ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಪುಟ್ಟ ಗೆಳತಿಯ ಕರೆಗಾಗಿ ಕಾಯುತ್ತಾ...

​ ದಾವಣಗೆರೆಯ ಆ ಹುಡುಗಿ ನನಗೆ ಪರಿಚಯವಾಗಿದ್ದು ಸುಮಾರು ಐದು ವರ್ಷಗಳ ಹಿಂದೆ. ಆಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಒಂದು ದಿನ ಅವರ ಚಿಕ್ಕಪ್ಪನಿಗೆ ಮಾಡಿದ ಕರೆ ಗುರಿ ತಪ್ಪಿ ನನ್ನ ಮೊಬೈಲಿಗೆ ಬಂದಿತ್ತು. ರಾಂಗ್‌ ನಂಬರ್‌ ಅಂದರೂ ಕೇಳದೇ "ತಮಾಷೆ ಮಾಡ್ತಿದೀರ" ಅಂತ ಮಾತು ಮುಂದುವರಿಸಿದಳು. ನಾನು ನಿನ್ನ ಚಿಕ್ಕಪ್ಪ ಅಲ್ಲ ಅಂತ ಆಕೆಯನ್ನು ನಂಬಿಸಲು ಒಂದರ್ಧ ಗಂಟೆಯೇ ಹಿಡಿದಿತ್ತು. ಆಮೇಲೆ ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದ ಆಕೆ "ಸ್ಸಾರಿ" ಕೇಳಿದಳು. ಸರಿ ಅಂತ ನಾನೂ ಸುಮ್ಮನಾದೆ. ಆದರೆ ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿದ ಹುಡುಗಿ "ನಿಮ್ಮ ನಂಬರ್‌ ಚೆನ್ನಾಗಿದೆ, ಹಾಗಾಗಿ ನೆನಪಲ್ಲಿ ಇತ್ತು. (ಅವಳ ಚಿಕ್ಕಪ್ಪನ ನಂಬರಿಗೆ ಸಮೀಪದ್ದು ಬೇರೆ.) ಅದಕ್ಕೆ ಮತ್ತೊಮ್ಮೆ ಮಾತಾಡಿಸೋಣ ಅಂತ ಕಾಲ್‌ ಮಾಡಿದೆ" ಅಂದಳು. ಈ ಸಲ ನಾನೂ ಕುಶಿಯಿಂದ ಸಲುಗೆಯಿಂದ ಮಾತಾಡಿದೆ. ಅವಳ ಓದಿನ ಬಗ್ಗೆಯೆಲ್ಲಾ ವಿಚಾರಿಸಿದೆ. ಆಕೆ ತುಂಬಾ ಮುದ್ದು ಮುದ್ದಾಗಿ ಎಲ್ಲಾ ಹೇಳಿಕೊಂಡಳು. ಹೀಗೆ ನಮ್ಮ ಸ್ನೇಹ ಶುರುವಾಯ್ತು. ಆಕೆ ತನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡುತ್ತಿದ್ದುದರಿಂದ ನಾನು ಆ ನಂಬರನ್ನು ಸೇವ್‌ ಮಾಡಿಕೊಳ್ಳಲಿಲ್ಲ.  ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ನನಗೆ ಕರೆ ಮಾಡಿ ಮಾತಾಡುತ್ತಿದ್ದಳು. ಹೀಗೆ ದಿಗಳೆಯುತ್ತಾ ವರ್ಷಗಳುರುಳಿದಂತೆ ನಮ್ಮ ಸ್ನೇಹ ಹೆಚ್ಚು ಗಟ್ಟಿಯಾಯ್ತು. ಅದಾಗಲೇ ಆಕೆ SSLCಗೆ ಕಾಲಿರಿಸಿದ್ದಳು. ಜೊ

ಭೂಮಿಯು ಸೂರ್ಯನನ್ನು ಮೊಟ್ಟೆಯಾಕಾರದಲ್ಲಿ ಸುತ್ತುತ್ತಿದೆಯೇ ?

​[ಚಿತ್ರ ೧] ​ "ಭೂಮಿಯು ಸೂರ್ಯನನ್ನು ಮೊಟ್ಟೆಯಾಕಾರದಲ್ಲಿ ಸುತ್ತುತ್ತದೆ, ಬಾದಾಮಿ ಕಾಳಿನ ಆಕಾರದಲ್ಲಿ ಸುತ್ತುತ್ತದೆ" ಎಂಬುದನ್ನು ನಮ್ಮ ಪಾಠಗಳಲ್ಲಿ ಓದುತ್ತಾ ಬಂದಿದ್ದೇವೆ. ಕೆಲವು ಚಿತ್ರಗಳೂ [ಚಿತ್ರ ೧] ಇದನ್ನೇ ತೋರಿಸುತ್ತವೆ ಕೂಡಾ. ಭೂಮಿಯ ಸುತ್ತುವಿಕೆಯು ಸರಿಯಾದ ವೃತ್ತಾಕಾರದಲ್ಲಿ ಇಲ್ಲ ಅಂತ ಹೇಳಲು ವಿಜ್ಞಾನಿಗಳು ಮೊಟ್ಟೆ, ಬಾದಾಮಿಗಳನ್ನು ಉದಾಹರಿಸಿದರೋ ಅಥವಾ ವಿಜ್ಞಾನಿಗಳ ಮತ್ತು ಜನರ ನಡುವಿನವರು ಹಾಗೆ ಮಾಡಿದರೋ ಗೊತ್ತಿಲ್ಲ. ಆದರೆ ಭೂಮಿ ಮೊಟ್ಟೆಯಾಕಾರದಲ್ಲೋ, ಬಾದಾಮಿ ಆಕಾರದಲ್ಲೋ ಸೂರ್ಯನಿಗೆ ಸುತ್ತು ಹೊಡೆಯುವುದಿಲ್ಲ.  ಹಾಗೇನಾದರೂ ಮೊಟ್ಟೆಯಾಕಾರದಲ್ಲಿ ಸುತ್ತು ಹೊಡೆಯುತ್ತಿದ್ದಲ್ಲಿ ವರ್ಷಕ್ಕೆ ಎರಡು ಬಾರಿ ಬೇಸಗೆ ಕಾಲ ಬರಬೇಕಾಗಿತ್ತು. ಭೂಮಿಯ ಸೂರ್ಯನ ಸುತ್ತುವಿಕೆ ಸರಿಯಾಗಿ ವೃತ್ತಾಕಾರವಾಗಿ ಇಲ್ಲವಾದರೂ ಮೊಟ್ಟೆಯಾಕಾರದಲ್ಲೂ ಇಲ್ಲ. ಬದಲಿಗೆ ವೃತ್ತದಿಂದ ಸ್ವಲ್ಪ ಮಾತ್ರ ಉಬ್ಬಿದಂತಹ ಆಕಾರದಲ್ಲಿ ಸುತ್ತುತ್ತಿದೆ. (ಚಿತ್ರ ಚಿತ್ರ ೨ ನೋಡಿ) ಚಿತ್ರದಲ್ಲಿ ಹಸಿರು ಗೆರೆ ಭೂಮಿಯ ದಾರಿಯಾಗಿದೆ. ಬೂದು ಬಣ್ಣದ ಚಕ್ರ ಸೂರ್ಯನ ಸುತ್ತ ಸರಿಯಾದ ಅಳತೆಯ ವೃತ್ತವಾಗಿದೆ. ಈ ಚಿತ್ರವನ್ನು ನೋಡಿದಾಗ ನಮಗೆ ಭೂಮಿ ವರ್ಷಕ್ಕೆ ಒಂದೇ ಸಲ ಸೂರ್ಯನಿಗೆ ಹತ್ತಿರಾಗುತ್ತದೆ ಎಂಬುದು ಅರ್ಥವಾಗುತ್ತದೆ. ​​[ಚಿತ್ರ ೨]

ಸೂರ್ಯಮಂಡಲದ ಸರಿಯಾದ ಗಾತ್ರ ಮತ್ತು ದೂರವನ್ನು ಚಿತ್ರಗಳಲ್ಲಿ ತೋರಿಸಲು ಸಾಧ್ಯವಿಲ್ಲ !

​ ಸೂರ್ಯಮಂಡಲದ (solar system) ಚಿತ್ರಗಳಲ್ಲಿ ಸೂರ್ಯ ಮತ್ತು ಗ್ರಹಗಳ ನಡುವಿನ ದೂರವನ್ನು ಅವುಗಳ ಗಾತ್ರಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ತೋರಿಸಿರುವುದಿಲ್ಲ. ಏಕೆಂದರೆ ಅದು ಸಾಧ್ಯವೂ ಆಗುವುದಿಲ್ಲ. ಏಕೆಂದರೆ ಸೂರ್ಯನ ಬೃಹತ್‌ ಗಾತ್ರವನ್ನು ಕೇವಲ ಒಂದು ಸೆಂಟಿ ಮೀಟರಿಗೆ ಕುಗ್ಗಿಸಿದರೂ ಸೂರ್ಯನಿಂದ ಸರಿಯಾದ ಪ್ರಮಾಣದ ದೂರದಲ್ಲಿ ಭೂಮಿಯನ್ನು ತೋರಿಸಬೇಕಾದರೆ ಕನಿಷ್ಟ ಮೂರು ಮೀಟರ್‌ ಅಗಲದ ಹಾಳೆ ಬೇಕು. ಆದರೂ ಆಗ ಭೂಮಿಯನ್ನು ಒಂದು ಚಿಕ್ಕ ಚುಕ್ಕೆಯ ಮೂಲಕ ಮಾತ್ರ ತೋರಿಸಲು ಸಾಧ್ಯ. ಹೀಗೆ ಸೂರ್ಯ ಮತ್ತು ಗ್ರಹಗಳ ನಡುವಿನ ಅಗಾಧ ಗಾತ್ರದ ಮತ್ತು ದೂರದ ವ್ಯತ್ಯಾಸವಿರುವುದರಿಂದ ಸೂರ್ಯಮಂಡಲದ ಯಾವ ಚಿತ್ರವೂ ಪರಿಪೂರ್ಣವಲ್ಲ. ಉದಾಹರಣೆಗೆ ಸೂರ್ಯ ಒಂದು ಪುಟ್‌ಬಾಲ್‌ ಗಾತ್ರದಲ್ಲಿ ಇದ್ದಾನೆಂದುಕೊಂಡರೆ : ಸೂರ್ಯನಿಗೆ ಅತಿ ಹತ್ತಿರವಿರುವ ಬುಧ ಗ್ರಹವು ಸುಮಾರು ಮೂವತ್ತು ಅಡಿ ದೂರದಲ್ಲಿ ಇರುತ್ತದೆ. ಅದೇ ರೀತಿ ಉಳಿದ ಗ್ರಹಗಳು ಈ ಕೆಳ ಕಂಡಂತೆ ಸೂರ್ಯನಿಂದ ದೂರ ಇರಬೇಕಾಗುತ್ತದೆ... ಶುಕ್ರ : ೫೭ ಅಡಿ  ಭೂಮಿ : ೭೮ ಅಡಿ  ಮಂಗಳ : ೧೨೦ ಅಡಿ  ಗುರು : ೪೦೫ ಅಡಿ ಉಳಿದಂತೆ ಶನಿ, ಯೂರೆನಸ್‌ಗಳನ್ನು ದಾಟಿ ನೆಪ್ಚೂನ್‌ ನೋಡಿದರೆ ಸೂರ್ಯನಿಂದ ಸಾವಿರ ಅಡಿಗಿಂತಲೂ ದೂರ ಇರುತ್ತದೆ.  ಹೀಗೆ ಒಂದು ಸಾವಿರ ಅಡಿಯ ಸೂರ್ಯ ಮಂಡಲವನ್ನು ಕುಗ್ಗಿಸಿ ೧೫ ಇಂಚಿಗೆ (ಕಾಗದದ ಗಾತ್ರಕ್ಕೆ) ಇಳಿಸಿದರೆ ಸೂರ್ಯನೇ ಒಂದು ಚುಕ್ಕೆಯಾಗುತ್ತಾನೆ, ಮತ್ತು ಉಳಿದ ಯಾವ ಗ್ರಹಗಳೂ ಕಾ