ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್‌ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು: ತಡೆ 1: ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು.  ಕಾರ್ಪೊರೇಟ್‌ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಮೋದಿ ಕೊಟ್ಟ ಪರಿಹಾರ: ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ.  ಕಾರ್ಪೊರೇಟ್‌ಗಳು ಈಗ ಸಂತೋಷವಾಗಿದ್ದಾರೆ. ತಡೆ 2: ಕಾರ್ಪೊರೇಟ್‌ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು.  ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು. ಮೋದಿ ಕೊಟ್ಟ ಪರಿಹಾರ: ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು.  ಕಾರ್ಪೊರೇಟ್‌ಗಳು ಮತ್ತೆ ಸಂತೋಷಗೊಂಡಿದ್ದಾರೆ. ತಡೆ 3: ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾರೆ ಎಂದು ನಿರ್ಣಯಿಸುವ

ಹಂಡ್ರೆಡ್ ಉಲ್ಲಾನ ಜೊತೆ ಹಿಂದಿ ಪಾಸ್ ಮಾಡಿದ್ದು...

ನಮಗೆ 6ನೆ ತರಗತಿಗೆ ಹಿಂದಿ ಇತ್ತು. ಅದೇ ಹೊತ್ತಿಗೆ ನಮಗೆ ಒಳ್ಳೆಯ ಒಬ್ರು ಸಾಬರು ಮೇಷ್ಟ್ರು ಕೂಡ ಬಂದಿದ್ದರಿಂದ ಹಿಂದಿಯನ್ನು ಅವರು ಒಂದಿಷ್ಟು ಕಲಿಸಿದರು. ಆಮೇಲೆ ಸಾಗರದ ಜೂನಿಯರ್ ಕಾಲೇಜು (ಹೈಸ್ಕೂಲು) ಸೇರಿದಾಗ ಹಿಂದಿ ಪುಸ್ತಕ ದಪ್ಪ ಇದ್ದಿದ್ದು ನೋಡಿ ಹೆದರಿಕೆ ಆಯ್ತು. ಅಷ್ಟರಲ್ಲೇ ಸಾಬ್ರು ಮೇಷ್ಟ್ರು ಕಡೆಯಿಂದ ಓದಲು ಬರುತ್ತಿತ್ತು, ಆದ್ರೆ ಅರ್ಥ ಆಗುತ್ತಿರಲಿಲ್ಲ. ಈ ಹೈಸ್ಕೂಲ್ ಅಲ್ಲಿ ನನ್ನ ಪಕ್ಕ ಒಬ್ಬ ಸಾಬ್ರು ಹುಡುಗ ಕೂರುತ್ತಾ ಗೆಳೆಯ ಆದ. ಅವನನ್ನು ನಾವು 'ಹಂಡ್ರೆಡ್ ಉಲ್ಲಾ' ಅಂತ ಕೀಟಲೆ ಮಾಡ್ತಾ ಇದ್ವಿ. ಯಾಕೆ ಅಂದ್ರೆ ಅವನ ಹೆಸರು 'ನೂರು'ಲ್ಲಾ ಅಂತ! ಅವನಿಗೆ ಹಿಂದಿ ಓದಲು ಬರ್ತೀರಲಿಲ್ಲ, ಆದ್ರೆ ಉರ್ದು ಕಾರಣಕ್ಕೆ ಅರ್ಥ ಆಗುತ್ತಿತ್ತು. ಪರೀಕ್ಷೆಯಲ್ಲಿ ಹೆಚ್ಚಾಗಿ ನಾವು ಅಕ್ಕ ಪಕ್ಕವೋ, ಹಿಂದೆ ಮುಂದೆಯೂ ಕೂರುವಂತೆ ಇರುತ್ತಿತ್ತು. ಪ್ರಶ್ನೆಪತ್ರಿಕೆಯನ್ನು ನಾನು ನಿಧಾನಕ್ಕೆ ಓದಿ ಹೇಳುತ್ತಿದ್ದೆ. ಅವನು ಅದನ್ನು ಅರ್ಥ ಮಾಡಿಕೊಂಡು ಉತ್ತರ ಹೇಳುತ್ತಿದ್ದ, ನಾನು ಬರೆಯುತ್ತಿದ್ದೆ, ಅದನ್ನು ನೋಡಿಕೊಂಡು ಅವನೂ ಬರೆಯುತ್ತಿದ್ದ! ಒಟ್ಟಿನಲ್ಲಿ ಪ್ರಶ್ನೆಗಳನ್ನು ನಾನು ಏನು ಓದಿದೆನೋ, ಅವನು ಏನು ಅರ್ಥ ಮಾಡಿಕೊಂಡನೋ, ಏನು ಉತ್ತರ ಹೇಳಿದನೋ, ನಾನು ಏನು ಬರೆದೇನೋ, ಅದನ್ನು ನೋಡುತ್ತಾ ಅವನು ಇನ್ನೇನು ಬರೆದನೋ... ಇಬ್ಬರಿಗೂ ಗೊತ್ತಿಲ್ಲ! ಕೊನೆಗಂತು ಹಿಂದಿಲಿ ಇಬ್ರು ಪಾಸ್ ಅಂತೂ ಆಗಿದ್ವಿ. ಹಿಂದಿಯ ಹಿಂದೆ ಈ ದೇಶದ ಅ

ಚೌಡಿ, ಬೂತಗಳ ಮಡಿಲಲ್ಲಿ...

ದಲಿತ ಮುಖಂಡರೊಬ್ಬರ ಮನೆಯಲ್ಲಿ ಮೊನ್ನೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಕಾರಣಕ್ಕೆ ಬಿಸಿ ಬಿಸಿ ಮಾತುಕತೆ ನಡೆದಿದೆ. ಅದು ತಪ್ಪೋ ಸರಿಯೋ ಗೊತ್ತಿಲ್ಲ, ಆದರೆ ನಾನು ನಮ್ ಮನೆ ಬಗ್ಗೆ ಯೋಚಿಸುತ್ತಾ ಇದ್ದೆ.  ನನಗಂತೂ ದೇವ್ರು ದಿಂಡ್ರು ಏನೂ ಇಲ್ಲ. ಆದರೆ ನಮ್ ಅಪ್ಪ ಅವ್ವ ಒಂದಿಷ್ಟು ನಂಬುತ್ತಿದ್ದರು. ಅವರು ನಂಬಿ ನಡೆದುಕೊಂಡು ಬಂದಿದ್ದು ಅಂತಿಂತ ದೇವರುಗಳಿಗೆ ಅಲ್ಲ, ಬೂತ, ಚೌಡಿ, ಯಕ್ಷಿಗಳಂತಹ ಸ್ವಲ್ಪ ಟೆನ್ಷನ್ ಗಿರಾಕಿಗಳು ಅವು. ಅವು ಬಿಟ್ಟರೆ ದೂರದಲ್ಲಿ ಹುಲಿದೇವರು ಇದೆ. ಅದಕ್ಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಮನೆಯಲ್ಲಿ ಎಷ್ಟು ಹಸು ಕರುಗಳು ಇವೆಯೋ ಅಷ್ಟು ತೆಂಗಿನಕಾಯಿ ಕೊಟ್ಟರೆ ಸಾಕು. ಹುಲಿ ನಮ್ ಮನೆ ಕಡೆ ಸುಳಿಯಲ್ಲ! ಯಾವಾಗಲೋ ಒಂದು ಸಲ ಸಾಗರದ ಗಣಪತಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಶಿಕಾರಿಪುರದ ಹನುಮಂತನಿಗೆ ಹಣ್ಣುಕಾಯಿ ಕೊಡುವುದಿದೆ. ಅಷ್ಟು ಬಿಟ್ಟರೆ ನಮಗೂ ರಾಮ, ಕೃಷ್ಣ, ಲಕ್ಷ್ಮಿ ಮುಂತಾದ ಮೇಲ್ಮಟ್ಟದ ದೇವರುಗಳಿಗೂ ಸಂಬಂಧವಿಲ್ಲ.  ನಮ್ ಮನೆಯ ಒಂದು ಕಿ.ಮೀ. ಸುತ್ತಳತೆಯಲ್ಲಿ ಕಡಿಮೆ ಅಂದರೂ ಅರ್ಧ ಡಜನ್ ಬೂತ, ಚೌಡಿಗಳ ಬಣ್ಣಗಳು ಇವೆ. ಇವಕ್ಕೆಲ್ಲಾ ಕಾಲ ಕಾಲಕ್ಕೆ ತೆಂಗಿನ ಕಾಯಿ, ಹೂವು ಅಷ್ಟೇ ಅಲ್ಲದೆ ನಾಲಿಗೆ ರುಚಿ ಕೆಡದಿರಲಿ ಅಂತ ಕೋಳಿ, ಕುರಿ ಊಟದ ವ್ಯವಸ್ಥೆ ಮಾಡುವುದು ನಡೆದುಕೊಂಡು ಬಂದಿದೆ. ನಮ್ ಮನೆ ಚೌಡಮ್ಮನಂತೂ ಹೆಚ್ಚು ಕಡಿಮೆ ಮನೆ ಪಕ್ಕವೇ ಬಂದು ಕುಂತಿದ್ದಾಳೆ. ಮನೆಗೆ ಯಾರಾದ್ರೂ ಪುಟ್ಟ ಮಕ್ಕಳು ಬಂದರೆ ಅವುಗಳನ್ನು

ಹಿಂದಿಯೇತರರ ಮೇಲೆ ಇಂಡಿಯಾ ಹೂಡಿರುವ ಯುದ್ದ!

ಇಂಡಿಯಾ ಒಕ್ಕೂಟ 1947 ರಿಂದಲೂ ಒಂದು ಯುದ್ಧವನ್ನು ಮಾಡುತ್ತಾ ಬಂದಿದೆ! ಅದು ಪರೋಕ್ಷ ಯುದ್ದ. ಯಾರ ಮೇಲೆ ಅಂದರೆ 'ತನ್ನದೇ ಪ್ರಜೆಗಳು' ಅಂತ ನಂಬಿಸಲಾಗಿರುವ ಹಿಂದಿಯೇತರ ಜನರ ಮೇಲೆ! ಹಿಂದಿಯೇತರ ನುಡಿಗಳ ನಾಶ ಮತ್ತು ಆ ಜನರ ಸ್ವಾತಂತ್ರ್ಯ ಹರಣ ಈ ಯುದ್ಧದ ಉದ್ದೇಶ. ಇದು ಚೀನಾ ದೇಶವು ಮುಸ್ಲಿಮರ ಅಸ್ತಿತ್ವವನ್ನು ಹೊಸಕಿ ಹಾಕುತ್ತಿರುವಷ್ಟೇ ಕ್ರೌರ್ಯದ ಕೆಲಸ.  ಇದನ್ನು ಯಾರು ಶುರು ಮಾಡಿದರು ಅಂತ ನೋಡಲು ಹೋದರೆ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ದೊಡ್ಡ ದೊಡ್ಡ ಹೆಸರುಗಳೇ ಮುಂದೆ ಬರುತ್ತವೆ. ಜಾತಿ ಸಮಾನತೆಗೆ ಅಷ್ಟು ಮಹತ್ವ ಕೊಟ್ಟ ಅದೇ ಅಂಬೇಡ್ಕರ್ ನುಡಿ ಸಮಾನತೆಯನ್ನು ಮಾತ್ರ ಕಡೆಗಣಿಸಿದ್ದು ಆಘಾತ ಉಂಟುಮಾಡುವ ವಿಷಯ. ಒಕ್ಕೂಟ ರಚನೆಯಾದ ಹೊಸದರಲ್ಲಿ 'ಒಂದಾಗುವಿಕೆ'ಗಾಗಿ ಹಾಗೆ ಮಾಡಲಾಯ್ತು ಅಂತ ತೇಪೆ ಹಾಕಬಹುದು ಅಷ್ಟೇ. ತಮಾಷೆ ಅಂದರೆ ಡಿಎಂಕೆ ಬಿಟ್ಟರೆ ಯಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳುಇ ಇದರ ಬಗ್ಗೆ ದನಿ ಎತ್ತುತಿಲ್ಲ! ಆದರೆ ಅಲ್ಲಿಂದ ಶುರುವಾದ ನಮ್ಮ ಸ್ವಾತಂತ್ರ್ಯ ಹರಣದ ಕೆಲಸ ಇಂದೂ ನಿಂತಿಲ್ಲ, ಬಿಜೆಪಿ ಆಡಳಿತದಲ್ಲಿ ಅದು ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಇದನ್ನು ತಡೆಯುವುದು ಹೇಗೆ? ನಮ್ಮ ನುಡಿಯ ಜೊತೆಗೆ ನಮ್ಮತನವನ್ನು ಉಳಿಸಿಕೊಳ್ಳುವುದು ಹೇಗೆ?  ಮೊದಲಿಗೆ ಈ ಹಿಂದಿ ಒಕ್ಕೂಟದ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶ ಅನ್ನುವುದು ಒಂದು ಬೋಗಸ್ ಬಣ್ಣ, ಇದರ ಹಿಂದೆ ಇರುವುದು