ವಿಷಯಕ್ಕೆ ಹೋಗಿ

ಧರ್ಮಾಂಧತೆಗೆ ಔಷಧಿ ಇಲ್ಲವೇ ?


ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಬ್ಬ ಮುಸ್ಲಿಂ ಹುಡುಗಿ ಕೆಲಸಕ್ಕೆ ಬರುತ್ತಿದ್ದಳು. ಆಕೆ ಮನೆಯಿಂದ ಬರುವಾಗ ಬುರ್ಕಾ ಹಾಕಿಕೊಂಡು ಬರುತ್ತಿದ್ದಳು. ಕಚೇರಿಗೆ ಬಂದೊಡನೆಯೇ ಅದನ್ನು ತೆಗೆದಿರಿಸಿ ಕೆಲಸಕ್ಕೆ ಕೂರುತ್ತಿದ್ದಳು. ಕಚೇರಿಯಲ್ಲಿ ಬುರ್ಕಾ ಧರಿಸಬಾರದು ಅಂತ ಯಾರೂ ಆಕೆಗೆ ಹೇಳಿರಲಿಲ್ಲ. ಸಂಜೆ ಮನೆಗೆ ಹೊರಡುವಾಗ ಯಥಾ ಪ್ರಕಾರ ಅದನ್ನು ಹಾಕಿಕೊಂಡು ಹೊರಡುತ್ತಿದ್ದಳು. 

ಚೆನ್ನಾಗಿ ಪರಿಚಿತರಾದ ನಂತರ 'ಯಾಕೆ ಹೀಗೆ ಮಾಡುತ್ತಿರುವೆ?' ಎಂದು ಕೇಳಿದ್ದಕ್ಕೆ ಆಕೆ ಹೇಳಿದ್ದು.. "ಇದನ್ನ ಯಾವ್ ನನ್‌ ಮಗಾ ಕಂಡು ಹಿಡಿದನೋ ಕರ್ಮ. ಇವರುಗಳದ್ದು ಒಳ್ಳೆ ಹಿಂಸೆ. ನಮಗೆ ಇಷ್ಟ ಇಲ್ಲಾ ಅಂದ್ರೂ ಹಾಕಿಕೊಳ್ಳಬೇಕು..' ಎಂದು ಹೇಳಿ ಇನ್ನೊಂದಿಷ್ಟು ಯಾರಿಗೋ ಉಗಿದಳು. 

'ಇವರುಗಳದ್ದು ಒಳ್ಳೆ ಹಿಂಸೆ' ಅಂದರೆ ? ಯಾರದ್ದು? ಯಾರವರು ? ಅಂತ ಕೇಳಿದ್ದಕ್ಕೆ ಆಕೆ ಸರಿಯಾಗಿ ಉತ್ತರಿಸಲಿಲ್ಲ, 'ಹೀಗೇ... ಇರ್ತಾರಲ್ಲ!' ಅಂತ ತೇಲಿಸಿದಳು. ಅವರು ಯಾರಂತ ಕೊನೆಗೂ ಗೊತ್ತಾಗಲಿಲ್ಲ.

ಹಾಗೆಯೇ ಇನ್ನೊಂದು ಘಟನೆ ಕೂಡಾ ನೆನಪಾಗ್ತಿದೆ. ಒಮ್ಮೆ ಫೋಟೋ ಸ್ಟುಡಿಯೋ ಸಹ ಹೊಂದಿದ್ದೆ. ಆಗ ಒಂದು ಮದುವೆಗೆ ಹೋದಾಗ (ಅದು ಹಿಂದುಗಳದ್ದು) ಅಲ್ಲಿಗೆ ಅವರ ಮುಸಲ್ಮಾನ ಕುಟುಂಬವೊಂದು ಸಹ (ಒಂದಿಬ್ಬರು ಹೆಂಗಸರು ಹಾಗೂ ಒಬ್ಬ ಗಂಡಸು) ಬಂದಿತ್ತು. ಮದುಮಕ್ಕಳು ಎಲ್ಲರ ಜೊತೆ ನಿಂತು ಫೋಟೋ ತೆಗೆಸುತ್ತಾ ಕೊನೆಗೊಮ್ಮೆ ಇವರನ್ನೂ ಕರೆದರು. ಆಗ ಮುಸ್ಲಿಂ ಮಹಿಳೆಯರು ನಗು ನಗುತ್ತಾ ಬಂದು ಮದುಮಕ್ಕಳ ಜೊತೆ ನಿಂತರು. ಆದರೆ ಆ ಗಂಡಸು ತಕ್ಷಣ ತನ್ನವರನ್ನು ಹಿಂದಕ್ಕೆ ಕರೆದ. ಮದುಮಕ್ಕಳೂ ಹಾಗೂ ನಾನು ಅವನಲ್ಲಿ ‘ಬನ್ನಿ ಸಾರ್‌ ನಿಂತ್ಕೊಳ್ಳಿ‘ ಎಂದು ಕೇಳಿಕೊಂಡೆ. ಆದರೆ ಅವನು ‘ನಮ್ಮ ಧರ್ಮದಲ್ಲಿ ಛಾಯಾಚಿತ್ರ ತೆಗೆಯುವಂತಿಲ್ಲ‘ ಎಂದು ನಿರಾಕರಿಸಿದ. ಪಾಪ ಖುಷಿಯಿಂದ ಫೋಟೋ ತೆಗೆಸಿಕೊಳ್ಳಲು ನಿಂತಿದ್ದ ಮಹಿಳೆಯರಿಬ್ಬರೂ ಒಲ್ಲದ ಮನಸ್ಸಿನಿಂದ ಅವನೊಂದಿಗೆ ತೆರಳಿದರು.

ಇದೀಗ ದಿನೇಶ್ ಅಮೀನ್ ಮಟ್ಟು ಅವರ ಹೇಳಿಕೆ ಹಾಗೂ ಮಂಗಳೂರಿನ ಪತ್ರಕರ್ತನವೀನ್ ಸೂರಿಂಜೆ ಬುರ್ಕಾ ಧರಿಸುವುದು ಕಡ್ಡಾಯವೇನಲ್ಲ ಎಂಬಂತೆ ಒಂದು ಹೇಳಿಕೆ ಹಾಕಿದ್ದಕ್ಕೆ ಧರ್ಮಾಂಧ ಮುಸಲ್ಮಾನರು ಅವರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಇದ್ದುದರಲ್ಲಿ ಕೆಲವು ವಿವೇಕಿ ಮುಸಲ್ಮಾನರು ಸೂರಿಂಜೆ ಪರ ವಹಿಸಿರುವುದು ಸಮಾಧಾನದ ಸಂಗತಿ. 

ಇದರರ್ಥ ಇಷ್ಟೇ, ಇವರು ಸ್ತ್ರೀಯರನ್ನು ಸದಾ ಬುರ್ಖಾದೊಳಗೆ ಮುಚ್ಚಿಡಲಿಕ್ಕೇ ಪ್ರಯತ್ನಿಸುತ್ತಿದ್ದಾರೆ. ಹೆಣ್ಣು ಯಾರಿಗೂ ಮುಖ ತೋರಿಸಲೇ ಬರುದು ಎಂಬುದೇ ದೊಡ್ಡ ಮೂರ್ಖತನ. ಅದನ್ನು ಎಷ್ಟು ಮುಸಲ್ಮಾನ ಹೆಣ್ಣುಗಳು ಪಾಲಿಸುತ್ತಿದ್ದಾರೆ ? ಒಮ್ಮೆ ಗೂಗಲ್‌ ಇಮೇಸ್ ಸರ್ಚ್‌‌ನಲ್ಲಿ ಮುಸ್ಲಿಂ ಗರ್ಲ್‌ ಅಂತ ಹುಡುಕಿ ನೋಡಿ, ಬುರ್ಕಾ ಧರಿಸಿರುವ ಆದರೆ ಮುಖ ತೋರಿಸಿರುವ ನೂರಾರು ಹುಡುಗಿಯರ ಚಿತ್ರ ಲಭ್ಯವಾಗುತ್ತದೆ. ಇವರಿಗೆಲ್ಲಾ ಈ ಧರ್ಮಾಂಧರು ಹೋಗಿ ಮುಖ ತೋರಿಸದಂತೆ ಮಾಡುತ್ತಾರಾ ?

ಸೂರಿಂಜೆ ಈ ಹಿಂದೆ ಇದ್ದದ್ದನ್ನು ಇದ್ದಂತೆ ಹೇಳಿ ಅತ್ತ ಹಿಂದೂ ಧರ್ಮಾಂಧರ ವಿರೋಧವನ್ನೂ ಕೊಟ್ಟಿಕೊಂಡಿದ್ದಾರೆ. 
ನಾನು ಗಮನಿಸಿದಂತೆ ಎಲ್ಲಾ ಧರ್ಮದ ಧರ್ಮಾಂಧರ ಸಮನ್ವಯತೆ ಏನೆಂದರೆ ಅವರ ತಪ್ಪನ್ನು ಯಾರೂ ಪ್ರಶ್ನೆ ಮಡುವುದಂತಿರಲಿ, ಇದು ತಪ್ಪು ಅಂತ ಎತ್ತಿ ತೋರಿಸಲೂ ಬಾರದು. ಹಾಗೆ ಮಾಡಿದರೆ ಸಾಕು... ಅದು ಧರ್ಮ ನಿಂದನೆಯಾಗಿ ಹೋಗುತ್ತದೆ. ಅಂದರೆ ಧರ್ಮ ನಿಂದನೆಯ ಗುಮದಮ ತೋರಿಸುತ್ತಾ ಇವರುಗಳು ಗೊಡ್ಡು ಸಂಪ್ರದಾಯಗಳನ್ನು ಸಾಕುತ್ತಿದ್ದಾರೆ. ಆದರೆ ಈ ಧರ್ಮಾಂಧತೆಗೆ ಔಷಧಿ ಇಲ್ಲವೇ ?
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…