'ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು' ಅಂತ ಕವಿ ನಿಸಾರ್ ಅಹಮದ್ ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ಮಹತ್ವಪೂರ್ಣವಾದ ಹೇಳಿಕೆ. ವೇಶ್ಯಾವಾಟಿಕೆ ಅನಾದಿ ಕಾಲದಿಂದಲೂ ಇತ್ತು, ಇದೆ ಹಾಗೂ ಮುಂದೂ ಇರುತ್ತದೆ. ಯಾವ ಕಾನೂನಿನಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಕಾನೂನು ಬದ್ದಗೊಳಿಸಿ ಅಮಾಯಕ ಹೆಣ್ಣು ಮಕ್ಕಳು ಈ ಬಲೆಗೆ ಬೀಳದಂತೆ ತಪ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಈಗ ನಡೆಯುತ್ತಿರುವ ಕಾಳಸಂತೆಯ ವೇಶ್ಯಾವಾಟಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೂ ಆ ಹುಡುಗಿಯರಿಗೆ ಅಂತಹ ಲಾಭವಾಗುತ್ತಿಲ್ಲ. ಕಾರಣ ಅವರನ್ನು ನಿಯಂತ್ರಿಸುತ್ತಿರುವ ಮಧ್ಯವರ್ತಿಗಳೇ ಪೂರ್ತಿ ಲಾಭ ಪಡೆಯುತ್ತಿದ್ದಾರೆ. ಈ ದಂಧೆಯನ್ನು ಕಾನೂನುಬದ್ದಗೊಳಿಸಿ ಆ ವೃತ್ತಿಯವರಿಗೆ ರಕ್ಷಣೆ ಒದಗಿಸುವ ಮೂಲಕ ಮಧ್ಯವರ್ತಿಗಳಿಂದ ಬಿಡುಗಡೆ ಮಾಡಬೇಕಗಿದೆ.
ಕಾಮೆಂಟ್ಗಳು