ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿಎಂಟಿಸಿ ಬಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು

ನೀವು ಬೆಂಗಳೂರಿನ ನಗರ ಸಾರಿಗೆಯಲ್ಲಿ ಓಡಾಡಿದ್ದರೆ ನರಕಕ್ಕೆ ಹೋದರೂ ಸುಖವಾಗಿ ಇರಬಲ್ಲಿರಿ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆಯ ಸಮಯವಂತೂ ಜನದಟ್ಟಣೆ ಹೇಳತೀರದು. ನೂರಾರು ಬಸ್‌ಗಳು ಇದ್ದರೂ ಸಹ ನಿಲ್ಲಲಿಕ್ಕೂ ಸಹ ಸ್ಥಳವಿಲ್ಲದಂತಹ ಸ್ಥಿತಿ. ಇದು ಒಂದೆಡೆಯಾದರೆ, ನಮಗೆ ಬೇಕಾದ ಬಸ್‌ ಯಾವ ಸಮಯಕ್ಕೆ ಬರುತ್ತದೆ, ಬರುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಕಾಯುತ್ತಿರಬೇಕು. ಬಂದರೆ ಹಡೆಯಲು ತಯಾರಾದ ತಾಯಿಯಂತೆ ಹೊಟ್ಟೆ ತುಂಬಿಸಿಕೊಂಡ ಬಸ್‌ಗಳೇ ಬರುತ್ತವೆ. ಅದರಲ್ಲೇ ಜನ ನುಗ್ಗಿ ಹತ್ತಿಕೊಂಡು ಹೋದರೆ ಅದರ ಹಿಂದೆ ಖಾಲಿ ಬಸ್‌ಗಳು ಬರುತ್ತವೆ.  ಇದನ್ನು ಸರಿಪಡಿಸಲು ಒಂದು ಉಪಾಯವಿದೆ. ನಗರ ಸಾರಿಗೆಯ ಎಲ್ಲಾ ಬಸ್‌ಗಳಿಗೂ ಜಿಪಿಎಸ್ ಅಳವಡಿಸಿ ಅದಕ್ಕಾಗಿ ಒಂದು ಮೊಬೈಲ್ ಆಪ್‌ ಅನ್ನು ಸಿದ್ದಪಡಿಸಿ ಪ್ರಯಾಣಿಕರಿಗೆ ಒದಗಿಸಬೇಕು. ಆ ಆಪ್‌ ಅನ್ನು ಮೊಬೈಲ್‌ನಲ್ಲಿ ಬಳಸುವ ಪ್ರಯಾಣಿಕರು ತಮಗೆ ಬೇಕಾದ ಬಸ್‌ ಮಾರ್ಗ ಸಂಖ್ಯೆಯನ್ನು ಹಾಕಿ ಹುಡುಕಿದರೆ ಆ ಮಾರ್ಗದಲ್ಲಿ ಎಷ್ಟು ಬಸ್‌ಗಳು ಎಲ್ಲೆಲ್ಲಿ ಬರುತ್ತವೆ ಎಂಬುದು ತಿಳಿಯಬೇಕು. ಈ ರೀತಿ ಅನುಕೂಲ ಕಲ್ಪಿಸಿದರೆ ಒಂದು ಬಸ್‌ ಬಂದಾಗ ಎಲ್ಲರೂ ಅದರಲ್ಲೇ ನುಗ್ಗಿ ಹತ್ತುವ ಬದಲಾಗಿ ಹಿಂದೆ ಬರುತ್ತಿರುವ ಬಸ್‌ಗಾಗಿಯೂ ಸ್ವಲ್ಪ ಜನ ಉಳಿಯಬಹುದು. ಅಲ್ಲದೇ ಬಸ್‌ಗಳ ಮಾಹಿತಿ ಮೊಬೈಲ್‌ನಲ್ಲಿಯೇ ದೊರೆಯುವುದರಿಂದ ಸಮಯದ ಉಳಿತಾಯವೂ ಆಗುತ್ತದೆ. ಅನಗತ್ಯವಾಗಿ ಖಾಲಿ ಬಸ್‌ಗಳು ಓಡಾಡುವುದೂ ತಪ್ಪುತ್ತದೆ. ಈ ವಿಷಯವನ್ನು ನಂದನ್ ನಿಲೇಕ