ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವ್ಯಂಗ್ಯಚಿತ್ರಾಚಾರ್ಯ !

ಇತ್ತೀಚಿನ ದಿನಗಳಲ್ಲಿ ದೇಶದ ಮುಂಚೂಣಿ ವ್ಯಂಗ್ಯಚಿತ್ರಕಾರರ ಸಾಲಿಗೆ ಕುಂದಾಪುರದ ಸತೀಶ್ ಆಚಾರ್ಯ ಸಹ ಸೇರ್ಪಡೆಯಾಗಿದ್ದಾರೆ. ಇವರ ವ್ಯಂಗ್ಯಚಿತ್ರಗಳ ಸಂಗ್ರಹದ ಮೊದಲ ಪುಸ್ತಕ 'ಮೈನ್, ಹಮ್ & ಆಪ್' ಇತ್ತೀಚಿಗೆ ಬಿಡುಗಡೆಯಾಗಿದೆ.  ನಿನ್ನೆ ತಾನೆ ಪುಸ್ತಕವನ್ನು ತರಿಸಿಕೊಂಡೆ. ಇದೀಗ ಎದುರಾಗಿರುವ ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿರುವುದರಿಂದ ಚುನಾವಣೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ವಸ್ತುಗಳೇ ಇಲ್ಲಿನ ವ್ಯಂಗ್ಯಚಿತ್ರಗಳಲ್ಲಿ ಇರುವುದು.  ಡೆಮಿ ಅಳತೆಯ ಪುಸ್ತಕವನ್ನು ಅತ್ಯುತ್ತಮವಾಗಿ ಬಣ್ಣದಲ್ಲಿ ಆರ್ಟ್‌ ಪೇಪರ‍್ ಬಳಸಿ ಕುಂದಾಪುರದಲ್ಲಿಯೇ ಮುದ್ರಿಸಲಾಗಿದೆ ಅನ್ನುವುದು ವಿಶೇಷ. ಹಾಗೆಯೆ ಈ ಪುಸ್ತಕವನ್ನು ಆನ್‌ಲೈನ್‌ನಲ್ಲಿ ಕೊಂಡರೆ  ಜೊತೆಗೆ ಆಚಾರ್ಯರು ಬಿಡಿಸಿದ ವ್ಯಂಗ್ಯಚಿತ್ರದ ಅಸಲಿ ಪ್ರತಿಯೊಂದು ಸಹ ನಮಗೆ ಸಿಗಲಿದೆ.  ಕುಂದಾಪುರದಲ್ಲಿ ಹುಟ್ಟಿ ಬೆಳೆದ ಸತೀಶ್ ಅವರು ಓದಿದ್ದು ಬಿ.ಕಾಂ, ಹಾಗೂ ಎಂಬಿಎ. ಕಾಲೇಜು ದಿನಗಳಲ್ಲೇ ಕನ್ನಡದ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯಲಾರಂಬಿಸಿದರು. ನಂತರ ವ್ಯಂಗ್ಯಚಿತ್ರದ ಗೀಳು ಹತ್ತಿಸಿಕೊಂಡು ಮುಂಬೈಗೆ ತೆರಳಿ ಅಲ್ಲಿ ಹತ್ತಾರು ವರ್ಷಗಳ ಕಾಲ ಕಂಡ ಕಂಡ ಪತ್ರಿಕೆಗಳಿಗೆ ಗೆರೆ ಗೀಚಿದ ನಂತರ ಮಿಡ್-ಡೇ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಉದ್ಯೋಗ ದೊರೆಯಿತು. ಕಳೆದ ಒಂಬತ್ತು ವರ್ಷಗಳಿಂದಲೂ ಆ ಪತ್ರಿಕೆಗೆ ದಿನನಿತ್ಯ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್

ನಾವೆಲ್ಲಿ ಇವರೆಲ್ಲಿ ?

ನನಗೆ ತಿಳಿದ ಹುಡುಗಿಯೊಬ್ಬಳು ಹತ್ತನೇ ತರಗತಿ ಪರೀಕ್ಷೆ ಬರೆದವಳು ಕರೆ ಮಾಡಿದ್ದಳು. ತುಂಬಾ ಬೇಸರದಲ್ಲಿದ್ದ ಅವಳ ಧ್ವನಿಯಿಂದಲೇ ತಿಳಿಯಿತು, ಪರೀಕ್ಷೆ ಸುಖಕರವಾಗಿ ಆಗಿಲ್ಲ ಅಂತ. ವಿಚಾರಿಸಿದಾಗ "ಗಣಿತದಲ್ಲಿ ತುಂಬಾ ಕಡಿಮೆ ಅಂಕ ಬರಬಹುದು. ಕಷ್ಟ ಇತ್ತು. ಊಟ ಏನೂ ಸೇರ್ತಿಲ್ಲ, ಛೇ' ಎಂದು ಅಲವತ್ತುಕೊಂಡಳು. ನಾನು ಸಮಾಧಾನ ಮಾಡುತ್ತಾ, "ಹೋದರೆ ಹೋಗಲಿ ಬಿಡು, ಅನುತ್ತೀರ್ಣ ಅಂತೂ ಆಗಲ್ಲ ತಾನೆ ? ಎಷ್ಟು ಅಂಕ ಬರಬಹುದು ?" ಎಂದು ಕೇಳಿದೆ. ಅದಕ್ಕವಳು, "ನನ್ನ ಪ್ರಕಾರ ಬರೀ ಎಂಬತ್ತೈದು ಬಂದರೆ ಹೆಚ್ಚು!" ಅಂದಳು ತುಂಬಾ ಬೇಜಾರಿನಿಂದ. ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನಾವು ಓದುವಾಗ ಗಣಿತ ಹಾಗೂ ಇಂಗ್ಲೀಷಿನಲ್ಲಿ ಮೂವತ್ತೈದು ಬಂದರೆ ನಾವು ಈ ಲೋಕದಲ್ಲಿ ಇರುತ್ತಿರಲಿಲ್ಲ. 'ಅನುತ್ತೀರ್ಣ' ಅನ್ನುವ ಒಂದು ಘಟನೆಯನ್ನು ಉಳಿದು ಬೇರೇನೂ ನಮ್ಮನ್ನು ಕಾಡುತ್ತಿರಲಿಲ್ಲ. ಐವತ್ತರ ಆಜೂಬಾಜೂ ಅಂಕಗಳು ಬಂದರಂತೂ ನಮ್ಮ ಮೇಲೆ ನಮಗೇ ಅನುಮಾನ ಮೂಡುತ್ತಿತ್ತು! ಆದರೆ ಈಗಿನ ಮಕ್ಕಳಿಗೆ ಅದೇನಾಗಿದೆ ನೋಡಿ ? ಎಂಬತ್ತೈದು ಅಂಕ ಬರುವಂತಿದ್ದರೂ ಊಟ ಬಿಡುವ ಸ್ಥಿತಿಗೆ ತಲುಪುತ್ತಾರೆಂದರೆ... ತಪ್ಪು ಎಲ್ಲಿದೆಯೋ ಏನೋ... ಯೋಚಿಸುತ್ತಾ ಇನೊಂದಿಷ್ಟು ಸಮಾಧಾನ ಹೇಳಿದೆ. * * * ಅಂದ ಹಾಗೆ ಫೇಸ್‌ಬುಕ್‌ನಲ್ಲಿ ‘ಮುದ್ದು ತೀರ್ಥಹಳ್ಳಿ‘ ಎಂಬ ಹುಡುಗಿ ಹಾಕಿರುವ ಪ್ರಕಟಣೆ ಎಲ್ಲಾ ವಿದ್ಯಾರ್ಥಿಗಳೂ ಅಳವಡಿಸಿಕೊಳ್ಳುವ