ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದುರ್ಗಾಸ್ತಮಾನ

​ ಕನ್ನಡದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲೊಂದಾದ "ದುರ್ಗಾಸ್ತಮಾನ" ಓದಿ ಮನಸ್ಸು ಭಾರವಾಯ್ತು. ಹಾಗೆಯೇ ಇದರಲ್ಲಿ ದುರ್ಗದ ಪ್ರಧಾನಿ 'ಕಳ್ಳಿ ನರಸಪ್ಪಯ್ಯ' ದುರ್ಗಕ್ಕೆ ದ್ರೋಹ ಮಾಡಿದರೇ ಎಂಬ ಸ್ಪಷ್ಟತೆಯನ್ನು ಲೇಖಕ ತರಸು ಅವರು ನೀಡಿಲ್ಲ. (ನರಸಪ್ಪಯ್ಯ ದ್ರೋಹ ಮಾಡಿದ್ದರ ಬಗ್ಗೆ ಆಧಾರ ದೊರೆತಿಲ್ಲ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ). ಆದರೆ ಒಂದು ಗೊಂದಲವನ್ನು ಉಳಿಸಿ ಹೋಗಿದ್ದಾರೆ. ಅದೇನೆಂದರೆ ದೇಶಾಂತರ ಸಂಚಾರ ಹೋಗಿ ಮರಳುವಾಗ ಹೈದರಾಲಿಗೆ ಸೆರೆ ಸಿಗುವ ನರಸಪ್ಪಯ್ಯ ದಿವಾನ್‌ ಪೂರ್ಣಯ್ಯನ ಎದುರಲ್ಲೇ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. (ಪುಟ ೫೭೨), ಆದರೆ ತದನಂತರದ ಯುದ್ದದ ಸಮಯದಲ್ಲಿ ಮದಕರಿ ನಾಯಕನಿಗೆ ನರಸಪ್ಪಯ್ಯನವರ ಕೈ ಬರಹದ ಪತ್ರವೊಂದು ತಲುಪುತ್ತದೆ. (ಪುಟ ೫೮೦). ತಮ್ಮ ಮನೆಯನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಡಬೇಕು ಎಂದು. ಆ ಮನೆಯಲ್ಲಿ ತಾವು ಪ್ರಧಾನಿಯಾಗಿದ್ದಾಗ ಹುದುಗಿಸಿಟ್ಟಿದ್ದ ದುರ್ಗಕ್ಕೆ ಸಂಬಂಧಿಸಿದ ಪ್ರಮುಖವಾದ ರಹಸ್ಯ ದಾಖಲೆಗಳು ಇರುತ್ತವೆ. ಅವು ನಂತರ ಅವರ ಮಗನ ಮೂಲಕ ಹೈದರಾಲಿಗೆ ದೊರೆಯುತ್ತವೆ. ಆ ಮೂಲಕ ದುರ್ಗದ ರಹಸ್ಯಗಳು ಹೈದರಾಲಿಗೆ ಸಿಕ್ಕು ಮದಕರಿ ನಾಯಕನನ್ನು ಸೋಲಿಸಲು ಸುಲಭವಾಗುತ್ತದೆ. ಕೊನೆ ಕೊನೆಯಲ್ಲಿ ಮದಕರಿಯು ಆಗಾಗ ಹೇಳುವಂತೆ "ಪ್ರಧಾನಿ ಕಳ್ಳಿ ನರಸಪ್ಪಯ್ಯನವರೂ ದುರ್ಗಕ್ಕೆ ದ್ರೋಹ ಬಗೆದರು" ಎಂಬ ಮಾತು ಸತ್ಯವೇ ಅನ್ನಿಸುತ್ತದೆ.