ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಾತ್ಯಾತೀತ ತತ್ವಕ್ಕೆ ಮಂಗಳ ಹಾಡಿದ ಜೆಡಿಎಸ್‌ಗೆ ಮಂಗಳಾರತಿ ಎತ್ತಿದ ಮತದಾರ

ಇದು ಖುದ್ದಾಗಿ ಆಗಬೇಕಾಗಿತ್ತು. ಮಂಡ್ಯ, ರಾಮನಗರ, ಹಾಸನ ಎಲ್ಲಾ ನಮ್ ಬೆಲ್ಟು, ಇಲ್ಲಿ ಯಾರೂ ನಮ್ಮನ್ನ ಅಲ್ಲಡಿಸಕ್ಕಾಗಲ್ಲ ಎಂದು ಭರ್ಜರಿ ಶೋ ಕೊಡುತ್ತಿದ್ದ ಜೆಡಿಎಸ್ ನಾಯಕರಿಗೆ ಮತದಾರ ಸರಿಯಾದ ಬುದ್ದಿಯನ್ನೆ ಕಲಿಸಿದ್ದಾನೆ. ಅದರಲ್ಲೂ ದೇವೇಗೌಡ, ಕುಮಾರಸ್ವಾಮಿಗಳ ಮಿತಿ ಮೀರಿದ ಕಟುಂಬ ರಾಜಕಾರಣ ಕೊನೆಗೆ ಅವರ ಕುಟುಂಬದ ಸೋಲಿನ ಹೊಸ್ತಿಲಿಗೇ ಬಂದು ನಿಂತಿದೆ. ಸತ್ಯವನ್ನು ಅರಗಿಸಿಕೊಳ್ಳುವ ಸ್ಥಿಮಿತ ಅವರಲ್ಲಿರಬೇಕಷ್ಟೆ. ಯಾವುದೇ ಮತದಾರರನ್ನ ಹಗುರವಾಗಿ ಪರಿಗಣಿಸುವಂತಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಉಪ-ಚುನಾವಣೆಯಲ್ಲಿ ಜೆಡಿಎಸ್‌ಗೆ ರವಾನಿಸಿದ್ದಾರೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು. ಒಂದೆಡೆ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯನ್ನು ಕಸ್ತೂರಿ ವಾಹಿನಿಯ ಕ್ಯಾಬಿನ್‌ಗೆ ಕಳಿಸಿಕೊಟ್ಟರೆ ಮತ್ತೊಂದೆಡೆ ಪುಟ್ಟರಾಜು ರವರನ್ನೂ ಮನೆಯಲ್ಲಿರುವಂತೆ ತಿಳಿಸಿದ್ದಾರೆ. ಯಾವುದೇ ಮಗ್ಗುಲಿಂದ ನೋಡಿದರೂ ಇದು ಕುಮಾರಸ್ವಾಮಿ-ದೇವೇಗೌಡರ ವೈಫಲ್ಯವಾಗಿಯೆ ಕಾಣಿಸುತ್ತಿದೆ. ಅದರಲ್ಲೂ ಹೆಸರಿಗಿಲ್ಲದ (ರಾಜಕಾರಣದಲ್ಲಿ) ಇಬ್ಬರು ವ್ಯಕ್ತಿಗಳಿಂದ ತಮ್ಮ ಮತಬ್ಯಾಂಕ್ ಕ್ಷೇತ್ರದಲ್ಲೇ ಲಕ್ಷಾಂತರ ಮತಗಳ ಅಂತರದಿಂದ ಸೋತಿದ್ದು ಇವರಿಬ್ಬರು ಮುಖಂಡರ ಮಗ್ಗುಲು ಮುರಿದಂತಾಗಿದೆ. ಅದೂ ಕೂಡಾ ಕಮಲ, ತೆಂಗಿನಕಾಯಿಗಳ ಬೆಂಬಲ ಪಡೆದೂ ತೆನೆ ಹೊತ್ತ ಮಹಿಳೆ ಮಕಾಡೆ ಮಲಗಿರುವುದು ಹಾಸ್ಯಾಸ್ಪದವಾಗಿದೆ. ಜೆಡಿಎಸ್ ಎಡವಿದ್ದೆಲ್ಲಿ ? ಈ ಉಪ-ಚುನಾ