ವಿಷಯಕ್ಕೆ ಹೋಗಿ

ನೆಟ್ಟಕಲ್ಲಪ್ಪ ವೃತ್ತದ ಬಳಿ ಅಣ್ಣೋರನ್ನು ನೋಡಿದ್ದುಅದು ನಾನು ಬೆಂಗಳೂರಿಗೆ ಬಂದ ಹೊಸತು. ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದ ಬಳಿಯಿದ್ದ 'ನಾಸಾ ಪ್ರಕಾಶನ'ದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತು ಏನೋ ಕೆಲಸದ ಮೇಲೆ ನನ್ನನ್ನು ಬೇರೆ ಕಚೇರಿಗೆ ಕಳಿಸುವ ಸಲುವಾಗಿ ಮಾಲೀಕರು ಬೇಗನೇ ಬರಲು ತಿಳಿಸಿದ್ದರು. ಕುಂಬಳಗೋಡು ಪೆಪ್ಸಿ ಕಂಪನಿ ಬಳಿಯಿಂದ ಏಳು ಗಂಟೆಗೆಲ್ಲಾ ಹೊರಟು ಬೇಗನೆ ಬಂದು ಬಿಟ್ಟೆ. ನೆಟ್ಟಕಲ್ಲಪ್ಪ ವೃತ್ತದ ಬಳಿ ಬಸ್‌ ಬಂದಾಗ ಅಲ್ಲಿನ ಗಣಪತಿ ದೇವಸ್ಥಾನದ ಬಳಿ ಚಿತ್ರೀಕರಣವೊಂದು ನಡೆಯುತ್ತಿರುವುದು ಕಾಣಿಸಿತು. ಅಷ್ಟೇನೂ ಸಮಯವಾಗದ್ದರಿಂದ ಬಸ್‌ ಇಳಿದು ಅಲ್ಲಿ ಹೋದೆ.

ಅದು ಶಿವರಾಜ್‌ಕುಮಾರ್‌ ನಟನೆಯ ಒಂದು ಹೊಸ ಚಿತ್ರದ ಮುಹೂರ್ತದ ಕಾರ್ಯಕ್ರಮ ಅಂತ ತಿಳಿಯಿತು. ಕೆಳಗೆಲ್ಲಾ ಕಾರ್ಪೆಟ್ ಹಾಕಿ, ಹೂವುಗಳಿಂದ ಇಡೀ ದೇವಾಲಯವನ್ನೂ ಅಲಂಕರಿಸಿದ್ದರು. ಆಗಿನ್ನೂ ಬೆಳಗಿನ ಏಳೂವರೆ-ಎಂಟರ ಸಮಯವಾದ್ದರಿಂದ ಅಷ್ಟೇನೂ ಜನರಿರಲಿಲ್ಲ. ನಾನು ಒಂದು ಬದಿಯಲ್ಲಿ ನಿಂತು ಶಿವರಾಜ್‌ ಕುಮಾರ್‌ ಅವರನ್ನು ನೋಡತೊಡಗಿದೆ. ಅವರಿಗೆ ಮಹಾರಾಜರ ವೇಶ ತೊಡಿಸಿದ್ದರು. 

ಆಗ ಒಬ್ಬೊಬ್ಬರೇ ಚಿತ್ರರಂಗದ ಗಣ್ಯರು ಬರತೊಡಗಿದರು. ಯಾರೋ ಒಬ್ಬ ಗಣ್ಯರು ಬಂದಾಗ ಅದುವರೆಗೂ ದೇವಾಲಯದ ಒಳಗಿದ್ದ ಒಬ್ಬರು ಕೈ ಮುಗಿಯುತ್ತಾ ಹೊರ ಬಂದರು. ಅವರನ್ನು ನೋಡಿ ನನಗೆ ರೋಮಾಂಚನವಾಗಿ ಹೋಯ್ತು. ಕಾರಣ ಹಾಗೆ ಬಂದ ವ್ಯಕ್ತಿ ರಾಜ್‌ಕುಮಾರ್‌ ಆಗಿದ್ದರು. ಬಾಲ್ಯದಿಂದಲೂ ಅವರ ಅಭಿಮಾನಿಯಾಗಿ ಬೆಳೆದ ನನಗೆ ಈ ಭೇಟಿ ಅನಿರೀಕ್ಷಿತವೇ ಆಗಿತ್ತು. ಮೂಖವಾಗಿ ಅವರನ್ನೇ ಕಣ್ತುಂಬಿಕೊಂಡೆ. ಬಿಳಿ ಪಂಚೆ, ಬಿಳಿ ಅಂಗಿ, ಕೈಲೊಂದು ಕೈಗಡಿಯಾರ! ಅವರು ನನ್ನ ಎದುರಲ್ಲೇ ನನ್ನನ್ನೂ ನೋಡಿ ಆತ್ಮೀಯ ಸ್ನೇಹಿತರನ್ನು ನೋಡಿದಾಗ ಕಿರುನಗುತ್ತೇವಲ್ಲ ಹಾಗೆ ಮುಗುಳ್ನಗುತ್ತಾ, ನನಗೂ ಸೇರಿಸಿ ಎಲ್ಲರಿಗೂ ಕೈ ಮುಗಿಯುತ್ತಾ ನನ್ನ ಎದುರಿಂದಲೇ ಹಾದು ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಹೋದರು. ಆ ಸಮಯದಲ್ಲಿ ಅವರಿಗೆ ಪ್ರತಿಯಾಗಿ ಕೈಮುಗಿಯುವ ಜ್ಞಾನವೂ ನನಗೆ ಬರಲೇ ಇಲ್ಲ. ಸುಮ್ಮನೇ ನಿಂತುಬಿಟ್ಟಿದ್ದೆ. ಎಷ್ಟೋ ಹೊತ್ತು ಹಾಗೆಯೇ ನಿಂತು ಅವರನ್ನು ನೋಡಿದೆ.
ಕೊನೆಗೆ ಶಿವರಾಜ್‌ಕುಮಾರ್‌ ಕುದುರೆಯೇರಿ ಬರುವ ದೃಶ್ಯಕ್ಕೆ ಅಣ್ಣವರು ಕ್ಲಾಪ್‌ ಮಾಡಿದರು. ಅಷ್‌ಅರಲ್ಲಿ ನನಗೆ ಸಮಯವಾದ್ದರಿಂದ ನಮ್ಮ ಕಚೇರಿ ಕಡೆಗೆ ಹೊರಟೆ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…