ವಿಷಯಕ್ಕೆ ಹೋಗಿ

ಚೌಡಿ, ಬೂತಗಳ ಮಡಿಲಲ್ಲಿ...

ದಲಿತ ಮುಖಂಡರೊಬ್ಬರ ಮನೆಯಲ್ಲಿ ಮೊನ್ನೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಕಾರಣಕ್ಕೆ ಬಿಸಿ ಬಿಸಿ ಮಾತುಕತೆ ನಡೆದಿದೆ. ಅದು ತಪ್ಪೋ ಸರಿಯೋ ಗೊತ್ತಿಲ್ಲ, ಆದರೆ ನಾನು ನಮ್ ಮನೆ ಬಗ್ಗೆ ಯೋಚಿಸುತ್ತಾ ಇದ್ದೆ. 
ನನಗಂತೂ ದೇವ್ರು ದಿಂಡ್ರು ಏನೂ ಇಲ್ಲ. ಆದರೆ ನಮ್ ಅಪ್ಪ ಅವ್ವ ಒಂದಿಷ್ಟು ನಂಬುತ್ತಿದ್ದರು. ಅವರು ನಂಬಿ ನಡೆದುಕೊಂಡು ಬಂದಿದ್ದು ಅಂತಿಂತ ದೇವರುಗಳಿಗೆ ಅಲ್ಲ, ಬೂತ, ಚೌಡಿ, ಯಕ್ಷಿಗಳಂತಹ ಸ್ವಲ್ಪ ಟೆನ್ಷನ್ ಗಿರಾಕಿಗಳು ಅವು. ಅವು ಬಿಟ್ಟರೆ ದೂರದಲ್ಲಿ ಹುಲಿದೇವರು ಇದೆ. ಅದಕ್ಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಮನೆಯಲ್ಲಿ ಎಷ್ಟು ಹಸು ಕರುಗಳು ಇವೆಯೋ ಅಷ್ಟು ತೆಂಗಿನಕಾಯಿ ಕೊಟ್ಟರೆ ಸಾಕು. ಹುಲಿ ನಮ್ ಮನೆ ಕಡೆ ಸುಳಿಯಲ್ಲ! ಯಾವಾಗಲೋ ಒಂದು ಸಲ ಸಾಗರದ ಗಣಪತಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಶಿಕಾರಿಪುರದ ಹನುಮಂತನಿಗೆ ಹಣ್ಣುಕಾಯಿ ಕೊಡುವುದಿದೆ. ಅಷ್ಟು ಬಿಟ್ಟರೆ ನಮಗೂ ರಾಮ, ಕೃಷ್ಣ, ಲಕ್ಷ್ಮಿ ಮುಂತಾದ ಮೇಲ್ಮಟ್ಟದ ದೇವರುಗಳಿಗೂ ಸಂಬಂಧವಿಲ್ಲ. 

ನಮ್ ಮನೆಯ ಒಂದು ಕಿ.ಮೀ. ಸುತ್ತಳತೆಯಲ್ಲಿ ಕಡಿಮೆ ಅಂದರೂ ಅರ್ಧ ಡಜನ್ ಬೂತ, ಚೌಡಿಗಳ ಬಣ್ಣಗಳು ಇವೆ. ಇವಕ್ಕೆಲ್ಲಾ ಕಾಲ ಕಾಲಕ್ಕೆ ತೆಂಗಿನ ಕಾಯಿ, ಹೂವು ಅಷ್ಟೇ ಅಲ್ಲದೆ ನಾಲಿಗೆ ರುಚಿ ಕೆಡದಿರಲಿ ಅಂತ ಕೋಳಿ, ಕುರಿ ಊಟದ ವ್ಯವಸ್ಥೆ ಮಾಡುವುದು ನಡೆದುಕೊಂಡು ಬಂದಿದೆ. ನಮ್ ಮನೆ ಚೌಡಮ್ಮನಂತೂ ಹೆಚ್ಚು ಕಡಿಮೆ ಮನೆ ಪಕ್ಕವೇ ಬಂದು ಕುಂತಿದ್ದಾಳೆ. ಮನೆಗೆ ಯಾರಾದ್ರೂ ಪುಟ್ಟ ಮಕ್ಕಳು ಬಂದರೆ ಅವುಗಳನ್ನು ಅಳಿಸಿ ( ನಮ್ ಅಮ್ಮನ ಪ್ರಕಾರ ) ಒಂದು ತೆಂಗಿನಕಾಯಿಯನ್ನಾದ್ರೂ ಸಂಪಾದಿಸಿಕೊಂಡು ಬಿಡುವ ಚೂಟಿ ಚೌಡಮ್ಮ ಆಕೆ!

ಈಗಂತೂ ನಾನು ಬೆಂಗಳೂರಲ್ಲಿ ಇದ್ದೇನೆ. ಮುಂದೆ ಊರಿಗೆ ಹೋಗಿ ನೆಲೆಸಿದಾಗ ಈ ದೈವಗಳ ಗತಿ ಏನು ಅಂತ ಯೋಚನೆ ಆಗಿದೆ. ಇವುಗಳನ್ನೆಲ್ಲಾ ಹಾಗೆಯೇ ಕಾಲ ಕಾಲಕ್ಕೆ ಕೋಳಿ ಕುರಿ ಕೊಟ್ಟುಕೊಂಡು ಮುನ್ನಡೆಸುತ್ತಾ ಹೋಗಬೇಕಾ? ಅಥವಾ ಊಟ ತಿಂಡಿ ಕೊಡದೆ ಉಪವಾಸ ಕೆಡವಬೇಕಾ? ಫುಲ್ ಕನ್ಪ್ಯೂಶನ್ !

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,

ಹೆಣ್ಣಿನ ಕಣ್ಣು : ಸುಂದರವಷ್ಟೇ ಅಲ್ಲ... ಸೂಕ್ಷ್ಮವೂ ಹೌದು

ಮಹಿಳೆಯರ ಕಣ್ಣು ಪುರುಷರ ಕಣ್ಣಿಗಿಂತಲೂ ತುಂಬಾ ಸೂಕ್ಷ್ಮ. ಅವರು ಎದುರಿನ ವ್ಯಕ್ತಿಗಳ ಭಾವನೆಗಳನ್ನು ಬರಿಯ ನೋಟವೊಂದರಿಂದಲೇ ತಿಳಿದುಕೊಂಡು ಬಿಡುತ್ತಾರೆ. ಇದು ಪುರುಷರಿಂದ ಅಸಾಧ್ಯ. ಕಣ್ಣು ಮಾತ್ರವಲ್ಲದೇ ಸ್ತ್ರೀಯರ ಎಲ್ಲಾ ಗ್ರಹಣೇಂದ್ರಿಯಗಳೂ ಸಹ ತುಂಬಾ ಸೂಕ್ಷ್ಮ ಸಂವೇದಿಗಳೆಂಬುದರಲ್ಲಿ ಎರಡು ಮಾತಿಲ್ಲ ! ಅದಕ್ಕಾಗಿಯೆ ಹುಡುಗಿಯರೊಂದಿಗೆ ವ್ಯವಹರಿಸುವಾಗ ಹುಡುಗರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಏಕೆಂದರೆ ಹುಡುಗನ ಮನದಲ್ಲೇಳುವ ಕಾಮನೆಗಳನ್ನೆಲ್ಲಾ ಹುಡುಗಿ ಅವನ ಮುಖಭಾವದಿಂದಲೇ ಗ್ರಹಿಸಿಬಿಡುವ ಸಾಮಥ್ರ್ಯ ಹೊಂದಿದ್ದಾಳೆ. ತನ್ನೊಂದಿಗೆ ಸ್ನೇಹದಿಂದ ವತರ್ಿಸುವ ಹುಡುಗನನ್ನೂ, ಸ್ನೇಹದ ನೆಪದಲ್ಲಿ ಪ್ರೇಮ ವ್ಯಕ್ತಪಡಿಸುವ ಹುಡುಗನನ್ನೂ ಹುಡುಗಿಯೊಬ್ಬಳು ಬಹುಬೇಗನೆ ಗುರುತಿಸಿಬಿಡುತ್ತಾಳೆ. ಆದರೂ ಕೆಲವು ಹುಡುಗಿಯರು ತಿಳಿದೂ ತಿಳಿಯದಂತಿರುತ್ತಾರೆ. ಅದಕ್ಕೆ ಕಾರಣವೇನೆಂದರೆ ಮುಂದೇನು ಮಾಡಬೇಕೆಂಬುದು ಅವರಿಗೆ ತೋಚುವುದಿಲ್ಲ. ವಿವೇಚನೆಗಿಂತಾ ಭಾವನೆಗೇ ಹೆಚ್ಚು ಮಹತ್ವ ಕೊಡುತ್ತಾರವರು. ಆ ಹುಡುಗನೊಂದಿಗಿನ ಸ್ನೇಹವನ್ನು ಕಳೆದುಕೊಳ್ಳಲಿಚ್ಚಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹುಡುಗಿಯೊಬ್ಬಳು ಹುಡುಗನೊಂದಿಗಿನ ತನ್ನ ಸ್ನೇಹವನ್ನು ಮುರಿದುಕೊಂಡಳೆಂದರೆ ಅದಕ್ಕೆ ಕಾರಣ ಹೆಚ್ಚಾಗಿ ಅವನೇ ಆಗಿರುತ್ತಾನೆ. ಹೆಣ್ಣಾದವಳು ತನ್ನ ಸುತ್ತ ಮುತ್ತಲಿನ ಆಗು ಹೋಗುಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ, ಅಷ್ಟೇ ವಿವರವಾಗಿ ಗ್ರಹಿಸುತ್ತಾಳೆ. ಗಂಡ ತಡವ

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ   ಸಮ್ಮೋಹನ ಅಂದರೇನು ? ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು. ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ