ವಿಷಯಕ್ಕೆ ಹೋಗಿ

ವೀರ ಟಿಪ್ಪು ಸುಲ್ತಾನ್‌ಟಿಪ್ಪು ಸುಲ್ತಾನ್‌ ಮತಾಂಧನಗಿದ್ದ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆತನಿಂದ ನಡೆದ ಹತ್ಯೆಗಳು, ಯುದ್ದಗಳು ಎಲ್ಲದಕ್ಕೂ ಕಾರಣ ಆತನ ರಾಜ್ಯ ವಿಸ್ತರಿಸುವ, ತನ್ನೆದುರು ತಲೆ ಎತ್ತಿ ನಿಂತವರನ್ನು ಬಗ್ಗು ಬಡಿವ ಯುದ್ದೋನ್ಮಾದಗಳೇ ಕಾರಣವಾಗಿತ್ತು. ಈ ಯುದ್ದೋನ್ಮಾದ ಆತನ ತಂದೆ ಹೈದರಾಲಿಯಿಂದ ಬಂದುದು. ಹೈದರಾಲಿ ಮತ್ತು ಟಿಪ್ಪುವಿನ ಆಸ್ಥಾನ ಮಂತ್ರಿ ದಿವಾನ್‌ ಪೂರ್ಣಯ್ಯ ಒಬ್ಬ ಬ್ರಾಹ್ಮಣರಾಗಿದ್ದರು. ಹೈದರಾಲಿಯ ಕಾಲದಲ್ಲಿ ದುರ್ಗದ ಮದಕರಿ ನಾಯಕನನ್ನೂ ಸೇರಿದಂತೆ, ಪೇಶ್ವೆಗಳು ಮತ್ತು ಕೆಳದಿ, ಶೀರ್ವ, ರಾಮದುರ್ಗ ಮುಂತಾದ ಎಲ್ಲಾ ಹಿಂದು ಪಾಳೆಯಗಾರರನ್ನೂ ರಾಜರುಗಳನ್ನೂ ಸೋಲಿಸಲು ಪೂರ್ಣಯ್ಯನವರ ತಂತ್ರ ಕುತಂತ್ರಗಳೇ ಕಾರಣವಾಗಿದ್ದವು. ಮದಕರಿ ನಾಯಕನ ಮಂತ್ರಿ ಕೂಡಾ ಹೈದರಾಲಿಗೆ ದುರ್ಗದ ರಹಸ್ಯಗಳನ್ನು ಒದಗಿಸಿ ಮದಕರಿಯ ಸೋಲಿಗೆ ಕಾರಣವಾಗುತ್ತಾನೆ. ಹಾಗೆಯೇ ಹೈದರಾಲಿಯ ಮುಸ್ಲಿಂ ಸರ್ದಾರನೊಬ್ಬ ಕೂಡಾ ಮದಕರಿ ನಾಯಕನೊಂದಿಗೆ ಸ್ನೇಹ ಬೆಳೆಸಿ ಹೈದರಾಲಿಗೂ ಮೋಸ ಮಾಡುತ್ತಾನೆ. ಇವೆಲ್ಲಾ ಆಗಿನ ಸಂದರ್ಭದ ಸಹಜ ಘಟನಾವಳಿಗಳು. 
ಹೈದರಾಲಿಯಂತೆಯೇ ಯುದ್ದೋತ್ಸಾಹ ತೋರುವ ಟಿಪ್ಪು ಅಕ್ಕಪಕ್ಕದ ಪಾಳೆಗಾರರ ಮೇಲೆ ದಂಡೆತ್ತಿ ಹೋಗಿದ್ದರಲ್ಲಿ ಮತ್ತು ಅಲ್ಲಿ ಯುದ್ದ, ಸಾವು ನೋವು ಸಂಭವಿಸಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಹಾಗೆಯೇ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ, ಮಂಡ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಯಥೇಚ್ಚವಾಗಿರಬೇಕಿತ್ತು. ಅಂದು ಹಿಂದು ರಾಜರುಗಳೇ ಹಿಂದು ರಾಜ್ಯಗಳ ಮೇಲೆ ಡಂಡೆತ್ತಿ ಹೋಗುವುದೂ, ಭಯಂಕರ ಯುದ್ದ ಮಾಡುವುದೂ, ಕೊಳ್ಳೆ ಹೊಡೆಯುವುದೂ ಮಾಮೂಲಿ ಸಮಾಚಾರವಾಗಿತ್ತು. ದೇಶದ ಪರಿಕಲ್ಪನೆ ಇಲ್ಲದ ಸಮಯದ ಟಿಪ್ಪುವನ್ನು ದೇಶಭಕ್ತ ಎನ್ನುವುದು ಸಮಂಜಸವಲ್ಲ. ಅದರೆ ಆತನೊಬ್ಬ ವೀರನಾಗಿದ್ದ ಎಂಬುದರಲ್ಲಿ ಸಂದೇಹವಿಲ್ಲ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…