ವಿಷಯಕ್ಕೆ ಹೋಗಿ

ಗುರುತ್ವ ಬಲದಿಂದ ವಿಶ್ವದ ನಿರ್ದಿಷ್ಟ ಭಾಗಕ್ಕೆ ಚಲಿಸಬಹುದೇ ?


ಬೇರೆ ಗ್ರಹದ ಜೀವಿಗಳು ಭೂಮಿಯನ್ನು ತಲುಪುವುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ಅಷ್ಟು ದೂರದಿಂದ ಬರಲು ಅಗಾಧವಾದ ಇಂದನ ಬೇಕಾಗುತ್ತದೆ. ಹಾಗೂ ಅದಕ್ಕಿಂತಲೂ ಮಿಗಿಲಾದ ವೇಗವೂ ಬೇಕು.

ಅವರು ಎಲ್ಲಾ ಗ್ರಹಗಳಿಗೂ ಇರುವ ಪ್ರತ್ಯೇಕ ಗುರುತ್ವ ಶಕ್ತಿಯನ್ನೋ ಅಥವಾ ಕಾಂತ ಶಕ್ತಿಯನ್ನೋ ಬಳಸಿ ಆ ಗ್ರಹದ ಸಮೀಪ ಹೋಗುವ ವಿಶಿಷ್ಟ ಯಂತ್ರಗಳನ್ನು ಬಳಸುತ್ತಿರಬಹುದೇ ? 

ಉದಾಹರಣೆಗೆ ನಮ್ಮ ಭೂಮಿಗೆ ಇರುವ ಗುರುತ್ವ ಬಲ ಇನ್ನೊಂದು ಗ್ರಹಕ್ಕೆ ಇಷ್ಟೇ ಪ್ರಮಾಣದಲ್ಲಿ ಇರಲಾರದು. ಈ ಗುರುತ್ವ ಬಲವನ್ನು ಗ್ರಹಿಸುವ ಯಂತ್ರವೊಂದನ್ನು ಕಂಡು ಹಿಡಿದಿದ್ದೇ ಆದಲ್ಲಿ ಪ್ರತಿ ಗ್ರಹವನ್ನೂ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಸೌರ ಮಂಡಲದಿಂದ ಹೊರಗಿರುವಾಗ ಸೌರಮಂಡಲದ ಗುರುತ್ವ ಬಲವನ್ನು ಗ್ರಹಿಸಿ ಸೌರ ಮಂಡಲ ಪ್ರವೇಶಿಸಬಹುದು. ಕ್ಷೀರ ಪಥದಿಂದ ಹೊರಗಿರುವಾಗ ಕ್ಷೀರಪಥದ ಗುರುತ್ವ ಬಲವನ್ನು ಗ್ರಹಿಸಿ ನಮ್ಮ ಗೆಲಾಕ್ಸಿಯನ್ನು ಪ್ರವೇಶಿಸಬಹುದು. ಅಂದರೆ ಪ್ರತಿ ಗೆಲಾಕ್ಸಿಗೂ, ಸೌರವ್ಯೂಹಕ್ಕೂ (ನಕ್ಷತ್ರ), ಗ್ರಹಗಳಿಗೂ ಪ್ರತ್ಯೇಕವಾದ ಪ್ರಮಾಣದ ಗುರುತ್ವ ಬಲ ಇದೆ. ಅದನ್ನು ಗ್ರಹಿಸಿ ಅದನ್ನು ಬಳಸಿಕೊಂಡು ಪ್ರಯಾಣಿಸುವ ಯಂತ್ರಗಳನ್ನು ಅನ್ಯಗ್ರಹವಾಸಿಗಳು ತಯಾರಿಸಿರಲೂ ಬಹುದು.

ಅಂದರೆ ಕ್ಷೀರ ಪಥದಿಂದ ಬಲು ದೂರ ಇರುವ ಅನ್ಯಗ್ರಹವಾಸಿಗಳು ಮೊದಲು ಕ್ಷೀರಪಥದ ಗುರುತ್ವವನ್ನು ಗ್ರಹಿಸಿ ಅದರ ಸಮೀಪ ಬರುತ್ತಾರೆ. ನಂತರ ಕ್ಷೀರಪಥದಲ್ಲಿನ ಕೋಟ್ಯಾಂತರ ನಕ್ಷತ್ರಗಳ ನಡುವೆ ಸೂರ್ಯನ ಗುರುತ್ವವನ್ನು ಗ್ರಹಿಸಿ ಸೌರಮಂಡಲ ಪ್ರವೇಶಿಸುತ್ತಾರೆ. ತದನಂತರ ಭೂಮಿಯ ಗುರುತ್ವಬಲವನ್ನು ಗ್ರಹಿಸಿ ಭೂಮಿಯ ಸಮೀಪ ಬರುತ್ತಾರೆ.ಭೂಮಿಯ ಸಮೀಪ ಬಂದ ನಂತರ ಹಾರುವ ತಟ್ಟೆಯಲ್ಲಿನ ಇಂದನದ ಮೂಲಕ ಇಲ್ಲಿ ಸಂಚಾರ ನಡೆಸುತ್ತಾರೆ. 
ಇದು ಸಾಧ್ಯವೋ ಅಸಾಧ್ಯವೋ ನನಗೆ ತಿಳಿಯದು. ಸಾಧ್ಯವಾದರೂ ಆಗಬಹುದು, ಇದು ನನ್ನ ಕಲ್ಪನೆ ಮಾತ್ರ!
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…