ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀರ ಟಿಪ್ಪು ಸುಲ್ತಾನ್‌

​ ಟಿಪ್ಪು ಸುಲ್ತಾನ್‌ ಮತಾಂಧನಗಿದ್ದ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆತನಿಂದ ನಡೆದ ಹತ್ಯೆಗಳು, ಯುದ್ದಗಳು ಎಲ್ಲದಕ್ಕೂ ಕಾರಣ ಆತನ ರಾಜ್ಯ ವಿಸ್ತರಿಸುವ, ತನ್ನೆದುರು ತಲೆ ಎತ್ತಿ ನಿಂತವರನ್ನು ಬಗ್ಗು ಬಡಿವ ಯುದ್ದೋನ್ಮಾದಗಳೇ ಕಾರಣವಾಗಿತ್ತು. ಈ ಯುದ್ದೋನ್ಮಾದ ಆತನ ತಂದೆ ಹೈದರಾಲಿಯಿಂದ ಬಂದುದು. ಹೈದರಾಲಿ ಮತ್ತು ಟಿಪ್ಪುವಿನ ಆಸ್ಥಾನ ಮಂತ್ರಿ ದಿವಾನ್‌ ಪೂರ್ಣಯ್ಯ ಒಬ್ಬ ಬ್ರಾಹ್ಮಣರಾಗಿದ್ದರು. ಹೈದರಾಲಿಯ ಕಾಲದಲ್ಲಿ ದುರ್ಗದ ಮದಕರಿ ನಾಯಕನನ್ನೂ ಸೇರಿದಂತೆ, ಪೇಶ್ವೆಗಳು ಮತ್ತು ಕೆಳದಿ, ಶೀರ್ವ, ರಾಮದುರ್ಗ ಮುಂತಾದ ಎಲ್ಲಾ ಹಿಂದು ಪಾಳೆಯಗಾರರನ್ನೂ ರಾಜರುಗಳನ್ನೂ ಸೋಲಿಸಲು ಪೂರ್ಣಯ್ಯನವರ ತಂತ್ರ ಕುತಂತ್ರಗಳೇ ಕಾರಣವಾಗಿದ್ದವು. ಮದಕರಿ ನಾಯಕನ ಮಂತ್ರಿ ಕೂಡಾ ಹೈದರಾಲಿಗೆ ದುರ್ಗದ ರಹಸ್ಯಗಳನ್ನು ಒದಗಿಸಿ ಮದಕರಿಯ ಸೋಲಿಗೆ ಕಾರಣವಾಗುತ್ತಾನೆ. ಹಾಗೆಯೇ ಹೈದರಾಲಿಯ ಮುಸ್ಲಿಂ ಸರ್ದಾರನೊಬ್ಬ ಕೂಡಾ ಮದಕರಿ ನಾಯಕನೊಂದಿಗೆ ಸ್ನೇಹ ಬೆಳೆಸಿ ಹೈದರಾಲಿಗೂ ಮೋಸ ಮಾಡುತ್ತಾನೆ. ಇವೆಲ್ಲಾ ಆಗಿನ ಸಂದರ್ಭದ ಸಹಜ ಘಟನಾವಳಿಗಳು.  ಹೈದರಾಲಿಯಂತೆಯೇ ಯುದ್ದೋತ್ಸಾಹ ತೋರುವ ಟಿಪ್ಪು ಅಕ್ಕಪಕ್ಕದ ಪಾಳೆಗಾರರ ಮೇಲೆ ದಂಡೆತ್ತಿ ಹೋಗಿದ್ದರಲ್ಲಿ ಮತ್ತು ಅಲ್ಲಿ ಯುದ್ದ, ಸಾವು ನೋವು ಸಂಭವಿಸಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಹಾಗೆಯೇ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ, ಮಂಡ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಯಥೇಚ್ಚವಾಗಿರಬೇಕಿತ್ತು. ಅಂದು ಹಿಂದು ರಾಜರುಗಳೇ ಹಿಂದು ರಾಜ್ಯಗಳ

ಬಲಿಚಕ್ರವರ್ತಿಯ ನೆನವ ದಿನಕ್ಕೆ ಪಟಾಕಿ ಯಾಕೆ ?

​ ದೀಪಾವಳಿ ಮೊದಲಿಗೆ ಪಟಾಕಿ ಹೊಡೆವ ಹಬ್ಬ ಆಗಿರಲಿಲ್ಲ. ಇದು ಬಲಿ ಚಕ್ರವರ್ತಿಯನ್ನು ಸ್ಮರಿಸಿ ಆತನಿಗೆ ಪೂಜೆ ಸಲ್ಲಿಸುವ ದಿನ. ಸತ್ತ ಪುಣ್ಯಾತ್ಮರನ್ನು ಸ್ಮರಿಸಲು ಅವರ ಪ್ರತಿಕೃತಿಯ ಎದುರು ದೀಪ ಹಚ್ಚುವ ಪರಿಪಾಠ ಮೊದಲಿನಿಂದಲೂ ಇತ್ತು. ಅದೇ ರೀತಿ ಬಲಿ ಚಕ್ರವರ್ತಿಗೆ ದೀಪ ಹಚ್ಚಿ ಆತನನ್ನು ಸ್ಮರಿಸುವ ದಿನವೇ "ಬಲಿ ಪಾಡ್ಯಮಿ". ಇಂದಿಗೂ ಮಲೆನಾಡಿನ ಬಹಳಷ್ಟು ಮನೆಯಲ್ಲಿ (ನಮ್ಮನೆಯೂ ಸೇರಿ) ಬಲಿಪಾಡ್ಯಮಿಯ ದಿನ ಕೆರೆ, ಹೊಳೆ ಅಥವಾ ಬಾವಿಯಿಂದ ತಾಮ್ರದ ತಂಬಿಗೆಯಲ್ಲಿ ನೀರನ್ನು ತಂದು ಅದಕ್ಕೆ ಅಡಿಕೆ ಸಿಂಗಾರ ಅಥವಾ ಹೂಗಳನ್ನು ಮುಡಿಸಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದನ್ನು "ಬಲೀಂದ್ರ ಪೂಜೆ" ಅಥವಾ "ಬಲಿ ಪೂಜೆ" ಎಂದೇ ಕರೆಯುತ್ತಾರೆ. ನಮ್ಮ ಕಡೆ ಈಗಲೂ ಬಲಿಯನ್ನು ಹೊಗಳುವ ಜಾನಪದ ಹಾಡುಗಳು (ಹಬ್ಬಾಡುವ ಪದಗಳು ಎನ್ನುತ್ತಾರೆ) ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಹಾಡು "ಎದ್ದೇಳು ಬಲಿವೀಂದರ, ನಿಜಕೊಂದ್ ಎಲ್ಲಾರ ಸಲುವಂತರಾ.." (ಎಲ್ಲರನ್ನೂ ಸಲಹುವ ಬಲೀಂದ್ರ ಎದ್ದೇಳು ) ಎಂದು ಪ್ರಾರಂಭವಾಗುತ್ತದೆ. ಹಾಗೆಯೇ ಹಸು, ಎತ್ತುಗಳಿಗೆ ಹೂಗಳ ಹಾರ ಹಾಕಿ ಪೂಜೆ ಮಾಡುವುದೂ, ಅವುಗಳಿಗೆ ಇಷ್ಟದ ತಿನಿಸು ಮಾಡಿ ತಿನ್ನಿಸುವುದೂ ಇದೆ. (ಈ ಸಮಯಕ್ಕೆ ಅವುಗಳನ್ನು ಬಳಸಿಕೊಂಡು ದುಡಿವ ಬೇಸಾಯದ ಕೆಲಸ ಬಹುತೇಕ ಮುಗಿದಿರುತ್ತದಾದ್ದರಿಂದ ಅವುಗಳಿಗೆ ಈ ಅಕ್ಕರೆ).  ತೀರಾ ಇತ್ತೀಚಿನವರೆಗೂ ನಮ್ಮ ಕಡೆ ಈ ಹಬ್ಬಕ್ಕೆ ಪಟಾಕ

ಓ ಮಳೆಯೇ...

ಸೋಗೆ ಮನೆಯ ಛಾವಣಿ ಸೀಳಿ ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ ಗುಡಿಸಿ, ಸಾರಿಸಿ ನಯ ಮಾಡಿದ ಒಡಕಲು ನೆಲಕೆ ಬಿದ್ದು ಪಟಪಟನೆ ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ ಓ ನಿರ್ದಯಿ ಮಳೆ ಹನಿಯೆ... ನೀ ಎಂದಾದರೂ ಅರಿತೆಯಾ  ಬಡವನ ಬವಣೆಯನ್ನು ? ಯಾಕೆ ಅರಿಯಲಿಲ್ಲ ಮಗುವೆ ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು ದುಡಿದು ಬೆವರ ಸುರಿಸುವಾಗ ಅವರ ಕಷ್ಟವರಿತು ಹನಿ ಸಿಂಚನ ಮಾಡಿ ಧೋ ಎಂದು ಸುರಿದು ಅವರ ತಣಿಸಿ, ಬೆವರ ತೊಳೆದು ತಣ್ಣಗಾಗಿಸಿದ್ದು ನಾನಲ್ಲವೇ ಕಂದಾ ? ಹೋಗು ಹೋಗೆಲೆ ಮಳೆಯೆ, ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ ಬಿಸಿಲ ಜಳಕೆ ಬಾಯಾರಿ ದುಡಿವ ದೇಹ ಹನಿ ನೀರಿಗೆ ಪರಿತಪಿಸುವಾಗ ನಿನಗೆ ಬರಲಿಲ್ಲ ಕರುಣೆ ಉಕ್ಕಿ. ಅರಿತೆ ಮಗುವೆ ನಿನ್ನ ಅಂತರಂಗದ ಕೂಗು ನನಗಿಲ್ಲ ಬರಿದೆ ಬಡಾಯಿಗಳ ಸೋಗು ನನ್ನ ತಾಯಿ ಪ್ರಕೃತಿ ಮಾತೆ  ಹಾಕಿದ ಗೆರೆಯ ದಾಟಿ ಬರಲಾರೆನೇಳು  ಇದು ನನ್ನ ಸಂವೇದನೆಯ ಸೋಲು ! ​