ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜನ ಮೆಚ್ಚಿದ ಯುವ ನಾಯಕ ಮಲ್ಲಿಕಾರ್ಜುನ ಹಕ್ರೆ

ಮೊನ್ನೆ ಊರಿಗೆ ಹೋದಾಗ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ಯಾರ‍್ಯಾರು ಗೆದ್ದರು, ಎಷ್ಟೆಷ್ಟು ಕೊಟ್ಟರು ಎಂಬುದರ ಬಗ್ಗೆಯೇ ಮಾತು ಕೇಳಿ ಬರುತ್ತಿದ್ದವು. ಬಹುತೇಕ ದುಡ್ಡು ಹಂಚಿದ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ ಎಂಬುದೂ ಗೊತ್ತಾಯಿತು. ಇನ್ನು ಕೆಲವು ಕಡೆ ಪಕ್ಷ ನೀಡಿದ ದುಡ್ಡನ್ನು ಮಧ್ಯವರ್ತಿಗಳು ಹೊಡೆದು ಹಾಕಿಕೊಂಡು ಪಕ್ಷದ ಅಭ್ಯರ್ಥಿಗಳು ಸೋಲುವಂತೆಯೂ ಮಾಡಿದ್ದಾರೆ. ಇದೆಲ್ಲಾ ಬದಿಗಿರಲಿ, ನನ್ನ ಗಮನ ಸೆಳೆದ ಒಬ್ಬ ಅಭ್ಯರ್ಥಿಯ ಬಗ್ಗೆ ಹೇಳಲೇ ಬೇಕು. ಅವರ ಹೆಸರು "ಮಲ್ಲಿಕಾರ್ಜುನ ಹಕ್ರೆ" ಜನರೆಲ್ಲಾ ಇವರನ್ನ ಪ್ರೀತಿಯಿಂದ "ಮಲ್ಲಿಕ್‌ ಗೌಡರು" ಎಂದೇ ಕರೆಯುತ್‌ಆರೆ. ಸಾಗರ ತಾಲ್ಲೂಕಿನಲ್ಲಿ ಯಾರನ್ನೇ ಕೇಳಿದರೂ ಗೊತ್ತಿಲ್ಲ ಅನ್ನುವ ಸಂಭವ ಕಡಿಮೆ. ಈಗಾಗಲೇ ಕಾಂಗ್ರೆಸ್‌ ಪಕ್ಷದ ಮೂಲಕ ತಾ.ಪಂ. ಅಧ್ಯಕ್ಷರಾಗಿಯೂ ಹೆಸರು ಮಾಡಿರುವ ಇವರು ನೇರ, ನಿಷ್ಟುರ ಮತ್ತು ಅದಕ್ಕಿಂತಾ ಹೆಚ್ಚಾಗಿ ಪ್ರಮಾಣಿಕ ಅಲ್ಲದೇ ಬಡವರ ಕಾಳಜಿ ಇರುವ ವ್ಯಕ್ತಿ. ಬಡವರಿಂದ ಲಂಚ ಕೇಳುವ ಯಾವ ಅಧಿಕಾರಿಯನ್ನೂ ಇವರು ನೆಮ್ಮದಿಯಿಂದ ಇರಲು ಬಿಟ್ಟವರಲ್ಲ. "ಯಾವ ಅಧಿಕಾರಿಗೂ ಯಾವ ಕೆಲಸಕ್ಕಾಗಿಯೂ ನಯಾಪೈಸೆ ಲಂಚ ಕೊಡಬೇಡಿ. ಅವರು ಕೇಳಿದರೆ ನನಗೆ ತಿಳಿಸಿ" ಎಂದು ಹೇಳುವ ಇವರು, ಯಾರಾದರೂ ಲಂಚ ಕೇಳಿದ ವಿಷಯ ತಿಳಿದರೆ ನಿಂತ ನಿಲುವಿನಲ್ಲೇ ಆ ಅಧಿಕಾರಿಗೆ ಕರೆ ಮಾಡಿ ಬೆವರಿಳಿಸುವ ಚಾತಿಯುಳ್ಳವರು. ಈ ಕಾರಣಕ್ಕಾಗಿಯೇ ಸಾಗರದ ಬಡ ಬಗ್ಗರು ಮಲ್ಲ