ವಿಷಯಕ್ಕೆ ಹೋಗಿ

ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ !?ಬ್ರಾಹ್ಮಣರನ್ನು ಟೀಕಿಸಿದರು ಎಂಬ ಒಂದೇ ಕಾರಣಕ್ಕಾಗಿ ವಿಪ್ರನೊಬ್ಬ 'ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ' ಎಂದು ಆದೇಶ ಹೊರಡಿಸಿದ್ದಾನೆ. ಅಲ್ಲಿಗೆ ಹೆಣ್ಣನ್ನು ಬೆಂಕಿಗೆ ಹಾಕುವಲ್ಲಿಂದ ಶುರುವಾದ ಹಿಂದೂ ಧರ್ಮ ಇದೀಗ ಅತ್ಯಾಚಾರ ಮಾಡಿಸುವಲ್ಲಿಗೆ ಬಂದು ನಿಂತಿದೆ ಎಂದಾಯ್ತು. 

ಸಾವಿರಾರು ವರ್ಷಗಳಿಂದಲೂ ಭಾರತೀಯರನ್ನು ವಂಚಿಸುತ್ತಾ ಬಂದ ಪುರೋಹಿತ ವರ್ಗ, ತಮ್ಮ ಜಾತಿಯ ಮಹಿಳೆಯರನ್ನೂ ಬೆಂಕಿಗೆ ಹಾಕಿ ಸುಡುತ್ತಾ ಬಂದಿತ್ತು. ಇದಕ್ಕೆ ಅವರು ನೀಡಿದ ಸುಂದರವಾದ ಹೆಸರು 'ಸತಿ ಸಹಗಮನ ಪದ್ದತಿ'. ಗಂಡ ಸತ್ತಾಗ ತಾನಾಗಿಯೇ ಮಹಿಳೆ ಆತನ ಚಿತೆಗೆ ಹಾರಿ ಪ್ರಾಣ ಬಿಡುತ್ತಿದ್ದಳು ಎಂಬ ಕತೆಯನ್ನು ಇಂದಿಗೂ ಕಟ್ಟಿ ಹೇಳುವವರಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ನಡೆದಿಲ್ಲ ಎನ್ನಲಾರೆ. ಆದರೆ ಎಲ್ಲಾ ಹೆಣ್ಣುಗಳೂ ಈ ರೀತಿ ಗಂಡನ ಜೊತೆ ಪ್ರಾಣತ್ಯಾಗ ಮಾಡುತ್ತಾರೆದರೆ ನಂಬಲಾದೀತೆ ? ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಒಬ್ಬಾಕೆ 'ಮೊದ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾರಿಸಿರಬಹುದು, ನಂತರ ತಾವೇ ಇಷ್ಟ ಪಟ್ಟು ಬೆಂಕಿಗೆ ಹಾರಲು ಶುರು ಮಾಡಿರಬಹುದು' ಎಂದು ಬಡಬಡಿಸಿದ್ದರು ! ಇವರ ಗಂಡ ಸತ್ತಾಗ ಇವರೂ ಇಷ್ಟಪಟ್ಟು ಬೆಂಕಿಗೆ ಹಾರಿಬಿಡುತ್ತಾರೋ ಏನೋ. ಅಂದರೆ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾಕಿದರು, ಬರ ಬರುತ್ತಾ ವಿಧವೆಯರಿಗೆ ಅದು ಅನಿವಾರ್ಯ ಆಯ್ತು!

ಆದರೆ ಪುರೋಹಿತರ ಹೀನ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಅನ್ನೋದಕ್ಕೆ ಈ ವಿ.ಆರ‍್. ಭಟ್ಟನೇ ಸಾಕ್ಷಿ. ಪ್ರಭಾ ಎನ್. ಬೆಳವಂಗಲ ಎಂಬುವವರು ಹೋರಾಟಗಳಲ್ಲಿ ತೊಡಗಿಸಿಕೊಂಡಂತವರು. ಅವರು ಮೊನ್ನೆ ಮೊನ್ನೆ ತಮ್ಮ ಫೇಸ್‌ಬುಕ್ ಪ್ರಕಟಣೆಯಲ್ಲಿ 'ಯಜ್ಞ ಯಾಗಗಳು ವೈಜ್ಞಾನಿಕತೆಯಿಂದ ಕೂಡಿಲ್ಲ' ಎಂಬಂತಹ ವಿಷಯವೊಂದನ್ನು ಹಾಕಿದ್ದರು. ಅವರ ಹೇಳಿಕೆ ತಪ್ಪು ಅಂತಾಗಿದ್ದರೆ ಅದು ಯಾವ ರೀತಿ ತಪ್ಪು ಅನ್ನುವುದನ್ನು ತಿಳಿಸಬೇಕಲ್ಲವೇ ? ಆದರೆ ಈ ವ್ಯಕ್ತಿ ವಿಷಯವನ್ನು ಚರ್ಚಿಸುವ ಬದಲಾಗಿ 'ನಿಮ್ಮಂತಾ ಮಹಿಳೆಯರ ಜುಟ್ಟುಗಳನ್ನು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಆಗುತ್ತದೆ' ಎಂದು ಬೆದರಿಕೆ ಹಾಕಿದ್ದಾನೆ. ಇದು ಅತ್ಯಂತ ಗಂಭೀರವಾದ ವಿಷಯವೇ ಆಗಿದ್ದು ಪ್ರಭಾ ಅವರು ಈತನ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಆದರೆ ಇಲ್ಲಿ ಯೋಚಿಸಬೇಕಾದುದು ಈತನ ಹಾಗೂ ಅತ್ಯಾಚಾರಿಗಳ ಮನಸ್ಥಿತಿಯ ಬಗ್ಗೆ. ಸಾವಿರ ವರ್ಷಗಳ ಹಿಂದೆ ಗಂಡ ಸತ್ತ ಬಳಿಕ ಹೆಣ್ಣೊಬ್ಬಳು ಪ್ರೀತಿಯ ಕಾರಣಕ್ಕೋ, ಕಾಮದ ಕಾರಣಕ್ಕೋ ಬೇರೆ ಗಂಡಿನೊಂದಿಗೆ ಹೋಗಿರಲಿಕ್ಕೂ ಸಾಕು. ಆಗ ಇದೇ ವಿಪ್ರಪುಂಗವರು ಹೀಗೆಯೇ ಯೋಚಿಸಿರಬೇಕಲ್ಲವೇ ? 'ಇಂತಹ ಹೆಣ್ಣುಗಳನ್ನು ಹಿಡಿದು ಗಂಡನೊಂದಿಗೇ ಸುಟ್ಟರೆ ಎಲ್ಲಾ ಸರಿ ಹೋಗುತ್ತದೆ' ಎಂದು ?! ಅದರ ಪರಿಣಾಮವೇ ಸತಿ ಪದ್ದತಿ. ವಯಸ್ಸಿಗೆ ಬಂದ ಹೆಣ್ಣು ತನಗಿಷ್ಟ ಬಂದವನ ಜೊತೆ ಹೋದಾಗ ಮೂಡಿರಬೇಕು 'ಬಾಲ್ಯ ವಿವಾಹ'ದ ಹೊಂಚು. ಅದೆಲ್ಲಾ ಹಾಳಾಗಿ ಹೋಗಲಿ, ಇಂದಿನ ಅತ್ಯಾಚಾರಿಗಳೂ ಹೀಗೆಯೇ ಅಂದುಕೊಂಡು ಅತ್ಯಾಚಾರ ಎಸಗುತ್ತಿರಬಹುದಲ್ಲವೇ ? 'ಹುಡುಗಿಯರು ಏನು ಸ್ಟೈಲ್ ಮಾಡುತ್ತಾರೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ, ಬೀದಿಯಲ್ಲೆಲ್ಲಾ ಒಬ್ಬಳೇ ಓಡಾಡುತ್ತಾಳೆ, ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ' ಎಂದೆಲ್ಲಾ ಯೋಚಿಸುತ್ತಿರಬಹುದೇ ? 

ನಾನು ಗಮನಿಸಿರುವಂತೆ ಹಿಂದಿನಂತೆ 'ಧಣಿ' ಎನ್ನುವ ಮನಸ್ಥಿತಿ ಈಗ ಕೆಳವರ್ಗದವರಲ್ಲಿ ಕಡಿಮೆಯಾಗುತ್ತಿದೆ. ಹಾಗೆಯೇ ಫೇಸ್‌ಬುಕ್‌ನಲ್ಲಿ ಗಮನಿಸಿದರೆ ಬ್ರಾಹ್ಮಣರ ಮೇಲಿನ ಅಸಹನೆ ದಟ್ಟವಾಗಿರುವುದೂ ಕಂಡು ಬರುತ್ತಿದೆ. ಇನ್ನಾದರೂ ವಿ.ಆರ್‌. ಭಟ್‌ನಂತವರು ಬುದ್ದಿ ಕಲಿಯದೇ ಹೋದರೆ ಬಹುಶಃ ಪರಿಣಾಮ ಭೀಕರವಾಗಬಹುದು. ಅತ್ಯಾಚಾರ ಮಾಡಿದರೆ ಸರಿ ಹೋಗುತ್ತೆ ಎಂದು ಹೇಳಿದವರೇ ಅತ್ಯಾಚಾರಕ್ಕೊಳಗಾಗುವ ಕಾಲವೂ ಬರಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…