ವಿಷಯಕ್ಕೆ ಹೋಗಿ

ಹುಡುಗಿಯರು ಯಾಕೆ 'ತುಂಬಾ ಒಳ್ಳೆಯ ಹುಡುಗ'ರನ್ನ ಪ್ರೀತಿ ಮಾಡಲ್ಲ ?

ತುಂಬಾ ಸಲ ಹುಡುಗರು ಹೇಳ್ತಾ ಇರೋದನ್ನು ಕೇಳಿರುತ್ತೇವೆ ಏನೆಂದರೆ ಹುಡುಗೀರು ಎಂಥೆಂಥವರನ್ನೋ ಪ್ರೀತಿ ಮಾಡುತ್ತಾರೆ ಆದರೆ ನಮ್ಮಂಥ ಒಳ್ಳೆ ಹುಡುಗನ ಪ್ರೀತಿ ಮಾಡಲ್ಲ ಅಂತ. ಇದು ನಿಜ ಕೂಡ. ತುಂಬಾ ಒಳ್ಳೆ ಹುಡುಗರನ್ನ ಹುಡುಗಿಯರು ಯಾಕೆ ಪ್ರೀತಿ ಮಾಡಲ್ಲ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಾ ಇದ್ರೆ ಈ ವಿಡಿಯೋನ ನೋಡಿ. ಸಾಧಾರಣವಾಗಿ "ತುಂಬಾ ಒಳ್ಳೆಯ ಹುಡುಗ"ರನ್ನು ಯಾವ ಹುಡುಗಿ ಕೂಡ ಪ್ರೀತಿ ಮಾಡೋದಿಲ್ಲ.

ಅಂತಹ ಹುಡುಗರ ಜೊತೆ ಹುಡುಗೀರು ಗೆಳೆತನ ಮಾಡ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ಹೆಲ್ಪ್ ತಗೊಳ್ತಾರೆ ಮತ್ತು ತಮ್ಮ ಕಷ್ಟ ಸುಖಗಳನ್ನ ಹೇಳಿಕೊಳ್ಳುತ್ತಾರೆ. ಆದರೆ ಅಪ್ಪಿ ತಪ್ಪಿಯೂ ಪ್ರೀತಿ ಮಾತ್ರ ಮಾಡೋದಿಲ್ಲ. ಒಂದು ವೇಳೆ ಮಾಡಿದರೂ ಕೂಡ ಆ ಪ್ರೀತಿ ತುಂಬಾ ದಿನ ಬಾಳೋದು ಕಷ್ಟ. ನಿಧಾನವಾಗಿ ಹುಡುಗೀರು ಆ "ತುಂಬಾ ಒಳ್ಳೆಯ ಹುಡುಗ"ರಿಂದ ದೂರಾಗಿ ಬಿಡುತ್ತಾರೆ. ಅದೇ ಹುಡುಗಿಯರು ಒರಟರನ್ನು, ಪಟಿಂಗರನ್ನು, ರೋಡ್ ರೋಮಿಯೋಗಳನ್ನು, ಪೊರ್ಕಿಗಳನ್ನು, ಕಣ್ಣು ಮುಚ್ಚಿಕೊಂಡು ಪ್ರೀತಿ ಮಾಡ್ತಾ ಇರ್ತಾರೆ. ಇದು ಒಳ್ಳೆಯ ಹುಡುಗರ ಪಾಲಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತೆ.

ತುಂಬಾ ಹುಡುಗರಿಗೆ ಹುಡುಗಿಯರ ಈ ನಿಲುವು ಅರ್ಥವಾಗುವುದೇ ಇಲ್ಲ. ಹಾಗಾಗಿ ಎಷ್ಟೋ ಜನ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹಣ ಮತ್ತು ಸಮಯವನ್ನು ಕಳೆಯುತ್ತಿರುತ್ತಾರೆ. ಆದರೆ ಇಂತಹ ಗೆಳೆತನಗಳು ಪ್ರೀತಿಯಾಗಿ ಬದಲಾಗದೆ, ಅಥವಾ ಒಂದು ಬದಿಯ ಪ್ರೀತಿ ಮಾತ್ರವೇ ಆಗಿ ಕೊನೆಗೊಮ್ಮೆ ಹೆಚ್ಚು ಸಮಯ ನಿಲ್ಲದೆ ಮುರಿದು ಬೀಳುತ್ತವೆ. ಆಗ ಅದೇ ಹುಡುಗ "ತಾನು ಇಷ್ಟು ಒಳ್ಳೆಯವನಾಗಿದ್ದರೂ ಆ ಹುಡುಗಿ ನನ್ನನ್ನು ಬಿಟ್ಟು ಹೋದಳು. ಒಳ್ಳೆಯ ಹುಡುಗರನ್ನು ಹುಡುಗಿಯರು ಪ್ರೀತಿ ಮಾಡಲ್ಲ. ಮೋಸಗಾರರ ವಂಚಕರ ಬಲೆಗೆ ಬಿದ್ದು ಹಾಳಾಗ್ತಾರೆ." ಅಂತ ಹೇಳಿಕೊಂಡು ತಿರುಗಾಡಲು ಶುರು ಮಾಡುತ್ತಾನೆ.

ಇನ್ನು ಕೆಲವು ಹುಡುಗರು ಹುಡುಗಿ ಮೋಸ ಮಾಡಿದ್ಲು ಅಂತ ಹೇಳುತ್ತಾ ಕುಡಿತ, ಸಿಗರೇಟು ಮುಂತಾದ ಕೆಟ್ಟ ಅಭ್ಯಾಸಗಳನ್ನು ಮೈ ಮೇಲೆ ಎಳೆದುಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಆತ್ಮಹತ್ಯೆಯಂತಹ ಕೆಲಸಗಳಿಗೆ ಕೈ ಹಾಕುವುದು ಕೂಡ ಇದೆ. ಈ ರೀತಿ ಹುಡುಗಿಯ ಜೊತೆಗೆ ಸಮಯ, ಹಣ ಕೊನೆಗೆ ಜೀವನವನ್ನು ಕಳೆದುಕೊಳ್ಳುವವರಲ್ಲಿ "ತುಂಬಾ ಒಳ್ಳೆಯ ಹುಡುಗ"ರೇ ಹೆಚ್ಚು.

ಯಾಕೆ ಹೀಗಾಗುತ್ತೆ? ಹುಡುಗೀರು ಯಾಕೆ ತುಂಬಾ ಒಳ್ಳೆಯ ಹುಡುಗರನ್ನು ಪ್ರೀತಿ ಮಾಡೋದಕ್ಕೆ ಇಷ್ಟ ಪಡೋದಿಲ್ಲ? ಉತ್ತರ ಅಷ್ಟು ಸರಳವಲ್ಲ.

ಯಾಕೆ ಹೀಗೆ ಅಂತ ನೋಡಲು ಹೋದರೆ... ಮೊದಲನೆಯದಾಗಿ "ತುಂಬಾ ಒಳ್ಳೆಯ ತನ" ಅನ್ನೋದು ಹೆಚ್ಚಿನ ಸಮಯ ಸುಳ್ಳಾಗಿರುತ್ತೆ! ಇದು ಹುಡುಗಿಯರಿಗೂ ತಿಳಿದಿರುತ್ತೆ. ಬಹಳಷ್ಟು ಹುಡುಗರು "ತುಂಬಾ ಒಳ್ಳೆಯ ಹುಡುಗ"ನ ತರ ನಾಟಕ ಆಡುತ್ತಾರೆ. ಆದರೆ ಬಹುತೇಕ ಹುಡುಗರು ಹುಡುಗಿಯರಿಂದ ಅಂತರಂಗದಲ್ಲಿ ನಿರೀಕ್ಷಿಸುವುದು ಅಪ್ಪುಗೆ, ಮುತ್ತು, ರೋಮನ್ಸ್ ಮತ್ತು ಕೊನೆಯಲ್ಲಿ ಸೆಕ್ಸ್ ಅನ್ನೇ. ಆದರೆ ಎದುರಲ್ಲಿ ಅದನ್ನು ತೋರಿಸಿಕೊಳ್ಳದೆ ಪ್ರೀತಿಯ ವೇಶ ತೊಟ್ಟಿರುತ್ತಾರೆ. ಆ ಪ್ರೀತಿಯನ್ನು ದಕ್ಕಿಸಿಕೊಳ್ಳಲು "ತುಂಬಾ ಒಳ್ಳೆಯ ಹುಡುಗ"ರಂತೆ ಮತ್ತೊಂದು ನಾಟಕ ಮಾಡುತ್ತಾರೆ. ಇದರ ಅನುಭವ ಹುಡುಗಿಯರಿಗೆ ಈ ಹಿಂದೆಯೇ ಆಗಿರಬಹುದು. ಅಥವಾ "ತುಂಬಾ ಒಳ್ಳೆಯತನ" ಅನ್ನೋದು ತನ್ನ ನಿರೀಕ್ಷೆಗಳನ್ನು ಪೂರೈಸಲು ಸೋಲುತ್ತದೆ ಎಂಬ ಅವಳ ಹಿಂಜರಿಕೆಯೂ ಕಾರಣ ಇರಬಹುದು.

ಇನ್ನು ಎರಡನೇ ಕಾರಣ ಅನನುಭವ ಮತ್ತು ಆತುರ. ಹುಡುಗರಿಗೆ ಒಂದು ಹುಡುಗಿ ಇಷ್ಟವಾದಳು ಅಂದರೆ ತನ್ನ ಪ್ರೀತಿಯನ್ನು ತಿಳಿಸಿ ಬಿಡಲು ಆತುರ ತೋರುತ್ತಾರೆ. ಆದರೆ ಹುಡುಗಿಯರು ಹಾಗೆಲ್ಲ ಮೊದಲ ಭೇಟಿಯಲ್ಲೇ ಯಾರ ಮೇಲೂ ಪ್ರೀತಿಯನ್ನು ಹೊಂದುವುದಿಲ್ಲ. ಅದನ್ನು ಇನ್ನೂ ಪರಿಚಯದ ಮಟ್ಟದಲ್ಲಿ ಇಟ್ಟಿರುತ್ತಾರೆ. ಮತ್ತು ಅವರು ಭೇಟಿಯಾಗುವ ಹುಡುಗರ ಬಗ್ಗೆಯೆಲ್ಲ ಯೋಚಿಸುತ್ತಾ ಕೂರುವುದಿಲ್ಲ. ಆದರೆ ಇತ್ತ ಹುಡುಗರು ತಮ್ಮ ಮೊದಲ ಭೇಟಿಯಲ್ಲೇ ಹುಡುಗಿಯರ ಕಡೆಗೆ ಒಂದು ಆಕರ್ಷಣೆಯನ್ನು ಬೆಳೆಸಿಕೊಂಡು ಆಕೆಯ ಬಗ್ಗೆ ಯೋಚಿಸಲು ತೊಡಗುತ್ತಾರೆ. ಇದು ಹುಡುಗರು ಮತ್ತು ಹುಡುಗಿಯರ ನಡುವಿನ ಯೋಚನಾ ವಿಧಾನದಲ್ಲಿ ಇರುವ ದೊಡ್ಡ ಕಂದಕ ಅನ್ನಬಹುದು.

ಹುಡುಗರ ಮನಸ್ಸು ಹೇಗೆ ಅಂದರೆ ತಮಗೆ ಯಾವುದನ್ನು ಪಡೆಯಲು ಸಾಧ್ಯವಿಲ್ಲ ಅನ್ನಿಸುತ್ತದೆಯೋ ಅದನ್ನೇ ಹೆಚ್ಚಾಗಿ ಬಯಸುತ್ತದೆ! ಹಾಗೆಯೇ ಹುಡುಗಿಯರು ಹೆಚ್ಚಾಗಿ ಹೊಸ ಪ್ರೇಮಿಗಿಂತ ಈ ಹಿಂದೆಯೇ ಪ್ರೀತಿ ಮಾಡಿ ಅನುಭವ ಇರುವಂತಹ ಹುಡುಗರನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇದೊಂದು ಸೈಕಲಾಜಿಕಲ್ ಒಗಟಾಗಿದ್ದು ಸರಿಯಾದ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಆದರೆ ಹುಡುಗಿಯರ ಇಂತಹ ಆಯ್ಕೆಯ ಹುಡುಗರು ಅಂದರೆ ಅದು ಸಹಜವಾಗಿ ಪೋಲಿಗಳು ಮತ್ತು ಒರಟು ಹುಡುಗರೇ ಆಗಿರುತ್ತಾರೆ. ಅಂತ ಹುಡುಗರೆ ತಮಗೆ ಹೆಚ್ಚು ರಕ್ಷಣೆ ಕೊಡಬಲ್ಲರು ಅನ್ನುವುದು ಹುಡುಗಿಯರ ಒಂದು ನಂಬಿಕೆ. ಇನ್ನೊಂದು ಬದಿಯಲ್ಲಿ "ತುಂಬಾ ಒಳ್ಳೆಯ ಹುಡುಗ"ರು ಹುಡುಗಿಯರ ಈ ಬೇಡಿಕೆಯನ್ನು ಪೂರೈಸುವಲ್ಲಿ ಸೋಲುತ್ತಾರೆ. ಎಲ್ಲಿ ಈ ಹುಡುಗಿ ತನ್ನನ್ನು ಬಿಟ್ಟು ಹೋಗಿ ಬಿಡುತ್ತಾಳೋ ಎಂಬ ಕೀಳರಿಮೆಯಿಂದ ಅವಳನ್ನು ಮೆಚ್ಚಿಸಲು ಸದಾ ಹಾತೊರೆಯುತ್ತ ಇರುತ್ತಾರೆ. ಆದರೆ ಒರಟು ಹುಡುಗರು ಈ ರೀತಿ ಮಾಡದೆ ಅವರು ತಮ್ಮ ಪ್ರೀತಿಯ ಬಗ್ಗೆ ಒಂದು ಅಸಡ್ಡೆ ಅಥವಾ ಬೇಜವಾಬ್ದಾರಿಯನ್ನು ತೋರುತ್ತಾರೆ. ಹಾಗೆಯೇ ಒಮ್ಮೆ ಒರಟು ಹುಡುಗರ ಒಲುಮೆಯಲ್ಲಿ ಬಿದ್ದ ಹುಡುಗಿಯು ಅವನನ್ನು ಇನ್ನಷ್ಟು ತನ್ನತ್ತ ಸೆಳೆಯಲು, ಒಲಿಸಿಕೊಳ್ಳಲು ಪ್ರಯತ್ನಿಸುತ್ತಾ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸತೊಡಗುತ್ತಾಳೆ. ಒಳ್ಳೆಯ ಹುಡುಗರು ಅನ್ನಿಸಿಕೊಂಡವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹುಡುಗಿಯರ ದಾಸರಾಗುತ್ತಾರೋ ಅದೇ ತರ ಹುಡುಗಿಯರು ಒರಟು ಹುಡುಗರ ಪ್ರೀತಿಯನ್ನು ಉಳಿಸಿಕೊಳ್ಳಲು ಅವರ ದಾಸಿಯರಾಗಿ ಬಿಡುತ್ತಾರೆ. ಒಳ್ಳೆಯ ಹುಡುಗರು ತಮ್ಮ ಒಳ್ಳೆಯತನದ ರಕ್ಷಣೆಗಾಗಿ ಅನಿಸಿದ್ದನ್ನೆಲ್ಲ ಹೇಳಲು ಸಾಧ್ಯವಾಗದೇ ಕಷ್ಟ ಪಡುತ್ತಿದ್ದರೆ ಒರಟು ಹುಡುಗರು ಯಾವುದೇ ಮುಜುಗರ ಸಂಕೋಚ ಇಲ್ಲದೆ ತಮಗನಿಸಿದ್ದನ್ನು ಹುಡುಗಿಯರ ಬಳಿ ಹೇಳುತ್ತಿರುತ್ತಾರೆ. ಅದು ಎಂತಹ ವಿಷಯವಾಗಿದ್ದರೂ ಹುಡುಗನ ಈ ತೆರೆದ ಮನಸ್ಸನ್ನು ಹುಡುಗಿಯರು ಒಪ್ಪಿಕೊಂಡು ಬಿಡುತ್ತಾರೆ. ಆದರೆ ಅದೇ ಸಮಯ ಒಳ್ಳೆಯ ಹುಡುಗರ ಬಗ್ಗೆ ಒಂದು ಅಪನಂಬಿಕೆಯು ಹೆಚ್ಚುತ್ತಾ ಹೋಗುತ್ತದೆ.

ಹಾಗಿದ್ದರೆ ಒಳ್ಳೆಯ ಹುಡುಗರು ಏನು ಮಾಡಬೇಕು? ಅವರಿಗೆ ಹುಡುಗಿಯರು ಅಥವಾ ಹುಡುಗಿಯರ ಪ್ರೀತಿ ಸಿಗೋದೆ ಇಲ್ವಾ. ಅವರು ನಿಜವಾದ ಪ್ರೀತಿಯನ್ನು ಪಡೆಯುವುದು ಸಾಧ್ಯನೇ ಇಲ್ವಾ. ಅನ್ನುವ ಕೇಳ್ವಿಗಳು ನಿಮ್ಮಲ್ಲಿ ಮೂಡಿರಬಹುದು. ಒಂದು ವೇಳೆ ನೀವು ಈಗಾಗಲೇ "ತುಂಬಾ ಒಳ್ಳೆಯ ಹುಡುಗ" ಅನ್ನುವ ಸರ್ಟಿಫಿಕೇಟ್ ಅನ್ನು ಹುಡುಗಿಯರಿಂದ ಪಡೆದುಕೊಂಡಿದ್ದರೆ, ನಿಮ್ಮ ನಡವಳಿಕೆಯಲ್ಲಿ ಈ ಕೂಡಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ.

ಅವು ಏನೆಂದರೆ, ಮೊದಲಿಗೆ ಈ "ಒಳ್ಳೆ ಹುಡುಗ' ಅನ್ನುವ ಮುಖವಾಡವನ್ನು ತೆಗೆದು ಎಸೆದು ಬಿಡಿ. ತುಂಬಾ ಒಳ್ಳೆಯತನ ಅನ್ನುವುದು ಎಲ್ಲಿಯೂ ಇಲ್ಲ. ಎಲ್ಲೋ ಲಕ್ಷಕ್ಕೆ ಒಬ್ಬ ಸಾಧು ಸಂತರ ಬಳಿ ಅದು ಇರಬಹುದೇನೋ. ಅದು ಬೇಕೇ ಬೇಕು ಅಂದರೆ ನೀವು ಜೀವನದಲ್ಲಿ ಪ್ರೀತಿಯನ್ನು ಮಾತ್ರವಲ್ಲ ಇನ್ನೂ ಬಹಳಷ್ಟನ್ನು ತ್ಯಾಗ ಮಾಡುತ್ತಾ ಹೋಗಬೇಕಾಗುತ್ತದೆ.
"ನೀನು ತುಂಬಾ ಒಳ್ಳೆಯ ಹುಡುಗ ಕಣೋ" ಅಂತ ಯಾರಾದರೂ ಹೇಳಿದರೆ, ಅವರಿಗೆ "ಹಾಗೇನಿಲ್ಲ ನಾನು ಎಲ್ಲರ ರೀತಿ ಸಾಧಾರಣ ಹುಡುಗ" ಅಂತ ಹೇಳಿ, ಮತ್ತು ತುಂಬಾ ಒಳ್ಳೆಯತನವನ್ನು ಬಿಟ್ಟು ಸಾಧಾರಣ ವ್ಯಕ್ತಿಯಾಗಿ ನಡೆದುಕೊಳ್ಳಿ. ಅವರು ನಿಮಗೆ ಯಾಕೆ ಬೇಡದ "ತುಂಬಾ ಒಳ್ಳೆ ಹುಡುಗ" ಅನ್ನುವ ಸಂಕೋಲೆಯನ್ನು ತೊಡಿಸುತ್ತಿದ್ದಾರೆ ಅನ್ನುವುದನ್ನು ತಿಳಿದುಕೊಳ್ಳಿ. ಅಂದರೆ ನಿಮ್ಮ ನಿಮ್ಮಲ್ಲಿ ಇರುವ ಅಸಹಜ ನಡವಳಿಕೆಯನ್ನು ಬದಳಿಸಿಕೊಳ್ಳಿ.

"ತುಂಬಾ ಒಳ್ಳೆಯವ" ಎಂಬ ಸರ್ಟಿಫಿಕೇಟ್ ಸಿಗುತ್ತಿರುವ ಕಾರಣಗಳನ್ನು ಗಮನ ಇಟ್ಟು ನೋಡಿ. ಕೆಲವೊಂದು ಕಾರಣಗಳು ತುಂಬಾ ಹಾಸ್ಯಾಸ್ಪದವೂ ಅಸಹಜವೂ ಆಗಿರುತ್ತವೆ. ಉದಾಹರಣೆಗೆ ನೀವು ಹುಡುಗಿಯರ ಜೊತೆ ಹೆಚ್ಚು ಮಾತಾಡಲ್ಲ, ಹೆಚ್ಚಾಗಿ ಬೇರೆಯಲ್ಲ ಅನ್ನುವ ಕಾರಣಕ್ಕೆ ಏನಾದರೂ ನಿಮಗೆ "ಒಳ್ಳೆಯವ" ಎಂಬ ಸರ್ಟಿಫಿಕೇಟ್ ಸಿಕ್ಕಿರಬಹುದು. ಆದರೆ ಅದು ಒಳ್ಳೆಯತನ ಅಲ್ಲ, ಅಸಹಜತೆ ಅನ್ನೋದನ್ನ ಮೊದಲು ಅರ್ಥ ಮಾಡ್ಕೋಬೇಕು. ಈ ರೀತಿಯ ಕಾರಣಗಳಿಂದ ನಿಮ್ಮನ್ನು ಹುಡುಗಿಯರು "ತುಂಬಾ ಒಳ್ಳೆಯ ಹುಡುಗ" ಅನ್ನುತ್ತಿದ್ದಾರೆ ಅಂದರೆ ಪ್ರೀತಿ ಸಿಗದಿರುವುದಕ್ಕೆ ಹೊಣೆ ಅವರಲ್ಲ, ನೀವೇ. ಇಂತಹ ನಡೆಗಳನ್ನು ಆದಷ್ಟು ಬೇಗನೆ ತಿದ್ದಿಕೊಂಡು ಒಳ್ಳೆಯ ಹುಡುಗ ಅನ್ನಿಸಿಕೊಳ್ಳಲು ಪ್ರಯತ್ನ ಪಡದೆ, ಕೇವಲ ಹುಡುಗ ಆಗಲು ಪ್ರಯತ್ನ ಪಡಿ. ಎಲ್ಲರಂತೆ ಸಹಜವಾಗಿ ಇರಲು ಪ್ರಯತ್ನಿಸಿ. ನಿಮಗೆ ಖಂಡಿತವಾಗಿ ಒಳ್ಳೆಯ ಪ್ರೀತಿ ಸಿಕ್ಕೆ ಸಿಗುತ್ತದೆ.

ನಿಮಗೆ ಈ ವಿಡಿಯೋ ಇಷ್ಟವಾಗಿದ್ದರೆ ಲೈಕ್ ಕಾಮೆಂಟ್ ಮಾಡಿ. ಮತ್ತು ನಿಮ್ಮ ಪ್ರೀತಿಯ ಅನುಭವಗಳು ಏನು ಅನ್ನೋದನ್ನು ಕಾಮೆಂಟ್ ಮಾಡಿರಿ. ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,

ಹೆಣ್ಣಿನ ಕಣ್ಣು : ಸುಂದರವಷ್ಟೇ ಅಲ್ಲ... ಸೂಕ್ಷ್ಮವೂ ಹೌದು

ಮಹಿಳೆಯರ ಕಣ್ಣು ಪುರುಷರ ಕಣ್ಣಿಗಿಂತಲೂ ತುಂಬಾ ಸೂಕ್ಷ್ಮ. ಅವರು ಎದುರಿನ ವ್ಯಕ್ತಿಗಳ ಭಾವನೆಗಳನ್ನು ಬರಿಯ ನೋಟವೊಂದರಿಂದಲೇ ತಿಳಿದುಕೊಂಡು ಬಿಡುತ್ತಾರೆ. ಇದು ಪುರುಷರಿಂದ ಅಸಾಧ್ಯ. ಕಣ್ಣು ಮಾತ್ರವಲ್ಲದೇ ಸ್ತ್ರೀಯರ ಎಲ್ಲಾ ಗ್ರಹಣೇಂದ್ರಿಯಗಳೂ ಸಹ ತುಂಬಾ ಸೂಕ್ಷ್ಮ ಸಂವೇದಿಗಳೆಂಬುದರಲ್ಲಿ ಎರಡು ಮಾತಿಲ್ಲ ! ಅದಕ್ಕಾಗಿಯೆ ಹುಡುಗಿಯರೊಂದಿಗೆ ವ್ಯವಹರಿಸುವಾಗ ಹುಡುಗರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಏಕೆಂದರೆ ಹುಡುಗನ ಮನದಲ್ಲೇಳುವ ಕಾಮನೆಗಳನ್ನೆಲ್ಲಾ ಹುಡುಗಿ ಅವನ ಮುಖಭಾವದಿಂದಲೇ ಗ್ರಹಿಸಿಬಿಡುವ ಸಾಮಥ್ರ್ಯ ಹೊಂದಿದ್ದಾಳೆ. ತನ್ನೊಂದಿಗೆ ಸ್ನೇಹದಿಂದ ವತರ್ಿಸುವ ಹುಡುಗನನ್ನೂ, ಸ್ನೇಹದ ನೆಪದಲ್ಲಿ ಪ್ರೇಮ ವ್ಯಕ್ತಪಡಿಸುವ ಹುಡುಗನನ್ನೂ ಹುಡುಗಿಯೊಬ್ಬಳು ಬಹುಬೇಗನೆ ಗುರುತಿಸಿಬಿಡುತ್ತಾಳೆ. ಆದರೂ ಕೆಲವು ಹುಡುಗಿಯರು ತಿಳಿದೂ ತಿಳಿಯದಂತಿರುತ್ತಾರೆ. ಅದಕ್ಕೆ ಕಾರಣವೇನೆಂದರೆ ಮುಂದೇನು ಮಾಡಬೇಕೆಂಬುದು ಅವರಿಗೆ ತೋಚುವುದಿಲ್ಲ. ವಿವೇಚನೆಗಿಂತಾ ಭಾವನೆಗೇ ಹೆಚ್ಚು ಮಹತ್ವ ಕೊಡುತ್ತಾರವರು. ಆ ಹುಡುಗನೊಂದಿಗಿನ ಸ್ನೇಹವನ್ನು ಕಳೆದುಕೊಳ್ಳಲಿಚ್ಚಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹುಡುಗಿಯೊಬ್ಬಳು ಹುಡುಗನೊಂದಿಗಿನ ತನ್ನ ಸ್ನೇಹವನ್ನು ಮುರಿದುಕೊಂಡಳೆಂದರೆ ಅದಕ್ಕೆ ಕಾರಣ ಹೆಚ್ಚಾಗಿ ಅವನೇ ಆಗಿರುತ್ತಾನೆ. ಹೆಣ್ಣಾದವಳು ತನ್ನ ಸುತ್ತ ಮುತ್ತಲಿನ ಆಗು ಹೋಗುಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ, ಅಷ್ಟೇ ವಿವರವಾಗಿ ಗ್ರಹಿಸುತ್ತಾಳೆ. ಗಂಡ ತಡವ

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ   ಸಮ್ಮೋಹನ ಅಂದರೇನು ? ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು. ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ