ವಿಷಯಕ್ಕೆ ಹೋಗಿ

ಬಿಜೆಪಿಯವರು ದೇವರಲ್ಲ, ಕಾಂಗ್ರೆಸ್‌ನವರು ರಾಕ್ಷಸರಲ್ಲಬಿಜೆಪಿಯ ಭಟ್ಟಂಗಿಗಳು 'ಕಾಂಗ್ರೆಸ್‌ನಿಂದ ಏನೂ ಅಭಿವೃದ್ದಿ ಆಗಿಲ್ಲ' ಎಂದು ಹೇಳುತ್ತಾ ಮತ್ತೊಂದು ಕಾಂಗ್ರೆಸ್ ವಿರೋಧಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದಾರೆ, ಅಥವಾ ಈಗಾಗಲೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನಿಂದ ಅಭಿವೃದ್ದಿಯೇ ಆಗಿಲ್ಲ ಅನ್ನೋದನ್ನ ಒಪ್ಪಲು ಸಾಧ್ಯವೇ ?  ಖಂಡಿತಾ ಬೇಕಾದಷ್ಟು ಕೆಲಸಗಳಾಗಿವೆ. 

ನಮ್ಮ ಹಳ್ಳಿಯಲ್ಲಿ ಅವರು ಶಾಲೆಯನ್ನು ತೆರೆಯದೇ ಹೋಗಿದ್ದರೆ ನಾನಿವತ್ತು ನಮ್ಮ ತಂದೆ ತಾಯಿಯಂತೆ ನಮ್ಮೂರಿನ ಧನಿಕರ ಮನೆ ಸೆಗಣಿ ಬಳಿದುಕೊಂಡು ಜೀವಿಸಬೇಕಾಗಿತ್ತು! ನನಗಿಂತಾ ಹಿಂದಿನವರು ಕಲಿಯುವ ಅವಕಾಶವಿಲ್ಲದೇ ಆ ಕೆಲಸ ಮಾಡಿಕೊಂಡಿದ್ದಾರೆ.

ಅಂದು ಐದನೇ ತರಗತಿ ವರೆಗೆ ಮಾತ್ರ ಇದ್ದ ಶಾಲೆಯಲ್ಲಿ ಏಳನೇ ತರಗತಿ ವರೆಗೂ ಅವಕಾಶ ಕಲ್ಪಿಸಿದಾಗ ಅದೇ ಊರಿನ ಮೇಲ್ವರ್ಗದ ಧನಿಕರು ಶಾಲೆಗೆ ಬೀಗ ಜಡಿದು ಉಪಾಧ್ಯಾಯರಿಗೆ 'ನಮ್ಮ ಅನುಮತಿ ಇಲ್ಲದೇ ಹೇಗೆ ಏಳನೇ ತರಗತಿ ವರೆಗೂ ಪಾಠ ಮಾಡ್ತೀರಿ ?' ಎಂದು ಧಮಕಿ ಹಾಕಿದ್ದನ್ನ ನಾನಿನ್ನೂ ಮರೆತಿಲ್ಲ. ಈ ಊರಿನ ಬಡ ಮಕ್ಕಳೆಲ್ಲಾ ಹೆಚ್ಚು ಓದುತ್ತಾ ಹೋದಂತೆ ತಮ್ಮ ಮನೆ-ತೋಟದ ಕೆಲಸಕ್ಕೆ ಕೂಲಿಗಳ ಬರ ಏರ್ಪಡುತ್ತದೆ ಎಂಬ ಆತಂಕ ಅಂದೇ ಅವರನ್ನು ಕಾಡಿತ್ತು!

ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಸೇವೆಯನ್ನು ನಮ್ಮ ಕುಗ್ರಾಮಗಳವರೆಗೂ ನೀಡದೇ ಹೋಗಿದ್ದರೂ ಸಹ ನನ್ನ ವಿಧ್ಯಾಭ್ಯಾಸ ಏಳನೇ ತರಗತಿಗೇ ಕೊನೆಯಾಗಿರುತ್ತಿತ್ತು. ಇಂತಹ ಅನೇಕ ಸವಲತ್ತುಗಳನ್ನು ಪಡೆದು ಬೆಳೆದ ನಾನು ಕಾಂಗ್ರೆಸ್‌ನಿಂದ ಏನೂ ಆಗಿಲ್ಲ ಅಂತ ಹೇಳಿ ಆತ್ಮವಂಚನೆ ಮಾಡಿಕೊಳ್ಳಲಾರೆ. (ನನ್ನಂತೆಯೇ ಅವಕಾಶಗಳನ್ನು ಬಳಸಿಕೊಂಡ ಅನೇಕರು ಇಂದು ಬಿಜೆಪಿ ಭಟ್ಟಂಗಿಗಳ ಸಮೂಹ ಸನ್ನಿಗೆ ಒಳಗಾಗಿ ಕಾಂಗ್ರೆಸ್‌ನಿಂದ ಏನೂ ಆಗಿಲ್ಲ ಅಂತ ಹೇಳುವುದನ್ನು ಕಂಡಾಗ ಖೇದವಾಗುತ್ತದೆ.)

ಇನ್ನು ದೊಡ್ಡ ದೊಡ್ಡ ವಿಷಯಗಳಿಗೆ ಬಂದಾಗ, ಇತರೆ ದೇಶಗಳ ಎದುರು ಎದೆ ತಟ್ಟಿ ನಿಲ್ಲುವ ಮಟ್ಟಕ್ಕೆ ನಮ್ಮ ಸೇನೆ ಬಲಿಷ್ಟವಾಗಿರುವುದು ಕಾಂಗ್ರೆಸ್‌ನ ಅವಧಿಯಲ್ಲೇ ಅಲ್ಲವೇ ? ಮೂರು ಯುದ್ಧಗಳಲ್ಲಿ ಪಾಕಿಸ್ತಾನದ ಸೊಕ್ಕನ್ನು ಅಡಗಿಸಿದ್ದು ಕಂಗ್ರೆಸ್‌ ಸರ್ಕಾರ ಅಲ್ಲವೇ ? ಮೊದಲ ಅಣುಬಾಂಬ್ ಪರೀಕ್ಷೆ ನಡೆದದ್ದು ಕಾಂಗ್ರೆಸ್‌ ಅವಧಿಯಲ್ಲಿ ಅಲ್ಲವೇ ? ಇನ್ಸಾಟ್‌ ಉಪಗ್ರಹಗಳನ್ನು ಹಾರಿಸಿ ಜಗತ್ತಿನ ಕೆಲವೇ ದೇಶಗಳ ಪಟ್ಟಿಯಲ್ಲಿ (ಉಪಗ್ರಹ ಅಭಿವೃದ್ದಿ/ಉಡಾವಣೆ) ಭಾರತವೂ ಸ್ಥಾನ ಪಡೆಯಲು ಕಾಂಗ್ರೆಸ್ ಸರ್ಕಾರ ಕಾರಣವಲ್ಲವೇ ? ಹೀಗೆ ಇನ್ನೂ ಪಟ್ಟಿ ಮಾಡಬಹುದು.

ನಿಜ, ಅವರಿಂದಲೂ ಯಡವಟ್ಟುಗಳಾಗಿವೆ, ತಪ್ಪುಗಳಾಗಿವೆ, ಭ್ರಷ್ಟಾಚಾರಗಳಾಗಿವೆ, ಇನ್ನೂ ಒಂದಿಷ್ಟು ಅಭಿವೃದ್ದಿ ಮಾಡಬಹುದಿತ್ತು. ನೆಹರು ಕುಟುಂಬದಿಂದ ಪಕ್ಷ ಹೊರ ಬರಬೇಕಾಗಿತ್ತು. ಮುಸ್ಲಿಂ ತುಷ್ಟೀಕರಣವನ್ನು ಮಾಡಬಾರದಿತ್ತು. ಆದರೆ ಇವೆಲ್ಲವನ್ನೂ ಬಿಜೆಪಿ ಈಗ ಮತ್ತೊಂದು ಬಗೆಯಲ್ಲಿ ಮಾಡುತ್ತಿದೆ ಅನ್ನೋದು ಕೂಡಾ ನಿಜವಲ್ಲವೇ ? ಕಾಂಗ್ರೆಸ್ ಅಂದರೆ ದೇಶದ್ರೋಹಿಗಳು ಅಂತ ಬಿಂಬಿಸೋದು ಎಷ್ಟು ಸರಿ ? 

ಬಿಜೆಪಿಯಿಂದ ಏನೂ ಅಭಿವೃದ್ದಿ ಆಗಲ್ಲ ಅಂತ ನಾನು ಹೇಳಲಾರೆ. ಇವರೂ ಮಾಡುತ್ತಾರೆ. ಇವರಿಂದಲೂ ತಪ್ಪುಗಳಾಗುತ್ತವೆ, ಭ್ರಷ್ಟಾಚಾರಗಳಾಗುತ್ತವೆ, ಏಕೆಂದರೆ ಎಲ್ಲರೂ ಮನುಷ್ಯರೆ. ಬಿಜೆಪಿಯವರು ದೇವರಲ್ಲ, ಕಾಂಗ್ರೆಸ್‌ನವರು ರಾಕ್ಷಸರಲ್ಲ. ಪಕ್ಷಗಳ ನಡುವೆ ಅಭಿವೃದ್ದಿಯಲ್ಲಿ ಪೈಪೋಟಿ ಇರಲಿ, ಎಲ್ಲರೂ ಸೇರಿ ದೇಶವನ್ನು ಮುನ್ನಡೆಸುವ ಬಗ್ಗೆ ಗಮನ ಹರಿಸಲಿ. ಈ ಮಾತು ಗೆದ್ದ ನಂತ ಮೋದಿಯ ಬಾಯಿಂದಲೇ ಬಂದಿದೆ, ಆದರೆ ಮೋದಿ ಬ್ರಿಗೇಡುಗಳು ಮಾತ್ರ ಇನ್ನೂ ಅಂಧಕಾರದ ಅಹಂನಲ್ಲೇ ಇದ್ದಾರೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…