ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೆಟ್ಟಕಲ್ಲಪ್ಪ ವೃತ್ತದ ಬಳಿ ಅಣ್ಣೋರನ್ನು ನೋಡಿದ್ದು

​ ಅದು ನಾನು ಬೆಂಗಳೂರಿಗೆ ಬಂದ ಹೊಸತು. ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದ ಬಳಿಯಿದ್ದ 'ನಾಸಾ ಪ್ರಕಾಶನ'ದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತು ಏನೋ ಕೆಲಸದ ಮೇಲೆ ನನ್ನನ್ನು ಬೇರೆ ಕಚೇರಿಗೆ ಕಳಿಸುವ ಸಲುವಾಗಿ ಮಾಲೀಕರು ಬೇಗನೇ ಬರಲು ತಿಳಿಸಿದ್ದರು. ಕುಂಬಳಗೋಡು ಪೆಪ್ಸಿ ಕಂಪನಿ ಬಳಿಯಿಂದ ಏಳು ಗಂಟೆಗೆಲ್ಲಾ ಹೊರಟು ಬೇಗನೆ ಬಂದು ಬಿಟ್ಟೆ. ನೆಟ್ಟಕಲ್ಲಪ್ಪ ವೃತ್ತದ ಬಳಿ ಬಸ್‌ ಬಂದಾಗ ಅಲ್ಲಿನ ಗಣಪತಿ ದೇವಸ್ಥಾನದ ಬಳಿ ಚಿತ್ರೀಕರಣವೊಂದು ನಡೆಯುತ್ತಿರುವುದು ಕಾಣಿಸಿತು. ಅಷ್ಟೇನೂ ಸಮಯವಾಗದ್ದರಿಂದ ಬಸ್‌ ಇಳಿದು ಅಲ್ಲಿ ಹೋದೆ. ಅದು ಶಿವರಾಜ್‌ಕುಮಾರ್‌ ನಟನೆಯ ಒಂದು ಹೊಸ ಚಿತ್ರದ ಮುಹೂರ್ತದ ಕಾರ್ಯಕ್ರಮ ಅಂತ ತಿಳಿಯಿತು. ಕೆಳಗೆಲ್ಲಾ ಕಾರ್ಪೆಟ್ ಹಾಕಿ, ಹೂವುಗಳಿಂದ ಇಡೀ ದೇವಾಲಯವನ್ನೂ ಅಲಂಕರಿಸಿದ್ದರು. ಆಗಿನ್ನೂ ಬೆಳಗಿನ ಏಳೂವರೆ-ಎಂಟರ ಸಮಯವಾದ್ದರಿಂದ ಅಷ್ಟೇನೂ ಜನರಿರಲಿಲ್ಲ. ನಾನು ಒಂದು ಬದಿಯಲ್ಲಿ ನಿಂತು ಶಿವರಾಜ್‌ ಕುಮಾರ್‌ ಅವರನ್ನು ನೋಡತೊಡಗಿದೆ. ಅವರಿಗೆ ಮಹಾರಾಜರ ವೇಶ ತೊಡಿಸಿದ್ದರು.  ಆಗ ಒಬ್ಬೊಬ್ಬರೇ ಚಿತ್ರರಂಗದ ಗಣ್ಯರು ಬರತೊಡಗಿದರು. ಯಾರೋ ಒಬ್ಬ ಗಣ್ಯರು ಬಂದಾಗ ಅದುವರೆಗೂ ದೇವಾಲಯದ ಒಳಗಿದ್ದ ಒಬ್ಬರು ಕೈ ಮುಗಿಯುತ್ತಾ ಹೊರ ಬಂದರು. ಅವರನ್ನು ನೋಡಿ ನನಗೆ ರೋಮಾಂಚನವಾಗಿ ಹೋಯ್ತು. ಕಾರಣ ಹಾಗೆ ಬಂದ ವ್ಯಕ್ತಿ ರಾಜ್‌ಕುಮಾರ್‌ ಆಗಿದ್ದರು. ಬಾಲ್ಯದಿಂದಲೂ ಅವರ ಅಭಿಮಾನಿಯಾಗಿ ಬೆಳೆದ ನನಗೆ ಈ ಭೇಟಿ ಅನಿರೀಕ್ಷಿತವೇ ಆಗಿತ

ಸಾಲವನು ಕೊಂಬಾಗ ಕೆನೆಮೊಸರುಂಡಂತೆ...

​ ಫೇಸ್‌ಬುಕ್ಕಿನಲ್ಲಿ ಯಾರೋ ಒಬ್ಬಾತ ಕಂಡವರ ಬಳಿಯೆಲ್ಲಾ ಸಾಲ ಪಡೆದು ಅದನ್ನು ಮರಳಿಸಲಾಗದೇ ಒದ್ದಾಡುತ್ತಿರುವ ಬಗ್ಗೆ ವಿಷಯಗಳು ಹರಿದಾಡುತ್ತಿವೆ. ಸಾಲದ ಬಗ್ಗೆ ನನ್ನ ಅನುಭವಗಳು ಹೀಗಿವೆ. ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಸಂಸ್ಥೆಯಲ್ಲಿ ಇದ್ದು ಕೆಲಸ ಮಾಡಿ ಒಂದಿಷ್ಟು ಹಣ ಸೇರಿಸಿಕೊಂಡು ಒಂದಿಷ್ಟು ಗೆಳೆಯರಿಂದ ಸಾಲ ಪಡೆದು ಪೋಟೋ ಸ್ಟುಡಿಯೋ ಒಂದನ್ನು ಅಲ್ಲೇ ಹಾಕಿದ್ದೆ. ಆದರೆ ಅದು ನಷ್ಟ ಹೊಂದಿತು. ಆಮೇಲೆ ಸಾಲ ತೀರಿಸಲಾಗದೇ ಎಷ್ಟು ಒದ್ದಾಡಿದೆ. ಯಾವುದೇ ಬೆಂಬಲವೂ ಇಲ್ಲದೇ ಚೆನ್ನೈನ ಬೀದಿಗಳಲ್ಲಿ ಅಲೆದಾಡಿದ್ದು, ಮನೆ ಮಠ ಇಲ್ಲದೇ ಫುಟ್‌ಪಾತ್‌ ಮೇಲೆ ಹಾಗೂ ಮೆರಿನಾ ಬೀಚ್‌ನ ಮರಳಿನ ಮೇಲೆ ಮಲಗುತ್ತಿದ್ದುದು (ಒಬ್ಬ ಗೆಳೆಯ ಜೊತೆಗಿದ್ದ), ಹೊಟ್ಟೆಗಿಲ್ಲದೇ ಕೇವಲ ಬೋಂಡ/ಬಜ್ಜಿ ತಿಂದುಕೊಂಡು ( ಅವನ್ನು ನಾಲ್ಕನೇ ತರಗತಿ ಓದುತ್ತಿದ್ದ ಒಬ್ಬ ಚಿಕ್ಕ ಹುಡುಗ ಕೊಡಿಸುತ್ತಿದ್ದ ! ) ದಿನಗಟ್ಟಲೇ ಬದುಕಿದ್ದು ನೆನೆಸಿಕೊಂಡರೆ ಮೈ ಜುಂ ಅನ್ನುತ್ತದೆ. ಸಾಲ ಅನ್ನುವುದು ಮನುಷ್ಯನನ್ನು ಎಂತಹ ಸ್ಥಿತಿಗೆ ಬೇಕಾದರೂ ತಳ್ಳುತ್ತದೆ ಅನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ.  ಅಷ್ಟಾದ ನಂತರವೂ ಕಷ್ಟಪಟ್ಟು (ಈ ಸಮಯದಲ್ಲಿ ಒಂದೆರಡು ಅಡ್ಡದಾರಿಗಳು ಕಾಣಿಸಿದರೂ ಅತ್ತ ಹೋಗದೇ) ಎಲ್ಲಾ ಸಾಲ ತೀರಿಸಿ ಬೆಂಗಳೂರಿಗೆ ಬಂದೆ. ಆ ನಂತರ ಇಲ್ಲೂ ಕಷ್ಟ ಪಟ್ಟು ದುಡಿಯುತ್ತಿದ್ದೇನೆ. ತೀರಾ ಅನಿವಾರ್ಯದ ವಿಷಯ ಹೊರತಾಗಿ ಸಾಲ ಪಡೆಯುವುದನ್ನು ಬಿಟ್ಟಿದ್ದೇನೆ. ಅದೂ

ಗೂಗಲ್‌ನವರ ಕೈಬರಹದ ಅಪ್ಲಿಕೇಷನ್‌

ಕೈಬರಹದ ಅಪ್ಲಿಕೇಷನ್‌ ಅಂದರೆ ನಿಮ್ಮ ಕೈಬರಹವನ್ನು ಹಾಗೆಯೇ ಅದು ಫಾಂಟ್‌ ಆಗಿ ಪರಿವರ್ತಿಸುತ್ತದೆ ಎಂದಲ್ಲ. ಬದಲಿಗೆ ನೀವು ಏನು ಬರೆಯುತ್ತೀರೋ ಆ ಅಕ್ಷರಗಳನ್ನು ಫಾಂಟ್‌ ಆಗಿ ಪರಿವರ್ತಿಸುತ್ತದೆ. ಕನ್ನಡಿಗರು ಖುಶಿ ಪಡುವ ವಿಷಯವೇನೆಂದರೆ ಇದನ್ನು ಹಾಕಿಕೊಂಡು ಸುಲಭವಾಗಿ ನಾವು ಕನ್ನಡದಲ್ಲೇ ಸಂದೇಶಗಳನ್ನು ಬರೆಯಬಹುದು. (ಟೈಪ್‌ ಮಾಡುವುದಲ್ಲ, ಬರೆಯುವುದು). ​ ಈ ಅಪ್ಲಿಕೇಷನ್ ಸಧ್ಯಕ್ಕೆ ಆಂಡ್ರಾಯಿಡ್‌ ಮೊಬೈಲ್‌ಗಳಿಗೆ ಮಾತ್ರ ಲಭ್ಯವಿದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡು ಮೊಬೈಲ್ನ ಭಾಷೆ ಅಥವಾ ಇನ್‌ಪುಟ್‌ ಭಾಷೆಯನ್ನು ಕನ್ನಡ ಮಾಡಿಕೊಂಡಿದ್ದರೆ ಸಂದೇಶ ಬರೆಯಲು ಹೋದಾಗ ಭಾಷೆಗೆ ಸಂಬಂಧಿಸಿದ ಇನ್ನೊಂದು ಕಡತವನ್ನು ಇಳಿಸಿಕೊಳ್ಳುವಂತೆ ಕೋರುತ್ತದೆ. ಅದು ಕನ್ನಡಕ್ಕೆ ಸಂಬಂಧಿಸಿದ ಕಡತ. ಅದನ್ನು ಮೊಬೈಲ್‌ಗೆ ಇಳಿಸಿಕೊಂಡ ನಂತರ ಸಂದೇಶ ಬರೆಯಲು ಹೋದಾಗ (ಫೇಸ್‌ಬುಕ್‌/ವಾಟ್ಸ್‌ಆಪ್‌ ಇತ್ಯಾದಿ) ಒಂದು ಸ್ಲೇಟ್‌ ಮೂಡುತ್ತದೆ. ಅಲ್ಲಿ ಬೆರಳಿನಿಂದ ಕನ್ನಡ ಅಕ್ಷರಗಳನ್ನು ಬರೆಯುತ್ತಾ ಹೋದರೆ ನಾವು ಬರೆದುದನ್ನು ಗುರುತಿಸಿ ಮೇಲಗ್ಡೆಯ ಚದುರದಲ್ಲಿ ಸರಿಯಾದ ಪದಗಳನ್ನು ಅದು ಜೋಡಿಸುತ್ತಾ ಹೋಗುತ್ತದೆ. ನಮ್ಮ ಕೈಬರಹ ಚೆನ್ನಾಗಿಲ್ಲದಿದ್ದರೂ (ನನ್ನ ಕೈಬರಹ ಚೆನ್ನಾಗಿಲ್ಲ) ಅದು ಬಹುತೇಕ ಸರಿಯಾಗಿಯೇ ಅಕಷರಗಳನ್ನು ಗುರುತಿಸುತ್ತದೆ. ಅದೇ ರೀತಿ ಇಂಗ್ಲೀಷ್‌ ಅಕ್ಷರಗಳನ್ನೂ ಬರೆಯಬಹುದು. ಆದರೆ ತೊಂದರೆ ಏನೆಂದರೆ ಈ ರೀತಿ ಜಾಸ್ತಿಯಾಗಿ ಬರೆಯಲು ಸಾಧ್ಯವಾಗುವುದಿಲ್ಲ.

ಫೇಸ್‌ಬುಕ್‌ಗೆ ಬೈ ಹೇಳಿದ ನಿರ್ದೇಶಕರು!

​ ಅದೊಂದು ಚಲನಚಿತ್ರದ ಚಿತ್ರೀಕರಣದ ಸಮಯ. ನಾಯಕಿಯ ಹೆತ್ತವರ ಭಾವಚಿತ್ರದ ಒಂದು ಚಿಕ್ಕ ಶಾಟ್‌ ತೆಗೆಯಬೇಕಿತ್ತು. ಎಲ್ಲಾ ತಯಾರಾಗಿದ್ದನ್ನು ಗಮನಿಸಿದ ನಿರ್ದೇಶಕರು ಕ್ಯಾಮೆರಾಮೆನ್‌ಗೆ ಈ ರೀತಿಯಾಗಿ ಒಂದು ಶಾಟ್‌ ತೆಗೆದುಕೊಳ್ಳಿ ಅಂದಿದ್ದರೆ ಸಾಕಿತ್ತು. ಏಕೆಂದರೆ ಆ ಶಾಟ್‌ನಲ್ಲಿ ಆ ಭಾವಚಿತ್ರಗಳಲ್ಲದೇ ಯಾವ ನಟರೂ ಇರಲಿಲ್ಲ. ಆದರೆ ಆ ನಿರ್ದೇಶಕರು ಹಾಗೆ ಮಾಡದೇ 'ಲೈಟ್ಸ್... ಕ್ಯಾಮೆರಾ... ಆಕ್ಷನ್‌' ಎಂದು ಗೋಡೆಯಲ್ಲಿ ಹಾಕಿದ್ದ ಭಾವಚಿತ್ರಗಳಿಗೇ ಆಕ್ಷನ್‌ ಹೇಳಿಬಿಟ್ಟರು ! ನಗು ತಡೆಯಲಾಗದ ಅಲ್ಲಿದ್ದ ಮಂದಿ ಭಾವಚಿತ್ರದ ನಟನೆಯನ್ನು ಸೆರೆ ಹಿಡಿದುಕೊಂಡರು. (ಆ ಚಿತ್ರ ನಿರೀಕ್ಷಯಂತೆಯೇ ಮಲಗಿತು ಅನ್ನೋದು ಆಮೇಲಿನ ಕಥೆ) ಈ ನಿರ್ದೇಶಕರು ಇತ್ತೀಚಿಗೆ ಫೇಸ್‌ಬುಕ್‌ ಖಾತೆಯನ್ನು ತೆರೆದು ಅದರಲ್ಲಿ 'ಇಂತಾ ದಿನ ನನ್ನ ಮೂರು ಚಿತ್ರಗಳು ಒಟ್ಟಿಗೇ ಸೆಟ್ಟೇರಲಿವೆ' ಎಂಬ ಒಂದು ಸ್ಟೇಟಸ್‌ ಹಾಕಿದರು. ಅದೇನು ಗ್ರಾಚಾರವೋ ಏನೋ ಅವರ ಆ ಪ್ರಕಟಣೆಗೆ ಪ್ರತಿಕ್ರಿಯೆ ಹಾಗಿರಲಿ, ಒಬ್ಬರೂ ಸಹ ಲೈಕ್ ಕೂಡಾ ಮಾಡಲಿಲ್ಲ!  ಪಾಪ ನಿರ್ದೇಶಕರಿಗೆ ಬೇಜಾರಾಗಿ ಮರುದಿನವೇ 'ಕ್ಷಮಿಸಿ ಗೆಳೆಯರೇ ಬೈ' ಎಂದು ಫೇಸ್‌ಬುಕ್‌ನಿಂದ ರೈಟ್‌ ಹೇಳಿದರು !