ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೂರರ ಗಡಿ ದಾಟಿದ "ನಿಮ್ಮೆಲ್ಲರ ಮಾನಸ"

​ಒಂದು ಪತ್ರಿಕೆಯನ್ನು ನಡೆಸುವುದು ಎಷ್ಟು ಕಷ್ಟ ಅನ್ನೋದು ನನ್ನನ್ನೂ ಸೇರಿದಂತೆ ಕೈ ಸುಟ್ಟುಕೊಂಡ ಎಲ್ಲರಿಗೂ ಗೊತ್ತು. ಆದರೂ ಗೆಳೆಯ ಗಣೇಶ್‌ ಕೋಡೂರು ಛಲ ಬಿಡದ ತ್ರಿವಿಕ್ರಮನಂತೆ "ನಿಮ್ಮೆಲ್ಲರ ಮಾನಸ" ತಿಂಗಳ ಪತ್ರಿಕೆಯನ್ನು ನೂರು ಸಂಚಿಕೆಯ ಗಡಿ ದಾಟಿಸಿದ್ದು ಮೆಚ್ಚುವ ಕೆಲಸ. ಈ ಶುಭ ಸಂದರ್ಭದಲ್ಲಿ ಗಣೇಶ್‌ ಇಂದು ಒಂದು ಸಣ್ಣ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದರು. ಅವರ ಪತ್ರಿಕೆಯ ಓದುಗ ಮಿತ್ರರು ದೂರದೂರುಗಳಿಂದೆಲ್ಲಾ ಬಂದು ಸೇರಿದ್ದು ಎಲ್ಲರಿಗೂ ಕುಶಿ ನೀಡಿತು. ಹಾಗೆಯೇ ಇಂದು ಗಣೇಶ್‌ ತುಂಬಾ ಭಾವುಕರಾಗಿದ್ದರು. ಅದಕ್ಕೆ ಕಾರಣ ತಾನಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿಗಿಂತಲೂ ಹೆಚ್ಚಾಗಿ ಇಷ್ಟು ಸಾಧಿಸಲು ಎಷ್ಟು ಕಷ್ಟ ಪಡಬೇಕಾಯ್ತು ಅನ್ನೋದು ಅವರ ಮಾತುಗಳಿಂದಲೇ ತಿಳಿಯುತ್ತಿತ್ತು. ಅವರ ಮಾತು ಕೇಳುತ್ತಾ ನನ್ನ ಕಣ್ಣು ಸಹ ತೇವಗೊಂಡದ್ದು ಸುಳ್ಳಲ್ಲ. ಕಾರಣ ಗಣೇಶ್‌ ಕೋಡೂರು ಹೆಸರು ನಾನು ಮೊದಲಿಗೆ ನೋಡಿದ್ದು ತರಂಗದಲ್ಲಿ ಅವರ ಒಂದು ಕಥೆಯನ್ನು ನೋಡಿದಾಗ. ಮುಖತಃ ಭೇಟಿಯಾಗಿದ್ದು "ಪ್ರೇಮ ಸಾಮ್ರಾಜ್ಯ" ಎಂಬ ಪತ್ರಿಕೆಯ ಕಚೇರಿಯಲ್ಲಿ. ಹೊಟ್ಟೆ ಪಾಡಿಗಾಗಿ ನಾನು ಆ ಪತ್ರಿಕೆಗೂ ಲೇಖನ ಬರೆದು ಕೊಡಲು ಹೋದಾಗ ಅಲ್ಲಿ ಅದೇ ಕಾರಣಕ್ಕೆ ಬರೆಯುತ್ತಿದ್ದ ಗಣೇಶ್‌ ಇದ್ದರು. ಅದರ ಹಿಂದಿನ ಸಂಚಿಕೆಗೆ ನಾನು ಕೊಟ್ಟಿದ್ದ "ಸವಿ ನೆನಪುಗಳು ಬೇಕು" ಕತೆಯನ್ನು ಓದಿದ್ದ ಗಣೇಶ್‌ "ಅಷ್ಟೊಳ್ಳೆ ಕತೆಯನ್ನು ಯಾಕೆ ಈ ಪತ್

ಸನಾತನಿಗಳೂ ಮತ್ತವರ ಸೀರೆಯೂ...

​ ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ 'ವಸ್ತ್ರ ಸಂಹಿತೆ' ಎಂಬ ನಾಲಾಯಕ್‌ ನೀತಿ.  ಕೆಲವೇ ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಗಳು (ಇವರು ಅಂದಿನ ಪ್ರಭಲ ಜನಾಂಗ) ಒಂದು ನೀತಿ ರೂಪಿಸಿದ್ದರಂತೆ. ಅದೇನೆಂದರೆ "ವಿದೇಶಿಯರ ಮೂಲಕ ಭಾರತಕ್ಕೆ ಬಂದ ಕುಪ್ಪಸವನ್ನು ನಂಬೂದರಿ ಹೆಂಗಸರುಗಳಲ್ಲದೇ ಬೇರೆ ಜಾತಿಯ ಹೆಂಗಸರು ಧರಿಸಬಾರದು" ಎಂದು! ಇದರರ್ಥ ತಮ್ಮ ಮನೆ ಹೆಣ್ಣು ಮಕ್ಕಳು ಬೀದಿಯಲ್ಲಿ ಎದೆ ಮುಚ್ಚಿಕೊಂಡು ಮರ್ಯಾದೆಯುತವಾಗಿ ಓಡಾಡಲಿ, ಬೇರೆ ಜಾತಿಯ ಹೆಣ್ಣು ಮಕ್ಕಳು ಬೀದಿಯಲ್ಲಿ ಎಲ್ಲರಿಗೂ ಎದೆ ತೋರಿಸಿಕೊಂಡು ಓಡಾಡಲಿ ಎಂದಲ್ಲವೇ ? ಇನ್ನೂ ಹೇಳಬೇಕೆಂದರೆ ಇತರೆ ಹೆಣ್ಣುಮಕ್ಕಳ ಎದೆ ಸೌಂದರ್ಯವನ್ನು ತಾವು ಸವಿಯೋಣ, ನಮ್ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಡೋಣ ಎಂಬ ಮುಲ್ಲಾಗಳ ವಾದಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ. ಬ್ರಿಟೀಷರು ಬರುವ ಮುನ್ನ ಹೆಂಗಸರ ಮೇಲುಡುಗೆಗಳೇ ಇರಲಿಲ್ಲ ಅನ್ನೋದು ಕೂಡಾ ಒಪ್ಪಿಕೊಳ್ಳಲಾಗದ ಧರ್ಮಾಂಧತೆಯಲ್ಲಿ ಈ ಸನಾತನಿಗಳಿದ್ದಾರೆ. ಇತ್ತೀಚಿನ ಬೆಳವಣಿಗೆ ಎಂದರೆ ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುತ್ತಿರುವ "ವಸ್ತ್ರ ಸಂಹಿತೆ". ನೆನಪಿರಲಿ,

ಭಾಷೆಯ ರಕ್ಷಣೆಗೆ ತಮಿಳುನಾಡಿನ ದಿಟ್ಟ ಹೆಜ್ಜೆ!

​ ಕನ್ನಡವೂ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳೂ ಇಂದು ಇಂಗ್ಲೀಷಿನ ಜೊತೆಗೆ ಹಿಂದಿಯ ರುದ್ರ ತಾಂಡವದಿಂದಾಗಿ ನಲುಗುತ್ತಿವೆ. ಇಂಗ್ಲೀಷ್ ಮಕ್ಕಳ ಬವಿಷ್ಯದ ದೃಷ್ಟಿಯ ಕಾರಣಕ್ಕೆ ಅಗತ್ಯವಾಗಿದ್ದರೆ ಹಿಂದಿಯನ್ನು ಕೇಂದ್ರ ಸರ್ಕಾರ ಸದ್ದಿಲ್ಲದೇ ರಾಷ್ಟ್ರಭಾಷೆ ಎಂಬ ಸುಳ್ಳು ಹೇಳಿ ಹಿಂದಿಯೇತರರ ಮೇಲೆ ಹೇರುತ್ತಿದೆ. ಇವೆರಡರ ನಡುವೆ ಸಂಸ್ಕೃತವೂ ಸ್ಥಳೀಯ ಭಾಷೆಗಳ ಮೇಲೆ ಧರ್ಮದ ಕಾರಣಕ್ಕೆ ಸವಾರಿ ಮಾಡ ಹೊರಟಿದೆ. ವರ್ಷ ವರ್ಷವೂ ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡಲು ಬಿಡುಗಡೆ ಮಡುತ್ತಿರುವ ಕೋಟ್ಯಾಂತರ ರೂಪಾಯಿಯನ್ನು ಗಮನಿಸಿದರೆ ಇದು ಅವುಗಳ ಅಪಾಯವನ್ನು ನಾವು ಗ್ರಹಿಸಬಹುದು. ಕಳೆದ ವರ್ಷ ಬಿಜೆಪಿ ಸರ್ಕಾರವು ದೇಸದಲ್ಲಿ ಸಂಸ್ಕೃತವನ್ನು ಹರಡಲು ನಲವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ ದೇಶದ ಮತ್ತೊಂದು ಶಾಸ್ತ್ರೀಯ ಭಾಷೆ ಕನ್ನಡಕ್ಕೆ ನೀಡಿರುವುದು ಕೇವಲ ನಾಲ್ಕು ಕೋಟಿ ರೂಪಾಯಿ ಮಾತ್ರ. ಹಾಗೆಯೇ ದೇಶದ ಮೂರನೇ ದೊಡ್ಡ ಭಾಷೆಯಾದ ತಮಿಳಿಗೆ ನೀಡಿದ್ದು ಎಂಟು ಕೋಟಿ ಮಾತ್ರ. ಅಂದರೆ ಇದರರ್ಥ ಕೇಂದ್ರದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಅವುಗಳಿಗೆ ರಾಜ್ಯಭಾಷೆಗಳು ಅಂದರೆ ಯಾಕಾದರೂ ಇವೆಯೋ ಎಂಬ ಅಸಡ್ಡೆ! ಅದೇ ಹಿಂದಿ ಮತ್ತು ನಿವೃತ್ತಿ ಹೊಂದಿರುವ ಸಂಸ್ಕೃತವೆಂದರೆ ಎತ್ತಿ ಮೆರೆಸುವಂತಹ ಆಧರಣೆ. ಹೀಗೆ ಒಂದು ಸಮಯದಲ್ಲಿ ದೇಶದ ಉಳಿದೆಲ್ಲಾ ಭಾಷೆಗಳನ್ನು ತುಳಿದು ಹಿಂದಿಯನ್ನು ಮಾತ್ರ ಬೆಳೆಸಲು ಕೇಂದ್ರವು ಹವಣಿಸಿದ ಸಮಯದಲ್