ಮೊನ್ನೆ ಮೊನ್ನೆ "ಹಿಂದಿಯಾ" ಅನ್ನೋ ಹೋಟೆಲಿಗೆ ಹೋಗಿದ್ದೆ.
ತಿನ್ನಲು ಏನೇನಿದೆ ? ಅಂತ ಕೇಳಿದ್ದಕ್ಕೆ "ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಚಿತ್ರಾನ್ನ..." ಎಂಬ ಉತ್ತರ ಬಂತು.
"ಇಡ್ಲಿ ಕೊಡಿ" ಅಂದೆ,
"ಕ್ಷಮಿಸಿ, ಇಡ್ಲಿ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.
"ದೋಸೆ ಕೊಡಿ"
"ಕ್ಷಮಿಸಿ, ದೋಸೆ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.
"ಚಿತ್ರಾನ್ನ ಕೊಡಿ"
"ಕ್ಷಮಿಸಿ, ಚಿತ್ರಾನ್ನ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.
ನನಗೆ ಬೇಕಾದ್ದು ಇಲ್ಲಿ ಸಿಗಲ್ಲ, ಸರಿ ನಾನು ಹೊರಗೆ ಹೋಗ್ತೀನಿ ಎಂದು ಎದ್ದೆ.
ನನ್ನನ್ನು ತಡೆದು ಹೇಳಿದರು.. "ಏನೂ ತಿನ್ನದೆ ಹೋಗುವ ಹಾಗೆಯೇ ಇಲ್ಲ, ಇದು "ಕಡ್ಡಾಯ ತಿನ್ನಣ"
"ಆದರೆ ಚಪಾತಿಯನ್ನೇ ತಿನ್ನಬೇಕು ಅಂತ ಕಡ್ಡಾಯ ಮಾಡ್ತಿದೀರಲ್ಲ? ಇದು ಚಪಾತಿ ಹೇರಿಕೆ ಅಲ್ವಾ ?"
"ಇಲ್ಲ, ಚಪಾತಿ ತಿನ್ನಬೇಕು ಅನ್ನೋದು ಐಚ್ಚಿಕ ವಿಷಯ. ಯಾರಿಗೂ ಹೇರಿಕೆ ಮಾಡುತ್ತಿಲ್ಲ. ಜೊತೆಗೆ ಬೇರೆ ಬೇರೆ ತಿನಿಸುಗಳೂ ಇವೆಯಲ್ಲ, ನಿಮಗೆ ಇಷ್ಟ ಬಂದಿದ್ದನ್ನ ತಿನ್ನಬಹುದು."
"ಆದರೆ ಬೇರೆ ತಿನಿಸು ಯಾವುದೂ ತಯಾರಿಲ್ಲವಲ್ಲ ?"
"ಹೌದು, ಹಾಗಾಗಿ ನೀವು ಚಪಾತಿ ತಿನ್ನಲೇ ಬೇಕು."
ಚಪಾತಿ ಜಾಗದಲ್ಲಿ ಹಿಂದಿ ಹಾಕಿಕೊಳ್ಳಿ, ಆಗ ಅರ್ಥ ಆಗುತ್ತೆ, ಪರಕೀಯ ಹಿಂದಿಯನ್ನರು ನಮ್ಮ ಮೇಲೆ ಹೇಗೆ "ಐಚ್ಚಿಕ" ಹೆಸರಲ್ಲಿ "ಕಡ್ಡಾಯ ಹಿಂದಿ" ಹೇರಿದ್ದಾರೆ ಎಂದು.

ಕಾಮೆಂಟ್ಗಳು