ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಂಡ್ರಾಯಿಡ್ ಮೊಬೈಲ್‌ಗಳಿಗೆ ಒಂದು ಕನ್ನಡ ಕೀಲಿಮಣೆ

​ ನನ್ನ ಪಿಸುಮತು ಸಂಸ್ಥೆಯಿಂದ ಒಂದು ಉಚಿತ ಆಂಡ್ರಾಯಿಡ್ ಕೀಲಿಮಣೆಯನ್ನು ಅಭಿವೃದ್ದಿ ಪಡಿಸಲಾಗಿದೆ. ಇದನ್ನು ನಿಮ್ಮ ಆಂಡ್ರಾಯಿಡ್ ಮೊಬೈಲ್‌, ಟ್ಯಾಬ್‌ಗಳಿಗೆ ಅಳವಡಿಸಿಕೊಂಡು ಕನ್ನಡ ಅಕ್ಷರಗಳನ್ನು ಸುಲಭವಾಗಿ ಮೂಡಿಸಬಹುದಾಗಿದೆ.  ಈ ತಂತ್ರಾಂಶದಲ್ಲಿ ನಾಲ್ಕು ಆಯ್ಕೆಗಳಿವೆ.  ೧. ಕನ್ನಡ - ಕನ್ನಡ ಅಕ್ಷರ ಮಾಲೆಯ ಕೀಲಿಮಣೆಯ ಮೂಲಕ ಕನ್ನಡ ಬರೆಯಲು. ೨. ಪೊನೆಟಿಕ್ ಕನ್ನಡ - ಆಂಗ್ಲ ಕೀಲಿಮಣೆ ವಿನ್ಯಾಸದಲ್ಲಿ ಕನ್ನಡ ಕೀಲಿಮಣೆ. ೩. ಪೊನೆಟಿಕ್ ಇಂಗ್ಲೀಷ್ - ಆಂಗ್ಲ ಕೀಲಿಮಣೆಯ ಆಂಗ್ಲ ಅಕ್ಷರಗಳ ಮೂಲಕ ಕನ್ನಡ ಬರೆಯಲು. ೪. ಇಂಗ್ಲೀಷ್ - ಆಂಗ್ಲದಲ್ಲಿ ಬರೆಯಲು (ಈ ರೀತಿ ನಾಲ್ಕು ಅವಕಾಶಗಳನ್ನು ನೀಡುತ್ತಿರುವ ಮೊದಲ ಕನ್ನಡದ ಅಪ್ಲಿಕೇಶನ್ ಇದಾಗಿದೆ) ಅಂದರೆ ಕನ್ನಡ ಬರೆಯಲು ಒಟ್ಟು ಮೂರು ಬಗೆಯ ಅವಕಾಶವನ್ನು ನೀಡಲಾಗಿದೆ. * ಮೊದಲು ನಿಮ್ಮ ಮೊಬೈಲ್‌ಗೆ ಇದನ್ನು ಇಳಿಸಿ ಸ್ಥಾಪಿಸಿಕೊಳ್ಳಿ.  * ನಂತರ ಸೆಟ್ಟಿಂಗ್ಸ್ ಹೋಗಿ ಭಾಷೆ ಮತ್ತು ಇನ್‌ಪುಟ್‌ನಲ್ಲಿ 'PM Keyboard' ಅನ್ನು ಆಯ್ದುಕೊಳ್ಳಿ. * ಡಿಫಾಲ್ಟ್‌ ಕೀಬೋರ್ಡ್‌ ಅನ್ನೂ 'PM Keyboard' ಅನ್ನು ಆಯ್ಕೆ ಮಾಡಿರಿ. ಅದಾದ ನಂತರ ನೀವು ಸಂದೇಶ ಕಳಿಸುವಾಗ, ವಾಟ್ಸ್‌ಆಪ್‌ನಲ್ಲಿ ಚಾಟ್‌ ಮಾಡುವಾಗ ಅಥವಾ ಮಿನ್ನಂಚೆ ಕಳಿಸುವಾಗ ಕನ್ನಡದಲ್ಲಿಯೇ ಬರೆಯಬಹುದು. ಇಲ್ಲಿಂದ ಇದನ್ನು ನಿಮ್ಮ ಮೊಬೈಲ್‌ಗೆ ಪಡೆಯಬಹುದು : https://play.google.com/st

ಕಾಡು ಪ್ರಾಣಿಗಳು ಮತ್ತು ನಾವು

​ ನಾನು ಕಾಡಿನಲ್ಲೇ ಹುಟ್ಟಿ ಬೆಳೆದವನು. ಕಾಡೆಮ್ಮೆ ಇಂದಿಗೂ ನಮ್ಮ ಮನೆ ಅಂಗಳದ ತನಕೆ ಕೆಲವೊಮ್ಮೆ ಬಂದು ಹೋಗುತ್ತವೆ. ಹುಲಿ, ಕತ್ತೆ ಕಿರುಬಗಳು ಬಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗುತ್ತವೆ. ಆಗಾಗ ನಮ್ಮನೆ ಹಸುಗಳು ಹುಲಿಗೆ ಆಹಾರವಾಗುತ್ತಿರುತ್ತವೆ. ನಾವು ಹುಡುಗರಾಗಿದ್ದಾಗ ನಮ್ಮನೆಯಿಂದ ಸ್ವಲ್ಪ ದೂರದಲ್ಲೇ ತೋಳದ ಹಿಂಡೊಂದು ನಮ್ಮ ಚಿಕ್ಕ ಕರುವೊಂದನ್ನು ಹಿಡಿಯಲು ಬಂದಿದ್ದವು. ಅವುಗಳಿಂದ ಕರುವನ್ನು ರಕ್ಷಿಸಲು ನಮ್ಮ ದನಕರುಗಳು ಸಾಹಸ ಮಾಡುತ್ತಿದ್ದವು. ಇದನ್ನು ಕಂಡ ನಾನೂ ನಮ್ಮಣ್ಣನೂ (ಆಗ ಚಿಕ್ಕ ಹುಡುಗರು) ನಾಯಿಯನ್ನು ಕರೆದುಕೊಂಡು ಕೂಗುತ್ತಾ ಅಲ್ಲಿಗೆ ಓಡಿದೆವು. ನಾವು ಹತ್ತಿರ ಹೋಗುವವರೆಗೂ ತೋಳಗಳು ಕದಲಿಲ್ಲ. ನಾವಿಬ್ಬರು ಮತ್ತು ನಾಯಿಗಳೆರಡು (ಅವು ಹಳ್ಳಿ ನಾಯಿಗಳು) ಇದ್ದುದರಿಂದ ಕೊನೆಗೂ ಅವು ಕಾಡಿನೊಳಗೆ ಓಡಿದವು. ಅಕಸ್ಮಾತ್ ಅವು ತಿರುಗಿ ನಮ್ಮೆ ಮೇಲೆಯೇ ಮುಗಿ ಬಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಲಢ್ಯ ತೋಳಗಳ ಎದುರಲ್ಲಿ ನಮ್ಮ ಕಂಟ್ರಿ ನಾಯಿಗಳು ಏನೂ ಮಾಡುವಂತಿರಲಿಲ್ಲ. ಆಮೇಲೊಂದು ದಿನ ಬೆಳಗ್ಗೆ ಶಾಲೆಗೆ ಹೋಗಲು ನಮ್ಮನೆಯಿಂದ ಕಾಡಿನ ಅಂಕುಡೊಂಕು ದಾರಿಯಲ್ಲಿ ಓಡುತ್ತಾ ಹೊರಟಿದ್ದೆ. ಒಂದು ತಿರುವು ತಿರುಗಿದಾಗ ಕೇವಲ ಎಂಟತ್ತು ಅಡಿ ದೂರದಲ್ಲೇ ನಿಂತಿತ್ತು ಬೃಹತ್ ಗಾತ್ರದ ಕಾಡುಕೋಣ. ಎದೆ ಝಲ್ ಎಂದಿತ್ತು. ಹಿಂತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದೇ ಹೆದರಿ ಓಡಿ ಹೋಗಿತ್ತು. ಮತ್ತೊಂದು ದಿನ ಸಂಜ

ಭಾರತ-ಚೀನಾ ಗಡಿ ಸಮಸ್ಯೆ ನಿವಾರಣೆಗೆ ಇದು ಪ್ರಶಸ್ತ ಸಮಯ !

​ ಬಿಜೆಪಿಗೆ ಭರ್ಜರಿ ಬಹುಮತ ಇರುವುದರಿಂದ ಮೋದಿ ಈ ಬಾರಿ ದೇಶಕ್ಕೆ ಒಂದು ಉಪಕಾರವನ್ನು ಮಾಡಬಹುದು. ಅದೇನೆಂದರೆ ಭಾರತ-ಚೀನಾ ಗಡಿಯನ್ನು ಸ್ಪಷ್ಟವಾಗಿ ತೀರ್ಮಾನಿಸಿ ಸಮಸ್ಯೆಗೆ ಅಂತಿಮ ವಿದಾಯ ಹೇಳುವುದು. ಅರುಣಾಚಲ ಪ್ರದೇಶದ ಬಹುಭಾಗ ಹಿಂದೆ ಚೀನಾಕ್ಕೆ ಸೇರಿದ್ದಾಗಿಯೂ ಅದನ್ನು ತನಗೆ ಬಿಟ್ಟು ಕೊಟ್ಟಲ್ಲಿ ತಾನು ಆಕ್ರಮಿಸಿಕೊಂಡಿರುವ ಅಕ್ಸಾಯ್‌ ಚಿನ್ ಪ್ರಾಂತ್ಯವನ್ನು ಭಾರತಕ್ಕೆ ಬಿಡಲು ತಯಾರಿರುವುದಾಗಿ ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಚೀನಾ ಹೇಳಿದ್ದಾಗಿ, ಅದಕ್ಕೆ ನೆಹರು ಒಪ್ಪದಿರುವುದರಿಂದಲೇ ಗಡಿ ಸಮಸ್ಯೆ ಇಂದಿಗೂ ಮುಂದುವರಿದಿರುವುದಾಗಿಯೂ ಒಂದು ಲೇಖನದಲ್ಲಿ ಓದಿದ್ದೆ. ಮೋದಿ ಸರ್ಕಾರ ಈ ವಿಷಯವನ್ನು ರಚನಾತ್ಮಕವಾಗಿ ಪರಿಶೀಲಿಸಿ ಅರುಣಾಚಲ ಪ್ರದೇಶದ ಒಂದಿಷ್ಟು ಭಾಗವನ್ನು ನಾವು ಕಳೆದುಕೊಂಡರೂ (ಅಕ್ಸಾಯ್‌ ಚಿನ್‌ ನಮ್ಮದಾಗುವುದರಿಂದ) ಸಮಸ್ಯೆಯನ್ನು ಕೊನೆಗೊಳಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಈ ಸಮಸ್ಯೆಯನ್ನು ಬಗೆ ಹರಿಸಲು ಇದು ಅತ್ಯುತ್ತಮವಾದ ಸಮಯ. ಏಕೆಂದರೆ ಚೀನಾಕ್ಕೆ ಸಹ ತನ್ನ ಬಂಡವಾಳವನ್ನು ತೊಡಗಿಸಲು ಭಾರತಕ್ಕಿಂತಾ ಪ್ರಶಸ್ತ ದೇಶ ಇನ್ನೊಂದಿಲ್ಲ ಎಂಬ ಅರಿವು ಇದೆ. ಭಾರತದಕ್ಕೂ ಬಂಡವಾಳ ಬೇಕು ಅನ್ನುವ ಸಂಕಲ್ಪದಲ್ಲಿ ಮೋದಿ ದೇಶ-ವಿದೇಶ ಸುತ್ತುತ್ತಿದ್ದಾರೆ. ಇದೇ ಸಮಯದಲ್ಲಿ ಗಡಿ ವಿಷಯವನ್ನು ಮುಂದಿಟ್ಟುಕೊಂಡು ಕೂತರೆ ಆ ದೇಶವೂ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬಹುದು. ಮತ್ತು ಬಿಜೆಪಿಗೆ ಸ್ಪಷ್ಟ ಬಹುಮತ ಇರು

ಧರ್ಮಾಂಧತೆಗೆ ಔಷಧಿ ಇಲ್ಲವೇ ?

​ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಬ್ಬ ಮುಸ್ಲಿಂ ಹುಡುಗಿ ಕೆಲಸಕ್ಕೆ ಬರುತ್ತಿದ್ದಳು. ಆಕೆ ಮನೆಯಿಂದ ಬರುವಾಗ ಬುರ್ಕಾ ಹಾಕಿಕೊಂಡು ಬರುತ್ತಿದ್ದಳು. ಕಚೇರಿಗೆ ಬಂದೊಡನೆಯೇ ಅದನ್ನು ತೆಗೆದಿರಿಸಿ ಕೆಲಸಕ್ಕೆ ಕೂರುತ್ತಿದ್ದಳು. ಕಚೇರಿಯಲ್ಲಿ ಬುರ್ಕಾ ಧರಿಸಬಾರದು ಅಂತ ಯಾರೂ ಆಕೆಗೆ ಹೇಳಿರಲಿಲ್ಲ. ಸಂಜೆ ಮನೆಗೆ ಹೊರಡುವಾಗ ಯಥಾ ಪ್ರಕಾರ ಅದನ್ನು ಹಾಕಿಕೊಂಡು ಹೊರಡುತ್ತಿದ್ದಳು.  ಚೆನ್ನಾಗಿ ಪರಿಚಿತರಾದ ನಂತರ 'ಯಾಕೆ ಹೀಗೆ ಮಾಡುತ್ತಿರುವೆ?' ಎಂದು ಕೇಳಿದ್ದಕ್ಕೆ ಆಕೆ ಹೇಳಿದ್ದು.. "ಇದನ್ನ ಯಾವ್ ನನ್‌ ಮಗಾ ಕಂಡು ಹಿಡಿದನೋ ಕರ್ಮ. ಇವರುಗಳದ್ದು ಒಳ್ಳೆ ಹಿಂಸೆ. ನಮಗೆ ಇಷ್ಟ ಇಲ್ಲಾ ಅಂದ್ರೂ ಹಾಕಿಕೊಳ್ಳಬೇಕು..' ಎಂದು ಹೇಳಿ ಇನ್ನೊಂದಿಷ್ಟು ಯಾರಿಗೋ ಉಗಿದಳು.  'ಇವರುಗಳದ್ದು ಒಳ್ಳೆ ಹಿಂಸೆ' ಅಂದರೆ ? ಯಾರದ್ದು? ಯಾರವರು ? ಅಂತ ಕೇಳಿದ್ದಕ್ಕೆ ಆಕೆ ಸರಿಯಾಗಿ ಉತ್ತರಿಸಲಿಲ್ಲ, 'ಹೀಗೇ... ಇರ್ತಾರಲ್ಲ!' ಅಂತ ತೇಲಿಸಿದಳು. ಅವರು ಯಾರಂತ ಕೊನೆಗೂ ಗೊತ್ತಾಗಲಿಲ್ಲ. ಹಾಗೆಯೇ ಇನ್ನೊಂದು ಘಟನೆ ಕೂಡಾ ನೆನಪಾಗ್ತಿದೆ. ಒಮ್ಮೆ ಫೋಟೋ ಸ್ಟುಡಿಯೋ ಸಹ ಹೊಂದಿದ್ದೆ. ಆಗ ಒಂದು ಮದುವೆಗೆ ಹೋದಾಗ (ಅದು ಹಿಂದುಗಳದ್ದು) ಅಲ್ಲಿಗೆ ಅವರ ಮುಸಲ್ಮಾನ ಕುಟುಂಬವೊಂದು ಸಹ (ಒಂದಿಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು) ಬಂದಿತ್ತು. ಮದುಮಕ್ಕಳು ಎಲ್ಲರ ಜೊತೆ ನಿಂತು ಫೋಟೋ ತೆಗೆಸುತ್ತಾ ಕೊನೆಗೊಮ್ಮೆ ಇವರನ

ಜನ-ಧನ್‌ ಹಾಗೂ ಆಧಾರ್‌ !

​ ಮೊನ್ನೆ ಮೊನ್ನೆ ಕೆಂದ್ರ ಸರ್ಕಾರದ ಜನ-ಧನ್ ಯೋಜನೆಯಲ್ಲಿ ಕೋಟ್ಯಾಂತರ ಜನರಿಗೆ  ಬ್ಯಾಂಕ್‌ ಖಾತೆ ನೀಡಲಾಯ್ತು. ಪ್ರತಿಯೊಬ್ಬ ಪ್ರಜೆಗೂ ಒಂದು ಬ್ಯಾಂಕ್‌ ಖಾತೆ ಇರಲೇ ಬೇಕು, ಹಾಗಾಗಿ ಇದೊಂದು ಅತ್ಯುತ್ತಮ ಯೋಜನೆ.  ಆದರೆ ಇದನ್ನು ಜಾರಿಗೊಳಿಸಿದ ರೀತಿಯಲ್ಲಿನ ಯಡವಟ್ಟು ನೋಡಿ... ಈ ಯೋಜನೆಯ ಪ್ರತಿಫಲ ಸಿಗಬೇಕಾಗಿದ್ದುದು ಈ ಮೊದಲೇ ಬ್ಯಾಂಕ್‌ ಖಾತೆ ಹೊಂದಿಲ್ಲದಿರುವವರಿಗೆ ಮಾತ್ರ. ಆದರೆ ಮೊದಲೇ ಬ್ಯಾಂಕ್‌ ಖಾತೆ ಇದ್ದವರೂ ಈ ಯೋಜನೆಯಡಿ ಲಕ್ಷಾಂತರ ಜನರು ಮತ್ತೊಂದು ಖಾತೆ ಮಾಡಿಸಿಕೊಂಡಿದ್ದಾರೆ ಎಂಬುದು ಈಗ ಸರ್ಕಾರದ ಅರಿವಿಗೆ ಬಂದಿದೆ. (ಹೀಗಾಗುತ್ತದೆ ಎಂದು ಮೊದಲೇ ತಿಳಿದಿರಲಿಲ್ಲ ಎನ್ನಲಾಗದು, ಸಂಖ್ಯೆಯ ಲಾಭ ಪಡೆಯಲು ಸುಮ್ಮನಾಗಿದ್ದಿರಲೂ ಬಹುದು.) ಈಗ ಅಂತಹ ಖಾತೆದಾರರನ್ನು ಹೊರ ಹಾಕಲು ಇನ್ನೊಂದು ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಎಂಬ ಸುದ್ದಿ ಬಂದಿದೆ. ಅದು ಆರು ತಿಂಗಳೋ ವರ್ಷವೋ ಹಿಡಿದರೆ ಅಚ್ಚರಿಯೇನಲ್ಲ, ಅಥವಾ ಎಷ್ಟರ ಮಟ್ಟಿಗೆ ಸರಿಯಾದ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ ಎಂಬುದನ್ನಂತೂ ಕೇಳುವುದೇ ಬೇಡ. ಆದರೆ ಕೇಂದ್ರ ಸರ್ಕಾರ ಈ ರೀತಿ ಮಾಡಿದಿದ್ದರೆ ??? ಹೇಗಿದ್ದರೂ ಆಧಾರ್‌ ಕಾರ್ಡ್‌ ನೀಡಿದರೆ ಬೇರೆ ಯಾವುದೇ ದಾಖಲೆ ಬೇಡ ಅಂತ ತಿಳಿಸಿದ್ದರು. ಅದನ್ನೇ ಆಧಾರ್‌ ಕಾರ್ಡ್‌ ಇದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಂತ ಕಡ್ಡಾಯ ಮಾಡಿದ್ದಿದ್ದರೆ ? ಅದಕ್ಕೂ ಮೊದಲು ಬ್ಯಾಂಕ್‌ ಖಾತೆ ಇರುವವರೆಲ್ಲಾ ಆಧಾರ್‌ ಕಾರ್ಡ್‌ ಹೊಂದಿರಲೇ

ಪಿಸುಮಾತು ಬ್ಲಾಗ್‌ನ ಆಂಡ್ರಾಯಿಡ್ ಆಪ್ !

​ ಬ್ಲಾಗ್‌ಗೂ ಆಂಡ್ರಾಯಿಡ್ ಆಪ್‌? ಅಂತ ಮುಗು ಮುರಿಯಬೇಡಿ. ಆಪ್‌ಗಳ ವಿನ್ಯಾಸಕ್ಕೆ ಪ್ರವೇಶ ಮಾಡುವ ಸಲುವಾಗಿ ಮೊದಲ ಪ್ರಯತ್ನವಾಗಿ ಇದನ್ನು ತಯಾರಿಸಲಾಗಿದೆ. [ ಇಲ್ಲಿಂದ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ : https://play.google.com/store/apps/details?id=ana.sree.pisumathu4u ] ನನ್ನ ಬ್ಲಾಗ್‌ ಅನ್ನು ನಿರಂತರವಾಗಿ ಓದುತ್ತಿರುವವರು ಆಂಡ್ರಾಯಿಡ್ ಮೊಬೈಲನ್ನೂ ಉಪಯೋಗಿಸುತ್ತಿದ್ದಲ್ಲಿ ಈ ಆಪ್‌ ಮುಖಾಂತರ ಬ್ಲಾಗ್‌ ಬರಹಗಳನ್ನು ಓದಿಕೊಳ್ಳಬಹುದು. ಇದು ಉಚಿತ ಆಪ್‌ ಮತ್ತು ಇದು ಕಾರ್ಯ ನಿರ್ವಹಿಸಲು ಇಂಟರ್ನೆರ್ಟ್‌ ಬೇಕು. ಕನ್ನಡದ ಇನ್ನೂ ಅನೇಕ ಆಪ್‌ಗಳನ್ನು ತಯಾರಿಸುವ ಯೋಜನೆ ಇದೆ. ಆದರೆ ಸೀಮಿತ ಜನರು ಉಪಯೋಗಿಸುವ ಆಪ್‌ಗಳನ್ನು ಮಾಡಲು ಕೂಡಾ ತುಂಬಾ ಖರ್ಚಾಗುತ್ತದೆ. ಪಾವತಿಸಿ ಉಪಯೋಗಿಸುವ ಆಪ್‌ ಮಾಡಿದರೆ ಎಷ್ಟು ಜನ ಉಪಯೋಗಿಸುತ್ತಾರೋ ಗೊತ್ತಿಲ್ಲ.

ವೇಶ್ಯಾವಾಟಿಕೆ ಕಾನೂನುಬದ್ದವಾಗಲಿ

​ 'ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು' ಅಂತ ಕವಿ ನಿಸಾರ್‌ ಅಹಮದ್ ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ಮಹತ್ವಪೂರ್ಣವಾದ ಹೇಳಿಕೆ. ವೇಶ್ಯಾವಾಟಿಕೆ ಅನಾದಿ ಕಾಲದಿಂದಲೂ ಇತ್ತು, ಇದೆ ಹಾಗೂ ಮುಂದೂ ಇರುತ್ತದೆ. ಯಾವ ಕಾನೂನಿನಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಕಾನೂನು ಬದ್ದಗೊಳಿಸಿ ಅಮಾಯಕ ಹೆಣ್ಣು ಮಕ್ಕಳು ಈ ಬಲೆಗೆ ಬೀಳದಂತೆ ತಪ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.  ಈಗ ನಡೆಯುತ್ತಿರುವ ಕಾಳಸಂತೆಯ ವೇಶ್ಯಾವಾಟಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೂ ಆ ಹುಡುಗಿಯರಿಗೆ ಅಂತಹ ಲಾಭವಾಗುತ್ತಿಲ್ಲ. ಕಾರಣ ಅವರನ್ನು ನಿಯಂತ್ರಿಸುತ್ತಿರುವ ಮಧ್ಯವರ್ತಿಗಳೇ ಪೂರ್ತಿ ಲಾಭ ಪಡೆಯುತ್ತಿದ್ದಾರೆ. ಈ ದಂಧೆಯನ್ನು ಕಾನೂನುಬದ್ದಗೊಳಿಸಿ ಆ ವೃತ್ತಿಯವರಿಗೆ ರಕ್ಷಣೆ ಒದಗಿಸುವ ಮೂಲಕ ಮಧ್ಯವರ್ತಿಗಳಿಂದ ಬಿಡುಗಡೆ ಮಾಡಬೇಕಗಿದೆ.