ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೆಗ್ಗಾಲ್ ಅಣಬೆಯ ಕಟ್ಟುಮಟ್ಲೆಯ ಘಮ!

ಮೇಲಿನ ವಾಕ್ಯದಲ್ಲಿ ಮಲೆನಾಡಿನ ಹೊರತಾದ ಜನರಿಗೆ ಎರಡು ಪದಗಳು ಹೊಸತೆನಿಸಬಹುದು. ಮೊದಲನೆಯದು ಹೆಗ್ಗಾಲ್ ಹಾಗೂ ಎರಡನೆಯದು ಕಟ್ಟುಮಟ್ಲೆ.  ಹೆಗ್ಗಾಲ್ ಅಣಬೆ ಇದೊಂದು ಜಾತಿಯ ಅಣಬೆ ಮಾತ್ರ. ಮಲೆನಾಡಿನ ಕಾಡು ಮೇಡುಗಳಲ್ಲಿ ಮಳೆಗಾಲದ ಶುರುವಿಗೆ ಗುಡುಗು ಸಿಡಿಲು ಬಂದಾಗ ಭೂಮಿಯಿಂದ ಏಳುವ ಅಣಬೆಗಳಲ್ಲಿ ಹೆಗ್ಗಾಲ್ ಹೆಸರಿನ ಅಣಬೆ ತುಂಬಾ ಪ್ರಸಿದ್ಧ. ಕಾರಣ ಇದು ತುಂಬಾ ರುಚಿ. ಇದರ ಎದುರು ಪೇಟೆಯಲ್ಲಿ ಸಿಗುವ ಎಲ್ಲಾ ಅಣಬೆಗಳನ್ನೂ ನಿವಾಳಿಸಬೇಕು.  ಇವು ಎಲ್ಲೆಂದರಲ್ಲಿ ವಿನಾಕಾರಣ ಹುಟ್ಟುವುದಿಲ್ಲ. ಇವುಗಳಿಗೆ ನಿರ್ದಿಷ್ಟ ಸ್ಥಳವಿರುತ್ತದೆ. ಅಲ್ಲಿ ಮಾತ್ರ ಮುಂಗಾರು ಶುರವಾಗುವಾಗ ಸಿಡಿಲಬ್ಬರ ಇರುವ ಒಂದು ನಿರ್ದಿಷ್ಟ ದಿನ ಬೆಳ ಬೆಳಗ್ಗೆ ನೂರಾರು ಅಣಬೆಗಳು ಹಿಂದಿನ ವರ್ಷ ಹುಟ್ಟಿದ ಸ್ಥಳದಲ್ಲೇ ಹುಟ್ಟುತ್ತವೆ. ಇವುಗಳ ಆಯಸ್ಸು ಕಡಿಮೆ. ಹುಟ್ಟಿದ ದಿನವೇ ನಾವು ನೋಡಿ ಕಿತ್ತು ತಂದು ಸಾರು, ಪಲ್ಯ ಮಾಡಿ ಸೇವಿಸಬೇಕು. ಒಂದು ದಿನ ಕಳೆದರೂ ಅವು ಬಾಡುತ್ತವೆ. ಅದರಲ್ಲೂ ಹುಟ್ಟಿದ ದಿನ ಬೆಳಗ್ಗೆ ಮೊಳಕೆ ರೂಪದಲ್ಲಿದ್ದರೆ ಸಂಜೆಯ ಹೊತ್ತಿಗೆ ಪೂರ್ತಿ ಅರಳಿ ನಿಂತಿರುತ್ತವೆ. ಸಂಜೆಯೊಳಗೆ ಕೀಳದೇ ಹೋದರೆ ವ್ಯರ್ಥವಾದಂತೆಯೆ.  ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮನೆಯ ಆಜುಬಾಜಿನಲ್ಲಿ, ಶಾಲೆಗೆ ಹೋಗುವ ಕಾಡು ದಾರಿಯಲ್ಲಿ ಈ ಅಣಬೆಗಳು ಏಳುವ ಅನೇಕ ಜಾಗಗಳನ್ನು ಗುರುತಿಸಿ ಇಟ್ಟಿದ್ದೆ. ಪ್ರತಿ ವರ್ಷ ಮಳೆಗಾಲದ ಶುರುವಿನಲ್ಲಿ ರಾತ್ರಿ ಗುಡುಗು ಸಿಡಿಲು ಹೆ

ಎಟಿಎಂ ನಲ್ಲಿ ಈ ವ್ಯವಸ್ಥೆ ಮಾಡಿದರೆ ಉತ್ತಮ

ಎಟಿಎಂನಲ್ಲಿ ಹಣ ದರೋಡೆಗಳು ಹೆಚ್ಚುತ್ತಿವೆ. ಬೆದರಿಸಿ ಎಟಿಎಂನಿಂದ ಹಣ ಪಡೆಯುವಾಗ ಏನು ಮಾಡಬೇಕು ? ಪಿನ್ ಸಂಖ್ಯೆಯನ್ನು ತಿರುಗಾಮುರುಗಾ ಹಾಕಿದರೆ ಇದು ಪೊಲೀಸ್‌ಗ್ ಸಂದೇಶ ರವಾನಿಸುತ್ತೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲದಿರಬಹುದು. ಆದರೆ ಇಂತಹುದೊಂದು ವ್ಯವಸ್ಥೆ ಖಂಡಿತಾ ಅಗತ್ಯವಿದೆ ಅಲ್ಲವೆ. ನನಗೆ ಅನ್ನಿಸಿದ್ದು ಪಿನ್ ಜೊತೆ ಇನ್ನೊಂದು ಎಮರ್ಜೆನ್ಸಿ ಸಂಖ್ಯೆಯನ್ನು ನಮ್ಮ ಖಾತೆಗೆ ಸೆಟ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿ ಕೊಡಬೇಕು. ಅಂದರೆ ಎಟಿಎಂ ನಲ್ಲಿ ಆ ಸಂಖ್ಯೆಯನ್ನು ಒತ್ತಿದರೆ ನಮ್ಮ ಖಾತೆ ಲಾಕ್ ಆಗಿ ಹಣ ಬರಬಾರದು, ಬದಲಿಗೆ 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂಬ ಸಂದೇಶವನ್ನು ತೋರಿಸಬೇಕು. ಒಮ್ಮೆ ಹೀಗೆ ಲಾಕ್ ಆದರೆ ನಾವು ನಮ್ಮ ಬ್ಯಾಂಕ್‌ಗೇ ಹೋಗಿ ಅದನ್ನು ಸರಿಪಡಿಸಿಕೊಳ್ಳುವಂತಿರಬೇಕು. ಹೀಗಾದರೆ ಕೊಂಚ ಅನುಕೂಲವಾಗಬಹುದು ಅನ್ನೋದು ನನ್ನ ಯೋಚನೆ.

ಮಳೆ ಜಿನುಗು

ಮಳೆ ಜಿನುಗೆ, ತೊಟ್ಟಿಕ್ಕಿ ತೊಟ್ಟಿಕ್ಕಿ ತಟ್ಟಿ ತಟ್ಟಿ ನನ್ನ ನೆನಪ  ಮೇಲೆಬ್ಬಿಸಿದೆಯಾ ? ಕಲ್ಲು ಕಟ್ಟಿ  ಮನದ ಪಾಳು ಬಾವಿಯಲಿ ಮುಳುಗಿಸಿದ ಮುಳ್ಳು ಹೂಗಿಡಳ  ಅರಳಿಸಿದೆಯಾ ? ಬೇಡವೆಂದು ಬಿಸುಟ ಬಳ್ಳಿಯ ಬೇರಿಗೆ ನೀರಾಗಿ ಬೇಗುದಿಯ ಕೊನರು ನೀ ಬರಿಸಿದೆಯಾ ? ಜಿನುಗದಿರು ಮಳೆಯೆ, ಜೇನು ಹುಟ್ಟು ಘಾತಗೊಂಡಂತೆ ಕೈ-ನಾಲಿಗೆಯೊಡ್ಡಿ ರುಚಿ ನೋಡುವ ತವಕವಿಲ್ಲದ ಭೂಮಿಗೆ !

ಧರ್ಮಸ್ಥಳದ ಸುತ್ತ, ಅನುಮಾನಗಳ ಹುತ್ತ !!

ನೂರಾರು ವರ್ಷಗಳಿಂದಲೂ ಜನರ ಭಕ್ತಿ ಭಾವಕ್ಕೆ ಹೆಸರಾದ ಕ್ಷೇತ್ರ ಧರ್ಮಸ್ಥಳ. ಅಂದಿನಿಂದ ಇಂದಿನವರೆಗೂ ಜನರು ಭಯ-ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ನಂಬಿದ ಯಾರನ್ನೂ ಮಂಜುನಾಥ ಕೈ ಬಿಡಲಾರ ಎಂಬ ಬಲವಾದ ನಂಬಿಕೆ ಈಗಲೂ ಇದೆ. ಜನರಿಗೆ ಮಂಜುನಾಥನ ಮೇಲೆ ಎಷ್ಟು ಭಯ-ಭಕ್ತಿಯಿದೆಯೋ ಅಷ್ಟೇ ಗೌರವ ಕ್ಷೇತ್ರದ ಧರ್ಮದರ್ಶಿಯಾದ ವೀರೇಂದ್ರ ಹೆಗ್ಗಡೆಯವರ ಮೇಲೂ ಇದೆ. ಜನರ ನಂಬಿಕೆಗೆ ಚ್ಯುತಿ ಬರುವಂತೆ ಅವರೂ ಸಹ ಎಂದೂ ನಡೆದುಕೊಂಡವರಲ್ಲ. ಹಾಗೆಯೆ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯನ್ನು ರೂಪಿಸಿ ಆ ಮೂಲಕ ಕರ್ನಾಟಕದ ಸಾವಿರಾರು ಹಳ್ಳಿಗಳ ಲಕ್ಷಾಂತರ ಬಡ ಜನರಿಗೆ, ಅದರಲ್ಲೂ ಮುಖ್ಯವಾಗಿ ಬಡ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇವೆಲ್ಲಾ ಪ್ರಶ್ನಾತೀತ ವಿಷಯಗಳು.  ಆದರೆ ಅದೇ ಮಂಜುನಾಥನ ಕ್ಷೇತ್ರದಲ್ಲಿ ನಡೆದ ಸೌಜನ್ಯ ಎಂಬ ಕಾಲೇಜು ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ಒಂದಿಷ್ಟು ಅನುಮಾನ, ಅಸಮದಾನಗಳನ್ನು ಸ್ಥಳೀಯರಲ್ಲೇ ಹುಟ್ಟು ಹಾಕಿರುವುದಂತೂ ನಿಜ. ಒಂದು ನೆನಪಿರಲಿ, ಈ ಲೇಖನದ ಉದ್ದೇಶ ಧರ್ಮಸ್ಥಳದ ಅಥವಾ ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುವ ಅಥವಾ ಅವರ ಗೌರವಕ್ಕೆ ಧಕ್ಕೆ ತರುವದಲ್ಲ. ಈ ಲೇಖನದಲ್ಲಿ ಧರ್ಮಸ್ಥಳದ ಹಾಗೂ ಹೆಗ್ಗಡೆಯವರ ಹೆಸರುಗಳನ್ನು ಬಳಸಿಕೊಂಡಿರುವುದಕ್ಕೆ ಕಾರಣ ಈ ಪ್ರಕರಣ ನಡೆದಿರುವುದು ಧರ್ಮಸ್ಥಳದಲ್ಲಿಯೇ ಆಗಿರುವ

ಮಾಂಸ-ಮದ್ಯ ಮತ್ತು ವೈಷ್ಣವ ದೀಕ್ಷೆ !

ಕುರುಬರು ಮಾಂಸ-ಮದ್ಯ ಬಿಟ್ಟು ಬಂದರೆ ತಾನು ವೈಷ್ಣವ ದೀಕ್ಷೆ ನೀಡಲು ತಯಾರು ಎಂದು ಉಡುಪಿಯ ಶುದ್ಧ ಬ್ರಾಹ್ಮಣ ಪೇಜಾವರ ತುದಿಗಾಲಲ್ಲಿ ನಿಂತು ದೀಪಾವಳಿ ಧಮಾಕದ ಕೊಡುಗೆಯನ್ನು ಈ ಬಾರಿ ಕುರುಬರಿಗೆ ನೀಡಿದ್ದಾರೆ. ಇದನ್ನು ಕೇಳಿದ ಕುರುಬರು ಪೇಜಾವರರ ಮತ್ತೊಂದು ಬಣ್ಣದ ಮಾತನ್ನು ನಂಬದೇ ಪೆಕಪೆಕ ನಕ್ಕು ಹಬ್ಬಕ್ಕೆ ಕುರಿ ಮಾಂಸ ತರಲು ಹೊರಟಾಗಿದೆ.  ಮೊದಲಿಗೆ ಪೇಜಾವರರ ರಾಜಕೀಯ, ಜಾತೀಯ ಮನಸ್ಥಿತಿಯನ್ನು ಬಲ್ಲವರ‍್ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಗೋಜಿಗೇ ಹೋಗಿಲ್ಲ. ಆದರೆ ಪೇಜಾವರ ಎಂದರೆ ಒಂದೇ ಕಲ್ಲಲ್ಲಿ ಎರಡ್ಮೂರು ಹಕ್ಕಿ ಬೀಳಬಹುದೇನೋ ಎಂದು ಉಡುಪಿಯಲ್ಲಿ ಕುಳಿತೇ ವಿಧಾನ ಸೌಧಕ್ಕೆ ಕಲ್ಲು ಎಸೆಯಬಹುದಾದ ಚಾಲಾಕಿ ಮನುಷ್ಯ! ಅವರ ಇತ್ತೀಚಿನ ಹೇಳಿಕೆ ಕುರುಬರಿಗೆ ದೀಕ್ಷೆ ಎಂಬುದು ಸಾಣೆ ಹಿಡಿದ ನುಣುಪಾದ ಕಲ್ಲು ಮಾತ್ರ. ಇಷ್ಟಕ್ಕೂ ಇಷ್ಟು ದಿನದ ಇವರ ದಲಿತೋದ್ಧಾರ ಕಾರ್ಯಕ್ರಮ ಎಲ್ಲಿವರೆಗೆ ಬಂತು ಅನ್ನುವುದು ತಿಳಿದು ಬಂದಿಲ್ಲ. ಮೂರ್ನಾಲ್ಕು ಬಾರಿ ದಲಿತರ ಕೇರಿಗೆ ಪ್ರವಾಸ ಹೋಗಿ ಬಂದ ಇವರಿಗೆ ಅದರಿಂದ ಯಾವ ಲಾಭವೂ ಗಿಟ್ಟಲಿಲ್ಲ. ದಲಿತರಿಗೂ ಒಳಿತಾಗಲಿಲ್ಲ. ಅತ್ತ ದಲಿತರೂ ಉದ್ಧಾರವಾಗಲಿಲ್ಲ, ಇತ್ತ ಮಠವೂ ದಲಿತರಿಗೆ ಬಾಗಿಲು ತೆರೆಯಲಿಲ್ಲ. ಅದೊಂದಿಷ್ಟು ಚಮತ್ಕಾರ ನಡೆಸಿದಂತೆ ಮಾಡಿ ದಲಿತರ ಪ್ರೀತಿ ಗಳಿಸುವ ನಾಟಕವಾಡಿ ಸುಮ್ಮನಾದರು. ಈಗ ಕುರುಬರ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಅದು ಎಷ್ಟು ದಿನ ಉಕ್ಕುತ್ತೋ ಶ್ರೀಕೃಷ್ಣ ಪರಮಾತ್ಮನೇ ಬ