ವಿಷಯಕ್ಕೆ ಹೋಗಿ

ಕನ್ನಡಿಗರು ಕನ್ನಡವನ್ನು ಕೇಳಿ... ದೊರೆಯುತ್ತದೆ.


ಮೊನ್ನೆ ಸಾಗರದಿಂದ ನಾನೂ ಮತ್ತಿಬ್ಬರು ನಮ್ಮ ಸ್ನೇಹಿತರೂ ಶಿವಮೊಗ್ಗಕ್ಕೆ ಖಾಸಗಿ ಬಸ್‌ ಒಂದರಲ್ಲಿ ಹೊರಟೆವು. ಸಾಗರದ ಜೋಗ ನಿಲ್ದಾಣದಿಂದ ಹೊರಟಾಗ ಬಸ್‌ನಲ್ಲಿ ಹಿಂದಿ ಹಾಡು ಹಾಕಿರುವುದು ಕಂಡು ಬಂತು. ಸ್ವಲ್ಪ ದೂರದ ಬಿಹೆಚ್‌ ರಸ್ತೆ ನಿಲ್ದಾಣದಲ್ಲಿ ಬಸ್‌ ನಿಂತಾಗ ಮೂರೂ ಜನ ಕೆಳಗಿಳಿದೆವು. ನಾವು ಇಳಿದುದು ನೋಡಿ ಮತ್ತೊಬ್ಬ ತಮಿಳನೂ ಇಳಿದುಕೊಂಡ.

ಕಂಡಕ್ಷರ್‌ ಓಡೋಡಿ ಬಂದು ಹೆದರಿಸುವವನಂತೆ "ಯಾಕ್ರೀ ಇಳೀತೀರಾ, ಹತ್ರಿ ಹೊರಡ್ತೀವಿ ಈಗ' ಎಂದು ಗದರಿದ. 

ನಾನೂ ಕೂಡಾ 'ಎಷ್ಟೊತ್ತಿಗೆ ಹೊರಡ್ತೀಯಾ?" ಎಂದು ಅಷ್ಟೇ ಜೋರಾಗಿ ಕೇಳಿದೆ.

'ಈಗ ಹೊರಡ್ತೀವಿ ಹತ್ರೀ ಬಸ್‌ನ" ಅಂದ.

"ನಿನ್ನ ಹಿಂದಿ ಹಾಡು ತೆಗೆದು ಕನ್ನಡ ಹಾಕು, ಇಲ್ಲಾ ಆಫ್‌ ಮಾಡು ಹತ್ತುತೀವಿ" ಅಂದೆ.

ಅವನಿಗೆ ಶಾಕ್‌ ಆದಂತಾಯ್ತು. ಕನ್ನಡ ಹಾಡಿಗಾಗಿ ಈ ರೀತಿ ಬಸ್‌ ಬಿಟ್ಟು ಇಳಿಯುವವರೂ ಇದ್ದಾರಾ ಅಂದುಕೊಂಡಿರಬೇಕು. ಕೂಡಲೇ ಮೆತ್ತಗಾದ ಅವನು 'ಸರಿ ಅದಕ್ಕೇನು, ಹಾಕಿಸುತ್ತೀನಿ ಹತ್ತಿ" ಎಂದ ನಂತರ ಬಸ್‌ ಹತ್ತಿದೆವು.

ಆತ ಚಾಲಕನಿಗೆ ಹೇಳಿ ಹಿಂದಿ ಹಾಡುಗಳನ್ನ ನಿಲ್ಲಿಸಿದ. ನಂತರ ಟಿಕೇಟ್‌ ಪಡೆದುಕೊಂಡ. ಬಸ್‌ ಕೂಡಾ ಹೊರಟಿತು. ಈ ನಡುವೆ ಕಂಡಕ್ಷರ್‌ ಕೂಡಾ ಬದಲಾದ. ಸ್ವಲ್ಪ ದೂರ ಹೋಗುವುದರೊಳಗೆ ಚಾಲಕ ಮತ್ತೆ ಹಿಂದಿ ಹಾಡು ಹಾಕಿದ. ನನಗೆ ರೇಗಿತು, ಇದೆ ಇರು ಇವರಿಗೆ ಹಬ್ಬ ಎಂದುಕೊಂಡು ನಿರ್ವಾಹಕ ನಮ್ಮ ಬಳಿ ಬರುವುದನ್ನೇ ಕಾದು 'ಹಿಂದಿ ಹಾಡು ನಿಲ್ಲಿಸಿ ಕನ್ನಡ ಹಾಕಿ' ಎಂದೆ. ಅವನು ಏನೂ ಹೇಳದೇ ಚಾಲಕನ ಬಳಿ ಹೋಗಿ ತಿಳಿಸಿದ. ಆ ನಂತರ ಚಾಲಕ ಕನ್ನಡ ಹಾಡುಗಳಿಗಾಗಿ ಹುಡುಕಾಡಿದ್ದು ತಿಳಿಯಿತು. ಆದರೆ ಅವನ ಬಳಿ ಕನ್ನಡ ಹಾಡುಗಳ ಸಿಡಿ ಇರಲೇ ಇಲ್ಲ! ಎಲ್ಲವನ್ನೂ ನಿಲ್ಲಿಸಿ ಸುಮ್ಮನಾದ.

ಅಷ್ಟರಲ್ಲಿ ಆನಂದಪುರ ನಿಲ್ದಾಣ ಬಂತು. ಅಲ್ಲಿ ಅವರ ಪರಿಚಯದ ಯಾರಿಂದಲೋ ಕನ್ನಡ ಹಾಡುಗಳ ಸಿಡಿ ಪಡೆದು ಹಾಕಿದರು. ಅದೂ ಕೂಡಾ ಸುಮಧುರವಾದ ಹಳೆಯ ಕನ್ನಡ ಹಾಡುಗಳು. ಅಲ್ಲಿಂದ ಎಲ್ಲರೂ ಹಾಯಾಗಿ ಕನ್ನಡ ಹಾಡುಗಳನ್ನು ಕೇಳುತ್ತಾ ಶಿವಮೊಗ್ಗ ತಲುಪಿದೆವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…