ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀರ ಟಿಪ್ಪು ಸುಲ್ತಾನ್‌

​ ಟಿಪ್ಪು ಸುಲ್ತಾನ್‌ ಮತಾಂಧನಗಿದ್ದ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆತನಿಂದ ನಡೆದ ಹತ್ಯೆಗಳು, ಯುದ್ದಗಳು ಎಲ್ಲದಕ್ಕೂ ಕಾರಣ ಆತನ ರಾಜ್ಯ ವಿಸ್ತರಿಸುವ, ತನ್ನೆದುರು ತಲೆ ಎತ್ತಿ ನಿಂತವರನ್ನು ಬಗ್ಗು ಬಡಿವ ಯುದ್ದೋನ್ಮಾದಗಳೇ ಕಾರಣವಾಗಿತ್ತು. ಈ ಯುದ್ದೋನ್ಮಾದ ಆತನ ತಂದೆ ಹೈದರಾಲಿಯಿಂದ ಬಂದುದು. ಹೈದರಾಲಿ ಮತ್ತು ಟಿಪ್ಪುವಿನ ಆಸ್ಥಾನ ಮಂತ್ರಿ ದಿವಾನ್‌ ಪೂರ್ಣಯ್ಯ ಒಬ್ಬ ಬ್ರಾಹ್ಮಣರಾಗಿದ್ದರು. ಹೈದರಾಲಿಯ ಕಾಲದಲ್ಲಿ ದುರ್ಗದ ಮದಕರಿ ನಾಯಕನನ್ನೂ ಸೇರಿದಂತೆ, ಪೇಶ್ವೆಗಳು ಮತ್ತು ಕೆಳದಿ, ಶೀರ್ವ, ರಾಮದುರ್ಗ ಮುಂತಾದ ಎಲ್ಲಾ ಹಿಂದು ಪಾಳೆಯಗಾರರನ್ನೂ ರಾಜರುಗಳನ್ನೂ ಸೋಲಿಸಲು ಪೂರ್ಣಯ್ಯನವರ ತಂತ್ರ ಕುತಂತ್ರಗಳೇ ಕಾರಣವಾಗಿದ್ದವು. ಮದಕರಿ ನಾಯಕನ ಮಂತ್ರಿ ಕೂಡಾ ಹೈದರಾಲಿಗೆ ದುರ್ಗದ ರಹಸ್ಯಗಳನ್ನು ಒದಗಿಸಿ ಮದಕರಿಯ ಸೋಲಿಗೆ ಕಾರಣವಾಗುತ್ತಾನೆ. ಹಾಗೆಯೇ ಹೈದರಾಲಿಯ ಮುಸ್ಲಿಂ ಸರ್ದಾರನೊಬ್ಬ ಕೂಡಾ ಮದಕರಿ ನಾಯಕನೊಂದಿಗೆ ಸ್ನೇಹ ಬೆಳೆಸಿ ಹೈದರಾಲಿಗೂ ಮೋಸ ಮಾಡುತ್ತಾನೆ. ಇವೆಲ್ಲಾ ಆಗಿನ ಸಂದರ್ಭದ ಸಹಜ ಘಟನಾವಳಿಗಳು.  ಹೈದರಾಲಿಯಂತೆಯೇ ಯುದ್ದೋತ್ಸಾಹ ತೋರುವ ಟಿಪ್ಪು ಅಕ್ಕಪಕ್ಕದ ಪಾಳೆಗಾರರ ಮೇಲೆ ದಂಡೆತ್ತಿ ಹೋಗಿದ್ದರಲ್ಲಿ ಮತ್ತು ಅಲ್ಲಿ ಯುದ್ದ, ಸಾವು ನೋವು ಸಂಭವಿಸಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಹಾಗೆಯೇ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ, ಮಂಡ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಯಥೇಚ್ಚವಾಗಿರಬೇಕಿತ್ತು. ಅಂದು ಹಿಂದು ರಾಜರುಗಳೇ ಹಿಂದು ರಾಜ್ಯಗಳ

ಬಲಿಚಕ್ರವರ್ತಿಯ ನೆನವ ದಿನಕ್ಕೆ ಪಟಾಕಿ ಯಾಕೆ ?

​ ದೀಪಾವಳಿ ಮೊದಲಿಗೆ ಪಟಾಕಿ ಹೊಡೆವ ಹಬ್ಬ ಆಗಿರಲಿಲ್ಲ. ಇದು ಬಲಿ ಚಕ್ರವರ್ತಿಯನ್ನು ಸ್ಮರಿಸಿ ಆತನಿಗೆ ಪೂಜೆ ಸಲ್ಲಿಸುವ ದಿನ. ಸತ್ತ ಪುಣ್ಯಾತ್ಮರನ್ನು ಸ್ಮರಿಸಲು ಅವರ ಪ್ರತಿಕೃತಿಯ ಎದುರು ದೀಪ ಹಚ್ಚುವ ಪರಿಪಾಠ ಮೊದಲಿನಿಂದಲೂ ಇತ್ತು. ಅದೇ ರೀತಿ ಬಲಿ ಚಕ್ರವರ್ತಿಗೆ ದೀಪ ಹಚ್ಚಿ ಆತನನ್ನು ಸ್ಮರಿಸುವ ದಿನವೇ "ಬಲಿ ಪಾಡ್ಯಮಿ". ಇಂದಿಗೂ ಮಲೆನಾಡಿನ ಬಹಳಷ್ಟು ಮನೆಯಲ್ಲಿ (ನಮ್ಮನೆಯೂ ಸೇರಿ) ಬಲಿಪಾಡ್ಯಮಿಯ ದಿನ ಕೆರೆ, ಹೊಳೆ ಅಥವಾ ಬಾವಿಯಿಂದ ತಾಮ್ರದ ತಂಬಿಗೆಯಲ್ಲಿ ನೀರನ್ನು ತಂದು ಅದಕ್ಕೆ ಅಡಿಕೆ ಸಿಂಗಾರ ಅಥವಾ ಹೂಗಳನ್ನು ಮುಡಿಸಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದನ್ನು "ಬಲೀಂದ್ರ ಪೂಜೆ" ಅಥವಾ "ಬಲಿ ಪೂಜೆ" ಎಂದೇ ಕರೆಯುತ್ತಾರೆ. ನಮ್ಮ ಕಡೆ ಈಗಲೂ ಬಲಿಯನ್ನು ಹೊಗಳುವ ಜಾನಪದ ಹಾಡುಗಳು (ಹಬ್ಬಾಡುವ ಪದಗಳು ಎನ್ನುತ್ತಾರೆ) ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಹಾಡು "ಎದ್ದೇಳು ಬಲಿವೀಂದರ, ನಿಜಕೊಂದ್ ಎಲ್ಲಾರ ಸಲುವಂತರಾ.." (ಎಲ್ಲರನ್ನೂ ಸಲಹುವ ಬಲೀಂದ್ರ ಎದ್ದೇಳು ) ಎಂದು ಪ್ರಾರಂಭವಾಗುತ್ತದೆ. ಹಾಗೆಯೇ ಹಸು, ಎತ್ತುಗಳಿಗೆ ಹೂಗಳ ಹಾರ ಹಾಕಿ ಪೂಜೆ ಮಾಡುವುದೂ, ಅವುಗಳಿಗೆ ಇಷ್ಟದ ತಿನಿಸು ಮಾಡಿ ತಿನ್ನಿಸುವುದೂ ಇದೆ. (ಈ ಸಮಯಕ್ಕೆ ಅವುಗಳನ್ನು ಬಳಸಿಕೊಂಡು ದುಡಿವ ಬೇಸಾಯದ ಕೆಲಸ ಬಹುತೇಕ ಮುಗಿದಿರುತ್ತದಾದ್ದರಿಂದ ಅವುಗಳಿಗೆ ಈ ಅಕ್ಕರೆ).  ತೀರಾ ಇತ್ತೀಚಿನವರೆಗೂ ನಮ್ಮ ಕಡೆ ಈ ಹಬ್ಬಕ್ಕೆ ಪಟಾಕ

ಓ ಮಳೆಯೇ...

ಸೋಗೆ ಮನೆಯ ಛಾವಣಿ ಸೀಳಿ ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ ಗುಡಿಸಿ, ಸಾರಿಸಿ ನಯ ಮಾಡಿದ ಒಡಕಲು ನೆಲಕೆ ಬಿದ್ದು ಪಟಪಟನೆ ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ ಓ ನಿರ್ದಯಿ ಮಳೆ ಹನಿಯೆ... ನೀ ಎಂದಾದರೂ ಅರಿತೆಯಾ  ಬಡವನ ಬವಣೆಯನ್ನು ? ಯಾಕೆ ಅರಿಯಲಿಲ್ಲ ಮಗುವೆ ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು ದುಡಿದು ಬೆವರ ಸುರಿಸುವಾಗ ಅವರ ಕಷ್ಟವರಿತು ಹನಿ ಸಿಂಚನ ಮಾಡಿ ಧೋ ಎಂದು ಸುರಿದು ಅವರ ತಣಿಸಿ, ಬೆವರ ತೊಳೆದು ತಣ್ಣಗಾಗಿಸಿದ್ದು ನಾನಲ್ಲವೇ ಕಂದಾ ? ಹೋಗು ಹೋಗೆಲೆ ಮಳೆಯೆ, ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ ಬಿಸಿಲ ಜಳಕೆ ಬಾಯಾರಿ ದುಡಿವ ದೇಹ ಹನಿ ನೀರಿಗೆ ಪರಿತಪಿಸುವಾಗ ನಿನಗೆ ಬರಲಿಲ್ಲ ಕರುಣೆ ಉಕ್ಕಿ. ಅರಿತೆ ಮಗುವೆ ನಿನ್ನ ಅಂತರಂಗದ ಕೂಗು ನನಗಿಲ್ಲ ಬರಿದೆ ಬಡಾಯಿಗಳ ಸೋಗು ನನ್ನ ತಾಯಿ ಪ್ರಕೃತಿ ಮಾತೆ  ಹಾಕಿದ ಗೆರೆಯ ದಾಟಿ ಬರಲಾರೆನೇಳು  ಇದು ನನ್ನ ಸಂವೇದನೆಯ ಸೋಲು ! ​

ಕರ್ನಾಟಕಕ್ಕಾಗಿ ಬಿಹಾರದಲ್ಲಿ ನಿತೀಶ್‌ಕುಮಾರ್‌ ಗೆಲ್ಲಬೇಕಾಗಿದೆ !

​ ಬಿಹಾರ ಚುನಾವಣೆಯಲ್ಲಿ ನನ್ನ ನೆಚ್ಚಿನ ನಿತೀಶ್‌ ಕುಮಾರ್‌ ಜಯ ಗಳಿಸಲಿ ಎಂದು ಆಸಿಸುವೆ. ನಿತೀಶ್‌ ಬರುವ ಮೊದಲು ಬಿಹಾರ ಕೆಟ್ಟು ಕೆರ ಹಿಡಿದು ಹೋಗಿತ್ತು. ಲಾ & ಆರ್ಡರ್‌ ಮಣ್ಣು ಪಾಲಾಗಿತ್ತು. ಸ್ವತಃ ಪೊಲೀಸರೇ ದರೋಡೆ, ಅತ್ಯಾಚಾರಕ್‌ಇಳಿದ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದವು. ದೂರದ ಕರ್ನಾಟಕದ ಪತ್ರಿಕೆಗಳಲ್ಲೂ ದಿನ ನಿತ್ಯ ಬಿಹಾರದ ಒಂದಿಲ್ಲೊಂದು ಸಮಾಜ ಘಾತಕದ ಸುದ್ದಿ ಇದ್ದೇ ಇರುತ್ತಿತ್ತು. ಹಾಗೆಯೇ ಅಲ್ಲಿನ ಅರಾಜಕತೆಯಿಂದ ಬೇಸತ್ತು ಮತ್ತು ಕೆಲಸವೇ ಇಲ್ಲದೇ ಲಕ್ಷಾಂತರ ಜನರು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸ ಬಂದು ಇಲ್ಲಿನ ಸ್ಥಳೀಯರ ಸಮಸ್ಯೆಯನ್ನು ಹೆಚ್ಚಿಸಿದ್ದರು. ಆದರೆ ನಿತೀಶ್‌ಕುಮಾರ್‌ ಮುಖ್ಯಮಂತ್ರಿಯಾದ ನಂತರ ಬಿಹಾರದ ಚಿತ್ರಣವನ್ನೇ ಬದಲಿಸಿದರು. ಅಲ್ಲಿ ಮೊದಲು ಲಾ & ಆರ್ಡರ್‌ ಸರಿಪಡಿಸಲಾಯ್ತು. ನಂತರ ಚಿಕ್ಕಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲಾಯ್ತು. ಅಲ್ಲಿ ಯಾವ ಮಟ್ಟಿಗೆ ಬದಲಾವಣೆ ಆಯ್ತು ಎಂದರೆ ವಲಸೆ ಬಂದ ಬಿಹಾರಿಗಳಿಂದಲೇ ನಡೆಯುತ್ತಿದ್ದ ಬೆಂಗಳೂರಉ ಚೆನ್ನೈನಂತಹ ನಗರಗಳ ಬೃಹತ್‌ ಕಟ್ಟಡಗಳ ಕೆಲಸಕ್ಕೆ ಕ್ರಮೇಣ ಬಿಹಾರಿಗಳ ಕೊರತೆ ಎದುರಾಯ್ತು. (ಈಗ ಅವರ ಜಾಗದಲ್ಲಿ ಉತ್ತರ ಪ್ರದೇಶದವರೂ, ಹರಿಯಾಣ, ಒಡಿಶಾ, ಆಂಧ್ರದವರೂ ತುಂಬಿಕೊಂಡಿದ್ದಾರೆ). ಒಬ್ಬ ಮುಖ್ಯಮಂತ್ರಿ ಮಾಡಬೇಕಾದ ಕೆಲಸವೇ ಅದು. ಈ ಕಾರಣಕ್ಕೆ ನಿತೀಶ್‌ ನನಗೆ ಇಷ್ಟವಾಗುತ್ತಾರೆ, ಅದಕ್ಕಿಂತ ಮಿಗಿಲಾ

ರೈತರ ಆತ್ಮಹತ್ಯೆಗೆ ಕಾರಣ ಹುಡುಕುತ್ತಾ...

​ ಕಳೆದ ಏಳು ತಿಂಗಳಲ್ಲಿ ೫೧೬ ರೈತರು ನಮ್ಮ ರಾಜ್ಯವೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದೊಂದು ಗಾಬರಿ ಹುಟ್ಟಿಸುವ ಸುದ್ದಿಯೇ ಹೌದು. ಹೀಗೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ? ನಿಜವಾದ ಸಾಲದ ಸಮಸ್ಯೆಯೇ ಇದಕ್ಕೆ ಕಾರಣವೇ ? ಅಷ್ಟೊಂದು ಸಾಲವನ್ನಾದರೂ ಯತಕ್ಕಾಗಿ ಮಾಡಿಕೊಂಡರು ? ಬರಗಾಲ ಕಾರಣವೆನ್ನಲು ಈಗಿನದಕ್ಕಿಂತಲೂ ಭೀಕರ ಬರಗಾಲ ಎಷ್ಟೋ ಸಮಯ ಬಂದು ಹೋಗಿದೆ. ಆಗೆಲ್ಲಾ ಈ ರೀತಿ ರೈತರು ಆತ್ಮಹತ್ಯೆಗೆ ಇಳಿಯುತ್ತಿರಲಿಲ್ಲ. ಆದರೆ ಇತ್ತೀಚಿಗೆ ಏನೋ ಯಡವಟ್ಟಾಗುತ್ತಿರುವುದಂತೂ ನಿಜ. ನಿನ್ನೆಯ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿಯ ಹೇಳಿಕೆಗಳು ಪ್ರಕಟವಾಗಿದೆ. (ಅವರ ಮನೆಗೆ ರಾಹುಲ್‌ಗಾಂಧಿ ಭೇಟಿ ನೀಡುವುದಿದೆಯಂತೆ). ಆ ಮಹಿಳೆ ಹೇಳಿರುವ ಪ್ರಕಾರ ಅವರಿಗೆ ಇರುವುದು ಬರೇ ೧.೩೮ ಎಕರೆ ಹೊಲ. ಆದರೆ ಆ ರೈತ ೨೦೦೫ ರಲ್ಲಿಯೇ ಟ್ರಾಕ್ಟರ್‌ ಕರೀದಿಸಿದ್ದಾನೆ ! ಅದರ ಸಾಲ ಮತ್ತು ಬೆಳೆ ಸಾಲ ಸೇರಿ ಈಗ ಸಾಲದ ಮೊತ್ತ ಹನ್ನೊಂದು ಲಕ್ಷವನ್ನೂ ಮೀರಿದೆ. ಈ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜ, ಒಂದೂವರೆ ಎಕರೆಯೂ ಇಲ್ಲದ ಹೊಲದ ರೈತ ಅಷ್ಟೊಂದು ಸಾಲ ತೀರಿಸುವುದು ಕನಸಿನ ಮಾತು. ಅದು ಹಾಗಿರಲಿ, ಆದರೆ ಆತ ಮಾಡಿಕೊಂಡಿರುವ ಸಾಲದ ಪರಿಯನ್ನು ಒಮ್ಮೆ ಗಮನಿಸಿ. ತನಗಿರುವ ಕೇವಲ ೧.೩೮ ಎಕರೆ ಹೊಲಕ್ಕಾಗಿ ಟ್ರಾಕ್ಟರ್‌ ಕೊಳ್ಳುವ (ಅದೂ ಸಾಲ ಮಾಡಿ) ಅಗತ್ಯವಾ

"ಡಿಜಿಟಲ್‌ ಇಂಡಿಯಾ" - ಮೋದಿಯ ಮತ್ತೊಂದು ಕಲರ್‌ಫುಲ್‌ ಆಟ !

​ ಫೇಸ್‌ಬುಕ್‌ನಲ್ಲಿ  ಯಾರ ಪ್ರೊಫೈಲ್‌ ಚಿತ್ರ ನೋಡಿದರೂ ಕಲರ್‌ ಕಲರ್‌ ! ಅರೆರೆ ಏನಿದು ಎಲ್ಲರೂ ಈ ರೀತಿ ಮಕಕ್ಕೆ ಬಣ್ಣ ಬಳಕೊಂಡವರಲ್ಲ ಅಂತ ನೋಡಿದರೆ ಅದರ ಹಿಂದಿರುವುದು ಮತ್ತದೇ ಮೋದಿಯ ಮತ್ತೊಂದು ಕಲರ್‌ಫುಲ್‌ ಆಟದ ಹಕೀಕತ್ತು. ಮಾಧ್ಯಮಗಳಿಗೆ ಅಮೇಧ್ಯ ಉಣ್ಣಿಸಿ ತನ್ನ ಪ್ರತಿ ನಡೆಯನ್ನೂ ಜಾಹೀರಾತನ್ನಾಗಿ ಮಾಡಿಕೊಳ್ಳುತ್ತಿರುವ ಪ್ರಧಾನಿ ಮೋದಿ ಇದೀಗ "ಡಿಜಿಟಲ್‌ ಇಂಡಿಯಾ" ಎಂಬ ಹೆಸರಲ್ಲಿ ದೇಶೀಯ ಡಿಜಿಟಲ್‌ ಉದ್ಯಮವನ್ನ ಬೇರು ಸಮೇತ ಕಿತ್ತೊಗೆಯಲು ವಿದೇಶಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ. ಏನಿದು ಡಿಜಿಟಲ್‌ ಇಂಡಿಯಾ ? ಎಂದು ಯಾರಾದರೂ ಮಕಕ್ಕೆ ಬಣ್ಣ ಬಳಕೊಂಡವರ ಬಳಿ ಕೇಳಿ ನೋಡಿ. ಅವರಿಂದ ಬರುವ ಉತ್ತರ "ಗೊತ್ತಿಲ್ವ? ಡಿಜಿಟಲ್‌ ಇಂಡಿಯಾ ಕಣ್ರೀ, ಮೋದಿಯ ಮಹತ್ವಾಕಾಂಕ್ಷೆಯ ಯೋಜನೆ. ಇಡೀ ಭಾರತಕ್ಕೇ ಉಚಿತವಾಗಿ ವೈಫೈ ಮೂಲಕ ಇಂಟರ್ನೆಟ್‌ ಕೊಡುವ ಅತ್ಯದ್ಬುತ ಯೋಜನೆ ಇದು. ನೀವು ಯಾಕೆ ಇನ್ನೂ ಬೆಂಬಲ ನೀಡಿಲ್ಲ? ಮೋದಿಯನ್ನು ವಿರೋಧಿಸೋದೇ ಕೆಲಸಾನಾ? ಇಂತಹ ಒಳ್ಳೆಯ ಕೆಲಸ ಮಾಡಿದಾಗಲೂ ಬೆಂಬಲಿಸಬಾರದಾ?" ಅಂತ ಪ್ರಶ್ನಿಸದಿದ್ದರೆ ಕೇಳಿ. ಅದು ಅವರ ಅಮಾಯಕತೆ. ಕೆಲವರಿಗೆ ವಿಷಯದ ಅರಿವಿದ್ದರೂ ಬೇರೆ ಬೇರೆ ಸ್ವಾರ್ಥ ಕಾರಣಗಳಿಗಾಗಿ ಮುಚ್ಚಿಡುತ್ತಿದ್ದಾರೆ. ಇಂಟರ್ನೆಟ್‌ ಎಂಬುದು ಲಕ್ಷಾಂತರ ಕೋಟಿಯ ಉದ್ಯಮ ಡಿಜಿಟಲ್‌ ಇಂಡಿಯಾದ ಮೂಲ ಉದ್ದೇಶ ಜನರೆಲ್ಲಾ ತಿಳಿದಿರುವಂತೆ ಉಚಿತ ಇಂಟರ್ನೆಟ್‌ ಕೊಡುವುದೇನೋ ನಿಜ. ಆದರೆ ಅದರ ಸಾಧಕ

ದುರ್ಗಾಸ್ತಮಾನ

​ ಕನ್ನಡದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲೊಂದಾದ "ದುರ್ಗಾಸ್ತಮಾನ" ಓದಿ ಮನಸ್ಸು ಭಾರವಾಯ್ತು. ಹಾಗೆಯೇ ಇದರಲ್ಲಿ ದುರ್ಗದ ಪ್ರಧಾನಿ 'ಕಳ್ಳಿ ನರಸಪ್ಪಯ್ಯ' ದುರ್ಗಕ್ಕೆ ದ್ರೋಹ ಮಾಡಿದರೇ ಎಂಬ ಸ್ಪಷ್ಟತೆಯನ್ನು ಲೇಖಕ ತರಸು ಅವರು ನೀಡಿಲ್ಲ. (ನರಸಪ್ಪಯ್ಯ ದ್ರೋಹ ಮಾಡಿದ್ದರ ಬಗ್ಗೆ ಆಧಾರ ದೊರೆತಿಲ್ಲ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ). ಆದರೆ ಒಂದು ಗೊಂದಲವನ್ನು ಉಳಿಸಿ ಹೋಗಿದ್ದಾರೆ. ಅದೇನೆಂದರೆ ದೇಶಾಂತರ ಸಂಚಾರ ಹೋಗಿ ಮರಳುವಾಗ ಹೈದರಾಲಿಗೆ ಸೆರೆ ಸಿಗುವ ನರಸಪ್ಪಯ್ಯ ದಿವಾನ್‌ ಪೂರ್ಣಯ್ಯನ ಎದುರಲ್ಲೇ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. (ಪುಟ ೫೭೨), ಆದರೆ ತದನಂತರದ ಯುದ್ದದ ಸಮಯದಲ್ಲಿ ಮದಕರಿ ನಾಯಕನಿಗೆ ನರಸಪ್ಪಯ್ಯನವರ ಕೈ ಬರಹದ ಪತ್ರವೊಂದು ತಲುಪುತ್ತದೆ. (ಪುಟ ೫೮೦). ತಮ್ಮ ಮನೆಯನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಡಬೇಕು ಎಂದು. ಆ ಮನೆಯಲ್ಲಿ ತಾವು ಪ್ರಧಾನಿಯಾಗಿದ್ದಾಗ ಹುದುಗಿಸಿಟ್ಟಿದ್ದ ದುರ್ಗಕ್ಕೆ ಸಂಬಂಧಿಸಿದ ಪ್ರಮುಖವಾದ ರಹಸ್ಯ ದಾಖಲೆಗಳು ಇರುತ್ತವೆ. ಅವು ನಂತರ ಅವರ ಮಗನ ಮೂಲಕ ಹೈದರಾಲಿಗೆ ದೊರೆಯುತ್ತವೆ. ಆ ಮೂಲಕ ದುರ್ಗದ ರಹಸ್ಯಗಳು ಹೈದರಾಲಿಗೆ ಸಿಕ್ಕು ಮದಕರಿ ನಾಯಕನನ್ನು ಸೋಲಿಸಲು ಸುಲಭವಾಗುತ್ತದೆ. ಕೊನೆ ಕೊನೆಯಲ್ಲಿ ಮದಕರಿಯು ಆಗಾಗ ಹೇಳುವಂತೆ "ಪ್ರಧಾನಿ ಕಳ್ಳಿ ನರಸಪ್ಪಯ್ಯನವರೂ ದುರ್ಗಕ್ಕೆ ದ್ರೋಹ ಬಗೆದರು" ಎಂಬ ಮಾತು ಸತ್ಯವೇ ಅನ್ನಿಸುತ್ತದೆ.

ನೂರರ ಗಡಿ ದಾಟಿದ "ನಿಮ್ಮೆಲ್ಲರ ಮಾನಸ"

​ಒಂದು ಪತ್ರಿಕೆಯನ್ನು ನಡೆಸುವುದು ಎಷ್ಟು ಕಷ್ಟ ಅನ್ನೋದು ನನ್ನನ್ನೂ ಸೇರಿದಂತೆ ಕೈ ಸುಟ್ಟುಕೊಂಡ ಎಲ್ಲರಿಗೂ ಗೊತ್ತು. ಆದರೂ ಗೆಳೆಯ ಗಣೇಶ್‌ ಕೋಡೂರು ಛಲ ಬಿಡದ ತ್ರಿವಿಕ್ರಮನಂತೆ "ನಿಮ್ಮೆಲ್ಲರ ಮಾನಸ" ತಿಂಗಳ ಪತ್ರಿಕೆಯನ್ನು ನೂರು ಸಂಚಿಕೆಯ ಗಡಿ ದಾಟಿಸಿದ್ದು ಮೆಚ್ಚುವ ಕೆಲಸ. ಈ ಶುಭ ಸಂದರ್ಭದಲ್ಲಿ ಗಣೇಶ್‌ ಇಂದು ಒಂದು ಸಣ್ಣ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದರು. ಅವರ ಪತ್ರಿಕೆಯ ಓದುಗ ಮಿತ್ರರು ದೂರದೂರುಗಳಿಂದೆಲ್ಲಾ ಬಂದು ಸೇರಿದ್ದು ಎಲ್ಲರಿಗೂ ಕುಶಿ ನೀಡಿತು. ಹಾಗೆಯೇ ಇಂದು ಗಣೇಶ್‌ ತುಂಬಾ ಭಾವುಕರಾಗಿದ್ದರು. ಅದಕ್ಕೆ ಕಾರಣ ತಾನಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿಗಿಂತಲೂ ಹೆಚ್ಚಾಗಿ ಇಷ್ಟು ಸಾಧಿಸಲು ಎಷ್ಟು ಕಷ್ಟ ಪಡಬೇಕಾಯ್ತು ಅನ್ನೋದು ಅವರ ಮಾತುಗಳಿಂದಲೇ ತಿಳಿಯುತ್ತಿತ್ತು. ಅವರ ಮಾತು ಕೇಳುತ್ತಾ ನನ್ನ ಕಣ್ಣು ಸಹ ತೇವಗೊಂಡದ್ದು ಸುಳ್ಳಲ್ಲ. ಕಾರಣ ಗಣೇಶ್‌ ಕೋಡೂರು ಹೆಸರು ನಾನು ಮೊದಲಿಗೆ ನೋಡಿದ್ದು ತರಂಗದಲ್ಲಿ ಅವರ ಒಂದು ಕಥೆಯನ್ನು ನೋಡಿದಾಗ. ಮುಖತಃ ಭೇಟಿಯಾಗಿದ್ದು "ಪ್ರೇಮ ಸಾಮ್ರಾಜ್ಯ" ಎಂಬ ಪತ್ರಿಕೆಯ ಕಚೇರಿಯಲ್ಲಿ. ಹೊಟ್ಟೆ ಪಾಡಿಗಾಗಿ ನಾನು ಆ ಪತ್ರಿಕೆಗೂ ಲೇಖನ ಬರೆದು ಕೊಡಲು ಹೋದಾಗ ಅಲ್ಲಿ ಅದೇ ಕಾರಣಕ್ಕೆ ಬರೆಯುತ್ತಿದ್ದ ಗಣೇಶ್‌ ಇದ್ದರು. ಅದರ ಹಿಂದಿನ ಸಂಚಿಕೆಗೆ ನಾನು ಕೊಟ್ಟಿದ್ದ "ಸವಿ ನೆನಪುಗಳು ಬೇಕು" ಕತೆಯನ್ನು ಓದಿದ್ದ ಗಣೇಶ್‌ "ಅಷ್ಟೊಳ್ಳೆ ಕತೆಯನ್ನು ಯಾಕೆ ಈ ಪತ್

ಸನಾತನಿಗಳೂ ಮತ್ತವರ ಸೀರೆಯೂ...

​ ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ 'ವಸ್ತ್ರ ಸಂಹಿತೆ' ಎಂಬ ನಾಲಾಯಕ್‌ ನೀತಿ.  ಕೆಲವೇ ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಗಳು (ಇವರು ಅಂದಿನ ಪ್ರಭಲ ಜನಾಂಗ) ಒಂದು ನೀತಿ ರೂಪಿಸಿದ್ದರಂತೆ. ಅದೇನೆಂದರೆ "ವಿದೇಶಿಯರ ಮೂಲಕ ಭಾರತಕ್ಕೆ ಬಂದ ಕುಪ್ಪಸವನ್ನು ನಂಬೂದರಿ ಹೆಂಗಸರುಗಳಲ್ಲದೇ ಬೇರೆ ಜಾತಿಯ ಹೆಂಗಸರು ಧರಿಸಬಾರದು" ಎಂದು! ಇದರರ್ಥ ತಮ್ಮ ಮನೆ ಹೆಣ್ಣು ಮಕ್ಕಳು ಬೀದಿಯಲ್ಲಿ ಎದೆ ಮುಚ್ಚಿಕೊಂಡು ಮರ್ಯಾದೆಯುತವಾಗಿ ಓಡಾಡಲಿ, ಬೇರೆ ಜಾತಿಯ ಹೆಣ್ಣು ಮಕ್ಕಳು ಬೀದಿಯಲ್ಲಿ ಎಲ್ಲರಿಗೂ ಎದೆ ತೋರಿಸಿಕೊಂಡು ಓಡಾಡಲಿ ಎಂದಲ್ಲವೇ ? ಇನ್ನೂ ಹೇಳಬೇಕೆಂದರೆ ಇತರೆ ಹೆಣ್ಣುಮಕ್ಕಳ ಎದೆ ಸೌಂದರ್ಯವನ್ನು ತಾವು ಸವಿಯೋಣ, ನಮ್ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಡೋಣ ಎಂಬ ಮುಲ್ಲಾಗಳ ವಾದಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ. ಬ್ರಿಟೀಷರು ಬರುವ ಮುನ್ನ ಹೆಂಗಸರ ಮೇಲುಡುಗೆಗಳೇ ಇರಲಿಲ್ಲ ಅನ್ನೋದು ಕೂಡಾ ಒಪ್ಪಿಕೊಳ್ಳಲಾಗದ ಧರ್ಮಾಂಧತೆಯಲ್ಲಿ ಈ ಸನಾತನಿಗಳಿದ್ದಾರೆ. ಇತ್ತೀಚಿನ ಬೆಳವಣಿಗೆ ಎಂದರೆ ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುತ್ತಿರುವ "ವಸ್ತ್ರ ಸಂಹಿತೆ". ನೆನಪಿರಲಿ,

ಭಾಷೆಯ ರಕ್ಷಣೆಗೆ ತಮಿಳುನಾಡಿನ ದಿಟ್ಟ ಹೆಜ್ಜೆ!

​ ಕನ್ನಡವೂ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳೂ ಇಂದು ಇಂಗ್ಲೀಷಿನ ಜೊತೆಗೆ ಹಿಂದಿಯ ರುದ್ರ ತಾಂಡವದಿಂದಾಗಿ ನಲುಗುತ್ತಿವೆ. ಇಂಗ್ಲೀಷ್ ಮಕ್ಕಳ ಬವಿಷ್ಯದ ದೃಷ್ಟಿಯ ಕಾರಣಕ್ಕೆ ಅಗತ್ಯವಾಗಿದ್ದರೆ ಹಿಂದಿಯನ್ನು ಕೇಂದ್ರ ಸರ್ಕಾರ ಸದ್ದಿಲ್ಲದೇ ರಾಷ್ಟ್ರಭಾಷೆ ಎಂಬ ಸುಳ್ಳು ಹೇಳಿ ಹಿಂದಿಯೇತರರ ಮೇಲೆ ಹೇರುತ್ತಿದೆ. ಇವೆರಡರ ನಡುವೆ ಸಂಸ್ಕೃತವೂ ಸ್ಥಳೀಯ ಭಾಷೆಗಳ ಮೇಲೆ ಧರ್ಮದ ಕಾರಣಕ್ಕೆ ಸವಾರಿ ಮಾಡ ಹೊರಟಿದೆ. ವರ್ಷ ವರ್ಷವೂ ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡಲು ಬಿಡುಗಡೆ ಮಡುತ್ತಿರುವ ಕೋಟ್ಯಾಂತರ ರೂಪಾಯಿಯನ್ನು ಗಮನಿಸಿದರೆ ಇದು ಅವುಗಳ ಅಪಾಯವನ್ನು ನಾವು ಗ್ರಹಿಸಬಹುದು. ಕಳೆದ ವರ್ಷ ಬಿಜೆಪಿ ಸರ್ಕಾರವು ದೇಸದಲ್ಲಿ ಸಂಸ್ಕೃತವನ್ನು ಹರಡಲು ನಲವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ ದೇಶದ ಮತ್ತೊಂದು ಶಾಸ್ತ್ರೀಯ ಭಾಷೆ ಕನ್ನಡಕ್ಕೆ ನೀಡಿರುವುದು ಕೇವಲ ನಾಲ್ಕು ಕೋಟಿ ರೂಪಾಯಿ ಮಾತ್ರ. ಹಾಗೆಯೇ ದೇಶದ ಮೂರನೇ ದೊಡ್ಡ ಭಾಷೆಯಾದ ತಮಿಳಿಗೆ ನೀಡಿದ್ದು ಎಂಟು ಕೋಟಿ ಮಾತ್ರ. ಅಂದರೆ ಇದರರ್ಥ ಕೇಂದ್ರದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಅವುಗಳಿಗೆ ರಾಜ್ಯಭಾಷೆಗಳು ಅಂದರೆ ಯಾಕಾದರೂ ಇವೆಯೋ ಎಂಬ ಅಸಡ್ಡೆ! ಅದೇ ಹಿಂದಿ ಮತ್ತು ನಿವೃತ್ತಿ ಹೊಂದಿರುವ ಸಂಸ್ಕೃತವೆಂದರೆ ಎತ್ತಿ ಮೆರೆಸುವಂತಹ ಆಧರಣೆ. ಹೀಗೆ ಒಂದು ಸಮಯದಲ್ಲಿ ದೇಶದ ಉಳಿದೆಲ್ಲಾ ಭಾಷೆಗಳನ್ನು ತುಳಿದು ಹಿಂದಿಯನ್ನು ಮಾತ್ರ ಬೆಳೆಸಲು ಕೇಂದ್ರವು ಹವಣಿಸಿದ ಸಮಯದಲ್

ಕನ್ನಡಿಗರು ಕನ್ನಡವನ್ನು ಕೇಳಿ... ದೊರೆಯುತ್ತದೆ.

ಮೊನ್ನೆ ಸಾಗರದಿಂದ ನಾನೂ ಮತ್ತಿಬ್ಬರು ನಮ್ಮ ಸ್ನೇಹಿತರೂ ಶಿವಮೊಗ್ಗಕ್ಕೆ ಖಾಸಗಿ ಬಸ್‌ ಒಂದರಲ್ಲಿ ಹೊರಟೆವು. ಸಾಗರದ ಜೋಗ ನಿಲ್ದಾಣದಿಂದ ಹೊರಟಾಗ ಬಸ್‌ನಲ್ಲಿ ಹಿಂದಿ ಹಾಡು ಹಾಕಿರುವುದು ಕಂಡು ಬಂತು. ಸ್ವಲ್ಪ ದೂರದ ಬಿಹೆಚ್‌ ರಸ್ತೆ ನಿಲ್ದಾಣದಲ್ಲಿ ಬಸ್‌ ನಿಂತಾಗ ಮೂರೂ ಜನ ಕೆಳಗಿಳಿದೆವು. ನಾವು ಇಳಿದುದು ನೋಡಿ ಮತ್ತೊಬ್ಬ ತಮಿಳನೂ ಇಳಿದುಕೊಂಡ. ಕಂಡಕ್ಷರ್‌ ಓಡೋಡಿ ಬಂದು ಹೆದರಿಸುವವನಂತೆ "ಯಾಕ್ರೀ ಇಳೀತೀರಾ, ಹತ್ರಿ ಹೊರಡ್ತೀವಿ ಈಗ' ಎಂದು ಗದರಿದ.  ನಾನೂ ಕೂಡಾ 'ಎಷ್ಟೊತ್ತಿಗೆ ಹೊರಡ್ತೀಯಾ?" ಎಂದು ಅಷ್ಟೇ ಜೋರಾಗಿ ಕೇಳಿದೆ. 'ಈಗ ಹೊರಡ್ತೀವಿ ಹತ್ರೀ ಬಸ್‌ನ" ಅಂದ. "ನಿನ್ನ ಹಿಂದಿ ಹಾಡು ತೆಗೆದು ಕನ್ನಡ ಹಾಕು, ಇಲ್ಲಾ ಆಫ್‌ ಮಾಡು ಹತ್ತುತೀವಿ" ಅಂದೆ. ಅವನಿಗೆ ಶಾಕ್‌ ಆದಂತಾಯ್ತು. ಕನ್ನಡ ಹಾಡಿಗಾಗಿ ಈ ರೀತಿ ಬಸ್‌ ಬಿಟ್ಟು ಇಳಿಯುವವರೂ ಇದ್ದಾರಾ ಅಂದುಕೊಂಡಿರಬೇಕು. ಕೂಡಲೇ ಮೆತ್ತಗಾದ ಅವನು 'ಸರಿ ಅದಕ್ಕೇನು, ಹಾಕಿಸುತ್ತೀನಿ ಹತ್ತಿ" ಎಂದ ನಂತರ ಬಸ್‌ ಹತ್ತಿದೆವು. ಆತ ಚಾಲಕನಿಗೆ ಹೇಳಿ ಹಿಂದಿ ಹಾಡುಗಳನ್ನ ನಿಲ್ಲಿಸಿದ. ನಂತರ ಟಿಕೇಟ್‌ ಪಡೆದುಕೊಂಡ. ಬಸ್‌ ಕೂಡಾ ಹೊರಟಿತು. ಈ ನಡುವೆ ಕಂಡಕ್ಷರ್‌ ಕೂಡಾ ಬದಲಾದ. ಸ್ವಲ್ಪ ದೂರ ಹೋಗುವುದರೊಳಗೆ ಚಾಲಕ ಮತ್ತೆ ಹಿಂದಿ ಹಾಡು ಹಾಕಿದ. ನನಗೆ ರೇಗಿತು, ಇದೆ ಇರು ಇವರಿಗೆ ಹಬ್ಬ ಎಂದುಕೊಂಡು ನಿರ್ವಾಹಕ ನಮ್ಮ ಬಳಿ ಬರುವುದನ್ನೇ ಕಾದು 'ಹಿಂದ

ಕಪ್ಪುರಂಧ್ರದ ಹಿಡಿತದಲ್ಲಿ ಹಾಲಿನ ಸಮುದ್ರ !

​ ನಮ್ಮ ಗೆಲಾಕ್ಸಿಯ (ಹಾಲಿನ ಸಮುದ್ರ) ನಡುವಲ್ಲಿಯೂ ಇಂತಹ ಕಪ್ಪುರಂದ್ರವಿದೆಯಂತೆ. ಅದರ ಸೆಳೆತಕ್ಕೆ ಸೂರ್ಯನೂ ಸೇರಿದಂತೆ ಈ ಗೆಲಾಕ್ಸಿಯ ಎಲ್ಲಾ ನಕ್ಷತ್ರಗಳೂ ಸಿಲುಕಿ ನಿಧಾನವಾಗಿ ಅದರತ್ತ ಚಲಿಸುತ್ತಿವೆ. ಚಿತ್ರದಲ್ಲಿ ನೋಡಿದರೆ ನಮ್ಮ ಗೆಲಾಕ್ಸಿಯ ಎಲ್ಲಾ ನಕ್ಷತ್ರಗಳೂ ಕೇಂದ್ರದತ್ತ ಸೇಳೆಯಲ್ಪಟ್ಟಿರುವುದು ಕಾಣಿಸುತ್ತದೆ. ಆದರೆ ಆ ನಿಧಾನವೆಂಬುದು ನಮ್ಮ ಊಹೆಗೂ ನಿಲುಕದ ವೇಗವೇ ಆಗಿದೆ. ಈಗಾಗಲೇ ಸೂರ್ಯನು ಅರ್ಧ ಗೆಲಾಕ್ಸಿ ದೂರವನ್ನು ಕ್ರಮಿಸಿಯಾಗಿದೆ. ಅಂದರೆ ಮುಂದೊಂದು ದಿನ ಮನುಷ್ಯರು ಕಪ್ಪು ರಂದ್ರದ ಒಳಗೆ ಹೋಗಿ ಬೀಳಬಾರದು ಅಂದರೆ ಸೂರ್ಯ ಅದರತ್ತ ಹೊರಟಿರುವ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಪ್ಪು ರಂದ್ರದ ವಿರುದ್ದ ದಿಕ್ಕಿಗೆ ಹೋಗಬೇಕು. ಆದರೆ ಅಂತಹ ಅಘಾಧ ವೇಗವನ್ನು ಸಾಧಿಸುವುದು ಕಷ್ಟ. ಹಾಗಾಗಿ ಮುಂದೊಂದು ದಿನ ಭೂಮಿಯೂ ಸೇರಿದಂತೆ ಎಲ್ಲಾ ಗ್ರಹ ನಕ್ಞತ್ರಗಳೂ ಆ ಕಪ್ಪು ರಂದ್ರದಲ್ಲಿ ಬಿದ್ದು ಸಾಯುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.  ಒಂದೇ ಸಮಾಧಾನವೆಂದರೆ ಅದು ನಮ್ಮಿಂದ ಸಾವಿರಾರು ಬೆಳಕಿನ ವರ್ಷದಷ್ಟು ದೂರವಿರುವುದರಿಂದ ಸೂರ್ಯ ಅದರ ಬಳಿ ತಲುಪಲು ಇನ್ನೂ ಎಷ್ಟೋ ಲಕ್ಷ ವರ್ಷಗಳೇ ಬೇಕಾಗಬಹುದು. ಮೊದಲಿಗೆ ಇದೇ ಗೆಲಾಕ್ಸಿಯ ಕೊನೆಯಲ್ಲಿರುವ ನಕ್ಷತ್ರಗಳ ಗ್ರಹಗಳಲ್ಲಿ ಸೂಕ್ತವಾದುದನ್ನು ಹುಡುಕಿ ಅಲ್ಲಿಗೆ ಹೋಗಬೇಕು. (ಅದು ಸಾಧ್ಯವಾಗಲು ಎಷ್ಟು ಸಾವಿರ ವರ್ಷ ಬೇಕೋ ಗೊತ್ತಿಲ್ಲ). ಆ ನಂತರ ಬೇರೆ ಗೆಲಾಕ್ಸಿಗೆ ಹಾರಲು ಪ್ರಯತ್ನಿ

ಮೊದಲ ರಾತ್ರಿ

[ ಸಂಪ್ರದಾಯಸ್ಥರು ಓದಬೇಡಿ ] ​ ಹೊರಗೆ ಹರಡಿದ ಬೆಳುದಿಂಗಳ ಕಾಂತಿ ಒಳಗೆ ನುಡಿದಿವೆ ಮೈ ವೀಣೆ ತಂತಿ ನರನಾಡಿಗಳಲಿ ನುಸುಳಿ ಪಸರಿಸಿದ ಕಂಪನ ನವಿರು ಭಾವನೆ ಕೆರಳಿಸಿ ಮೈ ರೋಮಾಂಚನ! ಲಜ್ಜೆ ಲಾಸ್ಯ ಕಳೆದು ಸವಿದ ಕವಿದ ಸನಿಹ ಲಕ್ಷ ಜೀವಕೋಶಗಳಲಿ ಜಿಗಿದ ಜೀವಮೋಹ ಸಿಪ್ಪೆ ಸುಲಿದ ಬಾಳೆಹಣ್ಣಿನಂತೆ ಬೆತ್ತಲೆ ಸುಗ್ಗಿ ಸಮಯದಲ್ಲಿ ನುಗ್ಗಿ ಬಂತು ಕತ್ತಲೆ! ಹಬ್ಬಿ ತಬ್ಬಿ ಬಿಗಿದಂತೆ ಮರ ಬಳ್ಳಿ ಜಾಲ ತುಟಿಯ ಜೇನು ಸವಿಯುವ ಪುಣ್ಯ ಕಾಲ ಮುಟ್ಟಿ ತಟ್ಟಿ ಗಟ್ಟಿ ಬಿಗಿದು ಮೊಲೆ ಮರ್ದನ ದೂರ ಘಟ್ಟದಾಚೆ ಹೆಡೆಯೆತ್ತಿದ ಮೋಹ ಮದನ ನಿಗಿತು ಜಿಗಿದು ಅಂಬರಕ್ಕೆ ನೆಗೆದ ಕಬ್ಬ ಜಲ್ಲೆ ಮಣಿಸಿ ತಣಿಸಿ ನಲಿಸಿ ಅಮೃತವನ್ನುಣಿಸಿದ ನಲ್ಲೆ ಅಂಕೆ ಮೀರಿ ಜಿಂಕೆಯಂತೆ ನೆಗೆದ ಕಡೆಗೋಲ ಹಿಡಿದು ತಡೆದು ಮೊಸರ ಗಡಿಗೆಯಲ್ಲಿಟ್ಟು ಕಡೆದು ಉಕ್ಕಿ ಪಡೆದಂತೆ ಜೀವಜಾಲದ ಬೆಣ್ಣೆ! ತಾಡಿಸಿ ಪೀಡಿಸಿ ಕಾಡಿಸಿ ನೋಯಿಸಿ ನುಗ್ಗಿಸಿ ನರ್ತಿಸಿ ಕಾಮನೆಗಳ ತಾಂಡವವನಾಡಿದವಗೆ ದಂಡಿಸಿ ದಹಿಸಿ ಬಯಸಿ ಪ್ರೋತ್ಸಾಹಿಸಿ ಬಯಕೆಗಳ ಮಂಡಿಸಿ ಮುದ ನೀಡಿದಳೆನ್ನರಸಿ.

ನೆಟ್ಟಕಲ್ಲಪ್ಪ ವೃತ್ತದ ಬಳಿ ಅಣ್ಣೋರನ್ನು ನೋಡಿದ್ದು

​ ಅದು ನಾನು ಬೆಂಗಳೂರಿಗೆ ಬಂದ ಹೊಸತು. ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದ ಬಳಿಯಿದ್ದ 'ನಾಸಾ ಪ್ರಕಾಶನ'ದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತು ಏನೋ ಕೆಲಸದ ಮೇಲೆ ನನ್ನನ್ನು ಬೇರೆ ಕಚೇರಿಗೆ ಕಳಿಸುವ ಸಲುವಾಗಿ ಮಾಲೀಕರು ಬೇಗನೇ ಬರಲು ತಿಳಿಸಿದ್ದರು. ಕುಂಬಳಗೋಡು ಪೆಪ್ಸಿ ಕಂಪನಿ ಬಳಿಯಿಂದ ಏಳು ಗಂಟೆಗೆಲ್ಲಾ ಹೊರಟು ಬೇಗನೆ ಬಂದು ಬಿಟ್ಟೆ. ನೆಟ್ಟಕಲ್ಲಪ್ಪ ವೃತ್ತದ ಬಳಿ ಬಸ್‌ ಬಂದಾಗ ಅಲ್ಲಿನ ಗಣಪತಿ ದೇವಸ್ಥಾನದ ಬಳಿ ಚಿತ್ರೀಕರಣವೊಂದು ನಡೆಯುತ್ತಿರುವುದು ಕಾಣಿಸಿತು. ಅಷ್ಟೇನೂ ಸಮಯವಾಗದ್ದರಿಂದ ಬಸ್‌ ಇಳಿದು ಅಲ್ಲಿ ಹೋದೆ. ಅದು ಶಿವರಾಜ್‌ಕುಮಾರ್‌ ನಟನೆಯ ಒಂದು ಹೊಸ ಚಿತ್ರದ ಮುಹೂರ್ತದ ಕಾರ್ಯಕ್ರಮ ಅಂತ ತಿಳಿಯಿತು. ಕೆಳಗೆಲ್ಲಾ ಕಾರ್ಪೆಟ್ ಹಾಕಿ, ಹೂವುಗಳಿಂದ ಇಡೀ ದೇವಾಲಯವನ್ನೂ ಅಲಂಕರಿಸಿದ್ದರು. ಆಗಿನ್ನೂ ಬೆಳಗಿನ ಏಳೂವರೆ-ಎಂಟರ ಸಮಯವಾದ್ದರಿಂದ ಅಷ್ಟೇನೂ ಜನರಿರಲಿಲ್ಲ. ನಾನು ಒಂದು ಬದಿಯಲ್ಲಿ ನಿಂತು ಶಿವರಾಜ್‌ ಕುಮಾರ್‌ ಅವರನ್ನು ನೋಡತೊಡಗಿದೆ. ಅವರಿಗೆ ಮಹಾರಾಜರ ವೇಶ ತೊಡಿಸಿದ್ದರು.  ಆಗ ಒಬ್ಬೊಬ್ಬರೇ ಚಿತ್ರರಂಗದ ಗಣ್ಯರು ಬರತೊಡಗಿದರು. ಯಾರೋ ಒಬ್ಬ ಗಣ್ಯರು ಬಂದಾಗ ಅದುವರೆಗೂ ದೇವಾಲಯದ ಒಳಗಿದ್ದ ಒಬ್ಬರು ಕೈ ಮುಗಿಯುತ್ತಾ ಹೊರ ಬಂದರು. ಅವರನ್ನು ನೋಡಿ ನನಗೆ ರೋಮಾಂಚನವಾಗಿ ಹೋಯ್ತು. ಕಾರಣ ಹಾಗೆ ಬಂದ ವ್ಯಕ್ತಿ ರಾಜ್‌ಕುಮಾರ್‌ ಆಗಿದ್ದರು. ಬಾಲ್ಯದಿಂದಲೂ ಅವರ ಅಭಿಮಾನಿಯಾಗಿ ಬೆಳೆದ ನನಗೆ ಈ ಭೇಟಿ ಅನಿರೀಕ್ಷಿತವೇ ಆಗಿತ

ಸಾಲವನು ಕೊಂಬಾಗ ಕೆನೆಮೊಸರುಂಡಂತೆ...

​ ಫೇಸ್‌ಬುಕ್ಕಿನಲ್ಲಿ ಯಾರೋ ಒಬ್ಬಾತ ಕಂಡವರ ಬಳಿಯೆಲ್ಲಾ ಸಾಲ ಪಡೆದು ಅದನ್ನು ಮರಳಿಸಲಾಗದೇ ಒದ್ದಾಡುತ್ತಿರುವ ಬಗ್ಗೆ ವಿಷಯಗಳು ಹರಿದಾಡುತ್ತಿವೆ. ಸಾಲದ ಬಗ್ಗೆ ನನ್ನ ಅನುಭವಗಳು ಹೀಗಿವೆ. ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಸಂಸ್ಥೆಯಲ್ಲಿ ಇದ್ದು ಕೆಲಸ ಮಾಡಿ ಒಂದಿಷ್ಟು ಹಣ ಸೇರಿಸಿಕೊಂಡು ಒಂದಿಷ್ಟು ಗೆಳೆಯರಿಂದ ಸಾಲ ಪಡೆದು ಪೋಟೋ ಸ್ಟುಡಿಯೋ ಒಂದನ್ನು ಅಲ್ಲೇ ಹಾಕಿದ್ದೆ. ಆದರೆ ಅದು ನಷ್ಟ ಹೊಂದಿತು. ಆಮೇಲೆ ಸಾಲ ತೀರಿಸಲಾಗದೇ ಎಷ್ಟು ಒದ್ದಾಡಿದೆ. ಯಾವುದೇ ಬೆಂಬಲವೂ ಇಲ್ಲದೇ ಚೆನ್ನೈನ ಬೀದಿಗಳಲ್ಲಿ ಅಲೆದಾಡಿದ್ದು, ಮನೆ ಮಠ ಇಲ್ಲದೇ ಫುಟ್‌ಪಾತ್‌ ಮೇಲೆ ಹಾಗೂ ಮೆರಿನಾ ಬೀಚ್‌ನ ಮರಳಿನ ಮೇಲೆ ಮಲಗುತ್ತಿದ್ದುದು (ಒಬ್ಬ ಗೆಳೆಯ ಜೊತೆಗಿದ್ದ), ಹೊಟ್ಟೆಗಿಲ್ಲದೇ ಕೇವಲ ಬೋಂಡ/ಬಜ್ಜಿ ತಿಂದುಕೊಂಡು ( ಅವನ್ನು ನಾಲ್ಕನೇ ತರಗತಿ ಓದುತ್ತಿದ್ದ ಒಬ್ಬ ಚಿಕ್ಕ ಹುಡುಗ ಕೊಡಿಸುತ್ತಿದ್ದ ! ) ದಿನಗಟ್ಟಲೇ ಬದುಕಿದ್ದು ನೆನೆಸಿಕೊಂಡರೆ ಮೈ ಜುಂ ಅನ್ನುತ್ತದೆ. ಸಾಲ ಅನ್ನುವುದು ಮನುಷ್ಯನನ್ನು ಎಂತಹ ಸ್ಥಿತಿಗೆ ಬೇಕಾದರೂ ತಳ್ಳುತ್ತದೆ ಅನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ.  ಅಷ್ಟಾದ ನಂತರವೂ ಕಷ್ಟಪಟ್ಟು (ಈ ಸಮಯದಲ್ಲಿ ಒಂದೆರಡು ಅಡ್ಡದಾರಿಗಳು ಕಾಣಿಸಿದರೂ ಅತ್ತ ಹೋಗದೇ) ಎಲ್ಲಾ ಸಾಲ ತೀರಿಸಿ ಬೆಂಗಳೂರಿಗೆ ಬಂದೆ. ಆ ನಂತರ ಇಲ್ಲೂ ಕಷ್ಟ ಪಟ್ಟು ದುಡಿಯುತ್ತಿದ್ದೇನೆ. ತೀರಾ ಅನಿವಾರ್ಯದ ವಿಷಯ ಹೊರತಾಗಿ ಸಾಲ ಪಡೆಯುವುದನ್ನು ಬಿಟ್ಟಿದ್ದೇನೆ. ಅದೂ

ಗೂಗಲ್‌ನವರ ಕೈಬರಹದ ಅಪ್ಲಿಕೇಷನ್‌

ಕೈಬರಹದ ಅಪ್ಲಿಕೇಷನ್‌ ಅಂದರೆ ನಿಮ್ಮ ಕೈಬರಹವನ್ನು ಹಾಗೆಯೇ ಅದು ಫಾಂಟ್‌ ಆಗಿ ಪರಿವರ್ತಿಸುತ್ತದೆ ಎಂದಲ್ಲ. ಬದಲಿಗೆ ನೀವು ಏನು ಬರೆಯುತ್ತೀರೋ ಆ ಅಕ್ಷರಗಳನ್ನು ಫಾಂಟ್‌ ಆಗಿ ಪರಿವರ್ತಿಸುತ್ತದೆ. ಕನ್ನಡಿಗರು ಖುಶಿ ಪಡುವ ವಿಷಯವೇನೆಂದರೆ ಇದನ್ನು ಹಾಕಿಕೊಂಡು ಸುಲಭವಾಗಿ ನಾವು ಕನ್ನಡದಲ್ಲೇ ಸಂದೇಶಗಳನ್ನು ಬರೆಯಬಹುದು. (ಟೈಪ್‌ ಮಾಡುವುದಲ್ಲ, ಬರೆಯುವುದು). ​ ಈ ಅಪ್ಲಿಕೇಷನ್ ಸಧ್ಯಕ್ಕೆ ಆಂಡ್ರಾಯಿಡ್‌ ಮೊಬೈಲ್‌ಗಳಿಗೆ ಮಾತ್ರ ಲಭ್ಯವಿದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ಮೊಬೈಲ್ನ ಭಾಷೆ ಅಥವಾ ಇನ್‌ಪುಟ್‌ ಭಾಷೆಯನ್ನು ಕನ್ನಡ ಮಾಡಿಕೊಂಡಿದ್ದರೆ ಸಂದೇಶ ಬರೆಯಲು ಹೋದಾಗ ಭಾಷೆಗೆ ಸಂಬಂಧಿಸಿದ ಇನ್ನೊಂದು ಕಡತವನ್ನು ಇಳಿಸಿಕೊಳ್ಳುವಂತೆ ಕೋರುತ್ತದೆ. ಅದು ಕನ್ನಡಕ್ಕೆ ಸಂಬಂಧಿಸಿದ ಕಡತ. ಅದನ್ನು ಮೊಬೈಲ್‌ಗೆ ಇಳಿಸಿಕೊಂಡ ನಂತರ ಸಂದೇಶ ಬರೆಯಲು ಹೋದಾಗ (ಫೇಸ್‌ಬುಕ್‌/ವಾಟ್ಸ್‌ಆಪ್‌ ಇತ್ಯಾದಿ) ಒಂದು ಸ್ಲೇಟ್‌ ಮೂಡುತ್ತದೆ. ಅಲ್ಲಿ ಬೆರಳಿನಿಂದ ಕನ್ನಡ ಅಕ್ಷರಗಳನ್ನು ಬರೆಯುತ್ತಾ ಹೋದರೆ ನಾವು ಬರೆದುದನ್ನು ಗುರುತಿಸಿ ಮೇಲಗ್ಡೆಯ ಚದುರದಲ್ಲಿ ಸರಿಯಾದ ಪದಗಳನ್ನು ಅದು ಜೋಡಿಸುತ್ತಾ ಹೋಗುತ್ತದೆ. ನಮ್ಮ ಕೈಬರಹ ಚೆನ್ನಾಗಿಲ್ಲದಿದ್ದರೂ (ನನ್ನ ಕೈಬರಹ ಚೆನ್ನಾಗಿಲ್ಲ) ಅದು ಬಹುತೇಕ ಸರಿಯಾಗಿಯೇ ಅಕಷರಗಳನ್ನು ಗುರುತಿಸುತ್ತದೆ. ಅದೇ ರೀತಿ ಇಂಗ್ಲೀಷ್‌ ಅಕ್ಷರಗಳನ್ನೂ ಬರೆಯಬಹುದು. ಆದರೆ ತೊಂದರೆ ಏನೆಂದರೆ ಈ ರೀತಿ ಜಾಸ್ತಿಯಾಗಿ ಬರೆಯಲು ಸಾಧ್ಯವಾಗುವುದಿಲ್ಲ.

ಫೇಸ್‌ಬುಕ್‌ಗೆ ಬೈ ಹೇಳಿದ ನಿರ್ದೇಶಕರು!

​ ಅದೊಂದು ಚಲನಚಿತ್ರದ ಚಿತ್ರೀಕರಣದ ಸಮಯ. ನಾಯಕಿಯ ಹೆತ್ತವರ ಭಾವಚಿತ್ರದ ಒಂದು ಚಿಕ್ಕ ಶಾಟ್‌ ತೆಗೆಯಬೇಕಿತ್ತು. ಎಲ್ಲಾ ತಯಾರಾಗಿದ್ದನ್ನು ಗಮನಿಸಿದ ನಿರ್ದೇಶಕರು ಕ್ಯಾಮೆರಾಮೆನ್‌ಗೆ ಈ ರೀತಿಯಾಗಿ ಒಂದು ಶಾಟ್‌ ತೆಗೆದುಕೊಳ್ಳಿ ಅಂದಿದ್ದರೆ ಸಾಕಿತ್ತು. ಏಕೆಂದರೆ ಆ ಶಾಟ್‌ನಲ್ಲಿ ಆ ಭಾವಚಿತ್ರಗಳಲ್ಲದೇ ಯಾವ ನಟರೂ ಇರಲಿಲ್ಲ. ಆದರೆ ಆ ನಿರ್ದೇಶಕರು ಹಾಗೆ ಮಾಡದೇ 'ಲೈಟ್ಸ್... ಕ್ಯಾಮೆರಾ... ಆಕ್ಷನ್‌' ಎಂದು ಗೋಡೆಯಲ್ಲಿ ಹಾಕಿದ್ದ ಭಾವಚಿತ್ರಗಳಿಗೇ ಆಕ್ಷನ್‌ ಹೇಳಿಬಿಟ್ಟರು ! ನಗು ತಡೆಯಲಾಗದ ಅಲ್ಲಿದ್ದ ಮಂದಿ ಭಾವಚಿತ್ರದ ನಟನೆಯನ್ನು ಸೆರೆ ಹಿಡಿದುಕೊಂಡರು. (ಆ ಚಿತ್ರ ನಿರೀಕ್ಷಯಂತೆಯೇ ಮಲಗಿತು ಅನ್ನೋದು ಆಮೇಲಿನ ಕಥೆ) ಈ ನಿರ್ದೇಶಕರು ಇತ್ತೀಚಿಗೆ ಫೇಸ್‌ಬುಕ್‌ ಖಾತೆಯನ್ನು ತೆರೆದು ಅದರಲ್ಲಿ 'ಇಂತಾ ದಿನ ನನ್ನ ಮೂರು ಚಿತ್ರಗಳು ಒಟ್ಟಿಗೇ ಸೆಟ್ಟೇರಲಿವೆ' ಎಂಬ ಒಂದು ಸ್ಟೇಟಸ್‌ ಹಾಕಿದರು. ಅದೇನು ಗ್ರಾಚಾರವೋ ಏನೋ ಅವರ ಆ ಪ್ರಕಟಣೆಗೆ ಪ್ರತಿಕ್ರಿಯೆ ಹಾಗಿರಲಿ, ಒಬ್ಬರೂ ಸಹ ಲೈಕ್ ಕೂಡಾ ಮಾಡಲಿಲ್ಲ!  ಪಾಪ ನಿರ್ದೇಶಕರಿಗೆ ಬೇಜಾರಾಗಿ ಮರುದಿನವೇ 'ಕ್ಷಮಿಸಿ ಗೆಳೆಯರೇ ಬೈ' ಎಂದು ಫೇಸ್‌ಬುಕ್‌ನಿಂದ ರೈಟ್‌ ಹೇಳಿದರು !

ಬಂಡೆ ಸಾವು ಮರೆಯುವ ಮುನ್ನವೇ ಬಂದಿದೆ ಹೆಬ್ಬಂಡೆ ಸಾವಿನ ಸುದ್ದಿ !

ಹೌದು, ಕಳೆದ ವರ್ಷದ ಜನವರಿಯಲ್ಲಷ್ಟೇ ಕಲಬುರ್ಗಿಯ ಪ್ರಾಮಾಣಿಕ ಪೊಲಿಸ್‌ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಎಂಬುವರು ಅನುಮಾನಾಸ್ಪದವಾಗಿ ರೌಡಿಯೊಬ್ಬನ ಗುಂಡಿಗೆ ಬಲಿಯಾಗಿದ್ದರು. ಅದರ ತನಿಖೆ ಸರಿ ಸುಮಾರಾಗಿ ಹಳ್ಳ ಹಿಡಿದೇ ಹೋಯ್ತು. ಅಷ್ಟರಲ್ಲಾಗಲೇ ಇನ್ನೊಬ್ಬ ನಿಷ್ಟಾವಂತೆ ಅಧಿಕಾರಿಯಾಗಿದ್ದ ಡಿ.ಕೆ. ರವಿಯವರು ಕೂಡಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದು ರಾಜ್ಯಕ್ಕಾದ ದೊಡ್ಡ ನಷ್ಟವೆಂದೇ ಹೇಳಬೇಕು. ​ ಅಪ್ರತಿಮ ಪ್ರಾಮಾಣಿಕ ಅಧಿಕಾರಿಯಾಗಿದ್ದ ರವಿಯವರು ಜಿಲ್ಲಾಧಿಕಾರಿಯಾಗಿ ಕೋಲಾರಕ್ಕೆ ಸಲ್ಲಿಸಿದ ಸೇವೆ ಅಪಾರ. ಅಲ್ಲಿನ ಬಡ ಬಗ್ಗರ ನೋವಿಗೆ ಮಿಡಿದ ಅವರನ್ನು ಜನ ಎಂದೆಂದೂ ಮರೆಯಲಾರರು. ಅಲ್ಲಿನ ಮರಳು ಮಫಿಯಾವನ್ನು ಬುಡ ಸಮೇತ ಕಿತ್ತು ಹಾಕಿ ರೌಡಿಗಳ, ಕಾಳದಂಧೆ ಕೋರರ ಪಾಲಿಗೆ ಸಿಂಹ ಸ್ವಪ್ನವೇ ಆಗಿದ್ದರು. ಭೂ ಒತ್ತುವರಿದಾರರನ್ನು ಅಟ್ಟಾಡಿಸಿಕೊಂಡು ಸದೆ ಬಡಿದರು. ಇದರಿಂದ ಸಂಕಷ್ಟಕ್ಕೊಳಗಾದ ಹಲಾಲುಕೋರರು ಸಿದ್ದರಾಮಯ್ಯನವರ ಮನವೊಲಿಸಿ ರವಿಯವರನ್ನು ಕೋಲಾರದಿಂದ ಎತ್ತಂಗಡಿ ಮಾಡಿಸುವ ವ್ಯವಸ್ಥೆ ಮಾಡಿದರು. ಇದನ್ನು ತಿಳಿದ ಜಿಲ್ಲೆಯ ಜನತೆ ಜಿಲ್ಲಾಧಿಕಾರಿಯ ವರ್ಗಾವಣೆ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದರು. ಒಬ್ಬ ಜಿಲ್ಲಾಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸದಂತೆ ಜನರೇ ಒತ್ತಾಯಿಸಿ ಹೋರಾಟ ಮಾಡಿರುವುದು ಬಹುಶಃ ರವಿಯವರಿಗಾಗಿ ಮಾತ್ರ ಅನ್ನಿಸುತ್ತದೆ.  ಕೋಲಾರದಿಂದ ಬೆಂಗಳೂರಿಗೆ ಆದರೆ ಸಿದ್ದರಾಮಯ್ಯ ಜನರ ಬೇಡಿಕೆಗೆ ಬೆಲೆಯನ್ನೇ ಕೊಡಲಿಲ್

ಫೇಸ್‌ಬುಕ್‌ ಎಂಬ ಜನಾರಣ್ಯ

ತರಗೆಲೆಯಂತೆ ಉದುರುವ ಪ್ರಕಟಣೆಗಳು.. ಕೆಲವು ಹಸಿ, ಕೆಲವು ಬಿಸಿ ಒಮ್ಮೆ ಘಮಲು ಕೆಲವು ತೊದಲು ಯಾರದೋ ನೋವು ಯಾರದೋ ನಲಿವು ಅಲ್ಲಲ್ಲಿ ಜಾತಿ ಚರ್ಚೆ! ತಿಳುವಳಿಕೆಯದೇ ಕೊಂಚ ಕೊರತೆ! ಹರಿವ ಕವನಗಳ ಸಾಲು ಬರೆದು ತೇಗುವ ತೆವಲು ಶಿಥಿಲಗೊಂಡು ಉರುಳುವ ಸ್ನೇಹಗಳು ಕೆಲವು. ಶಿಲೆಯಂತೆ ಘನವಾಗಿ ನಿಂತ ಬಂಧಗಳು ಹಲವು. ವಿಜ್ಞಾನ ತಂದ ಕೀಲಿಮಣೆಯಲ್ಲಿ ಜ್ಯೋತಿಷ್ಯದ ಅಂಕಿ-ಸಂಕಿ ಇಂಟರ್ನೆಟ್ಟಿನಲೂ ತುಂಬಿಹುದು ಧರ್ಮದ ದುರ್ಗಂಧದಮಲು ! ಹರಟೆಯ ಬರಾಟೆಯಲಿ ಮರೆತ ಸಮಯದ ಕಂದೀಲು ಪ್ರೀತಿ ಪ್ರೇಮದ ನೆಪದಲಿ ಕಾಮ ದಾಹದ ಕೊಯಿಲು ಎಂದೋ ಮರೆತಿದ್ದವರ ಮರಳಿ ನೀ ಪಡೆವೆ.. ಎಂದೂ ತಿಳಿಯದಿದ್ದವರ ಜೊತೆಗೂ ನೀ ಬೆರೆವೆ.. ಫೇಸ್‌ಬುಕ್‌ನ ಓ ಪಯಣವಾಸಿ ನಿನ್ನನೇ ನೀನೆಲ್ಲಿ ಕಳೆದುಕೊಂಡಿರುವೆ ? - ಶ್ರೀಪತಿ ಗೋಗಡಿಗೆ

ಕಪ್ಪು ಶಕ್ತಿ ಮತ್ತು ಕಪ್ಪು ವಸ್ತು !

​ ಯಾವುದೇ ವಸ್ತು ಸೂರ್ಯನ ಹತ್ತಿರ ಅಥವಾ ಉರಿವ ನಕ್ಷತ್ರಗಳ ಹೋದಾಗ ಬಿಸಿಯಾಗುತ್ತದೆ. ಅವುಗಳಿಂದ ದೂರವಾದಾಗ ತಣ್ಣಗಾಗುತ್ತಾ ಹೋಗುತ್ತದೆ. ಹೀಗೆ ಶಾಖದಿಂದ ದೂರ ಹೋದಂತೆಯೇ ವಸ್ತುಗಳನ್ನು ತಣ್ಣಗಾಗಿಸುವ ವಸ್ತುವಾದರೂ ಏನು ? ವಿಜ್ಞಾನಿಗಳು ಇದಕ್ಕೆ ಇತ್ತೀಚಿಗೆ ಉತ್ತರ ಹುಡುಕಿದ್ದಾರೆ. ಅದು ಕಪ್ಪು ವಸ್ತು (ಡಾರ್ಕ್‌ ಮ್ಯಾಟರ್‌). ಇದು ನಮ್ಮ ಕಣ್ಣಿಗೆ ಕಾಣಿಸದಿರುವುದರಿಂದ ಹಾಗೂ ಇದುವರೆಗಿನ ಯಂತ್ರಗಳೂ ಸಹ ಇದನ್ನು ಸ್ಪಷ್ಟವಾಗಿ ಗುರುತಿಸಲು ಅಸಾಧ್ಯವಾಗಿರುವುದರಿಂದ ಇದನ್ನು 'ಡಾರ್ಕ್‌ ಮ್ಯಾಟರ್‌' ಎಂದು ಕರೆಯುತ್ತಿದ್ದಾರೆ. ಇದು ವಿಶ್ವದ ಒಟ್ಟು ವಸ್ತುವಿನಲ್ಲಿ ಶೇ ೨೬% ಇದೆಯಂತೆ. ನಮ್ಮ ಕಣ್ಣಿಗೆ ಗೋಚರವಾಗುವ ನಕ್ಷತ್ರ, ಗ್ರಹ ಇತ್ಯಾದಿಗಳ ಪ್ರಮಾಣ ೪% ಭಾಗದಷ್ಟು ಮಾತ್ರ . ಹಾಗಿದ್ದರೆ ಉಳಿದ ೭೦% ಭಾಗ ಏನಿದೆ ? ಅದು ಕಪ್ಪು ಶಕ್ತಿ ! ಈ ಡಾಕ್‌ ಮ್ಯಾಟರ್‌ ಅಲ್ಲದೇ ವಿಶ್ವವನ್ನು ನಿಯಂತ್ರಿಸುತ್ತಿರುವ ಮತ್ತೊಂದು ಅದೃಶ್ಯ ಶಕ್ತಿಯಿದೆ. ಇದರ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರೆಯದೇ ಇರುವುದರಿಂದ ಇದನ್ನು ಕಪ್ಪು ಶಕ್ತಿ (ಡಾರ್ಕ್‌ ಎನರ್ಜಿ) ಎಂದು ಕರೆಯುತ್ತಿದ್ದಾರೆ. ಇವೆರಡೂ ಸೇರಿಕೊಂಡು ಇಡೀ ವಿಶ್ವವನ್ನು ಬಂಧಿಸಿಟ್ಟಿವೆ. ಗೆಲಾಕ್ಸಿಗಳೂ ಸಹ ಕಪ್ಪುಶಕ್ತಿಯ ಕಲಸುಮೆಲೋಗರಗೊಂಡ ಬಲೆಯಂತಹ ಸ್ಥಿತಿಯೊಳಗೆ ಸಿಕ್ಕಿಕೊಂಡಿದೆ. ಈ ಶಕ್ತಿ ಗೆಲಾಕ್ಸಿಗಳನ್ನು ದೂರ ದೂರ ತಳ್ಳುತ್ತಾ ವಿಶ್ವವನ್‌ಉ ಹಿಗ್ಗಿಸುತ್ತಿದೆ ಎಂಬ ವಾದವೂ ಇದೆ. ಒಟ್ಟಿನಲ್ಲಿ ಖಗ

ತಾನೊಂದು ಬಗೆದರೆ....

​ ನಾನು ಇಪ್ಪತ್ತು ವರ್ಷದವನಿದ್ದಾಗ ಚೆನ್ನೈ ಸಮೀಪದ ವೆಳ್ಳವೇಡು ಎಂಬ ಸ್ಥಳದಲ್ಲಿ ಪೋಟೋ ಸ್ಟುಡಿಯೋ ಹಾಕಿದ್ದೆ. ಹೆದ್ದಾರಿ ಪಕ್ಕದಲ್ಲಿದ್ದರೂ ಆ ಊರಿಗೆ ಪೋಟೋ ಸಟುಡಿಯೋ ಅಂತ ಬಂದಿದ್ದು ಅದೇ ಮೊದಲು. (ಇದರ ಪೂರ್ಣ ಕತೆ ಬರೆದರೆ ಒಂದು ಹಾಸ್ಯ ಪ್ರಬಂಧವೇ ಆಗುತ್ತದೆ.)  ಒಂದು ದಿನ ವ್ಯಕ್ತಿ ಬಂದು ತಮ್ಮೂರಿನಲ್ಲಿ ಸಟುಡಿಯೋ ಹಾಕಿದ್ದಕ್ಕೆ ಸಂತೋಷದಿಂದ ಕೃತಜ್ಞತೆ ಹೇಳಿ 'ತುಂಬಾ ಅನುಕೂಲವಾಯಿತು. ಇಲ್ಲಾಂದರೆ ಯಾವುದಾದರೂ ಕಾರ್ಯಕ್ರಮ ನಡೆದರೆ ದೂರದಿಂದ ಕ್ಯಾಮೆರಾಮೆನ್‌ ಕರೆಸಬೇಕಿತ್ತು. ಚಿಕ್ಕ ಪುಟ್ಟ ಕಾರ್ಯಗಳಿಗೆ ದೂರ ಅಂತ ಅವರೂ ಬರುತ್ತಿರಲಿಲ್ಲ.' ಎಂದೆಲ್ಲಾ ಹೇಳಿ ಕೊನೆಗೆ 'ತನಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತು ಗಂಡು. ದೊಡ್ಡವಳು ಇನ್ನೇನು ವಯಸ್ಸಿಗೆ ಬರುವವಳಿದ್ದಾಳೆ, ಪೂ ಪೂಕ್ಕುಂ ವಿಳಾಗೆ (ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ತಮಿಳುನಾಡಲ್ಲಿ ಬಡವರಾದರೂ ಸಹ ಸ್ವಲ್ಪ ಅದ್ದೂರಿಯಾಗಿಯೇ ಕಾರ್ಯಕ್ರಮ ಮಾಡುತ್ತಾರೆ.) ಬಂದು ಒಳ್ಳೊಳ್ಳೆ ಫೋಟೋ ತೆಗೆದು ಕೊಡು. ನಂತರ ಮದುವೆಗೂ ನೀನೇ ಬರುವಂತೆ' ಎಂದು ಹೇಳಿ ಹೋದ. ನನ್ನ ಸ್ಟುಡಿಯೋ ಎದುರು ರಸ್ತೆ. ಮತ್ತು ರಸ್ತೆಯನ್ನು ದಾಟಿದರೆ ಪೊಲೀಸ್‌ ಠಾಣೆ ಇತ್ತು. ಸುಮಾರು ದಿನಗಳ ನಂತರ ಒಬ್ಬ ಪೇದೆ ಬಂದು 'ಆಕ್ಸಿಡೆಂಟ್‌ ಆಗಿದೆ ಬಾ' ಎಂದು ಕರೆದ. ಅದು ವಿಭಾಗ ಮಾಡಿರದ ಹೆದ್ದಾರಿಯಾದುದರಿಂದ ತಿಂಗಳಿಗೆ ಒಂದಾದರೂ ಪ್ರಾಣಹಾನಿಯ ದುರಂತಗಳು ನಡೆಯುತ್ತಿದ್ದವು. ಕ್ಯಾಮೆರಾ ಬ