ವಿಷಯಕ್ಕೆ ಹೋಗಿ

ಹೊಸ ಸರ್ಕಾರ, ಹಳೆ ಆಶಯಗಳು !


​ಎನ್‌.ಡಿ.ಎ.ಗೆ ಸ್ಪಷ್ಟ ಬಹುಮತ ಬಂದಿರುವುದರಿಂದ ಕೆಲವೊಂದು ವಿಷಯಗಳು ಸ್ಪಷ್ಟವಾಗಿವೆ. 
೧. ಅತಂತ್ರ ಲೋಕಸಭೆ ಏನಾದರೂ ಆಗಿದ್ದರೆ ಅದರಿಂದ ದೇಶಕ್ಕೆ ತುಂಬಾ ನಷ್ಟವೇ ಆಗುತ್ತಿತ್ತು. 
೨. ರಾಹುಲ್‌ / ಸೋನಿಯಾಗಾಂಧಿಗೆ ಪಕ್ಷವನ್ನು/ದೇಶವನ್ನು ಮುನ್ನಡೆಸುವಂತಾ ಶಕ್ತಿ ಇಲ್ಲ ಅನ್ನುವುದು ಸಾಬೀತಾಯ್ತು.
೩. ಹತ್ತಾರು ವರ್ಷಗಳಿಂದ ಒಂದೇ ಪಕ್ಷದ ಅಧಿಕಾರ ಇರುವುದು ಕೂಡಾ ಉತ್ತಮ ಬೆಳವಣಿಗೆ ಅಲ್ಲ. ಅದರಲ್ಲೂ ೨ಜಿ, ಕಾಮನ್‌ವೆಲ್ತ್‌ನಂತಹ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ನಡೆದ ಬಳಿಕವೂ ಯುಪಿಎ ಯನ್ನು ಮುಂದುವರಿಸಿದ್ದರೆ ಅದು ಅವರ ಭ್ರಷ್ಟಾಚಾರಕ್ಕೆ ನೀಡುವ ಕುಮ್ಮಕ್ಕಿನಂತೆ ಆಗುವ ಸಾಧ್ಯತೆ ಇತ್ತು.
೪. ಕಾಂಗ್ರೆಸ್ ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವುದೇ ಬಹುಸಂಖ್ಯಾತರು ಬಿಜೆಪಿಯತ್ತ ಒಲಿಯಲು ಪ್ರಮುಖ ಕಾರಣ. 
೫. ಕಾಂಗ್ರೆಸ್ ಮಾಡಿದ ಒಳ್ಳೆಯ ಕೆಲಸಗಳನ್ನೂ ಪ್ರಚಾರ ಮಾಡದೇ ಕೇವಲ ರಾಹುಲ್‌ಗಾಂಧಿ ಬಜನೆಯಲ್ಲಿ ತೊಡಗಿದ್ದು ಮತ್ತೊಂದು ತಪ್ಪು. (ನೆಹರು ಕುಟುಂಬದಿಂದ ಆ ಪಕ್ಷ ಹೊರ ಬಾರದಿದ್ದುದರ ಪರಿಣಾಮ ಇದು)
೫. ಆಮ್ ಆದ್ಮಿ ಪಕ್ಷ ಸ್ಪಷ್ಟ ದಾರಿಯನ್ನು ಕಂಡುಕೊಳ್ಳಲಿಲ್ಲ. ಅದೂ ಕೂಡಾ ಕೇಜ್ರೀವಾಲ್ ಕೇಂದ್ರೀಕೃತವಾಯ್ತು, ಅಲ್ಲದೇ 'ಆಮ್ ಆದ್ಮಿ' ಎಂಬ ಹೆಸರೇ ಹಿಂದಿಯೇತರ ರಾಜ್ಯಗಳಿಗೆ ಪರಕೀಯವೆನ್ನಿಸುತ್ತದೆ.

ಅದೇನೇ ಇದ್ದರೂ ಜನರ ತೀರ್ಮಾನವೇ ಅಂತಿಮ. ಮುಂಬರುವ ಸರ್ಕಾರ, ಪ್ರಧಾನಿ ಜನರ/ದೇಶದ ಆಶೋತ್ತರಗಳಿಗೆ ಸ್ಪಂದಿಸಲಿ. ಮೋದಿ ಪ್ರಧಾನಿಯಾದಲ್ಲಿ ಚೆಡ್ಡಿಗಳನ್ನು ದೂರವಿಟ್ಟು ಉತ್ತಮ ಆಡಳಿತ ನೀಡಲಿ. ಸ್ವತಃ ಕೆಳ ಸಮುದಾಯದಿಂದ ಬಂದಿರುವ ಮೋದಿಯಿಂದಾದರೂ ದೇಶದ ಕೆಳವರ್ಗ ಮುಖ್ಯವಾಹಿನಿಗೆ ಬರುವಂತಾಗಲಿ. ಚೆಡ್ಡಿ ಬಳಗ ಹೇಳುವಂತೆ ಪಾಕಿಸ್ತಾನ, ಚೀನಾದ ಮೇಲೆಲ್ಲಾ ದಂಡೆತ್ತಿ ಹೋಗಿ ನಮ್ಮ ಸೈನಿಕರ ಪ್ರಾಣ ಪಣಕ್ಕಿಡುವುದರ ಬದಲಾಗಿ ಎಲ್ಲಾ ದೇಶಗಳ ಜೊತೆಗೂ ಉತ್ತಮ ಬಾಂಧವ್ಯವನ್ನು ವೃದ್ದಿಸಲಿ. ಭ್ರಷ್ಟಾಚಾರಕ್ಕೆ ಕೊನೆ ಹಾಡಿ ತಾನೇ ಹೇಳಿರುವಂತೆ 'ಎಲ್ಲಾ ಪಕ್ಷಗಳ ಭ್ರಷ್ಟಾಚಾರಿಗಳನ್ನೂ ಜೈಲಿಗೆ ಕಳಿಸಲಿ'. ಗುಜರಾಥಿಯೂ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನೂ ಹಿಂದಿಯವರ ದಬ್ಬಾಳಿಕೆಯಿಂದ ಮುಕ್ತಗೊಳಿಸಿ ನಿಜವಾದ ಪ್ರಜಾಪ್ರಭುತ್ವವನ್ನು ನೀಡಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…