ವಿಷಯಕ್ಕೆ ಹೋಗಿ

ರೈತರ ಆತ್ಮಹತ್ಯೆಗೆ ಕಾರಣ ಹುಡುಕುತ್ತಾ...



ಕಳೆದ ಏಳು ತಿಂಗಳಲ್ಲಿ ೫೧೬ ರೈತರು ನಮ್ಮ ರಾಜ್ಯವೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದೊಂದು ಗಾಬರಿ ಹುಟ್ಟಿಸುವ ಸುದ್ದಿಯೇ ಹೌದು. ಹೀಗೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ? ನಿಜವಾದ ಸಾಲದ ಸಮಸ್ಯೆಯೇ ಇದಕ್ಕೆ ಕಾರಣವೇ ? ಅಷ್ಟೊಂದು ಸಾಲವನ್ನಾದರೂ ಯತಕ್ಕಾಗಿ ಮಾಡಿಕೊಂಡರು ? ಬರಗಾಲ ಕಾರಣವೆನ್ನಲು ಈಗಿನದಕ್ಕಿಂತಲೂ ಭೀಕರ ಬರಗಾಲ ಎಷ್ಟೋ ಸಮಯ ಬಂದು ಹೋಗಿದೆ. ಆಗೆಲ್ಲಾ ಈ ರೀತಿ ರೈತರು ಆತ್ಮಹತ್ಯೆಗೆ ಇಳಿಯುತ್ತಿರಲಿಲ್ಲ. ಆದರೆ ಇತ್ತೀಚಿಗೆ ಏನೋ ಯಡವಟ್ಟಾಗುತ್ತಿರುವುದಂತೂ ನಿಜ.

ನಿನ್ನೆಯ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿಯ ಹೇಳಿಕೆಗಳು ಪ್ರಕಟವಾಗಿದೆ. (ಅವರ ಮನೆಗೆ ರಾಹುಲ್‌ಗಾಂಧಿ ಭೇಟಿ ನೀಡುವುದಿದೆಯಂತೆ). ಆ ಮಹಿಳೆ ಹೇಳಿರುವ ಪ್ರಕಾರ ಅವರಿಗೆ ಇರುವುದು ಬರೇ ೧.೩೮ ಎಕರೆ ಹೊಲ. ಆದರೆ ಆ ರೈತ ೨೦೦೫ ರಲ್ಲಿಯೇ ಟ್ರಾಕ್ಟರ್‌ ಕರೀದಿಸಿದ್ದಾನೆ ! ಅದರ ಸಾಲ ಮತ್ತು ಬೆಳೆ ಸಾಲ ಸೇರಿ ಈಗ ಸಾಲದ ಮೊತ್ತ ಹನ್ನೊಂದು ಲಕ್ಷವನ್ನೂ ಮೀರಿದೆ. ಈ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜ, ಒಂದೂವರೆ ಎಕರೆಯೂ ಇಲ್ಲದ ಹೊಲದ ರೈತ ಅಷ್ಟೊಂದು ಸಾಲ ತೀರಿಸುವುದು ಕನಸಿನ ಮಾತು. ಅದು ಹಾಗಿರಲಿ, ಆದರೆ ಆತ ಮಾಡಿಕೊಂಡಿರುವ ಸಾಲದ ಪರಿಯನ್ನು ಒಮ್ಮೆ ಗಮನಿಸಿ. ತನಗಿರುವ ಕೇವಲ ೧.೩೮ ಎಕರೆ ಹೊಲಕ್ಕಾಗಿ ಟ್ರಾಕ್ಟರ್‌ ಕೊಳ್ಳುವ (ಅದೂ ಸಾಲ ಮಾಡಿ) ಅಗತ್ಯವಾದರೂ ಏನಿತ್ತು ? ಇಷ್ಟು ಹೊಲವನ್ನು ಉಳುಮೆ ಮಾಡಲು ಟ್ರಾಕ್ಟರ್‌ಗೆ ಒಂದೆರಡು ದಿನ ಸಾಕು. ಕುಂಟೆ ಹೊಡೆಯುವುದು, ಅದೂ ಇದೂ ಸೇರಿದರೂ ಐದು ದಿನದ ಕೆಲಸ ಎಂದು ಇಟ್ಟುಕೊಳ್ಳಬಹುದು. ಬೆಳೆ ಹಾಕಿದ ನಂತರ ಹೊಲದಲ್ಲಿ ಅದಕ್ಕೆ ಕೆಲಸವಿರುವುದಿಲ್ಲ. ಒಂದು ಬೆಳೆ ಅಂದರೆ ಸುಮರು ಮೂರ್ನಾಲ್ಕು ತಿಂಗಳಂತೂ ಬೇಕೇ ಬೇಕು. ಅಂದರೆ ಒಂದು ಬೆಳೆಗೆ ಐದು ದಿನದ ಕೆಲಸ ಅಂತ ಹಿಡಿದರು ಅವನ ಟ್ರಾಕ್ಟರ್‌ಗೆ ವರ್ಷಕ್ಕೆ ಹೆಚ್ಚೆಂದರೆ ಹದಿನೈದು ದಿನದ ಕೆಲಸ. ಆದರೂ ಸಾಲ ಮಾಡಿ ಟ್ರಾಕ್ಟರ್‌ ಕೊಂಡಿದ್ದಾನೆ! ಯಾರದು ತಪ್ಪು ? ಆತ ಟ್ರಾಕ್ಟರ್‌ ಇಟ್ಟುಕೊಂಡು ಬೇರೆಯವರಿಗೆ ಬಾಡಿಗೆಗೆ ದುಡಿದಿದ್ದರೂ ಅದಕ್ಕೆ ಮಾಡಿರುವ ಸಾಲ ಇಷ್ಟರಲ್ಲೇ ತೀರುತ್ತಿತ್ತು. ಆದರೆ ಆತ ಹಾಗೇನೂ ಮಾಡಿದಂತೆ ಕಾಣಿಸುತ್ತಿಲ್ಲ. 

ಶೋಕಿಗಾಗಿಯೋ ಅಥವಾ ಬೇರೆಯವರು ಕೊಂಡಿದ್ದಾರೆ, ನಾನೇಕೆ ಕೊಳ್ಳಬಾರದು ಎಂದೋ, ಅಥವಾ ಮಾರಾಟಗಾರರ ಮಾತಿಗೆ ಮರುಳಾಗಿಯೋ ಒಟ್ಟಿನಲ್ಲಿ ರೈತರು ಇಂತಹ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದನ್ನು ಅವರ ಅಮಾಯಕತೆ ಅನ್ನಬೇಕೋ, ದುರ್ದೈವ ಅನ್ನಬೇಕೋ, ಅತಿ ಬುದ್ದಿವಂತಿಕೆ ಅನ್ನಬೇಕೋ ಗೊತ್ತಾಗುವುದಿಲ್ಲ. ಸರ್ಕಾರ ರೈತರು ಸಾಲ ಮಾಡದಿರುವಂತೆ ಜಾಹೀರಾತುಗಳನ್ನು ಮಾಡುತ್ತಾ, ಟ್ರಾಕ್ಟರ್‌ ಮುಂತಾದ ರೈತ ಸಂಬಂಧಿ ವಸ್ತುಗಳ ಜಾಯೀರಾತು ನಿಯಂತ್ರಿಸುವತ್ತ ಮನಸ್ಸು ಮಾಡಿ ರೈತರು ಅನಾವಶ್ಯಕವಾಗಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖ ಮಾಡುವುದನ್ನು ತಡೆಯಬೇಕಾಗಿದೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…