ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂಡಿಬ್ಲಾಗರ್‌ನಲ್ಲಿ ಮೊದಲ ಸ್ಥಾನ ಪಡೆದ ‘ಪಿಸುಮಾತು‘

ಖುಶಿ ಹಂಚಿಕೊಳ್ಳು ಮತ್ತೊಂದು ವಿಷಯ ಸಿಕ್ಕಿದೆ. ನನ್ನ 'ಪಿಸುಮಾತು' ಬ್ಲಾಗ್ ಇಂಡಿಬ್ಲಾಗರ‍್ ಕನ್ನಡ ವಿಭಾಗದಲ್ಲಿ [ ಇಂಡಿಬ್ಲಾಗರ‍್ ] ರ‍್ಯಾಂಕ್‌ನಲ್ಲಿ ೭೪ ಅಂಕಗಳೊಂದಿಗೆ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದೆ. ಈ ಹಿಂದೆ ಒಮ್ಮೆ ೭೩ ಅಂಕಗಳನ್ನು ಗಳಿಸಿದ್ದರೂ ಮೊದಲ ಸ್ಥಾನ ಪಡೆದಿರಲಿಲ್ಲ.  ಬ್ಲಾಗ್‌ಗಳಿಗೆ ಭೇಟಿ ನೀಡುವ ಪ್ರತಿ ಸದಸ್ಯರ ಸಂಖ್ಯೆ, ಬ್ಲಾಗ್‌ನಲ್ಲಿ ಪ್ರಕಟಗೊಳ್ಳುವ ಲೇಖನಗಳ ಸಂಖ್ಯೆ, ಪ್ರತಿಕ್ರಿಯೆಗಳ ಸಂಖ್ಯೆ ಮುಂತಾದವುಗಳ ಆಧಾರದಲ್ಲಿ ಇಂಡಿಬ್ಲಾಗರ‍್ ಅಂಕಗಳನ್ನು ಕೊಡುತ್ತದೆ.  ಅಂದ ಹಾಗೆ ಇದೇನೂ ಅಂತಹ ದೊಡ್ಡ ಸಾಧನೆ ಅಂತ ಅಲ್ಲ. ಏಕೆಂದರೆ ಇಂಡಿಬ್ಲಾಗರ‍್ ತಾಣಕ್ಕೆ ನೋಂದಾಯಿಸದೇ ಇರುವ ನೂರಾರು ಉತ್ತಮ ಬ್ಲಾಗ್‌ಗಳು ಸಹ ಕನ್ನಡದಲ್ಲಿ ಇವೆ. ಅವರೆಲ್ಲಾ ನೋಂದಾಯಿಸಿದರೆ ನನ್ನ ಸ್ಥಾನ ಎಷ್ಟಕ್ಕೆ ಇಳಿಯುತ್ತೋ ಗೊತ್ತಿಲ್ಲ. ಅದೇನೇ ಇದ್ದರೂ ಒಮ್ಮೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆ ಅಂತೂ ಉಳಿಯುವಂತದ್ದು.

ಪೊಲೀಸರಿಗೂ ಬೇಕಿದೆ ಆಧುನಿಕ ಆಯುಧ ಮತ್ತು ರಕ್ಷಾ ಕವಚ

ಮೋದಿ ಬರುತ್ತಾನೆಂದರೆ ಕನಿಷ್ಟ ಸಾವಿರ ಜನ ಪೊಲೀಸರು ಆತನ ರಕ್ಷಣೆಗೆ ನಿಲ್ಲಬೇಕು. ಯಕಶ್ಚಿತ್ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಷ್ಟೊಂದು ರಕ್ಷಣೆ, ಬೊಕ್ಕಸಕ್ಕೆ ಹೊಡೆತ. ಇನ್ನು ಏನೂ ಅಲ್ಲದ ಕೇವಲ ಸಂಸದೆ ಸೋನಿಯಾ ರಕ್ಷಣೆಗಾಗಿ ಖರ್ಚು ಮಾಡುತ್ತಿರುವುದೆಷ್ಟು ? ಸಂಸದ ರಾಹುಲನ ರಕ್ಷಣೆಗೆ ? ಮಾಜಿ ಮಂತ್ರಿ ಅದ್ವಾನಿಗಾಗಿ ? ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಇವರಿಗೆ ಇಷ್ಟೆಲ್ಲಾ ರಕ್ಷಣೆ ? ಇರಲಿ ವಿಷಯಕ್ಕೆ ಬರೋಣ.. ಮೊನ್ನೆ ಮೊನ್ನೆ ಕಲಬುರ್ಗಿಯಲ್ಲಿ ರೌಡಿಯೊಬ್ಬನನ್ನು ಹಿಡಿಯಲು ಹೋದ ದಕ್ಷ ಪೊಲೀಸ್ ಅಧಿಕಾರಿಗಳು ರೌಡಿಯ ಗುಂಡಿಗೇ ಎದೆಕೊಡಬೇಕಾಯ್ತು. ಪೊಲೀಸರ ಗುಂಡಿಗೆ ರೌಡಿಯೇನೋ ಸತ್ತನಾದರೂ ನಮ್ಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನೂ ಕಳೆದುಕೊಳ್ಳಬೇಕಾಯ್ತು. ಮತ್ತೊಬ್ಬ ಕಿರಿಯ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾದರು. ಆದರೆ ಒಮ್ಮೆ ಯೋಚಿಸಿ ನೋಡಿ, ನಿಜವಾಗಿಯೂ ಪ್ರಾಣದ ಹಂಗು ತೊರೆದು ನಮಗಾಗಿ ಹೋರಾಡುವವರು ಇಂತಹ ಅಧಿಕಾರಿಗಳೂ, ಸೈನಿಕರುಗಳೇ ಅಲ್ಲವೇ ? ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕಿ, ಸಾರ್ವಜನಿಕರ ನೆಮ್ಮದಿ ಕೆಡಿಸಿ, ಅದರಿಂದ ರಾಜಕೀಯ ಲಾಭ ಮಾಡಿಕೊಂಡು ಓಡಾಡುವ ಕದೀಮರಿಗೆಲ್ಲಾ ಸಾವಿರಾರು ಪೊಲೀಸರ, ನೂರಾರು ಸೈನಿಕರ ರಕ್ಷಣೆ, ಆದರೆ ಜೀವದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳಿಗೆ ಅಂತ ಕೊಡುವುದು ಒಂದು ಪಡಪೋಸಿ ಪಿಸ್ತೂಲು ಪೇದೆಗಳಿಗೆ ಓಬಿರಾಯನ ಕಾಲದ ಹಂದಿ ಹೊಡೆಯಲೂ ಯೋಗ್ಯ