ವಿಷಯಕ್ಕೆ ಹೋಗಿ

ಅ‘ಳ‘ಬೇಡ, ಕ‘ಳ‘ವ‘ಳ‘ ಬೇಡ, ಸ್ಯಾಮ್‌ಸಂಗ್‌ನವರಿಗೆ ಕನ್ನಡ ‘ಳ‘ ಬೇಡ !'ಪಾಪಿ ಸಮುದ್ರಕ್ಕೆ ಹಾರಿದರೂ ಮೊಣಕಾಲುದ್ದ ನೀರು' ಅನ್ನೋ ಮಾತು ಅಂತೂ ಧೃಡವಾಯ್ತು. ಕಾರಣ ಇಷ್ಟೇ, ಮೊಬೈಲ್‌ನಲ್ಲಿ ಕನ್ನಡ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ಕನಸಾಗಿಯೇ ಇತ್ತು. ಆರ್ಥಿಕ ಸಂಕಷ್ಟದಿಂದಾಗಿ ಒಂದು ಉತ್ತಮ ಸ್ಮಾರ್ಟ್‌‌ಫೋನ್ ಕೊಂಡು ಸ್ನೇಹಿತರಿಗೆ ಕನ್ನಡದಲ್ಲಿ ಸಂದೇಶ ರವಾನಿಸಿ ಖುಷಿ ಪಡುವ ದಿನವು ದೂರವೇ ಇದ್ದವು.

ಒಂದು ದಿನ ಅವಸರದಲ್ಲಿ ಹೋಗಿ ಎಲ್‌ಜಿ ಸ್ಮಾರ್ಟ್‌‌ಫೋನ್ ಒಂದನ್ನು ಕೊಂಡು ತಂದೆ. ಕೊಂಡು ತಂದಿದ್ದು ಅವಸರದಲ್ಲಾದ್ದರಿಂದ ಅದರಲ್ಲಿ ಕನ್ನಡ ಇದೆಯೇ, ಅದಕ್ಕೆ ಕನ್ನಡ ಕಲಿಸಬಹುದೇ ಎಂಬುದನ್ನೆಲ್ಲಾ ಯೋಚಿಸಿರಲೇ ಇಲ್ಲ. ನನ್ನ ಅದೃಷ್ಟವೂ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ನಾನು ತಂದ ಎಲ್‌.ಜಿ ಇ-೪೦೦ ಹ್ಯಾಂಡ್‌ಸೆಟ್‌ನಲ್ಲಿ ಕನ್ನಡ ಇರುವುದಂತಿರಲಿ ಅದಕ್ಕೆ ಕನ್ನಡ ತುಂಬುವುದೂ ಸಾಧ್ಯವಿರಲಿಲ್ಲ. ಇದರಿಂದ ತುಂಬಾ ನಿರಾಶಿತನಾದೆ. ಸ್ನೇಹಿತರು 'ಸ್ಯಾಮ್‌ಸಂಗ್ ಗೆಲಾಕ್ಸಿ' ತಗೊ, ಅದು ಕನ್ನಡ ಚೆನ್ನಾಗಿ ಬೆಂಬಲಿಸುತ್ತದೆ ಎಂದರು. ಅಂದಿನಿಂದ ಒಂದು ಸ್ಯಾಮ್‌ಸಂಗ್ ಸ್ಮಾರ್ಟ್‌‌ಫೋನ್ ಪಡೆಯಲೇ ಬೇಕೆಂದು ಸಿದ್ಲಿಂಗು ತರ ದುಡ್ಡು ಹೊಂದಿಸತೊಡಗಿದೆ. ಕೊನೆಗೂ ಸತತ ಆರು ಮಾಸದ ಪರಿಶ್ರಮದ ನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಪಡೆಯುವ ಮಟ್ಟಕ್ಕೆ ಬಂದೆ ಅಂತ ಆಯ್ತು.

ನಾನು ಹೊಂದಿಸಿದ ಕೆಲವೇ ಸಾವಿರ ರೂಪಾಯಿಗೆ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಎಂಬ ಮೊಬೈಲ್ ಸೂಕ್ತ ಅನ್ನಿಸಿತು. ಇದರ ಬಗ್ಗೆ 
ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಸಂಶೋಧನೆ ಮಾಡಿ ಕಂಡುಕೊಂಡ ಪ್ರಕಾರ, ಈ ಮೊಬೈಲ್ ಕನ್ನಡದ ಜೊತೆಗೆ ಭಾರತದ ಇತರೆ ಒಂಬತ್ತು ಭಾಷೆಗಳನ್ನೂ ಬೆಂಬಲಿಸುತ್ತದೆ ಎಂದು ಅರಿವಿಗೆ ಬಂತು. ಫ್ಲಿಪ್‌ಕಾರ್ಟ್‌.ಕಾಮ್‌ ನಲ್ಲಿ ಹೊರಗಡೆಗಿಂತಾ ಎಂಟು ನೂರು ರೂಪಾಯಿ ಕಡಿಮೆಗೇ ಸಿಗುತ್ತದೆ ಎಂದೂ ಗೊತ್ತಾಯಿತು. ಕೂಡಲೇ ಅದನ್ನು ಬುಕ್‌ ಮಾಡಿ ಕಾಯುತ್ತಾ ಕುಂತೆ.

ಅಂತೂ ಮೊನ್ನೆ ಸೋಮವಾರದ ಮರುದಿನ ಶುಭದಿನದಲ್ಲಿ ಒಂದು ಶುಭಸಮಯದಲ್ಲಿ ನನ್ನ ಆಸೆಯ ಗೆಲಾಕ್ಸಿ ಟ್ರೆಂಡ್ ಬಂದೇ ಬಿಟ್ಟಿತು. ತಂದವನಿಗೆ ಹಣ ಪಾವತಿಸಿ ಪೆಟ್ಟಿಗೆ ತೆರೆದು ಉಪಯೋಗಿಸತೊಡಗಿದೆ. ಇದು ಕನ್ನಡವನ್ನು ಚೆನ್ನಾಗಿ ಬೆಂಬಲಿಸುತ್ತದೆ. ತುಂಬಾ ಖುಶಿಯಾಗಿ ಸ್ನೇಹಿತರೊಂದಿಗೆ ಕನ್ನಡದಲ್ಲಿ ಸಂದೇಶ ರವಾನಿಸಲೂ ತೊಡಗಿದೆ. ಆದರೆ ಮದನಗಿತ್ತಿ ಮೊದಲರಾತ್ರಿಯಂದು ಮತ್ತೆಲ್ಲಾ ಸರಸ ಮುಗಿಸಿ ಮುಖ್ಯ ಕೆಲಸಕ್ಕೆ ತೊಡಗಿದಾಗಲೇ ಮದುವೆ ಗಂಡಿಗೆ ಅದೇ ಇಲ್ಲ ಅಂತ ಗೊತ್ತಾದಂತೆ ನನ್ನ ನೆಚ್ಚಿನ ಗೆಲಾಕ್ಸಿ ಟ್ರೆಂಡ್‌ನಲ್ಲಿ ಕನ್ನಡದ ಕೊನೆಯ ಅಕ್ಷರವೇ ಇಲ್ಲ ಅಂತ ಗೊತ್ತಾಯಿತು ! ನನ್ನನ್ನು ನಾನೇ ನಂಬದೇ ಮತ್ತೆ ಮತ್ತೆ ಹುಡುಕಿದೆ, ಏನು ಪ್ರಯೋಜನ ? ಅದು ಇದರಲ್ಲಿ ಇಲ್ಲ, ಬೇಕಾದರೆ ಚಿತ್ರದಲ್ಲಿ ನೋಡಿ. ಕೀಪ್ಯಾಡ್‌ನಲ್ಲಿ ಕನ್ನಡ ಅಕ್ಷರ ಮಾಲೆ 'ಹ' ಅಕ್ಷರದೊಂದಿಗೆ ಕೊನೆಯಾಗಿದೆ. ಅದರ ನಂತರ ಇರಬೇಕಾಗಿದ್ದ ಅಕ್ಷರವೊಂದು ಕಾನೆಯಾಗಿದೆ.

ಅದಿಲ್ಲ ಅಂತ ಗೊತ್ತಾದ ಕ್ಷಣದಿಂದ ಅದಿಲ್ಲದೇ ಬೆರಳಚ್ಚಿಸುವುದನ್ನ ರೂಢಿ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ನಿಮಗೆ ಲೇಖನದಲ್ಲಿ ಆ ಅಕ್ಷರವನ್ನೇ ಬಳಸದೇ ಬರೆದುಬಿಟ್ಟಿದ್ದೇನೆ. ಅದು ಯಾವ ಅಕ್ಷರ ಅಂತ ಲೇಖನದ ತಲೆಬರಹದಲ್ಲೇ ಇದೆ ನೋಡಿ !
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…