ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭೂಮಿಯ ಕಾಂತ ವಲಯ ಬದಲಾಗುವ ಹೊತ್ತಲ್ಲಿ..

ಸೂರ್ಯನಿಂದ ಬರುವ ರೆಡಿಯೇಷನ್ ಕಿರಣಗಳನ್ನು ಭೂಮಿಯ ಕಾಂತ ವಲಯ ತಡೆದು ಇಲ್ಲಿನ ಜೀವಿಗಳನ್ನು ಪೊರೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಅಂದರೆ ಒಂದೇ ಒಂದು ನಿಮಿಷ ಭೂಮಿಯ ಈ ಕಾಂತ ವಲಯ ಕೆಲಸ ನಿಲ್ಲಿಸಿದರೂ ಸಾಕು, ಬಹಳಷ್ಟು ಜೀವಿಗಳ ನಾಶ ಮತ್ತು ಉಳಿದರೂ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದ್ದೇ ಇದೆ.  ಆದರೆ ಹೀಗೆ ಭೂಮಿಯ ಕಾಂತ ವಲಯ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಲು ಸಾದ್ಯವೇ ಎಂದು ನೋಡಲು ಹೋದರೆ "ಹೌದು, ಅದೂ ಆಗುತ್ತದೆ" ಎಂದು ಹೇಳುತ್ತಾರೆ ವಿಜ್ಞಾನಿಗಳು.  ಭೂಮಿಯ ಕಾಂತ ವಲಯವು ತೆಂಕಣ ಮತ್ತು ಬಡಗಣ ತುದಿಗಳನ್ನು ಹೊಂದಿದೆ ತಾನೇ, ಈ ತುದಿಗಳು ಸುಮಾರು ಐವತ್ತು ಸಾವಿರದಿಂದ ಲಕ್ಷ ವರ್ಷಗಳ ಒಳಗೆ ಒಂದು ಸಲ ತೆಂಕಣ ತುದಿಯು ಬಡಗಣಕ್ಕೂ, ಬಡಗಣ ತುದಿಯು ತೆಂಕಣಕ್ಕೂ ಬದಲಾಗುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂದರೆ ಈಗ ಒಂದು ದಿಕ್ಸೂಚಿಯನ್ನು ಎಲ್ಲಿ ಇಟ್ಟರೂ ಅದು ಈಗ ಬಡಗು ದಿಕ್ಕನ್ನು ತೋರಿಸುತ್ತೆ. ಆದರೆ ಭೂಮಿಯ ಕಾಂತ ವಲಯ ತಲೆ ಕೆಳಗು ಆಯ್ತು ಅಂದರೆ ದಿಕ್ಸೂಚಿಯು ತೆಂಕು ದಿಕ್ಕನ್ನು ತೋರಿಸಲು ತೊಡಗುತ್ತೆ. ಇದು ಸುಮಾರು 50 ಸಾವಿರ ವರ್ಷಗಳಿಗೆ ಒಮ್ಮೆ ಹೀಗೆ ಬದಲಾಗುತ್ತ ಇರುತ್ತೆ ಅನ್ನೋದು ವಿಜ್ಞಾನಿಗಳ ಹೇಳಿಕೆ. ಆದರೆ ಅದು ಯಾಕೆ ಬದಲಾಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಈ ರೀತಿ ಈ ಹಿಂದೆ ಬದಲಾಗಿ ಆಗಲೇ 50 ಸಾವಿರ ವರ್ಶ ಕಳೆದಿದ್ದು ಮುಂದಿನ ಬದಲಾವಣೆ ಯಾವ ಹೊತ್ತಲ್ಲ

ಚಿಂಗ್ರಿ ಶೋಕಿಯವ ಕಾಣುತ್ತಿಲ್ಲ...

ನಾನು ಸಾಗರದ ಜೂನಿಯರ್ ಕಾಲೇಜಿಗೆ ಹೋಗ್ತಾ ಇದ್ದಾಗ ಸಾಗರ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನದು ಒಂತರ ಏಕ ವ್ಯಕ್ತಿ ನಾಟಕದ ರೀತಿಯ ಜೀವನ. ಸಾಗರದ ಎರಡು ಮೂರು ಕಡೆ ಅವನದೇ ಆದ ಜಾಗ ಇತ್ತು. ಅದರಲ್ಲಿ ಒಂದು ಪ್ರಸಿದ್ದ ಜಾಗ ಅಂದರೆ ದೊಡ್ಡ ಅಸ್ಪತ್ರೆಯ ಎದುರಿನ ಪುಟ್ ಪಾತು. ಮದ್ಯಾಹ್ನ ಸುಮಾರು ಮೂರು ಗಂಟೆಗೆ ಅವನ ಶೋ ಪ್ರಾರಂಭ ಆಗುತ್ತಿತ್ತು. ಶ್ರೀ ಟಾಕಿಸು ಮತ್ತು ಸಾಗರ ಟಾಕಿಸಿನಲ್ಲಿ ಮ್ಯಾಟ್ನಿ ತಪ್ಪಿಸಿಕೊಂಡವರು, ಸಂತೆ ಗಿಂತೆ ಏನೂ ಅಲ್ಲದೆ ಯಾವ್ದೋ ಸರ್ಕಾರಿ ಕಚೇರಿ ಕೆಲಸಕ್ಕೆ ಬಂದವರು, ಆ ಸಮಯಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಇದ್ದವರು... ಹೀಗೆ ಕೆಲವಾರು ಮಂದಿ ಅವನ ಪ್ರದರ್ಶನದ ಗಿರಾಕಿಗಳು ಮತ್ತು ಕುರಿಗಳು. ನಾವು ಮದ್ಯಾಹ್ನದ ಕ್ಲಾಸಿಗೆ ಚಕ್ಕರ್ ಹಾಕಿಯೋ, ಅಥವಾ ಟೀಚರೇ ಚಕ್ಕರ್ ಹಾಕಿದ್ದರಂತಲೂ... ಒಟ್ಟಿನಲ್ಲಿ ನೆಹರು ಮೈದಾನದಲ್ಲಿ ದಾಟಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಇಳಿದರೆ ನೇರ ಹೋಗಿ ನಿಲ್ಲುತ್ತಿದ್ದುದು ಅವನ ಪ್ರದರ್ಶನದ ಎದುರೇ. ಹಾಗೆ ನೋಡಿದರೆ ಅವನ ಬಳಿ ಏನೂ ಇರಲಿಲ್ಲ, ಒಂದು ತಮಟೆ, ಒಂದು ಪುಂಗಿ ಮತ್ತೊಂದು ಕೇರೆ ಹಾವು! ಅಷ್ಟೇ ಇದ್ದಿದ್ದು. ಅಷ್ಟು ಬಿಟ್ಟರೆ ಉಳಿದಂತೆ ಅವನ ಬಂಡವಾಳ ಮಾತು ಮಾತು ಮಾತು.. ಅಷ್ಟೇ. ಆ ಕೇರೆ ಹಾವನ್ನು ಅವನು ಯಾವತ್ತೂ ಪೂರ್ತಿ ತೆರೆದು ತೋರಿಸಿದ್ದು ನಾನು ನೋಡಲಿಲ್ಲ. ಒಂದು ದಬ್ಬಾದ ಒಳಗೆ ಅಡನ್ನು ಇಟ್ಟು, ಒಂಚೂರು ಬಾಲ ಮಾತ್ರ ಹೊರಗೆ ಕಾಣಿಸುವಂತೆ ಮಾಡಿರುತ್ತಿದ್ದ. ಆದರೆ ಹೇಳುವುದು ಮ

ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ!

ನಾವು, ಅಂದರೆ ಕನ್ನಡಿಗರು ಒಂದು ವಿಷಮ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮ ಜೊತೆ ನಮ್ಮ ಕನ್ನಡ ನುಡಿಯೂ ಅತಂತ್ರವಾಗುತ್ತಿದೆ. ಇದಕ್ಕೆ ಕಾರಣ ಯಾವುದೋ ಹೊರ ದೇಶದ ಜನರೋ, ಅಥವಾ ಹೊರ ದೇಸದ ಭಾಷೆಯೋ ಅಲ್ಲ, ಬದಲಾಗಿ ನಮ್ಮದೇ ದೇಶದ ಹಿಂದಿ! ಇಂದು ಹಿಂದಿ ಎಂಬ ಪೆಡಂಭೂತ ದಿನ ದಿನವೂ ಕನ್ನಡ ನಾಡನ್ನು, ನಮ್ಮ ನುಡಿಯನ್ನು, ಕೊನೆಗೆ ಕನ್ನಡಿಗರನ್ನೂ ನುಂಗಿ ಹಾಕುತ್ತಲಿದೆ. ಆದರೆ ನಿರ್ಲಜ್ಜರಾದ ಕನ್ನಡಿಗರು ಕೇವಲ ದೇಶಪ್ರೇಮದ ಹೆಸರಲ್ಲಿ ಎಲ್ಲವನ್ನೂ ಸಹಿಸಿಕೊಂಡು ಸಹನಾಶೀಲರಾಗಿ ಕೊರಗುತಿದ್ದೇವೆ. ಕೆಲವು ವರ್ಷಗಳ ಹಿಂದೆ ಆಂಗ್ಲ ಶಾಲೆಗಳು ಹೆಚ್ಚು, ಹೆಚ್ಚು ತಲೆ ಎತ್ತತೊಡಗಿದಾಗ ಕನ್ನಡಿಗರು ಆತಂಕಗೊಂಡಿದ್ದರು. ಮುಂದೆ ಒಂದು ದಿನ ಈ ಪರಕೀಯ ಆಂಗ್ಲ ನುಡಿ ನಮ್ಮ ಕನ್ನಡ ನುಡಿಯನ್ನೇ ತಿಂದು ಹಾಕಲಿದೆ ಎಂದು ಭಯಗೊಂಡಿದ್ದಿದೆ. ಆದರೆ ಕಾಲ ಕಳೆದಂತೆ ಆಂಗ್ಲದಿಂದ ಕನ್ನಡಕ್ಕೆ ಅಷ್ಟೇನೂ ತೊಂದರೆ ಇಲ್ಲ ಅನ್ನುವುದು ಗೊತ್ತಾಯಿತು. ಹಾಗೆಯೇ ಲೋಕಜ್ಞಾನಕ್ಕಾಗಿ, ಪ್ರಪಂಚದ ಆಗು ಹೋಗುಗಳ ತಿಳುವಳಿಕೆಗಾಗಿ, ದೈನಂದಿನ ವಿಜ್ಞಾನದ ಬೆಳವಣಿಗೆಗಳ ಮಾಹಿತಿಗಾಗಿ ಆಂಗ್ಲ ನುಡಿ ಅತ್ಯವಶ್ಯ ಎಂಬ ಸತ್ಯವೂ ಅರವಿಗೆ ಬಂತು. ಆದರೆ ಅಷ್ಟರಲ್ಲಾಗಲೇ ಇನ್ನೊಂದು ಹಿಂಬಾಗಿಲಿನಿಂದ ಹಿಂದಿ ಎಂಬ ಜಂತುವೊಂದು ಸದ್ದಿಲ್ಲದೇ ಸುಂದರವಾದ ವೇಶವೊಂದನ್ನು ತೊಟ್ಟು ಬಂದು ನಮ್ಮ ನಾಡನ್ನು ಮತ್ತು ನಮ್ಮ ಮನ, ಮನೆಯನ್ನು ಸೇರಿಕೊಂಡಾಗಿತ್ತು. ಹಾಗೆ ಅದು ತೊಟ್ಟು ಬಂದ ನಕಲಿ ವೇಶದ ಹೆಸರೇ "ರಾಷ್ತ್ರಭ

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ