ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾ ಕಂಡಂತೆ ಜಾತಿಯ ಏರ್ಪಾಡುಗಳು.

ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ. ೧. ಬ್ರಾಹ್ಮಣ ೨. ಲಿಂಗಾಯಿತ ೩. ಒಕ್ಕಲಿಗ ೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು) ೫. ದೀವರು (ಈಡಿಗರು) ೬. ಹಸಲರು ೭. ಹೊಲೆಯರು ೮. ಉಪ್ಪಾರರು [ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ] ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ... * ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ. * ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವ