ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಂಡ್ರೆಡ್ ಉಲ್ಲಾನ ಜೊತೆ ಹಿಂದಿ ಪಾಸ್ ಮಾಡಿದ್ದು...

ನಮಗೆ 6ನೆ ತರಗತಿಗೆ ಹಿಂದಿ ಇತ್ತು. ಅದೇ ಹೊತ್ತಿಗೆ ನಮಗೆ ಒಳ್ಳೆಯ ಒಬ್ರು ಸಾಬರು ಮೇಷ್ಟ್ರು ಕೂಡ ಬಂದಿದ್ದರಿಂದ ಹಿಂದಿಯನ್ನು ಅವರು ಒಂದಿಷ್ಟು ಕಲಿಸಿದರು. ಆಮೇಲೆ ಸಾಗರದ ಜೂನಿಯರ್ ಕಾಲೇಜು (ಹೈಸ್ಕೂಲು) ಸೇರಿದಾಗ ಹಿಂದಿ ಪುಸ್ತಕ ದಪ್ಪ ಇದ್ದಿದ್ದು ನೋಡಿ ಹೆದರಿಕೆ ಆಯ್ತು. ಅಷ್ಟರಲ್ಲೇ ಸಾಬ್ರು ಮೇಷ್ಟ್ರು ಕಡೆಯಿಂದ ಓದಲು ಬರುತ್ತಿತ್ತು, ಆದ್ರೆ ಅರ್ಥ ಆಗುತ್ತಿರಲಿಲ್ಲ. ಈ ಹೈಸ್ಕೂಲ್ ಅಲ್ಲಿ ನನ್ನ ಪಕ್ಕ ಒಬ್ಬ ಸಾಬ್ರು ಹುಡುಗ ಕೂರುತ್ತಾ ಗೆಳೆಯ ಆದ. ಅವನನ್ನು ನಾವು 'ಹಂಡ್ರೆಡ್ ಉಲ್ಲಾ' ಅಂತ ಕೀಟಲೆ ಮಾಡ್ತಾ ಇದ್ವಿ. ಯಾಕೆ ಅಂದ್ರೆ ಅವನ ಹೆಸರು 'ನೂರು'ಲ್ಲಾ ಅಂತ! ಅವನಿಗೆ ಹಿಂದಿ ಓದಲು ಬರ್ತೀರಲಿಲ್ಲ, ಆದ್ರೆ ಉರ್ದು ಕಾರಣಕ್ಕೆ ಅರ್ಥ ಆಗುತ್ತಿತ್ತು. ಪರೀಕ್ಷೆಯಲ್ಲಿ ಹೆಚ್ಚಾಗಿ ನಾವು ಅಕ್ಕ ಪಕ್ಕವೋ, ಹಿಂದೆ ಮುಂದೆಯೂ ಕೂರುವಂತೆ ಇರುತ್ತಿತ್ತು. ಪ್ರಶ್ನೆಪತ್ರಿಕೆಯನ್ನು ನಾನು ನಿಧಾನಕ್ಕೆ ಓದಿ ಹೇಳುತ್ತಿದ್ದೆ. ಅವನು ಅದನ್ನು ಅರ್ಥ ಮಾಡಿಕೊಂಡು ಉತ್ತರ ಹೇಳುತ್ತಿದ್ದ, ನಾನು ಬರೆಯುತ್ತಿದ್ದೆ, ಅದನ್ನು ನೋಡಿಕೊಂಡು ಅವನೂ ಬರೆಯುತ್ತಿದ್ದ! ಒಟ್ಟಿನಲ್ಲಿ ಪ್ರಶ್ನೆಗಳನ್ನು ನಾನು ಏನು ಓದಿದೆನೋ, ಅವನು ಏನು ಅರ್ಥ ಮಾಡಿಕೊಂಡನೋ, ಏನು ಉತ್ತರ ಹೇಳಿದನೋ, ನಾನು ಏನು ಬರೆದೇನೋ, ಅದನ್ನು ನೋಡುತ್ತಾ ಅವನು ಇನ್ನೇನು ಬರೆದನೋ... ಇಬ್ಬರಿಗೂ ಗೊತ್ತಿಲ್ಲ! ಕೊನೆಗಂತು ಹಿಂದಿಲಿ ಇಬ್ರು ಪಾಸ್ ಅಂತೂ ಆಗಿದ್ವಿ. ಹಿಂದಿಯ ಹಿಂದೆ ಈ ದೇಶದ ಅ

ಚೌಡಿ, ಬೂತಗಳ ಮಡಿಲಲ್ಲಿ...

ದಲಿತ ಮುಖಂಡರೊಬ್ಬರ ಮನೆಯಲ್ಲಿ ಮೊನ್ನೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಕಾರಣಕ್ಕೆ ಬಿಸಿ ಬಿಸಿ ಮಾತುಕತೆ ನಡೆದಿದೆ. ಅದು ತಪ್ಪೋ ಸರಿಯೋ ಗೊತ್ತಿಲ್ಲ, ಆದರೆ ನಾನು ನಮ್ ಮನೆ ಬಗ್ಗೆ ಯೋಚಿಸುತ್ತಾ ಇದ್ದೆ.  ನನಗಂತೂ ದೇವ್ರು ದಿಂಡ್ರು ಏನೂ ಇಲ್ಲ. ಆದರೆ ನಮ್ ಅಪ್ಪ ಅವ್ವ ಒಂದಿಷ್ಟು ನಂಬುತ್ತಿದ್ದರು. ಅವರು ನಂಬಿ ನಡೆದುಕೊಂಡು ಬಂದಿದ್ದು ಅಂತಿಂತ ದೇವರುಗಳಿಗೆ ಅಲ್ಲ, ಬೂತ, ಚೌಡಿ, ಯಕ್ಷಿಗಳಂತಹ ಸ್ವಲ್ಪ ಟೆನ್ಷನ್ ಗಿರಾಕಿಗಳು ಅವು. ಅವು ಬಿಟ್ಟರೆ ದೂರದಲ್ಲಿ ಹುಲಿದೇವರು ಇದೆ. ಅದಕ್ಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಮನೆಯಲ್ಲಿ ಎಷ್ಟು ಹಸು ಕರುಗಳು ಇವೆಯೋ ಅಷ್ಟು ತೆಂಗಿನಕಾಯಿ ಕೊಟ್ಟರೆ ಸಾಕು. ಹುಲಿ ನಮ್ ಮನೆ ಕಡೆ ಸುಳಿಯಲ್ಲ! ಯಾವಾಗಲೋ ಒಂದು ಸಲ ಸಾಗರದ ಗಣಪತಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಶಿಕಾರಿಪುರದ ಹನುಮಂತನಿಗೆ ಹಣ್ಣುಕಾಯಿ ಕೊಡುವುದಿದೆ. ಅಷ್ಟು ಬಿಟ್ಟರೆ ನಮಗೂ ರಾಮ, ಕೃಷ್ಣ, ಲಕ್ಷ್ಮಿ ಮುಂತಾದ ಮೇಲ್ಮಟ್ಟದ ದೇವರುಗಳಿಗೂ ಸಂಬಂಧವಿಲ್ಲ.  ನಮ್ ಮನೆಯ ಒಂದು ಕಿ.ಮೀ. ಸುತ್ತಳತೆಯಲ್ಲಿ ಕಡಿಮೆ ಅಂದರೂ ಅರ್ಧ ಡಜನ್ ಬೂತ, ಚೌಡಿಗಳ ಬಣ್ಣಗಳು ಇವೆ. ಇವಕ್ಕೆಲ್ಲಾ ಕಾಲ ಕಾಲಕ್ಕೆ ತೆಂಗಿನ ಕಾಯಿ, ಹೂವು ಅಷ್ಟೇ ಅಲ್ಲದೆ ನಾಲಿಗೆ ರುಚಿ ಕೆಡದಿರಲಿ ಅಂತ ಕೋಳಿ, ಕುರಿ ಊಟದ ವ್ಯವಸ್ಥೆ ಮಾಡುವುದು ನಡೆದುಕೊಂಡು ಬಂದಿದೆ. ನಮ್ ಮನೆ ಚೌಡಮ್ಮನಂತೂ ಹೆಚ್ಚು ಕಡಿಮೆ ಮನೆ ಪಕ್ಕವೇ ಬಂದು ಕುಂತಿದ್ದಾಳೆ. ಮನೆಗೆ ಯಾರಾದ್ರೂ ಪುಟ್ಟ ಮಕ್ಕಳು ಬಂದರೆ ಅವುಗಳನ್ನು