ವಿಷಯಕ್ಕೆ ಹೋಗಿ

ಸಾಹಿತಿ ಭೈರಪ್ಪ ಆಡಿದ ಸಮಾಜಮುಖಿ ಮಾತುಗಳು

ಇಂದಿನ ಪ್ರಜಾವಾಣಿಯಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಸಂದರ್ಶನ ಪ್ರಕಟವಾಗಿದ್ದು ಅದರಲ್ಲಿ ಭೈರಪ್ಪರು ಕೆಲವೊಂದು ಮೆಚ್ಚುವಂತಹ ಮಾತುಗಳನ್ನಾಡಿದ್ದಾರೆ. 'ದೇಶದ ಏಳೀಗೆಗೆ ಎಡ ಪಂಥೀಯ ಅಥವಾ ಬಲ ಪಂಥೀಯ ಸಿದ್ದಾಂತಗಳು ಅಪ್ರಯೋಜಕ' ಎಂಬ ಅವರ ಮಾತನ್ನು ಒಪ್ಪಲೇ ಬೇಕು.

'ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಿ ಎಲ್ಲರಿಗೂ ಕೆಲಸ ಸಿಗುವಂತಾದಾಗ ಮೀಸಲಾತಿ ಸಮಸ್ಯೆ ಉದ್ಬವಿಸುವುದಿಲ್ಲ' ಎಂಬುದನ್ನೂ ಒಪ್ಪಬಹುದು. ಆದರೆ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲು ಬೇಕಾದ ಮಾನದಂಡದ ಬಗ್ಗೆ ಅವರು ಮಾತಾಡಿಲ್ಲ. ಈಗಾಗಲೇ ಉದ್ಯೋಗಗಳು ಬೇಕಾದಷ್ಟು ಇವೆ. ಆದರೆ ಸರ್ಕಾರದ ನಿಧಾನ ಧೋರಣೆಯಿಂದ ಹುದ್ದೆಗಳು ಭರ್ತಿಯಾಗದೇ ಉದ್ಯೋಗದ ಕೃತಕ ಆಭಾವ ಸೃಷ್ಟಿಯಾಗುತ್ತಿದೆ. ಆ ಮೂಲಕ ಮೀಸಲಾತಿ ಪ್ರಕ್ರಿಯೆಯನ್ನು ಚಾಲ್ತಿಯಲ್ಲೇ ಇರಿಸಿ ತಮ್ಮ ಮತಪೆಟ್ಟಿಗೆಯನ್ನು ಭದ್ರವಾಗಿಸಿಕೊಳ್ಳುವ ಕುತಂತ್ರ ರಾಜಕೀಯ ಪಕ್ಷಗಳದ್ದಿರಲೂ ಬಹುದು. ಹಾಗೆಯೇ ಸುದೀರ್ಘ ಅರವತ್ತು ವರ್ಷಗಳ ವರೆಗಿನ ಸೇವೆ ಅನ್ನುವುದು ಹಾಸ್ಯಾಸ್ಪದ. ಇದರ ಬದಲಾಗಿ ಸೇವೆಯ ಅವಧಿಯನ್ನು ಇಂತಿಷ್ಟು ವರ್ಷಗಳು ಅಂತ ನಿಗಧಿ ಮಾಡಬೇಕು. ಅಷ್ಟು ವರ್ಷ ಸೇವೆ ಮುಗಿದ ನಂತರ ನಿವೃತ್ತಿಗೊಳಿಸಬೇಕು. ಇದರಿಂದ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಭೈರಪ್ಪರು ಮುಂದುವರಿದು ಮತ್ತೊಂದು ಮಾತು ಹೇಳೀದ್ದಾರೆ. 'ಮೀಸಲಾತಿ ಹೋದ ನಂತರ ಜಾತಿ ವ್ಯವಸ್ಥೆ ಅಳಿಯುತ್ತದೆ' ಎಂಬ ಮಾತು ಸಂಪೂರ್ಣ ತಪ್ಪು. ಮೀಸಲಾತಿ ಇರುವುದರಿಂದ ಜಾತಿ ಸಮಸ್ಯೆ ಬಂದಿರುವುದಲ್ಲ. ಜಾತಿ ಸಮಸ್ಯೆ ಮೊದಲೇ ಇತ್ತು. ಅದಕ್ಕಾಗಿಯೇ ಸಮಾಜದಲ್ಲಿ ಅಸಮಾನತೆಗೆ ಒಳಗಾದ ಜಾತಿಗಳಿಗಾಗಿ ಮೀಸಲಾತಿ ನೀಡಲಾಯ್ತು. ಆದರೆ ಈಗ ಮೀಸಲಾತಿ ನಿಲ್ಲಿಸಿದರೂ ಜಾತಿ ವ್ಯವಸ್ಥೆ ಖಂಡಿತಾ ಹೋಗದು.

'ಶೇ ೧೫%ರಷ್ಟು ಪ್ರಮಾಣದಲ್ಲಿ ಅಂತರ್ಜಾತಿ ವಿವಾಹಗಳು ನಡೆದರೆ ಜಾತಿ ಬಿಗುವು ಕಡಿಮೆಯಾಗುತ್ತದೆ.' ಅನ್ನುವ ಮೂಲಕ ಸಮಾಜದಲ್ಲಿ ಜಾತಿಯ ಬಿಗುವು ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ 'ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ' ಎಂದು ಹೇಳಿದ ಕೆಲ ಸಂಶೋಧಕರು ಭೈರಪ್ಪರ ಮಾತಿಗೆ ಏನು ಉತ್ತರ ಹೇಳುತ್ತಾರೋ ಗೊತ್ತಿಲ್ಲ. ಹಾಗೆಯೇ ಅಂತರ್ಜಾತಿ ವಿಹಾಗಳನ್ನು ಪ್ರೋತ್ಸಾಹಿಸಿ ಮಾತನಾಡಿರುವ ಭೈರಪ್ಪರ ಮಾತಿಗೆ ಅವರ ಮಾನಸ ಪುತ್ರರಂತಿರುವ ಸಂಸ್ಕೃತಿ ರಕ್ಷಕರು ಏನು ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು. ಹಾಗೂ ಅಂತರ್ಜತಿ ವಿವಾಹಗಳಿಗೆ ಭೈರಪ್ಪರು ಶೇ ೧೫%ನ್ನೇ ಯಾಕೆ ನಿಗದಿ ಮಾಡಿದ್ದಾರೋ ತಿಳಿಯದು. ಅದು ಯಾಕೆ ೫೦%ಕ್ಕೂ ಹೆಚ್ಚಾಗಬಾರದು ? ಜಾತಿಯ ಬಿಗುವು ಕಡಿಮೆಯಾಗಲು ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯಲೇ ಬೇಕು.

ಒಟ್ಟಿನಲ್ಲಿ ಮೊದಲ ಬಾರಿಗೆ ಭೈರಪ್ಪ ಸಹ ಸಮಾಜಮುಖಿಯಾಗಿ ಚಿಂತಿಸುತ್ತಿದ್ದಾರೆ ಎಂದು ತಿಳಿಯಬಹುದಾಗಿದೆ. ಹಾಗೆಯೇ ಕೆಲವೇ ದಿನಗಳ ಹಿಂದೆ ಯಾವುದೋ ಸಂಸ್ಕೃತಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಕನ್ನಡಿಗರು ಸಂಸ್ಕೃತ ಕಲಿಯಬೇಕು' ಎಂದೆಲ್ಲಾ ಯಬಡಾ ತಬಡಾ ಮಾತಾಡಿದ್ದರು. ಮತ್ತೊಂದು ಕನ್ನಡದ ಕಾರ್ಯಕ್ರಮದಲ್ಲಿ ಕನ್ನಡವನ್ನು ಹೊಗಳಿ ಮಾತಾಡಿದ್ದರು. ರಾಜಕಾರಣಿಗಳಂತೆ ವೇದಿಕೆಗೆ ತಕ್ಕ ಮಾತಾಡುವುದು ಭೈರಪ್ಪರಂತಾ ಹಿರಿಯ ಸಾಹಿತಿಗಳಿಗೆ ಒಪ್ಪುವಂತದಲ್ಲ. ಈಗ ಪ್ರಜಾವಾಣಿ ಪತ್ರಿಕೆಯ ಕಚೇರಿಯಲ್ಲಿ ಈ ಮೇಲಿನಂತೆ ಮಾತಾಡಿದ್ದಾರೆ. ನಾಳೆ ಕನ್ನಡಪ್ರಭ ಕಚೇರಿಗೆ ಹೋಗಿ 'ಹಿಂದು ಧರ್ಮ - ಹಾಳು ಮೂಳು, ಅಂತರ್ಜಾತಿ ವಿವಾಹ ನಮ್ಮ ಸಂಸ್ಕೃತಿಗೆ ವಿರುದ್ಧ' ಅಂತೆಲ್ಲಾ ಮಾತಾಡದಿದ್ದರೆ ಸಾಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…