ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಂಗಳೂರು ಮಹಾನಗರ ಪಾಲಿಕೆಯ ಒತ್ತುವರಿ ಭೂಮಿ ತೆರವು ಯಾವಾಗ ?

ಪಾಲಿಕೆಯ ಸಾವಿರಾರು ಎಕರೆ ಭೂಮಿ ಬಲಾಢ್ಯರಿಂದ ಅತಿಕ್ರಮಣವಾಗಿದೆಯೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಒತ್ತುವರಿಯಲ್ಲಿ ಜನಪ್ರತಿನಿಧಿಗಳ ಬೇನಾಮಿ ವಂಚನೆ ಇರದೆ ಇವೆಲ್ಲಾ ನಡೆಯಲು ಸಾಧ್ಯವಿಲ್ಲ. ನಗರದ ಕೆರೆ ಕುಂಟೆಗಳು, ರಾಜಕಾಲುವೆಗಳು, ಹಳೆಯ ಗುಂಡಿತೋಪು ಜಾಗ, ಉದ್ಯಾನವನ, ಸರ್ಕಾರಿ ಕಚೇರಿಗೆ ಸೇರಿದ ಭೂಮಿ,  ಶಾಲೆಗಳ ಆಟದ ಮೈದಾನವೂ ಸೇರಿದಂತೆ ಪಾಲಿಕೆಯ ಭೂಮಿ ಅಕ್ರಮ ಒತ್ತುವರಿಯಾಗಿವೆ. ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ ಪಾಲಿಕೆ ವ್ಯಾಪ್ತಿಯ ಭೂ ಒತ್ತುವರಿ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪೂರಕ ದಾಖಲೆಗಳನ್ನು ಒದಗಿಸಿ ಭೂ ಒತ್ತುವರಿ ವಶಕ್ಕೆ ಶಿಫಾರಸು ಮಾಡಿರುತ್ತಾರೆ. ಆದರೆ ಈ ಸಂಬಂಧ ಪಾಲಿಕೆ ಆಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ ನಿರ್ಲಕ್ಷ್ಯ ತೋರಿದೆ. ಅತಿಕ್ರಮಿತ ಭೂಮಿ ವಶಪಡಿಸಿಕೊಂಡರೆ ಪಾಲಿಕೆಗೆ ದೊಡ್ಡ ಮಟ್ಟದ ಆಸ್ತಿ ಉಳಿಯಲಿದೆ. ಆದಾಯಕ್ಕೂ ಮೂಲವಾಗಲಿದೆ.  ಈ ಬಗ್ಗೆ ಬಿಬಿಎಂಪಿ ಮೇಯರ್ ಅವರಿಗೆ ಚಿಂತಿಸಲು ಸಮಯವಿಲ್ಲದಾಗಿದೆ. ನಿರೀಕ್ಷಿತ ಸಾಧನೆ ತೋರದೆ ಅವರು ಸ್ಥಾನ ತ್ಯಜಿಸುವ ಚಿಂತೆ ಅವರದು. ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಯಾವ ನಿರ್ಧಾರ ತಳೆಯುವರೋ ನೋಡಬೇಕಿದೆ. ಸತ್ಯ ನುಡಿದವರ ಮೇಲೆಯೇ ಗಧಾ ಪ್ರಹಾರ ! ಭೂಮಾಫಿಯಾದ ಕಬಂದ ಬಾಹುಗಳು ಎಷ್ಟು ಬಲಿಷ್ಟವಾಗಿವೆ ಎಂಬುದಕ್ಕೆ ಸತ್ಯ ನುಡಿದು ಈಗ ಸದನದ ಹಕ್ಕುಚ್ಯುತಿ ಎದುರಿಸುತ್ತಿರುವ ಪ್ರಾಮ

ಕುಸಿಯುತ್ತಿರುವ ಕನ್ನಡಿಗರ ಸಂಖ್ಯೆ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ.... ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅರ್ಥಾತ್ ಕನ್ನಡಿಗರ ಸಂಖ್ಯೆ ನಿಧಾನ ಗತಿಯಲ್ಲಿ ಕುಸಿಯುತ್ತಿದೆ. ದೇಶದ ಅತಿ ದೊಡ್ಡ ಸಮಸ್ಯೆ ಜನಸಂಖ್ಯಾ ಸ್ಪೋಟ ಎಂದು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ನಂಬಿ, ಕನ್ನಡಿಗರ ಸಮಸ್ಯೆ ಜನಸಂಖ್ಯಾ ಕುಸಿತ! ದೇಶದ ಹೆಸರಲ್ಲಿ ದೇಶನಾಯಕರೆನ್ನಿಸಿಕೊಂಡ ಹಿಂದಿ ಧೂರ್ತರು ನಮಗೆ ನೀಡಿದ ಬಳುವಳಿ ಇದು. ನಂಬಲು ಕಷ್ಟವೇ ? ಲೇಖನವನ್ನು ಓದುತ್ತಾ ಹೋಗಿ. ಇಡಿಯ ದೇಶ ಒಂದು ಎಂದು ಹೇಳುತ್ತಿರುವವರಿಗೆ ಕನ್ನಡಿಗರು ಇದ್ದರೇನು ಬಿಟ್ಟರೇನು ಎಂಬ ಮನಸ್ಥಿತಿ ಇರಬಹುದು. ಹಾಗಾಗಿಯೇ ಏನೋ ಇಡಿಯ ದೇಶಕ್ಕೂ ಒಂದೇ ರೀತಿಯ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಪ್ರಮಾಣವನ್ನು ನಿಗದಿ ಮಾಡಿದರು. ಆದರೆ ಈಗಾಗಲೆ ನಿಗದಿತ ಟಿ.ಎಫ್.ಆರ್. ಸಾಧಿಸಿರುವ ಕರ್ನಾಟಕದಂತಹ ರಾಜ್ಯಕ್ಕೆ ಇಡೀ ದೇಶದ ಟಿ.ಎಫ್.ಆರ್. ಅನ್ನೇ ಮತ್ತೆ ಹೇರಿರುವ ಮೂಲಕ ಕನ್ನಡಿಗರನ್ನು ನಿರ್ಮೂಲನೆ ಮಾಡಲು ಕೇಂದ್ರ ಹೊಂಚು ಹಾಕಿರುವಂತಿದೆ.  ಟಿ.ಎಫ್.ಆರ್. ಅಂದರೇನು ? ಟೋಟಲ್ ಫರ್ಟಿಲಿಟಿ ರೇಟ್ ಅಥವಾ ರಿಪ್ಲೇಸ್‌ಮೆಂಟ್ ರೇಟ್ ಅನ್ನುವುದು ಯಾವುದೆ ಒಂದು ಸಮಾಜದಲ್ಲಿ ಹೆಣ್ಣೊಬ್ಬಳಿಗೆ ಆಕೆಯ ಜೀವಿತಾವಧಿಯಲ್ಲಿ ಹುಟ್ಟುವ ಸರಾಸರಿ ಮಕ್ಕಳ ಸಂಖ್ಯೆಯಾಗುತ್ತದೆ. ಇನ್ನೂ ವಿವರಿಸಿ ಹೇಳಬೇಕೆಂದರೆ ಒಂದು ಕುಟುಂಬದಲ್ಲಿ ಗಂಡ-ಹೆಂಡತಿಯರಿದ್ದಾರೆ ಅಂದುಕೊಳ್ಳೋಣ. ಅಂದರೆ ಆ ಕುಟುಂಬದ ಜನಸಂಖ್ಯೆ ೨ ಎಂದಾಯ್ತು. ಅವರ ಸಾವಿನ ನಂತರವೂ

ಕಥೆ - ಸವಿ ನೆನಪುಗಳು ಬೇಕು

ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತಲಿದ್ದರೆ, ಪಿನ್ ಹಾಕಿದ್ದರೂ ಜರುಗುವ ಸೀರೆಯ ಸೆರಗು ಅದೀಗ ಬೆಳೆದಿದ್ದ ಮೊಲೆಗಳ ಗಾತ್ರವನ್ನು ರವಿಕೆಯೊಳಗಿಂದಲೇ ಪ್ರದರ್ಶಿಸುತ್ತಲಿತ್ತು. ಅದರ ಪರಿವೇ ಆಕೆಗಿರಲಿಲ್ಲ. ಅವಳ ಕೈಲೊಂದು ಪತ್ರಿಕೆಯಿದೆ. ಅದರಲ್ಲಿರುವ ಕಥೆಯೊಂದನ್ನು ಬರೆದವನು ಪಕ್ಕದಲ್ಲೇ ಕುಳಿತಿದ್ದಾನೆ. ವಿಶೇಷವೆಂದರೆ ಆ ಕಥೆಯೊಳಗಿನ ಎರಡು ಪ್ರೇಮಿಗಳು ಅವರೇ ಆಗಿದ್ದಾರೆ! ಬಾದಾಮಿ ಬೆಟ್ಟದ ಮೇಲಿನ ಗುಹಾಂತರ ದೇವಾಲಯದ ಶಿಲ್ವಕಲೆ ಕಾಲದ ಹೊಡೆತಕ್ಕೆ ಸಿಕ್ಕು ಮಸುಕಾಗುತ್ತಿದೆ. ಅವುಗಳೆದುರಿನ ಕಲ್ಲು ಬೆಂಚಿನ ಮೇಲೆ ಥೇಟು ಶಿಲೆಯಂತೆಯೇ ಕುಳಿತಿದ್ದಾಳೆ ಸುಜಾತ. ಆಕೆಯ ಪಕ್ಕದಲ್ಲಿ  ಕುಳಿತ ಜಗದೀಶನ ದೃಷ್ಟಿ ಒಮ್ಮೆ ಅವಳ ಮುಗ್ಧ ಮೊಗದಲ್ಲಿ ಹುದುಗಿರುವ ತಲ್ಲಣವನ್ನು ಹುಡುಕುತ್ತದೆ. ಮತ್ತೊಮ್ಮೆ ಅಕೆಯ ಕೈಲಿರುವ ಪತ್ರಿಕೆಯನ್ನು ನೋಡುತ್ತಾನೆ. ಇನ್ನೊಮ್ಮೆ ಕಳ್ಳ ನೋಟದಲ್ಲಿ ಗಾಳಿಯ ನೆವಕ್ಕೆ ಗೋಚರಿಸುವ ಆಕೆಯ ಪುಟ್ಟ ಮೊಲೆಗಳ ಗಾತ್ರವನ್ನು ಸವಿಯುತ್ತಾದೆ. ಆದರೆ ಮುಂದೆ....? ಅದುವೇ ತಲ್ಲಣ ಅವನನ್ನು ಕಾಡುತ್ತದೆ. ಯಾರು ಯಾರೋ ಪ್ರವಾಸಿಗರು, ವಿದೇಶೀಯರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತ ಚಲಿಸುತ್ತಿದ್ದಾರೆ. ಪ್ರೇಮಿಗಳೆದೆಯಲ್ಲಿಯೇ ಲಕ್ಷಾಂತರ ಮಾತುಗಳು