಿ ಎಷ್ಟು ರೇಟು ಕೊಟ್ಟರೋ ತಿಳಿಯದು... ಕೆಜೆಪಿ ಕೋಟು ತೊಟ್ಟು ಬೀಗಲು ತಯಾರಾಗಿದ್ದಾರೆ. ಹಾವು ಮುಂಗುಸಿಯಾಗಿದ್ದವ

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ

ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ. ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು. ನಾನು ಈ ಹಿಂದೆಯೇ ಇದನ್ನು ಪಡೆದಿದ್ದರೂ ಮನೆಯನ್ನು ಬದಲಾಯಿಸಿದ್ದರಿಂದ ಹೊಸ ವಿಳಾಸಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಒಂದೇ ಕ್ಷೇತ್ರದ ಬೇರೆ ವಾರ್ಡ್‍ಗೆ ವಿಳಾಸ ಬದಲಾಯಿಸುವುದಷ್ಟೇ ಕೆಲಸ. ಎರಡು ವರ್ಷದಿಂದ ಇದರ ಬಗ್ಗೆ ತನಿಖೆಗೆ ಇಳಿದಿದ್ದೆ... ಹೇಗೆ ಬದಲಾಯಿಸುವುದು ಎಂದು ತಿಳಿಯಲು.   ಚುನಾವಣಾ ಇಲಾಖೆಯ ಜಾಲತಾಣದಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಎಂದುಕೊಂಡು ಅವರ ಜಾಲತಾಣವಾದ http://ceokarnataka.kar.nic.in/ ನಲ್ಲಿ ಒಂದು ಖಾತೆಯನ್ನು ತೆರೆದು ಅಲ್ಲಿ ಪ್ರಯತ್ನಿಸಿದೆ. ಅಲ್ಲಿ ತಿಳಿದು ಬಂದ ವಿಷಯವೇನೆಂದರೆ ಸಧ್ಯಕ್ಕೆ ಆನ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಡಿಸಿಕೊಳ್ಳಬೇಕು ಎಂಬುದು. ಆ ವಿಷಯವನ್ನು ಕೈ ಬಿಟ್ಟು ಯಾವ ಕಚೇರಿಯಲ್ಲಿ ಸಾಧ್ಯ ಎಂದು ತನಿಖೆ ಕೈಗೊಂಡೆ. ಏಕೆಂದರೆ ಚುನಾವಣಾ ಇಲಾಖೆಯ ಕಚೇರಿ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಸತತ ತನಖೆಯ ನಂತರ ಮಹಾನಗರ ಪಾಲಿಕೆಯ ಸ್ಥಳೀಯ ಕಚೇರಿಯಲ್ಲೇ ಇದನ್ನು ಮಾಡಿಕೊಡುತ್ತಾ